2019ರ ಚುನಾವಣೆ ಅಕ್ಷರಶಃ ಧರ್ಮಯದ್ದವಾಗಲಿದೆ, ಶಕುನಿ ಪಾತ್ರ ಯಾರದ್ದು?

2019ರ ಚುನಾವಣೆ ಅಕ್ಷರಶಃ ಧರ್ಮಯದ್ದವಾಗಲಿದೆ, ಶಕುನಿ ಪಾತ್ರ ಯಾರದ್ದು?

0

ಮಹಾಭಾರತದ ದೃತರಾಷ್ಣ್ರನ ಹಾಗೆ ಕಾಂಗ್ರೆಸ್ ಕೂಡಾ ಅಧಿಕಾರ ಅವರ ಜನ್ಮ ಸಿದ್ದ ಹಕ್ಕು ಎಂಬಂತೆ ಭಾವಿಸಿದೆ. ಮಹಾಭಾರತದ ದುರ್ಯೋಧನನ ಹಾಗೆ  ಆಡಳಿತ ನಡೆಸಲು ಸಮರ್ಥನಾಗಿಲ್ಲದಿದ್ದರೂ ಹಸ್ತಿನಾವತಿಗೆ ತಾನು ರಾಜನಾಗಬೇಕೆಂಬ ದುರಾಸೆ ಹಾಗು ಅಹಂಕಾರ ಇತ್ತು. ನಮ್ಮ ಯುವರಾಜ ಅಂತ ಕರೆಸಿಕೊಳ್ಳುವ ರಾಹುಲ್ ಗಾಂಧೀ ಕೂಡಾ ಕೇವಲ ಗಾಂಧಿ ಎಂಬ ಹೆಸರನ್ನಿಟ್ಟುಕೊಂಡು ಇಡೀ ದೇಶವನ್ನು ಆಳಬೇಕೆಂಬ ಮಹದಾಸೆಯನ್ನು ಇಟ್ಟುಕೊಂಡಿದ್ದಾರೆ. ಹಾಗಾಗಿ ದೃತರಾಷ್ಟ್ರ ಹಾಗು ಕಾಂಗ್ರೆಸ್ ನ ಒಂದೆ ದುರ್ಯೋಧನನ್ನು ರಾಜನಾಗಿ ಹಾಗು ರಾಹುಲ್ ನನ್ನು ಪ್ರಧಾನಮಂತ್ರಿ ಯಾನ್ನಾಗಿ ಮಾಡುವುದು..

ಮಹಾಭಾರತದಲ್ಲಿ ಕೌರವರು, ಪಾಂಡವರು ತಮ್ಮ ಯುದ್ಧಭ್ಯಾಸ ನಡೆಸದ ಬಳಿಕ ಗುರು ದ್ರೋಣಾಚಾರ್ಯರು ಯುಧಿಷ್ಠಿರನ ಚಾತುರ್ಯತೆ, ಆಡಳಿತದ ಬಗ್ಗೆ ಇರುವ ಜ್ಞಾನ, ವಿನಮ್ರ, ನಿಷ್ಠೆಯನ್ನು ಗಮನಿಸಿ ಯುಧಿಷ್ಠಿರನನ್ನು ರಾಜನನ್ನಾಗಿ ಮಾಡಬೇಕೆಂದು ನಿರ್ಧರಿಸಿದ್ದು ದುರ್ಯೋಧನನಿಗೆ ಪಾಂಡವರ ಮೇಲೆ ಇನ್ನೂ ಹೆಚ್ಚಿನ ದ್ವೇಷ ಮಾಡುವಂತೆ ಮಾಡಿತು. ಹಾಗೆನೆ ಭಾರತೀಯರು ನರೇಂದ್ರ ಮೋದಿಯವರನ್ನು ಮುಕ್ತ ಮನಸ್ಸಿನಿಂದ ಬಹುಮತದೊಂದಿಗೆ ಆಯ್ಕೆ ಮಾಡಿದಾಗ ಕಾಂಗ್ರೆಸ್, ಉಳಿದ ಪಕ್ಷಗಳಿಗೆ ಮೋದಿಯವರ ಮೇಲೆ ಇನಷ್ಟು ದ್ವೇಷ ಹುಟ್ಟುಹಾಕಿತು.

