40 ವರ್ಷಗಳಿಂದ ಸಂಸ್ಕೃತದಲ್ಲಿ ವಕಾಲತು ಮಾಡುವ ದೇಶದ ಏಕೈಕ ನ್ಯಾಯವಾದಿ.!! ಯಾರು ಆ ನ್ಯಾಯವಾದಿ ಗೊತ್ತಾ..??

40 ವರ್ಷಗಳಿಂದ ಸಂಸ್ಕೃತದಲ್ಲಿ ವಕಾಲತು ಮಾಡುವ ದೇಶದ ಏಕೈಕ ನ್ಯಾಯವಾದಿ.!! ಯಾರು ಆ ನ್ಯಾಯವಾದಿ ಗೊತ್ತಾ..??

0

ಲ್ಯಾಟಿನ್​ನಂತೆಯೇ ಸಂಸ್ಕೃತ ಸತ್ತ ಭಾಷೆ ಎಂದು ಕೆಲವರು ಹೀಗಳೆಯುತ್ತಾರೆ. ಅವರಿಗೆ ಸತ್ ಮತ್ತು ಸತ್ತ ಪದಗಳ ಉಚ್ಚಾರದಲ್ಲಿ ತೊಂದರೆ ಇರುವುದರಿಂದ ಹೀಗಳೆಯುತ್ತಾರೆ ಎನ್ನುವುದು ಸುಸಂಸ್ಕೃತರ ಅಭಿಮತ.

ಸರಿಸುಮಾರು 40 ವರ್ಷಗಳಿಂದ ಸಂಸ್ಕೃತದಲ್ಲಿ ತಮ್ಮ ವಕಾಲತು ಮಾಡುತ್ತಾ ಬಂದಿರುವ ಈ ವಕೀಲರು ಪ್ರತಿಯೊಬ್ಬ ಹಿಂದೂಗಳಿಗೆ ಆದರ್ಶವಾಗಿದ್ದಾರೆ. ಹಿಂದೂ ಧರ್ಮವನ್ನು ಆಚರಣೆ ಮಾಡಲು ಮುಜುಗರ ಪಡುವ ಪ್ರತಿಯೊಬ್ಬರು ಇವರಿಂದ ಧರ್ಮಾಭಿಮಾನವನ್ನು ಕಲಿಯಬೇಕು.

ಅಷ್ಟಕು ಯಾರು ಆ ವಕೀಲರು..!??ಮುಂದೆ ಓದಿ.

ಪಂಡಿತ್ ಶ್ಯಾಮಜೀ ಉಪಾಧ್ಯಾಯ ಅವರು ಕಳೆದ 40 ವರ್ಷಗಳಿಂದ ಸಂಸ್ಕೃತದಲ್ಲಿ ವಕಾಲತು ಮಾಡುತ್ತಿದ್ದಾರೆ.

ನೀವು ಯಾಕೆ ಸಂಸ್ಕೃತದಲ್ಲಿ ವಕಾಲತು ಮಾಡುತ್ತಿದ್ದಿರಿ..!?? ಎಂದು ಕೇಳಿದಾಗ ಅವರ ಉತ್ತರ ಹೀಗಿತ್ತು.. ‌‌

“ನಾನು ಚಿಕ್ಕವನಾಗಿದ್ದಾಗ, ನನ್ನ ತಂದೆ ನನಗೆ ಹೀಗೆ ಹೇಳಿದ್ದರು ‘ಹಿಂದಿ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳನ್ನು ಹೆಚ್ಚಾಗಿ ನ್ಯಾಯಾಲಯದಲ್ಲಿ ಬಳಸಲಾಗುತ್ತದೆ ಆದರೆ ಸಂಸ್ಕೃತ ಯಾರು ಬಳಸಲ್ಲ’ .ಈ ಮಾತು ನಾನು ಸಂಸ್ಕೃತ ಭಾಷೆಯಲ್ಲಿ ವಕೀಲನಾಗಿ ಅಭ್ಯಾಸ ಮಾಡಲು ಕಾರಣವಾಯಿತು ಎಂದು ಹೇಳಿದರು.

ಅವರು ನ್ಯಾಯಾಲಯಕ್ಕೆ ಸಂಬಂಧಿಸಿದ ಎಲ್ಲ ಕಾಗದಪತ್ರಗಳನ್ನು ಅಂದರೆ ಪ್ರಮಾಣಪತ್ರ,ವಿನಂತಿಪತ್ರ, ದಾವೆ, ವಕೀಲುನಾಮೆ ಮತ್ತು ಪ್ರತಿವಾದವನ್ನೂ ಸಂಸ್ಕೃತದಲ್ಲಿಯೇ ಮಾಡುತ್ತಿದ್ದಾರೆ.

