ಕಾಂಗ್ರೆಸ್ ನಮ್ಮನ್ನು ಐಸಿಯುನಲ್ಲಿ ಇರಿಸಿತ್ತು..!! ಮೋದಿ ಸರ್ಕಾರದಿಂದ ಈ ಕೆಲಸಗಳಿಂದ ಈಶಾನ್ಯ ರಾಜ್ಯಗಳು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಯಿತು..!! ಅಸ್ಸಾಂ ಯುವಕನ ಅದ್ಭುತ ವಿಶ್ಲೇಷಣೆ..!!

ಕಾಂಗ್ರೆಸ್ ನಮ್ಮನ್ನು ಐಸಿಯುನಲ್ಲಿ ಇರಿಸಿತ್ತು..!! ಮೋದಿ ಸರ್ಕಾರದಿಂದ ಈ ಕೆಲಸಗಳಿಂದ ಈಶಾನ್ಯ ರಾಜ್ಯಗಳು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಯಿತು..!! ಅಸ್ಸಾಂ ಯುವಕನ ಅದ್ಭುತ ವಿಶ್ಲೇಷಣೆ..!!

0

ಭಾರತದ ಲ್ಯಾಂಡ್ ಆಫ್ ಸೆವೆನ್ ಸಿಸ್ಟರ್ಸ್(ಸಪ್ತ ಸಹೋದರಿ ರಾಜ್ಯಗಳು)ಎಂದು ಗುರುತಿಸಿಕೊಂಡಿರುವ ಈಶಾನ್ಯ ಭಾಗದ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ನಾಗಾಲ್ಯಾಂಡ್‌ಗಳು ಒಂದಿಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಲೇ ಇದ್ದವು. ಅಭಿವೃದ್ಧಿ ಕುಂಠಿತ ಕೊಂಡಿತ್ತು ನಾವು ಐಸಿಯುನಲ್ಲಿ ಇದ್ದ ಹಾಗೆಯೇ ಅನುಭವ 2014 ರ ವರೆಗೆ ಅಗಿತ್ತು.

ಭಾರತ ಸ್ವತಂತ್ರವಾದಾಗ ಈ ಏಳು ರಾಜ್ಯಗಳಿರುವ ಪ್ರದೇಶವು ಮೂರು ರಾಜ್ಯಗಳಲ್ಲಿ ಹಂಚಿಹೋಗಿತ್ತು. ಮಣಿಪುರ ಮತ್ತು ತ್ರಿಪುರಾ ರಾಜಮನೆತನಕ್ಕೆ ಒಳಪಟ್ಟಿದ್ದವು. ಅಸ್ಸಾಂನ ಬಹುತೇಕ ಪ್ರದೇಶ ನೇರವಾಗಿ ಬ್ರಿಟಿಷ್‌ರ ಆಳ್ವಿಕೆಗೆ ಸೇರಿತ್ತು. ಬಳಿಕ 1963ರಲ್ಲಿ ನಾಗಾಲ್ಯಾಂಡ್, 1972ರಲ್ಲಿ ಮೇಘಾಲಯ ಮತ್ತು ಮಿಜೋರಾಮ್ ಅಸ್ತಿತ್ವಕ್ಕೆ ಬಂದವು. ಈ ಪೈಕಿ ಮಿಜೋರಾಂ ಕೇಂದ್ರಾಡಳಿತ ಪ್ರದೇಶವಾಗಿತ್ತು.

ನಂತರ 1987ರಲ್ಲಿ ಅರುಣಾಚಲ ಪ್ರದೇಶದ ಜತೆಗೆ ರಾಜ್ಯದ ಸ್ಥಾನಮಾನ ಪಡೆಯಿತು. ಈ ಪ್ರದೇಶಗಳಲ್ಲಿ ಬೋಡೋ, ನಿಶಿ, ಗಾರೋ, ನಾಗಾಸ್, ಭುಟಿಯಾ ಸೇರಿದಂತೆ ಅನೇಕ ಬುಡಕಟ್ಟು ಜನಾಂಗಗಳಿವೆ. ಈ ಏಳೂ ರಾಜ್ಯಗಳು ಭಾರತದ ಒಟ್ಟು ಭೂಪ್ರದೇಶದ ಶೇ.7ರಷ್ಟು ವ್ಯಾಪ್ತಿ ಹೊಂದಿವೆ. ಒಟ್ಟು ಜನಸಂಖ್ಯೆ, 2011ರ ಜನಗಣತಿ ಪ್ರಕಾರ 4.5 ಕೋಟಿ. ಅಂದರೆ, ದೇಶದ ಜನಸಂಖ್ಯೆಯ ಶೇ.3.7ರಷ್ಟು.

