ಮೋದಿ ರವರ ಅದ್ಭುತ ಡೈಲಾಗ್ ಗಳು ಓದಿ ಆನಂದಿಸಿ

ಮೋದಿ ರವರ ಅದ್ಭುತ ಡೈಲಾಗ್ ಗಳು ಓದಿ ಆನಂದಿಸಿ

0

ಮೋದಿ ಭಾಷಣ ಮಾಡುವುದು ನೋಡುವುದೇ ಒಂದು ಚೆಂದ, ಯಾವುದೇ ಪೂರ್ವ ತಯಾರಿ ಇಲ್ಲದೆ ಸ್ಟೇಜ್ ನ ಮೇಲೆ ಬಂದು ಭಾಷಣ ಮಾಡುವ ಮೋದಿ ೨೦೧೪ ರ ಚುನಾವಣೆ ಸಮಯದಲ್ಲಿ ಹೊಡೆದ ಡೈಲಾಗ್ ಗಳು ಬಹಳ ಫೇಮಸ್. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ನಾವು ಸಂಗ್ರಹಿಸಿದ್ದೇವೆ ಓದಿ ಆನಂದಿಸಿ.

1. RSVP ಮಾದರಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸರಿ ಸುಮಾರು 400ಕ್ಕೂ ಅಧಿಕ ಸಮಾರಂಭಗಳಲ್ಲಿ ಭಾಷಣ ಮಾಡಿದ ಮೋದಿ ಅವರು ಗಾಂಧಿ(ಸೋನಿಯಾ, ರಾಹುಲ್) ಹಾಗೂ ವಾದ್ರಾ ವಿರುದ್ಧ ಹರಿಹಾಯ್ದರು. ಭ್ರಷ್ಟಾಚಾರಕ್ಕೆ ತಕ್ಕ ಪಾಠ ಕಲಿಸಬೇಕೆಂದರು. ಈ ಸಂದರ್ಭದಲ್ಲಿ An American paper has presented a new model – of having one lakh rupees and converting that to Rs 300 crore in four years. This is the RSVP model – Rahul, Sonia, Vadra and Priyanka.” ಎಂದು ಮೋದಿ ಹೇಳಿದ್ದು ಭಾರಿ ಚರ್ಚೆಯಾಯಿತು.

2. ಪಾಕಿಸ್ತಾನಕ್ಕೆ ಎಕೆ 49 ಅಗತ್ಯವಿದೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ತಮ್ಮ ಮಾತಿನ ಮೂಲಕ ಕಾಲೆಳೆದ ಮೋದಿ, ಚುನಾವಣಾ ಭಾಷಣವೊಂದರಲ್ಲಿ ಪಾಕಿಸ್ತಾನದಲ್ಲಿ ಮೂರು AKಗಳು ಭಾರಿ ಫೇಮಸ್, AK47, AK Antony, AK 49 ಎಂದರು. AK 49 ಎಂದು ಅರವಿಂದ್ ಕೇಜ್ರಿವಾಲ್ ರನ್ನು ಸೂಚಿಸುತ್ತಿತ್ತು ಹಾಗೂ ಅವರು ದೆಹಲಿಯಲ್ಲಿ 49 ದಿನಗಳ ಅಧಿಕಾರ ಅವಧಿ ನಂತರ ಸರ್ಕಾರ ವಿಸರ್ಜನೆ ಮಾಡಿದ್ದನ್ನು ಮೋದಿ ಗೇಲಿ ಮಾಡಿದ್ದರು.

3. ರಾಹುಲ್ ಗಾಂಧಿಯನ್ನು ಷೆಹಜಾದೆ ಎಂದ ಮೋದಿ ರಾಹುಲ್ ಗಾಂಧಿ ಹಲವರು ರೀತಿ ಜನ ಗೇಲಿ ಮಾಡಿರಬಹುದು. ಅಮಿತ್ ಶಾ ಕೂಡಾ ಒಮ್ಮೆ ಪಪ್ಪು ಎಂದು ಸಂಬೋಧಿಸಿದ್ದರು. ಈ ವಿಷ್ಯದಲ್ಲಿ ಮೋದಿ ಕೂಡಾ ಹಿಂದೆ ಬಿದ್ದಿಲ್ಲ. ಕಾಂಗ್ರೆಸ್ ನವರು ರಾಹುಲ್ ಗಾಂಧಿಯನ್ನು ಯುವರಾಜ ಎಂದು ಕರೆಯುವುದನ್ನೇ ಗೇಲಿ ಮಾಡಿ ರಾಹುಲ್ ರನ್ನು shezaada(ರಾಜಕುಮಾರ) ಬೆಳ್ಳಿ ಚಮಚ ಬಾಯಲ್ಲಿಟ್ಟುಕೊಂಡು ಬೆಳೆದವರ ಅದೃಷ್ಟವಂತ, ಮೇಡಂಜಿ(ಸೋನಿಯಾ ಗಾಂಧಿ) ಅವರ ಮುದ್ದಿನ ಕೂಸು ಎಂದು ಅನೇಕ ಸಲ ಮೋದಿ ಅವರು ಭಾಷಣಗಳಲ್ಲಿ ಹೇಳಿದ್ದರು.