ಕಳೆದ 40 ವರ್ಷಗಳಿಂದ ಸಂಸ್ಕೃತದಲ್ಲಿ ವಕಾಲತು ಮಾಡುತ್ತಿರುವಾಗ ಅವರ ಪರವಾಗಿ ಇರುವ ತೀರ್ಪು ಮತ್ತು ಆದೇಶವನ್ನೂ ನ್ಯಾಯಾಧೀಶರು ಸಂಸ್ಕೃತ ಅಥವಾ ಹಿಂದಿಯಲ್ಲಿಯೇ ಕೊಟ್ಟಿದ್ದಾರೆ.

ಸಂಸ್ಕೃತ ಭಾಷೆಯ ವಿಷಯದಲ್ಲಿ ಶ್ರದ್ಧೆಯಿಡುವ ಉಪಾಧ್ಯಾಯರು ಪ್ರತಿವರ್ಷ ನ್ಯಾಯಾಲಯದಲ್ಲಿ ಸಂಸ್ಕೃತ ದಿನ ಆಚರಿಸುತ್ತಾರೆ.

‘ಸಂಸ್ಕೃತ ವಕೀಲರು’ ಈಗ ಗಿನ್ನೀಸ್ ವಿಶ್ವ ದಾಖಲೆಯ ಗುರಿ ಇಟ್ಟುಕೊಂಡಿದ್ದಾರೆ..!!

ಹೌದು!! ಅವರ 60 ಕೂ ಹೆಚ್ಚು ಪುಸ್ತಕಗಳು ಬರೆದಿದ್ದು ಅವುಗಳಲ್ಲಿ ಎರಡು ಪುಸ್ತಕಗಳ ಪ್ರಕಟಿತಗಿವೆ ಅವು ಕೂಡ ಸಂಸ್ಕೃತ ಭಾಷೆಯಲ್ಲಿವೆ ಅವರ ಸಂಸ್ಕೃತ ಭಾಷೆಯ ಪ್ರಾವೀಣ್ಯತೆಯನ್ನು ಈ ಎರಡು ಪ್ರಕಟಿತ ಪುಸ್ತಕಗಳು ಸಾಬೀತುಪಡಿಸುತ್ತವೆ.

ನ್ಯಾಯಾಲಯದಲ್ಲಿನ ಚಟುವಟಿಕೆ ಮುಗಿದ ನಂತರ ಅವರು ಸಂಸ್ಕೃತ ಭಾಷೆಯನ್ನು ವಿದ್ಯಾರ್ಥಿಗಳಿಗೆ ಮತ್ತು ವಕೀಲರಿಗೆ ಉಚಿತ ಕಲಿಸುತ್ತಾರೆ.

ಸಂಸ್ಕೃತ ಭಾಷೆಯಲ್ಲಿ ಆಸಕ್ತಿ ಹೊಂದಿರುವ ಹಿರಿಯ ವಕೀಲ ಶೋಭಾನಾಥ್ ಲಾಲ್ ಶ್ರಿವಾಸ್ತವ ಹೇಳುತ್ತಾರೆ, “ನ್ಯಾಯಾಲಯದಲ್ಲಿರುವ ಪ್ರತಿಯೊಬ್ಬರೂ ಶ್ಯಾಮಜೀ ಅವರ ಸಂಸ್ಕೃತ ಭಾಷೆಯ ಆಸಕ್ತಿಗಾಗಿ ಮೆಚ್ಚುತ್ತಾರೆ. ಕೋರ್ಟ್ ನಲ್ಲಿ ಸರಳ ಸಂಸ್ಕೃತ ಪದಗಳನ್ನು ಬಳಸುವ ಶ್ಯಾಮಜೀ ಅವರ ಮಾತುಗಳು ಶಾಂತವಾಗಿ ಕೇಳಬೇಕು ಎನಿಸುತ್ತದೆ. ಸಂಸ್ಕೃತ ಭಾಷೆಯ ನನ್ನ ಜ್ಞಾನವೂ ಸಹ ಅವರನ್ನು ಭೇಟಿಯಾದ ನಂತರ ಹೆಚ್ಚಾಗಿದೆ. ”

‘ಸಂಸ್ಕೃತ ವಕೀಲರು’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇವರನ್ನು, 2003 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (MHRD) ‘ಸಂಸ್ಕೃತಮಿತ್ರ’ ಎಂಬ ರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಗೌರವಿಸಿದೆ.

ಶ್ಯಾಮಜೀ ಅವರ ಈ ಸಾಧನೆ ಎಲ್ಲಾ ಹಿಂದೂ ಮಿತ್ರರಿಗೆ ತಲುಪುವ ವರೆಗೂ ಶೇರ್ ಮಾಡಿ.!!