ಇಲ್ಲಿನ ಸಾಮಾಜಿಕ, ರಾಜಕೀಯ, ಭೌಗೋಳಿಕ ಮತ್ತು ಸಾಂಸ್ಕೃತಿಕ ಸ್ಥಿತಿ ಉಳಿದ ಭಾರತ’ಕ್ಕಿಂತ ಭಿನ್ನ. ಅದರಲ್ಲೂ ಈ ರಾಜ್ಯಗಳ ಜನಾಂಗೀಯ ಮತ್ತು ಸಾಂಸ್ಕೃತಿಕ ವಿಭಿನ್ನ. ಮೇಲ್ನೋಟಕ್ಕೆ ಭಾರತದೊಂದಿಗೆ ಗುರುತಿಸಿಕೊಂಡಿರುವಂತೆ ಕಂಡರೂ ಈ ಏಳೂ ರಾಜ್ಯಗಳಲ್ಲಿನ ಅಷ್ಟೊಂದು ಅಭಿವೃದ್ಧಿ ಹೊಂದಿರಲಿಲ್ಲ,2014 ರ ನಂತರ ಈಶಾನ್ಯ ರಾಜ್ಯಗಳು ಕೂಡ ಭಾರತದ ಆಸ್ತಿ ಹಾಗೆ ಅದರ ಅಭಿವೃದ್ಧಿ ದೇಶದ ಅಭಿವೃದ್ಧಿ ಎಂದು ಮೋದಿ ಅವರು ಹತ್ತು ಹಲವು ಯೋಜನೆಗಳು ಕಾರ್ಯರೂಪಕ್ಕೆ ತರುವ ಪ್ರಾಮಾಣಿ ಪ್ರಯತ್ನ ಮಾಡಿದರು.

ಅಷ್ಟಕು ಮೋದಿಜಿ ಇದುವರೆಗೂ ಮಾಡಿರುವ ಯೋಜನೆಗಳು ಯಾವ್ಯಾವು ಗೊತ್ತಾ..!!

*ಈ ವರ್ಷದ ಆಯವ್ಯಯ ಪತ್ರದಲ್ಲಿ ಈಶಾನ್ಯ ಭಾಗಕ್ಕೆ 30,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

*ಕೇಂದ್ರ ಸರಕಾರವು ತನ್ನ `ಪೂರ್ವದೆಡೆಗೆ ಗಮನ ಹರಿಸಿ’ (ಆಕ್ಟ್ ಈಸ್ಟ್ ಪಾಲಿಸಿ) ನೀತಿಯಡಿ, ದೇಶದ ಈಶಾನ್ಯ ಭಾಗದ ಅಭಿವೃದ್ಧಿಯತ್ತ ಗಮನ ಹರಿಸಿದೆ. ಈ ನೀತಿಯ ಪ್ರಕಾರ, ರಸ್ತೆ, ರೈಲು, ದೂರಸಂಪರ್ಕ, ವಿದ್ಯುತ್ ಮತ್ತು ಜಲಸಾರಿಗೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಮೂಲಕ ಈ ಭಾಗವು ದೇಶದ ಉಳಿದ ಭಾಗಗಳಿಗಿಂತ ಪ್ರತ್ಯೇಕವಾಗಿ ಉಳಿಯುವುದನ್ನು ಆದಷ್ಟೂ ಕಡಿಮೆ ಮಾಡಲು ಮೋದಿ ಸರ್ಕಾರ ಆದ್ಯತೆ ಕೊಟ್ಟಿದೆ.

