ಬಿ ಜೆ ಪಿ ಗೆ ಶಾಕ್ ನೀಡಲು ಮುಂದಾದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕೂಟ!

ಬಿ ಜೆ ಪಿ ಗೆ ಶಾಕ್ ನೀಡಲು ಮುಂದಾದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕೂಟ!

0

ಬಿ ಸ್ ವೈ ರವರು ಬಹುಮತ ಸಾಬಿತು ಪಡಿಸದೆ ರಾಜಿನಾಮೆ ನೀಡಿದ್ದು ಈಗ ಹಳೆಯ ವಿಷಯ. ಆದರೆ ಬಿ ಜೆ ಪಿ ಪಕ್ಷದವರ ಆಪರೇಷನ್ ಕಮಲ ಯಾವಾಗ ಬೇಕಾದರೂ ಮರುಜೀವ ಪಡೆಯಬಹುದು ಎಂದು ಎಲ್ಲರಿಗೂ ತಿಳಿದಿರುವ ವಿಷಯ.

ಚುನಾವಣಾ ಫಲಿತಾಂಶದ ನಂತರ ಆಪರೇಷನ್ ಕಮಲ ವಿಫಲವಾಗಿದೆ ಎಂದು ಕಾಂಗ್ರೆಸ್ ಪಕ್ಷದವರು ಬೀಗುತ್ತಿದ್ದರೆ, ಬಿಜೆಪಿ ಪಕ್ಷದವರು ನಾವು ಯಾವುದೇ ಆಪರೇಷನ್ ಮಾಡಿಲ್ಲ, ಮಾಡುವುದಿಲ್ಲ ಎಂದು ಪರಸ್ಪರ ಹೇಳಿಕೆಗಳಲ್ಲೇ ಜಗಳವಾಡುತ್ತಿದ್ದಾರೆ. ಆಪರೇಷನ್ ಕಮಲಕ್ಕೆ ಹೆದರಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ರೆಸಾರ್ಟ್ ರಾಜಕೀಯ ಮಾಡಿದ್ದು ಸುಳ್ಳಲ್ಲ. ಸರ್ಕಾರದ ರಚನೆಯಾದ ನಂತರವು ಆಪರೇಷನ್ ಕಮಲದ ಚಿಂತೆ ಇನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ನ ತಲೆಯಲ್ಲಿದೆ.ಈ ನಿಟ್ಟಿನಲ್ಲಿ ಕಾಂಗ್ರೆಸ್ ಒಂದು ಪ್ಲಾನ್ ಮಾಡಿದೆ.

ಅಷ್ಟಕ್ಕೂ ಪ್ಲಾನ್ ಏನು ಮತ್ತು ಅದರ ಒಳಗಿನ ಅಂಶಗಳೇನು? ಸಂಪೂರ್ಣ ಓದಿ ತಿಳಿಯುತ್ತದೆ?

ಆಪರೇಷನ್ ಕಮಲದ ಬೀತಿಯಿಂದ ಹೊರಬರಲು ಬಿಜೆಪಿಯ ಸರಿ ಸುಮಾರು 10 ಶಾಸಕರನ್ನು ತಮ್ಮತ್ತ ಸೆಳೆಯುವುದಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಡಿಕೆಶಿ-ಹೆಚ್​ಡಿಕೆ ಮಾಸ್ಟರ್ ಪ್ಲಾನ್ ವೊಂದನ್ನು ಸಿದ್ದಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸಚಿವ ಸಂಪುಟದ ವೇಳೆ ಕೆಲವು ಖಾತೆಗಳನ್ನು ನಮ್ಮ ಬಳಿಯೇ ಇಟ್ಟುಕೊಳ್ಳೋಣ, ಇರೋ ಕಾಂಗ್ರೆಸ್ ನಿಂದ 78, ಜೆಡಿಎಸ್ ನಿಂದ 37 ಹಾಗೂ ಪಕ್ಷೇತರ ಶಾಸಕರ 2 ಬೆಂಬಲ ಸೇರಿದಂತೆ ಒಟ್ಟು 117 ಮಂದಿ ಶಾಸಕರು ನಮ್ಮ ಜೊತೆ ಇದ್ದಾರೆ ಪರಿಸ್ಥಿತಿ ಯಾವಗ ಏನು ಬೇಕಾದ್ರು ಆಗಿ ಸರ್ಕಾರ ಪತನಕ್ಕೆ ಕಾರಣವಾಗಬಹುದು ಹೀಗಾಗಿ ನಾವು ಸಚಿವ ಸಂಪುಟದ ನಂತರ ಬಿಜೆಪಿಯಲ್ಲಿರುವ ಸಚಿವ ಸ್ಥಾನದ ಅಕಾಂಕ್ಷಿಗಳಿಗೆ ನಮ್ಮತ್ತ ಬರಮಾಡಿಕೊಳ್ಳುವ ಹಾಗೇ ಮಾಡಿಕೊಂಡು ಅವರಿಗೆ ಸಚಿವ ಸ್ಥಾನ ನೀಡಿ ಅವರಿಗೆ ಉಪಚುನಾವಣೆಯಲ್ಲಿ ಟಿಕೇಟ್ ನೀಡಿ ಗೆಲ್ಲಿಸಿಕೊಂಡು ಬರೋಣ ಅಂತ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆಪರೇಷನ್ ಜೆಡಿಎಸ್ ಮತ್ತು ಕಾಂಗ್ರೆಸ್ ಗೆ ನಾವು ಮುಂದಾಗಲೇ ಬೇಕು ಇಲ್ಲವಾದಲ್ಲಿ ಯಾವುದೇ ಸಮಯದಲ್ಲಿ ಶಾಸಕರು ಆಮಿಷಕ್ಕೆ ಒಳಗಾಗಿ ಬಿಜೆಪಿ ಸೇರಬಹುದು.ಒಂದು ವೇಳೆ ಇದೆ ನಡೆದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾ ಸರ್ಕಾರ ಯಾವುದೇ ಸಮಯದಲ್ಲಿ ಬೀಳಬಹುದು ಎಂದು ಅಂದಾಜಿಸಲಾಗಿದೆ.

ಹೀಗಾಗಿ ಅವರು ನಮ್ಮ ಶಾಸಕರನ್ನು ಸೆಳೆಯುವ ಮುನ್ನವೇ ನಾವು ಅವರ ಶಾಸಕರನ್ನು ಸೆಳೆಯುವ ಕಸರತ್ತು ಮಾಡಿ ಯಶಸ್ವಿಯಾದರೇ ಸುಲಭವಾಗಿ ಐದು ವರ್ಷಗಳ ಕಾಲ ಸಮೀಶ್ರ ಸರ್ಕಾರವನ್ನು ನಡೆಸಬಹುದು ಎಂದು ಪ್ಲಾನ್ ಮಾಡಿದ್ದಾರೆ.

ಈ ಪ್ಲಾನ್ ಪಲಿಸುತ್ತದೆಯೇ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.