ಮೋದಿ ಅಲೆ: ಕರ್ನಾಟಕ ಚುನಾವಣಾ ಅಖಾಡಕ್ಕೆ ಮೋದಿ ಎಂಟ್ರಿ ಯಾವಾಗ ಗೊತ್ತಾ?

ಮೋದಿ ಅಲೆ: ಕರ್ನಾಟಕ ಚುನಾವಣಾ ಅಖಾಡಕ್ಕೆ ಮೋದಿ ಎಂಟ್ರಿ ಯಾವಾಗ ಗೊತ್ತಾ?

0

ಮೋದಿ ಅಲೆ: ಕರ್ನಾಟಕ ಚುನಾವಣಾ ಅಖಾಡಕ್ಕೆ ಮೋದಿ ಎಂಟ್ರಿ ಯಾವಾಗ ಗೊತ್ತಾ?

ಬಿಜೆಪಿಯ ಪ್ರಮುಖ ಅಸ್ತ್ರವಾಗಿರುವ ಮೋದಿ ಅಲೆಯನ್ನು ಕರ್ನಾಟಕದಲ್ಲೂ ಬಳಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಬಿಜೆಪಿ ನಾಯಕರು.

ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಕರ್ನಾಟಕ ಚುನಾವಣಾ ಅಖಾಡಕ್ಕೆ ಧುಮುಕಿ ದಕ್ಷಿಣ ಭಾರತದಲ್ಲಿಯೂ ಬಿಜೆಪಿ ಬಾವುಟವನ್ನು ನೆಡುವ ಉದ್ದೇಶದಿಂದ ಪ್ರಚಾರಕ್ಕಾಗಿ ಇದೇ ತಿಂಗಳ 27 ರಂದು ಆಗಮಿಸಲಿದ್ದಾರೆ.

ಈ ಸಂಬಂಧ ಕರ್ನಾಟಕ ಬಿಜೆಪಿ ಪಕ್ಷದ ನಾಯಕರು ಅಮಿತ್ ಷಾ ಅವರೊಂದಿಗೆ ಮೋದಿ ಅವರ ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ ಎಂದತು ಉನ್ನತ ಮೂಲಗಳು ತಿಳಿಸಿವೆ.

ಪ್ರಮುಖ ಅಸ್ತ್ರ ಯಾವುದು?

ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಕರ್ನಾಟಕ ಯುವಕರ ಮನಸಲ್ಲಿ ಸ್ಪೂರ್ತಿ ತುಂಬುವ, ಯುವ ಕರ್ನಾಟಕ ನಿರ್ಮಾಣ ಮಾಡುವ ಯೋಜನೆ, ಚಿಂತನೆ ಕುರಿತು ಮಾತಾಡುವ ಸಾಧ್ಯತೆಗಳು ಹೆಚ್ಚಿವೆ.

ಪ್ರಚಾರದ ಸ್ಥಳಗಳು ಯಾವುವು?

ಕನಿಷ್ಠ ಮೂರು ಜಿಲ್ಲೆಗಳಲ್ಲಿ ಮೋದಿ ಅವರ ಸಮಾವೇಶ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ. ಆ ಜಿಲ್ಲೆಗಳಿ ಯಾವುವು ಎಂದು ಸದ್ಯದಲ್ಲೇ ನಮಗೆ ತಿಳಿಯಲಿದೆ. ಒಂದು ದಿನಕ್ಕೆ ಕನಿಷ್ಠ ಎರಡು ಕಡೆ ಸಮಾವೇಶಗಳನ್ನು ಆಯೋಜಿಸುವ ಸಾಧ್ಯತೆಯಿದೆ. ಮೋದಿ ಅವರ ವರ್ಚಸ್ಸನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಇದಕ್ಕೆ ಪೂರಕ ಎಂಬಂತೆ ಮೋದಿ ಅವರು ಕೂಡ ಕರ್ನಾಟಕದ ಚುನಾವಣಾ ಪ್ರಚಾರಕ್ಕೆ ಹೆಚ್ಚು ದಿನ ಮೀಸಲಿಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸೂಚನೆ ಮೇರೆಗೆ ಎಲ್ಲೆಲ್ಲಿ ಸಮಾವೇಶ ನಡೆಸಬೇಕು ಎಂಬುದನ್ನು ಅಖೈರುಗೊಳಿಸಲಾಗುವುದು ಎಂದು ತಿಳಿದು ಬಂದಿದೆ.