Exclusive: ಕ್ರಿಕೆಟ್ ಕ್ಷೇತ್ರದಲ್ಲಿ ಸುಧಾರಣೆ ತರಲು ಪ್ರಧಾನಿ ಮೋದಿಯಿಂದ ಮಹತ್ವದ ನಿರ್ಧಾರ..!!

Exclusive: ಕ್ರಿಕೆಟ್ ಕ್ಷೇತ್ರದಲ್ಲಿ ಸುಧಾರಣೆ ತರಲು ಪ್ರಧಾನಿ ಮೋದಿಯಿಂದ ಮಹತ್ವದ ನಿರ್ಧಾರ..!!

0

ಕ್ರೀಡೆ ಎರಡು ತಂಡಗಳು ಅಥವಾ ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧ ಹೆಚ್ಚಿಸಲು ನೆರವಾಗುತ್ತದೆ. ವಿಭಿನ್ನ ಸಂಸ್ಕೃತಿ ಮತ್ತು ಸಮಾಜ ಹೊಂದಿರುವ ಎರಡು ದೇಶಗಳ ಜನರ ನಡುವೆ ಐಕ್ಯತೆಯನ್ನು ತರಲು ಕ್ರೀಡೆ ಖಂಡಿತವಾಗಿಯೂ ಮಹತ್ವದ ಪಾತ್ರ ವಹಿಸುತ್ತದೆ.

ಎರಡು ದೇಶಗಳ ಸಂಬಂಧಗಳನ್ನು ಸುಧಾರಿಸಲು ಮೋದಿ ಈ ಬಾರಿ ಕ್ರೀಡೆಯ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಕ್ರಿಕೆಟ್ ಸೌಲಭ್ಯಗಳು ಬಳಸಲು ಕಾಮನ್ ವೆಲ್ತ್ ರಾಷ್ಟ್ರಗಳನ್ನು ಆಹ್ವಾನಿಸಲು ತೀರ್ಮಾನ ತೆಗೆದು ಕೊಂಡಿದ್ದಾರೆ.

ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರ ಲಂಡನ್‌ಗೆ ಭೇಟಿ ನೀಡುವ ಸಂಧರ್ಭದಲ್ಲಿ ಕಾಮನ್ ವೆಲ್ತ್ ದೇಶಗಳಿಗೆ ಭಾರತದ ಕ್ರಿಕೆಟ್ ಸೌಲಭ್ಯಗಳನ್ನು ಬಳಸಲು ಆಹ್ವಾನಿಸಲು ತೀರ್ಮಾನಿಸಲಾಗಿದೆ.

ಪ್ರಧಾನಮಂತ್ರಿ ಮೋದಿ ಲಂಡನ್ ನಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಸರ್ಕಾರದ (CHOGM) ಶೃಂಗಸಭೆಗೆ ಭೇಟಿ ನೀಡಲಿದ್ದಾರೆ. ಬ್ರಿಟಿಷ್ ಪ್ರಧಾನಮಂತ್ರಿ ಥೆರೆಸಾ ಮೇ ಈ ವಿಂಡ್ಸರ್ ಕ್ಯಾಸಲ್ ನಲ್ಲಿ ನಡೆಯಲಿರುವ ಈ ಶೃಂಗಸಭೆಯ ಆತಿಥೆ ವಹಿಸಿಕೊಳ್ಳಲ್ಲಿದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗಳು ಮತ್ತು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧಿಕಾರಿಗಳು ಭೇಟಿ ನಡೆಸಿದ್ದು, ವಿದೇಶಾಂಗ ಸಚಿವಾಲಯ ಮತ್ತು ಬಿಸಿಸಿಐ ನಡುವೆ ಸಹಿ ಹಾಕಲಿದೆ ಎಂದು ತಿಳಿದು ಬಂದಿದೆ.

ಕೃಪೆ:http://www.dnaindia.com/locality/varanasi/varanasi-lawyer-advocating-sanskrits-growth-heartening-way-93241