4. ಸಚಿವರು ಈಗ ಪೆಪ್ಪರ್ ಸ್ಪ್ರೇ ಹಾಕುತ್ತಾರೆ ಸಂಸತ್ತಿನಲ್ಲಿ ನಡೆದ ಪೆಪ್ಪರ್ ಸ್ಪ್ರೇ ಹಾಕಿದ ಪ್ರಸಂಗಕ್ಕೆ ಉತ್ತರವಾಗಿ ಮೋದಿ ಸಕತ್ ಡೈಲಾಗ್ ಹೊಡೆದಿದ್ದರು. ಕಾಂಗ್ರೆಸ್ ನಾಯಕ ಎಲ್ ರಾಜಗೋಪಾಲ್ ಪೆಪ್ಪರ್ ಸ್ಪ್ರೇ ಬಳಸಿ ಸದನದಲ್ಲಿ ಕೋಲಾಹಾಲ ಉಂಟು ಮಾಡಿದ್ದರು. ನಂತರ ಭಾಷಣವೊಂದರಲ್ಲಿ ಮೋದಿ ಅವರು ಸಚಿವರು ಈ ಮುಂಚೆ ಜನರ ಕಣ್ಣಿಗೆ ಮಣ್ಣು ಎರಚುತ್ತಿದ್ದರು ಈಗ ಪೆಪ್ಪರ್ ಸ್ಪ್ರೇ(ಕಾಳು ಮೆಣಸಿನ ಪುಡಿ) ಹಾಕುತ್ತಿದ್ದಾರೆ ಎಂಥಾ ಕಾಲ ಬಂತಪ್ಪ ಎಂದಿದ್ದರು.

5. ಚಹಾವಾಲ ಪ್ರಧಾನಿಯಾಗಬಾರದೇ? ಹೋದ ಕಡೆ ಎಲ್ಲಾ ಚಹಾವಾಲ ಎಂದು ಮೋದಿ ಅವರನ್ನು ಕಾಂಗ್ರೆಸ್ ಅಣಕಿಸುತ್ತಿತ್ತು. ಮಣಿ ಶಂಕರ್ ಅಯ್ಯರ್ ಅವರಂತೂ ಚಹಾವಾಲ ಎಂದು ಸಮಯ ಸಿಕ್ಕಾಗಲೆಲ್ಲ ಮೂದಲಿಸುತ್ತಿದ್ದರು. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ಮೋದಿ ಅವರು ಲೋಕಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ “Kya chaiwalla kabhi pradhan mantri nahi ban sakata hai ಎಂದು ಪ್ರಶ್ನಿಸಿದರು. ಚಹಾವಾಲ ಕೂಡಾ ಪ್ರಧಾನಿಯಾಗಬಲ್ಲ ಎಂಬುದನ್ನು ನಿರೂಪಿಸಿದರು, ಸಾಧಿಸಿದರು.

6. ಭಾರತ ಹಾವಾಡಿಗರ ದೇಶವಲ್ಲ ಪ್ರಧಾನಿಯಾದ ಮೇಲೆ ಕೂಡಾ ಮೋದಿ ಅವರು ತಮ್ಮ ವಾಕ್ಪಟುತ್ವವನ್ನು ಮುಂದುವರೆಸಿದರು. ಯುಎಸ್ಎ ನಲ್ಲಿ ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಅದ್ಭುತ ಭಾಷಣ ಮಾಡಿದರು. ಭಾರತ ಹಾವಾಡಿಗರ ದೇಶವಲ್ಲ, ಭಾರತದ ಮೌಲ್ಯ ಏನು ಎಂಬುದು ಇನ್ನೂ ತಿಳಿದಿಲ್ಲ. ನಮ್ಮ ಪೂರ್ವಿಕರು ಹಾವುಗಳ ಜೊತೆ ಬೆಳೆದು ಹಾವಾಡಿಗರು ಎನಿಸಿಕೊಂಡಿರಬಹುದು. ಈಗ ನಮ್ಮಲ್ಲಿ ಅನೇಕರು ಮೌಸ್ ಜೊತೆ ಆಟವಾಡುತ್ತಿದ್ದಾರೆ. ಇದರ ಲಾಭ ಅನೇಕ ದೇಶಗಳಿಗೆ ಆಗುತ್ತಿದೆ ಎಂದು ಐಟಿ ಕ್ಷೇತ್ರದ ಸಾಧನೆಯನ್ನು ಎತ್ತಿ ಹಿಡಿದರು.