*ಕೇಂದ್ರ ಸರಕಾರ ಅಪಾರ ನೆರವು ನೀಡುತ್ತಿದೆ. ಅಂದರೆ, ಕೇಂದ್ರ ಸರಕಾರ ಮಹತ್ವದ ಯೋಜನೆಗಳಿಗೆ 90:10ರ ಅನುಪಾತದಲ್ಲೂ, ಉಳಿದ ಯೋಜನೆಗಳಿಗೆ 80:20ರ ಅನುಪಾತದಲ್ಲೂ ಕೇಂದ್ರ ಸಹಕರಿಸುತ್ತಿದೆ.

*ಇತ್ತೀಚೆಗೆ ಅಸ್ಸಾಂನಲ್ಲಿ ಅತ್ಯಂತ ಮಹತ್ವದ ಎರಡು ಯೋಜನೆಗಳನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಅವೆಂದರೆ- ಬ್ರಹ್ಮಪುತ್ರಾ ಕ್ರ್ಯಾಕರ್ ಅಂಡ್ ಪಾಲಿಮರ್ ಲಿಮಿಟೆಡ್ ಮತ್ತು ನುಮಾಲಿಘಡ ರಿಫೈನರಿ ಲಿಮಿಟೆಡ್ನಲ್ಲಿ ಮೇಣದ ಘಟಕಗಳ ಸ್ಥಾಪನೆ. ಇವೆರಡೂ ಅತ್ಯಂತ ಬೃಹತ್ ಯೋಜನೆಗಳಾಗಿದ್ದು, ಈಶಾನ್ಯ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಿವೆ.

*ಈಶಾನ್ಯ ಭಾಗದ ರಾಜ್ಯಗಳ ಅನುಕೂಲಕ್ಕೆಂದೇ ಮೋದಿ ಸರ್ಕಾರ `ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಿತ್ತು. ಹೆದ್ದಾರಿಗಳ ನಿರ್ಮಾಣದಲ್ಲಿ ಪರಿಣತಿ ಹೊಂದಿರುವ ಈ ನಿಗಮ 2014ರ ಜುಲೈ 18ರಂದು ಅಸ್ತಿತ್ವಕ್ಕೆ ಬಂದಿತು. ಇದು, ಈಶಾನ್ಯ ಭಾಗದ ಎಲ್ಲ ರಾಜ್ಯಗಳಲ್ಲೂ ತನ್ನ ಒಂದೊಂದು ಶಾಖೆಗಳನ್ನು ಹೊಂದಿದ್ದು, ಇಲ್ಲಿಯವರೆಗೂ 34 ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಒಟ್ಟಾರೆಯಾಗಿ, ಈ ಯೋಜನೆಗಳ ಮೂಲಕ 10,000 ಕೋಟಿ ರೂಪಾಯಿ ವೆಚ್ಚದಲ್ಲಿ 1,001 ಕಿಲೋಮೀಟರ್ ಉದ್ದದಷ್ಟು ಹೆದ್ದಾರಿಯನ್ನು ಈ ನಿಗಮವು ನಿರ್ಮಿಸುತ್ತಿದೆ.

*ಇತ್ತೀಚೆಗೆ ಮೋದಿ ಸರ್ಕಾರ ಬಾಂಗ್ಲಾದೇಶದ ಜತೆಗೂಡಿ ಈಶಾನ್ಯ ರಾಜ್ಯಗಳಿಗೆ ಅನುಕೂಲವಾಗುವ `ಸುಧಾರಿತ ಅಂತರ್ಜಾಲ ಸಂಪರ್ಕ ಯೋಜನೆ’ಯನ್ನು ಜಾರಿಗೆ ತಂದಿದೆ. ಇದರಿಂದಾಗಿ ಈ ಭಾಗಕ್ಕೆ ಮತಷ್ಟು ಅಂತರ್ಜಾಲ ಲಭ್ಯವಾಗಲಿದೆ. ಈ ರೀತಿಯ ಕ್ರಮಗಳು ಈಶಾನ್ಯ ಭಾಗಕ್ಕೆ ಅಪಾರ ಲಾಭ ತಂದುಕೊಡಲಿವೆ.

