ಉದ್ಯೋಗ ಸೃಷ್ಟಿ: ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಮೋದಿ ಸರ್ಕಾರ

ಉದ್ಯೋಗ ಸೃಷ್ಟಿ: ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಮೋದಿ ಸರ್ಕಾರ

0

ಪ್ರಧಾನಿ ನರೇಂದ್ರ ಮೋದಿ ಸರ್ಕಾರ  ಹೊಸದಾದ ಯೋಜನೆಯೊಂದನ್ನು ಆರಂಭ ಮಾಡಲು ಸಜ್ಜುಗೊಂಡಿದೆ. ಶೀಘ್ರ ರಥ ಯಾತ್ರೆ ಯನ್ನು ಕೖಗೊಳ್ಳಲಿರುವ ಕೇಂದ್ರ ಸರ್ಕಾರ ಸ್ಥಳದಲ್ಲಿ ಯುವ ಜನತೆಗೆ ಉದ್ಯೋಗವನ್ನು ಕಲ್ಪಿಸಿ ಸಬಲೀಕರಣ ಮಾಡುವ ಯತ್ನದಲ್ಲಿದೆ.

ಯುವಜನತೆಯ ಸಬಲೀಕರಣದ ಉದ್ದೇಶದಿಂದ ಇಂತಹ ರಥಯಾತ್ರೆ ಕೈಗೊಳ್ಳಲಾಗುತ್ತಿದೆ. ಈ ರಥಯಾತ್ರೆಗೆ ಕೌಶಲ್ಯಾಭಿವೃದ್ಧಿ ಸಚಿವರು ಚಾಲನೆ ನೀಡಲಿದ್ದಾರೆ.

ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕೌಶಲ ರಥ ಯಾತ್ರೆ ನಡೆಸಲು ಅಲ್ಲಿನ ಮುಖ್ಯಮಂತ್ರಿಗಳೂ ಕೂಡ ಅನುಮೋದನೆ ನೀಡಿದ್ದು, ಶೀಘ್ರ ರಾಜಸ್ಥಾನ, ಮಧ್ಯ ಪ್ರದೇಶ, ಚತ್ತೀಸ್’ಗಢದಲ್ಲಿ ಈ ರಥಯಾತ್ರೆ ಸಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿದ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಕೂಡ ಇದಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.

ಕೌಶಲ್ಯಾಭಿವೃದ್ಧಿ ಸಚಿವರಾದ ಅನಂತ್ ಕುಮಾರ್ ಹೆಗಡೆ ಯುವ ಜನತೆಯ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಇದರ ಪ್ರಮುಖ ಉದ್ದೇಶ ಉದ್ಯೋಗ ಒದಗಿಸುವುದಾಗಿದೆ.

ಕೃಪೆ: ಸುವರ್ಣ ನ್ಯೂಸ್