narendra_modi_prime_minister_presentation_indium_106405_2048x1152

7. ಮಂಗಳ ಗ್ರಹ ತಲುಪಲು 7ರು / ಕಿ.ಮೀ ಅಮೆರಿಕದಲ್ಲಿ ಮಂಗಳಯಾನದ ಹಿರಿಮೆಯನ್ನು ಕೊಂಡಾಡಿದ ಪ್ರಧಾನಿ ಮೋದಿ, ವಿಶ್ವದ ಅತ್ಯಂತ ಕಡಿಮೆ ವೆಚ್ಚದ ಮಹೋನ್ನತ ಯೋಜನೆ ಇದಾಗಿದೆ. ಅಹಮದಾಬಾದಿನಲ್ಲಿ ಆಟೋರಿಕ್ಷಾ ಮೂಲಕ 1 ಕಿ.ಮೀ ದೂರ ಕ್ರಮಿಸಲು 10 ರು ಖರ್ಚು ಮಾಡಬೇಕಾಗುತ್ತದೆ. ನಾವು ಈಗ 65 ಕೋಟಿ ಕಿ.ಮೀ ದೂರವನ್ನು 7 ರು ಪ್ರತಿ ಕಿ.ಮೀ ವೆಚ್ಚದಲ್ಲಿ ಕ್ರಮಿಸಿದ್ದೇವೆ ಇದೇ ಭಾರತದ ಪ್ರತಿಭೆ ಎಂದರು.

narendra-modi-full-hd-wallpaper

8. ಸ್ಟಾರ್ ವಾರ್ಸ್ ಚಿತ್ರದ ಡೈಲಾಗ್ ಹೊಡೆದ ಮೋದಿ ಪ್ರಧಾನಿ ಮೋದಿ ಅವರು ನಟ ಹ್ಯೂ ಜಾಕ್ಮನ್ ಅವರ ಝೊತೆ ಗ್ಲೋಬಲ್ ಸಿಟಿಜನ್ ಕಾನ್ಸರ್ಟ್ ನಲ್ಲಿ ಪಾಲ್ಗೊಂಡು ಮಾಡಿದ ಭಾಷಣ ಯುಎಸ್ ಎನ ಇತರೆಡೆ ಮಾಡಿದ ಭಾಷಣಕ್ಕಿಂತ ವಿಭಿನ್ನವಾಗಿತ್ತು. “Thank you once again for having me. Thanks in particular to Hugh Jackman. God bless you. May the force be with you.” ಎನ್ನುವ ಮೂಲಕ ಹ್ಯೂ ಜಾಕ್ಮನ್ ಜೊತೆ ನಿಂತು ಸ್ಟಾರ್ ವಾರ್ಸ್ ಚಿತ್ರದ ಡೈಲಾಗ್ ಹೇಳಿದ್ದು ಅಮೆರಿಕನ್ನರನ್ನು ಅಚ್ಚರಿಗೆ ದೂಡಿತು.

9. ಅಸ್ಟ್ರೇಲಿಯನ್ನರು ಎಚ್ಚರಿಸಿದ ಮೋದಿ ಹೇಳಿಕೆ “I am the third Head of Government you are listening to this week. I don’t know how you are doing this! Maybe, this is Prime Minister Abbott’s way of shirtfronting you.” ಎಂದು ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು. ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೊಟ್ ಅವರು ಎಂಎಚ್ 17 ದುರಂತದ ಸಂದರ್ಭದಲ್ಲಿ ಪುಟಿನ್ ಗೆ ನೀಡಿದ್ದ ಭರವಸೆ ಹೇಳಿಕೆಯಲ್ಲಿ ‘shirtfront’ ಪದವನ್ನು ಮೋದಿ ಬಳಸಿಕೊಂಡಿದ್ದರು.

10. ಸ್ವಚ್ಛ ಭಾರತ ಅಭಿಯಾನ ಹೇಳಿಕೆಗಳು ಭಾರತವನ್ನು ಕ್ಲೀನ್ ಇಂಡಿಯಾ ಮಾಡಲು ನರೇಂದ್ರ ಮೋದಿ ಅವರು ಸ್ವಚ್ಛಭಾರತ ಅಭಿಯಾನ ಆರಂಭಿಸಿ ಕೆಂಪು ಕೋಟೆ ಬಳಿ ಮಾಡಿದ ಭಾಷಣ ಅತ್ಯಂತ ಪರಿಣಾಮಕಾರಿಯಾಗಿತ್ತು. ದೇಶದ ವಿವಿಧ ಕ್ಷೇತ್ರಗಳ ಗಣ್ಯರು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಿತು. ದೇಶದ ಜನರೆಲ್ಲ ಸ್ವಚ್ಛವಾಗಿರುವ ಸಂಕಲ್ಪ ಕೈಗೊಂಡರೆ ಗಾಂಧೀಜಿ ಕಂಡ ಕನಸು ನನಸಾಗುವ ದಿನ ದೂರಿಲ್ಲ ಎಂದಿದ್ದರು.