ಮತ್ತೊಮ್ಮೆ ಕಾಂಗ್ರೆಸ್ ಗೆ ತಲೆ ಬಿಸಿ ತಂದ ಶ್ರೀಗಳು !!! ಮೋದಿ ಗೆ ಜೈ ಅಂದರು

ಹೌದು ಉಡುಪಿ ಶಿರೂರು ಮಠದ ಶ್ರೀಗಳು ಮತ್ತೊಮ್ಮೆ ಕಾಂಗ್ರೆಸ್ ಗೆ ತಲೆ ಬಿಸಿ ತಂದಿದ್ದಾರೆ. ಇತ್ತೀಚೆಗಷ್ಟೇ ಪಕ್ಷೇತ್ತರ ಅಭ್ಯರ್ಥಿಯಾಗಿ ಸ್ಪರ್ದ್ದಿಸಿ ಗೆದ್ದರೆ ಮೋದಿ ಗೆ ಜೈ ಅನ್ನುವೆ ಎಂದಿದ್ದ ಶ್ರೀ ಗಳು ಇವಾಗ ಮತ್ತೊಂದು ನಿರ್ಧಾರದ ಮೂಲಕ ಕಾಂಗ್ರೆಸ್ ಗೆ ತಲೆ ಬಿಸಿಯಾಗಿದ್ದಾರೆ.

ಇತ್ತೀಚೆಗೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಉಡುಪಿ ಶಿರೂರು ಮಠದ ಶ್ರೀಗಳು ಟಿಕೆಟ್ ಸಿಗದೇ ಇದ್ದಾಗ ಪಕ್ಷೇತರ ಸ್ಪರ್ಧಿಸುವುದಾಗಿ ಹೇಳಿ , ಬಿಜೆಪಿಯಿಂದ ಹಿಂದೆ ಸರಿದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಕೂಡಾ ಸಲ್ಲಿಸಿದ್ದರು. ಇದರಿಂದ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ತಲೆನೋವಾಗಿತ್ತು. ಯಾಕೆಂದರೆ ಉಡುಪಿಯಲ್ಲಿ ಬಿಜೆಪಿ ಈ ಬಾರಿ ಗೆಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು ಶ್ರೀಗಳು ಪಕ್ಷೇತರರಾಗಿ ನಿಂತರೆ ಬಿಜೆಪಿಯ ಮತಗಳೇ ಬೇರ್ಪಡೆಯಾಗುತ್ತಿದ್ದವು. ಶ್ರೀಗಳು ಸ್ಪರ್ಧಿಸಿದರೆ ಮತ ವಿಭಜನೆ ಆಗುತ್ತೆ ಎಂದು ಕಾಂಗ್ರೆಸ್ ಊಹಿಸಿತ್ತು. ಆದರೆ ಶ್ರೀಗಳು ಕಾಂಗ್ರೆಸ್ ತಲೆ ತಿರುಗುವಂತೆ ಶಾಕ್ ನೀಡಿದ್ದಾರೆ.

ಸ್ಪರ್ಧೆಯಿಂದ ಹಿಂದೆ ಸರಿದ ಶ್ರೀಗಳು. ಅಷ್ಟಕ್ಕೂ ಸ್ಪರ್ಧೆಯಿಂದ ಹಿಂದೆ ಸರಿದದ್ದು ಯಾಕೆ ಗೊತ್ತಾ?

ಒಂದೇ ಪದದಲ್ಲಿ ಹೇಳಬೇಕು ಅಂದರೆ ಈ ನಿರ್ಧಾರದ ಕಾರಣ ಕರ್ತ ನಮ್ಮ ಪ್ರಧಾನ ಸೇವಕ ಮೋದಿರವರು.

ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳು ಪ್ರಧಾನಿ ಮೋದಿಯವರ ಅಭಿಮಾನಿಯಾಗಿದ್ದು, ಬಿಜೆಪಿಯನ್ನೇ ಈ ಹಿಂದಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದಾರೆ. ಆದರೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಪಕ್ಷದ ಮೇಲೆ ಅಸಮಧಾನಗೊಂಡು ಪಕ್ಷೇತರ ನಿಲ್ಲುವುದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ನಾಮಪತ್ರ ಹಿಂಪಡೆದ ಶ್ರೀಗಳು ,’ ತಾನು ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ , ನಾನು ಬಿಜೆಪಿಯ ತತ್ವಗಳನ್ನು ಪಾಲಿಸುವವನು. ಇಂತಹ ಸಂದರ್ಭದಲ್ಲಿ ನಾನು ಪಕ್ಷೇತರರಾಗಿ ಸ್ಪರ್ಧಿಸಿದರೆ ಬಿಜೆಪಿಗೆ ವಿರುದ್ಧವಾಗಿ ನಿಂತಂತೆ ಆಗುತ್ತದೆ. ಆದ್ದರಿಂದ ನಾನು ಚುನಾವಣೆಯಿಂದ ಹಿಂದೆ ಸರಿದಿದ್ದೇನೆ’ ಎಂದು ಹೇಳಿದ್ದಾರೆ.

ಸೊರ್ಸ್: ಪೋಸ್ಟ್ ಕಾರ್ಡ್

Post Author: Ravi Yadav