*ಹಾಗೆಯೇ, ಈಶಾನ್ಯ ಭಾಗದ ಎಂಟೂ ರಾಜ್ಯಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವ ಗುರಿಯುಳ್ಳ ಯೋಜನೆಯನ್ನು 10,000 ಕೋಟಿ ರೂಪಾಯಿ ವೆಚ್ಚದಲ್ಲಿ ಇತ್ತೀಚೆಗೆ ಉದ್ಘಾಟಿಸಲಾದ ವಿಶ್ವನಾಥ್-ಚರಿಯಾಲಿ-ಆಗ್ರಾ ಮಾರ್ಗದ ವಿದ್ಯುತ್ ಪೂರೈಕೆ ಯೋಜನೆಯಿಂದ, ಈಶಾನ್ಯ ಭಾಗಕ್ಕೆ ಹೆಚ್ಚುವರಿಯಾಗಿ 500 ಮೆಗಾವ್ಯಾಟ್ ವಿದ್ಯುತ್ ಸಿಗುತ್ತಿದೆ.

*ರೈಲ್ವೆ ಇಲಾಖೆಯೂ ಮೋದಿ ಸರ್ಕಾರ ಗಮನ ಹರಿಸಿದ್ದು, 10,000 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ಸೌಲಭ್ಯಗಳ ಬೃಹತ್ ವಿಸ್ತರಣೆಯನ್ನು ಕೈಗೆತ್ತಿಕೊಂಡಿದೆ. ಅಷ್ಟೇ ಅಲ್ಲ, ಇಂಥ ಪ್ರಯತ್ನಗಳಿಂದಾಗಿ ಈ ಭಾಗದ ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯಗಳು 2014ರ ನವೆಂಬರ್ ನಲ್ಲಿ ದೇಶದ ರೈಲ್ವೆ ನಕಾಶೆಯೊಳಗೆ ಕಾಣಿಸಿಕೊಂಡವು. ತ್ರಿಪುರಾದ ರಾಜಧಾನಿ ಅಗರ್ತಲಾಕ್ಕೂ ಬ್ರಾಡ್ಗೇಜ್ ರೈಲು ಸಂಪರ್ಕ ಕಲ್ಪಿಸಲಾಗಿದೆ. ಈಶಾನ್ಯ ಭಾಗದ ಎಲ್ಲ ರಾಜ್ಯಗಳೂ ಸದ್ಯದಲ್ಲೇ ರೈಲ್ವೆ ಸೌಲಭ್ಯ ಹೊಂದಲಿವೆ.

*ಭಾರತೀಯ ರೈಲ್ವೆಯು ಕಳೆದ ಎರಡು ವರ್ಷಗಳಲ್ಲಿ ಈ ಭಾಗದಲ್ಲಿ 900 ಕಿಲೋಮೀಟರ್ ಉದ್ದದ ಹಳಿಯನ್ನು ಬ್ರಾಡ್ಗೇಜ್ ಮಾರ್ಗವಾಗಿ ಪರಿವರ್ತಿಸಿದೆ. ಇದರ ಪರಿಣಾಮವಾಗಿ, 2016-17ರ ಹೊತ್ತಿಗೆ ಈ ಭಾಗದಲ್ಲಿ ಕೇವಲ 50 ಕಿಲೋಮೀಟರ್ ಉದ್ದದ ಮೀಟರ್ಗೇಜ್ ಮಾರ್ಗದ ಪರಿವರ್ತನೆ ಕೆಲಸ ಮಾತ್ರ ಬಾಕಿ ಉಳಿದುಕೊಂಡಿದೆಯಷ್ಟೆ. ಇದರ ಜತೆಗೆ, ಈಶಾನ್ಯ ಭಾಗಕ್ಕೆ ರೈಲು ಸಂಪರ್ಕ ಕಲ್ಪಿಸುವ ಮೂರನೇ ಪರ್ಯಾಯ ಮಾರ್ಗವನ್ನು ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿದೆ. ಹೊಸ ಮೈನಾಗುರಿ-ಜೋಗಿಗ್ಹೋಪ ನಡುವಿನ ಈ ಮಾರ್ಗವು ಒಟ್ಟು 132 ಕಿಲೋಮೀಟರ್ ಉದ್ದವಿದೆ.

*ಪ್ರವಾಸೋದ್ಯಮ ಸಚಿವಾಲಯವು ಈಶಾನ್ಯ ಭಾಗದ ರಾಜ್ಯಗಳಲ್ಲಿ ಒಂದು `ಆಶಯ/ವಿಷಯಾಧಾರಿತ ಪ್ರವಾಸ’ವೆನ್ನುವ ಪರಿಕಲ್ಪನೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ.

*ಈಶಾನ್ಯ ಭಾಗದ ಹೆಚ್ಚಿನ ಯುವಜನರು ಇಂಗ್ಲಿಷ್ ಮಾತನಾಡುವವರಾಗಿದ್ದಾರೆ. ಹೀಗಾಗಿ, ಸುಧಾರಿತ ಸಂಪರ್ಕ ತಂತ್ರಜ್ಞಾನ ಮತ್ತು ತಮಗಿರುವ ಕೌಶಲ್ಯವನ್ನು ಬಳಸಿಕೊಂಡು, ಈ ಭಾಗದಲ್ಲಿ ಬಿ.ಪಿ.ಓ. ಉದ್ದಿಮೆಗಳನ್ನು ಹುಟ್ಟುಹಾಕಿ ಈ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಉದ್ಯೋಗಸೃಷ್ಟಿ ಸಾಧ್ಯವಾಗಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರಕಾರವು `ಡಿಜಿಟಲ್ ಇಂಡಿಯಾ’ ಯೋಜನೆಯಡಿ, ಈಶಾನ್ಯ ರಾಜ್ಯಗಳಿಗೆಂದೇ ಪ್ರತ್ಯೇಕ `ಬಿಪಿಓ ಉತ್ತೇಜನಾ ಯೋಜನೆ’ಯನ್ನು ಅನುಮೋದಿಸಿದೆ.

*ದೆಹಲಿ ಪೋಲಿಸ್ ನಲ್ಲಿ ಈಶಾನ್ಯ ರಾಜ್ಯದಿಂದ ಯುವಕರನ್ನು ನೇಮಕ ಮಾಡಲು ಸರಕಾರ ಯೋಚಿಸುತ್ತಿದೆ. ಇದು ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ,

*ಈಶಾನ್ಯದ 7 ರಾಜ್ಯಗಳ ಪೈಕಿ ಅರುಣಾಚಲದ ಇಟಾ ನಗರದಿಂದ -ದೆಹಲಿ ಗೆ ಮೊದಲ ರೈಲು, ಇತ್ತಿಚಿಗೆ ಮೋದಿ ಪ್ರಾರಂಭಿದರು‌.

ಹೀಗೆ ಮೋದಿ ಸರ್ಕಾರದ ಹತ್ತು ಹಲವು ಯೋಜನೆಗಳು ನಮ್ಮ ಈಶಾನ್ಯ ರಾಜ್ಯಗಳು ಮುಖ್ಯವಾಹಿನಿಗು ಬರಲು ಸಹಾಯವಾಗುತ್ತಿವೆ. ಅಷ್ಟಕು ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಷ್ಟು ವರ್ಷ ಅಧಿಕಾರದಲ್ಲಿದರು ಏಕೆ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡಿಲ್ಲ ಎಂದರೆ ನಮ್ಮ ಈಶಾನ್ಯ ರಾಜ್ಯಗಳ ಎಲ್ಲಾ ಲೋಕಸಭಾ ಸ್ಥಾನಗಳು ಸೇರಿಸಿ ಬರೀ 23 ಕ್ಷೇತ್ರಗಳು ಮಾತ್ರ ಇರುವುದು ಕಾಂಗ್ರೆಸ್ ನ ರಾಜಕೀಯ ಲೆಕ್ಕಾಚಾರ ಪ್ರಕಾರ ಅಂದು ಅದು ಚಿಕ್ಕ ಸಂಖ್ಯೆ ಹಾಗಾಗಿ ಅಭಿವೃದ್ಧಿ ಮಾಡದೆ ಮಲತಾಯಿ ಧೋರಣೆ ತೋರಿದರು ಅದರ ಪರಿಣಾಮ ಇಂದು ಲೋಕಸಭೆಯಲ್ಲಿ ವಿರುದ್ಧ ಪಕ್ಷದ ಸ್ಥಾನ ಕೂಡ ತಪ್ಪಿದು ನಾವು ಕಾಣಬಹುದು.

-ಸಿದ್ಧಾರ್ಥ್ , ಅಸ್ಸಾಂ (from Quora)