ಕುರುಕ್ಷೇತ್ರ ಯುದ್ದ ಶುರುವಾಗುವ ಮುಂಚೆಯೇ ದುರ್ಯೋಧನ ಪಾಂಡವರನ್ನು ಮುಗಿಸಲು ಸಂಚು ಮಾಡಿದ್ದ ಪಾಂಡವರನ್ನು ಲಕ್ಷ್ಯಗ್ರಹಕ್ಕೆ ಕಳುಹಿಸಿ ಅಲ್ಲಿ ಅವರನ್ನು ಜೀವಂತ ಸುಡುವ ಸಂಚು ಮಾಡಿದ್ದ. ಅದೇ ರೀತಿ ಕಾಂಗ್ರೆಸ್ ಕೂಡಾ ಹಿಂದೂಗಳ ಮೇಲೆ ಯುದ್ದ ಸಾರಿತ್ತು. ” ಹಿಂದೂ ಉಗ್ರರು” ಎಂಬ ಹೊಸ ವ್ಯಕ್ಯಾನವನ್ನು ಹುಟ್ಟು ಹಾಕಿದರು. ಅಸೀಮಾನಂದ್, ಕರ್ನಲ್ ಪುರೋಹಿತ್ ಮುಂತಾದ ದೇಶ ಪ್ರೇಮಿಗಳನ್ನು ಸೆರೆ ಮನೆಗೆ ಕಳುಹಿಸಿ ಹಿಂದೂಗಳನ್ನು ಹೊತ್ತಿಉರಿಯುವಂತೆ ಮಾಡಿದರು. ಮುಂಬೈ ಉಗ್ರ ದಾಳಿ ಸಂಧರ್ಭದಲ್ಲಿ ಪಾಕಿಸ್ತಾನಿ ಇಸ್ಲಾಂ ಉಗ್ರರನ್ನು ಹಿಂದೂಗಳು, RSSನವರು ಎಂದು ಇಡೀ ವಿಶ್ವದ ಮುಂದೆ ಹಿಂದೂಗಳ‌ ಮಾನಬಹರಾಜಾಕಿದರು.

ಮಹಾಭಾರತದಲ್ಲಿ ಕೌರವರ ಶಕುನಿ ಪಾಂಡವರನ್ನು ಮುಗಿಸಲು ಲಡ್ಡುಗಳಲ್ಲಿ ವಿಷ ಹಾಕಿ ಪ್ರಾಷನ ಮಾಡಿಸಿದಂತೆ ಕಾಂಗ್ರೆಸ್ ಪಾಳಯದಲ್ಲಿ ಶಕುನಿ‌ ಪಾತ್ರ ವಹಿಸಿರುವುದು ಬ್ರಿಟಿಷ್ ಅನಲಿಟಿಕಾ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಹಿಂದೂಗಳನ್ನು ಒಡೆಯುತ್ತಿರುವ ಅನಲಿಟಿಕಾ ಇಲ್ಲಿನ ಶಕುನಿ. ರಾಜಸ್ಥಾನದಲ್ಲಿ ಗುಜರ್ ಘರ್ಷಣೆ, ಮಹಾರಾಷ್ಟ್ರದಲ್ಲಿ ದಲಿತ ಸಂಘರ್ಷ, ಹರಿಯಾಣದಲ್ಲಿ ಜಾಟ್ ಸಂಘರ್ಷ ನಡೆಸಿದ್ದು ಇದೇ ಅನಲಿಟಿಕಾ ದಿಂದ.

ಆದ್ದರಿಂದ ಮುಂದಿನ ಲೋಕಸಭಾ ಚುನಾವಣೆ ಧರ್ಮಯುದ್ದವಾಗಿದೆ. ಭಾರತೀಯರೆಲ್ಲರು ಅರ್ಜುನನಂತೆ ಗೊಂದಲಗೊಳ್ಳದೆ ಕೃಷ್ಣನ ಮಾತನ್ನು ಕೇಳಿ ಅಂದರೆ ನಿಮ್ಮ ಮನಸ್ಸಿನ ಮಾತನ್ನು ಕೇಳಿ ಆತ್ಮಸಾಕ್ಷಿಯಾಗಿ ಮತದಾನ ಮಾಡಿ.

ನೀನು ಧರ್ಮವನ್ನು ರಕ್ಷಿಸಿದರೆ, ಧರ್ಮವೇ ನಿನ್ನನ್ನು ರಕ್ಷಿಸುತ್ತದೆ. – ಶ್ರೀ ಕೃಷ್ಣ

Shree Bhat