ಕರುನಾಡಿನಲ್ಲಿ ನಡೆಯುತ್ತದೆಯೇ ಮರು ಚುನಾವಣೆ? ಪಕ್ಷಗಳಿಗೆ ಶಾಕ್

ಕರುನಾಡಿನಲ್ಲಿ ನಡೆಯುತ್ತದೆಯೇ ಮರು ಚುನಾವಣೆ? ಪಕ್ಷಗಳಿಗೆ ಶಾಕ್

0

ಹೌದು, ನೀವು ಓದುತ್ತಿರುವುದು ನಿಜ. ಈ ಚುನಾವಣಾ ಅಕ್ರಮ ಸಾಬೀತಾದ್ದಲ್ಲಿ ಮರು ಚುನಾವಣೆ ನಡೆಯಬಹುದೇ ಎಂಬ ಪ್ರಶ್ನೆ ಮೂಡುತ್ತಿದೆ. ಇದನ್ನು ನಾವು ಸುಮ್ಮನೆ ಹೇಳುತ್ತಿಲ್ಲ. ಚುನಾವಣಾ ಅಕ್ರಮ ಸಾಬೀತಾದರೆ ವಿರೋಧ ಪಕ್ಷಗಳು ಸುಮ್ಮನೆ ಕೂರುವುದಿಲ್ಲ. ಯಾಕೆಂದರೆ ಕರ್ನಾಟಕದ ಪರಿಸ್ಥಿತಿ ಹೇಗಿದೆ ಅಂದರೆ ಪ್ರತಿ ಮತವು ಪ್ರತಿ ಕ್ಷೇತ್ರವು ಸರ್ಕಾರದ ಗದ್ದುಗೆ ಮೇಲೆ ಪ್ರಭಾವ ಬೀರುತ್ತದೆ.

ಅಷ್ಟಕ್ಕೂ ಆ ಚುನಾವಣಾ ಅಕ್ರಮವಾದರೂ ಏನು?

ಬಿಜಾಪುರ – ಬೆಂಗಳೂರು ಹೆದ್ದಾರಿಯಲ್ಲಿ ಮನಗೊಳಿ ಎಂಬುವ ಗ್ರಾಮದಲ್ಲಿ ಇರುವ ಒಂದು ಶೆಡ್ ನಲ್ಲಿ (ಕಾರ್ಮಿಕರ ಮನೆಗಳಲ್ಲಿ) 8 ವಿವಿ ಪ್ಯಾಟ್ ಗಳು ಹಾಗು ಮತದಾನಕ್ಕೆ ಸಂಬಂಧಿಸಿದ ಬಾಕ್ಸ್ ಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ವಿಚಾರಣೆ ನಡೆಸಿದಾಗ ಈ ಇವಿಎಂ ನ ವಿವಿ ಪ್ಯಾಡ್ಗಳನ್ನು ಯಾರೋ ಎಸೆದು ಹೋಗಿದ್ದರು,ಇದನ್ನು ನೋಡಿದ ಸ್ಥಳೀಯ ಹೆದ್ದಾರಿ ಕಾರ್ಮಿಕರು ಅವುಗಳನ್ನು ತೆಗದುಕೊಂಡು ಬಂದು ತಾವು ತಂಗಿದ್ದ ಶೆಡ್ ವೊಂದಂರಲ್ಲಿ ರಕ್ಷಣೆ ಮಾಡಿ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ವಿವಿ ಪ್ಯಾಟ್ ಮಷಿನ್‌ಗಳು ಪತ್ತೆಯಾಗಿರುವುದರಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಗೋಲಮಾಲ್‌ ನಡೆದಿರುವ ಶಂಕೆ ವ್ಯಕ್ತವಾಗಿದೆ.ಮತದಾರರು ತಾವು ಹಾಕಿದ ಮತ ಯಾವ ಪಕ್ಷಕ್ಕೆ ಬಿದ್ದಿದೆ ಎಂಬುದನ್ನು ವಿವಿ ಪ್ಯಾಟ್‌ ಮಷಿನ್‌ಗಳು ಖಚಿತಪಡಿಸುತ್ತವೆ.

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೂರಾರು ಸಾರ್ವಜನಿಕರು ಭೇಟಿ ನೀಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮನಗೂಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ಯಂತ್ರಗಳು ಸಿಕ್ಕಿದ್ದು ,ಅವುಗಳನ್ನು ಸಂಗ್ರಹಿಸಿಟ್ಟಿದ್ದು ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವರು ಆಗಮಿಸಿ ಪರಿಶೀಲನೆ ನಡೆಸಿದ್ದು ಚುನಾವಣೆಯಲ್ಲಿ ಗೋಲ್ ಮಾಲ್ ಆಗಿದೆ ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದ್ದು ಅವರ ಸ್ಪಷ್ಟನೆಗಾಗಿ ಎದುರು ನೋಡಲಾಗುತ್ತಿದೆ. ಈ ಅಕ್ರಮ ಸಾಬೀತಾದರೆ, ಮರು ಚುನಾವಣೆ ನಡೆಯುತ್ತದೆಯೇ? ನಡೆದರೆ ಎಷ್ಟು ಕ್ಷೇತ್ರದಲ್ಲಿ ನಡೆಯುತ್ತದೆ? ಇಡೀ ಕರ್ನಾಟದಲ್ಲಿ ನಡೆಯುತ್ತದೆಯೇ? ಇವೆಲ್ಲ ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತವೆ.