ಬಿಗ್ ನ್ಯೂಸ್: ಭ್ರಷ್ಟಾಚಾರ ಮಾಡಿ ವಿದೇಶಕ್ಕೆ ಓಡಿ ಹೋಗುವ ಅಧಿಕಾರಿಗಳನ್ನು ತಡೆಯಲು ಮೋದಿ ಸರ್ಕಾರದಿಂದ ಮಾಸ್ಟರ್ ಪ್ಲಾನ್..!! ಏನದು ಗೊತ್ತಾ‌‌?!

ಬಿಗ್ ನ್ಯೂಸ್: ಭ್ರಷ್ಟಾಚಾರ ಮಾಡಿ ವಿದೇಶಕ್ಕೆ ಓಡಿ ಹೋಗುವ ಅಧಿಕಾರಿಗಳನ್ನು ತಡೆಯಲು ಮೋದಿ ಸರ್ಕಾರದಿಂದ ಮಾಸ್ಟರ್ ಪ್ಲಾನ್..!! ಏನದು ಗೊತ್ತಾ‌‌?!

0

ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ, ಭಾರತದ ಸಮಸ್ಯೆಗಳನ್ನು ಒಂದಾದ ಮೇಲೊಂದರಂತೆ ಬಗೆಹರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಜಿ ಸರ್ಕಾರ ಇಗ ಮತೊಂದು ದೊಡ್ಡ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದೆ.

NarendraModi

ಅಷ್ಟಕು ಏನದು ಸಮಸ್ಯೆ !? ಏನದು ಪರಿಹಾರ!?..!! ಮುಂದೆ ಓದಿ

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕೆಲಸವೆಂದರೆ ಅದು ದುಡ್ಡು ಮಾಡುವ ಸುಲಭ ಉಪಾಯ ಎಂದು ಬಹಳಷ್ಟು ಜನರು ಭ್ರಷ್ಟಾಚಾರ ಮಾಡುವ ಹಾದಿ ಹಿಡಿಯುತ್ತಿದ್ದಾರೆ. ಪ್ರತಿಯೊಂದು ಕೆಲಸಕ್ಕೆ ದುಡ್ಡು ಕೇಳುತ್ತಾರೆ.

ಹೀಗೆ ದುಡ್ಡು ಮಾಡುವ ಅಧಿಕಾರಿಗಳು ಸ್ವಲ್ಪ ವರ್ಷಗಳು ಕಾರ್ಯ ನಿರ್ವಹಿಸಿ ಭ್ರಷ್ಟಾಚಾರ ಮಾಡಿ ಭಾರತ ಬಿಟ್ಟು ಹೋಗಲು ತಂತ್ರ ಹುಡುತ್ತಾರೆ. ಈ ಸಮಸ್ಯೆಯನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ.

ಅಷ್ಟಕು ಮೋದಿ ಸರ್ಕಾರದ ಮಾಸ್ಟರ್ ಪ್ಲಾನ್..!!

ಅಪರಾಧ ಪ್ರಕರಣ ಅಥವಾ ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ಅಧಿಕಾರಿಗಳಿಗೆ ಇನ್ನು ಮುಂದೆ ಪಾಸ್‌ಪೋರ್ಟ್‌ ಸಿಗಲ್ಲ. ಈ ಸಂಬಂಧ ಕೇಂದ್ರ ಸಿಬಂದಿ ಮತ್ತು ತರಬೇತಿ ಸಚಿವಾಲಯ ಅಂತಿಮಗೊಳಿಸಿರುವ ಹೊಸ ನಿಯಮಾವಳಿಯಲ್ಲಿ ಸೇರಿಸಲಾಗಿದೆ.

ಆದರೆ, ತುರ್ತು ವೈದ್ಯಕೀಯ ಸನ್ನಿವೇಶದಲ್ಲಿ ವಿದೇಶಕ್ಕೆ ತೆರಳಬೇಕಾದ ಅನಿವಾರ್ಯ ಎದುರಾದಾಗ ಮಾತ್ರವೇ ವಿಶೇಷ ವಿನಾಯಿತಿ ನೀಡಲಾಗುತ್ತದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದರೆ, ತನಿಖೆ ನಡೆಯುತ್ತಿದ್ದರೆ ಹಾಗೂ ಯಾವುದೇ ಸರಕಾರಿ ಸಂಸ್ಥೆಯಿಂದ ಅಧಿಕಾರಿಯ ವಿರುದ್ಧ FIR ದಾಖಲಾಗಿದ್ದರೆ ಮತ್ತು ಅಧಿಕಾರಿಯನ್ನು ಅಮಾನತಿನಲ್ಲಿರಿಸಿದ್ದರೆ ಪಾಸ್‌ಪೋರ್ಟ್‌ ನೀಡಿಕೆ ತಿರಸ್ಕರಿಸಲಾಗುತ್ತದೆ.

ಅಲ್ಲದೆ ಅಪರಾಧ ಪ್ರಕರಣಗಳು ವಿಚಾರಣೆಯಲ್ಲಿದ್ದರೂ ಈ ನಿಯಮ ಅನ್ವಯವಾಗುತ್ತದೆ. ಕೇವಲ ಎಫ್.ಐ.ಆರ್‌. ದಾಖಲಾಗಿ, ಚಾರ್ಜ್‌ಶೀಟ್‌ ದಾಖಲಾಗಿಲ್ಲದಿದ್ದರೆ ಅಂಥವರಿಗೆ ಪಾಸ್‌ ಪೋರ್ಟ್‌ ನಿರಾಕರಿಸುವಂತಿಲ್ಲ.

FIR ರ ವಿವರಣೆಯನ್ನು ಪಾಸ್‌ಪೋರ್ಟ್‌ ಕಚೇರಿಗೆ ನೀಡಲಾಗುತ್ತದೆ. ಆದರೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಪಾಸ್‌ಪೋರ್ಟ್‌ ಕಚೇರಿಗೆ ಬಿಡಲಾಗುತ್ತದೆ. ಯಾವುದೇ ಶಿಸ್ತುಕ್ರಮ ಎದುರಿಸುತ್ತಿರುವ ಅಧಿಕಾರಿಗೆ ಪಾಸ್‌ಪೋರ್ಟ್‌ ನೀಡುವುದಿಲ್ಲ. ಆದರೆ ಅಧಿಕಾರಿಯ ಸಂಬಂಧಿಕರು ಅಥವಾ ಸ್ವತಃ ಅಧಿಕಾರಿಯು ಆರೋಗ್ಯ ಸಮಸ್ಯೆ ಹೊಂದಿದ್ದು, ವಿದೇಶಕ್ಕೆ ತೆರಳಬೇಕಿದ್ದರೆ ಆಗ ಪಾಸ್‌ಪೋರ್ಟ್‌ ನೀಡಲಾಗುತ್ತದೆ.

 

ಅಧಿಕಾರಿಯೊಬ್ಬರ ವಿರುದ್ಧ ಖಾಸಗಿ ದೂರು, ಈ ಸಂಬಂಧ ಎಫ್.ಐ.ಆರ್‌. ದಾಖಲಾಗಿದ್ದರೆ ಅಂಥವರಿಗೆ ಪಾಸ್‌ ಪೋರ್ಟ್‌ ನಿರಾಕರಿಸಲಾಗದು. ಕೇಂದ್ರ ಸರಕಾರದ ಎಲ್ಲ ಇಲಾಖೆಗಳಿಗೂ ನಿಯಮಾವಳಿಯ ಪ್ರತಿಯನ್ನು ಕಳುಹಿಸಲಾಗಿದೆ.

ಕೃಪೆ:ಉದಯ ವಾಣಿ