ಡಾ.ರಾಜಕುಮಾರ್ ತಮ್ಮ ಮೊದಲ ಚಿತ್ರಕ್ಕೆ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ ??

ಡಾ.ರಾಜಕುಮಾರ್ ತಮ್ಮ ಮೊದಲ ಚಿತ್ರಕ್ಕೆ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ ??

0

‘ಗುಣ ಸಾಗರಿ” ಚಿತ್ರದ ಯಶಸ್ಸಿನಿಂದ ಪುಳಕಿತಗೊಂಡ ಗುಬ್ಬಿವೀರಣ್ಣ (ಕರ್ನಾಟಕ ಗುಬ್ಬಿ ಫಿಲಂಸ್‌) ‘ಬೇಡರ ಕಣ್ಣಪ್ಪ” ಚಿತ್ರ ತಯಾರಿಕೆಗೆ ಅಣಿಯಾಗುತ್ತಿದ್ದರು. ಚಿತ್ರದ ನಾಯಕ ‘ಕಣ್ಣಪ್ಪ”ನ ಪಾತ್ರಕ್ಕೆ ಭಕ್ತಿ-ವಿನಯದ, ಗಟ್ಟಿ-ಮುಟ್ಟಾದ, ಸ್ಪುರದ್ರೂಪಿ ಯುವಕನನ್ನು ಹುಡುಕಿಕೊಡಲು ಸಿಂಹರಿಗೆ ಹೇಳಿದ್ದರಂತೆ.

ಪಾತ್ರಧಾರಿಯ ಹುಡುಕಾಟದಲ್ಲಿದ್ದ ಸಿಂಹ ಅವರಿಗೆ ಬಸ್ಸಲ್ಲಿ ಸಿಕ್ಕ ರಾಜ್‌ ಮೇಲೆ ಮನಸ್ಸು ಹರಿಯಿತು. ಮೊದಲೇ ಸ್ನೇಹಿತನ ಪುತ್ರ. ಅಭಿನಯ ಕಣ್ಣಾರೆ ಕಂಡಾಗಿದೆ. ಬಾಕಿ ಉ-ಳಿ-ದಿ-ದ್ದು ಸ್ಕಿೃೕನ್‌ ಟೆಸ್ಟ್‌ ಮಾತ್ರ ! ಅದಕ್ಕಾಗಿ ರಾಜ್‌ಗೆ ಮದರಾಸಿಗೆ ಬುಲಾವು ಬಂತು. ರಾಜ್‌ ಪಾಸಾದರು. ಅಂದಿನ ಮುತ್ತುರಾಜ್‌, ಸಿಂಹ ಕೃಪೆಯಿಂದ ರಾಜ್‌ಕುಮಾರ್‌ ಆದರು. ಬೇಡ-ರ ಕಣ್ಣ-ಪ್ಪ ಚಿತ್ರ ಸೆಟ್ಟೇರಿತು. ಕಾಲಕ್ಕೆ ತಕ್ಕಂತೆ ಮೆಗಾಹಿಟ್‌ ಆಯಿತು.

ಈ ರಾಜಕುಮಾರನನ್ನ ‘ಸ್ಟಾರ್‌”ಪದವಿ ಬೆನ್ನು ಹತ್ತಿತು. ಭಕ್ತಿ, ಸಾಂಸಾರಿಕ, ಸಾಮಾಜಿಕ ಹೀಗೆ 50 ವರ್ಷಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು. 1956ರಲ್ಲಿ ‘ಮಹಿಷಾಸುರ ಮರ್ದಿನಿಯ” ಮೂಲಕ ಹಿನ್ನಲೆ ಗಾಯಕರೂ ಆದರು. … ಐವತ್ತು ವರ್ಷಗಳು ಕಳೆದು ಹೋದವು. ಮತ್ತೆ ಅಣ್ಣಾವ್ರು ‘ಭಕ್ತಿ ಪ್ರಧಾನ” ಚಿತ್ರ ‘ಭಕ್ತ ಅಂಬರೀಷ “ದಲ್ಲಿ ಬರುತ್ತಾರೆಂದು ಅಭಿಮಾನಿ ದೇವರುಗಳು ಕಾದಿದ್ದಾರೆ. ಈ ಸುವರ್ಣಮಹೋತ್ಸವದ ಸಂಭ್ರಮ ಆಚರಿಸುವ ನೆನಪು ಯಾರಿಗಾದರು ಆಗಿದೆಯೇ……

ಅಷ್ಟಕು ತಮ್ಮ ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು!!

ಬೇಡರ ಕಣ್ಣಪ್ಪ ಚಿತ್ರ ಸರಿಸುಮಾರು ಆರು ತಿಂಗಳುಗಳ ಕಾಲ ಚಿತ್ರಿಕರಿಸಲಾಗಿತ್ತು, ಆರು ತಿಂಗಳಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ಅಭಿನಯಿಸಿದ್ದ ರಾಜ್‍ಕುಮಾರ್ ಅವರಿಗೆ 1800 ರೂಪಾಯಿಗಳನ್ನು ಸಂಭಾವನೆ ರೂಪದಲ್ಲಿ ಕೊಡಲಾಗಿತ್ತು .

ಅದುವರೆಗೂ ಯಾವುದೇ ಕನ್ನಡ ಚಿತ್ರ 20 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರಲಿಲ್ಲ. 20 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಬೇಡರ ಕಣ್ಣಪ್ಪ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಕಲೆಕ್ಷನ್ ಮಾಡಿ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿತು.