NCC ಟ್ರೈನಿಂಗ್ ಬಗ್ಗೆ ಗೊತ್ತಿಲ್ಲ ಅಂದ್ರೆ ಇನ್ನೂ ನೀವು ಪ್ರಧಾನಿಯಾಗಿ ನಮ್ಮ ದೇಶಕ್ಕೆ ಏನು ಮಾಡುತ್ತಿರಿ ರಾಹುಲ್ ಜಿ.?!! ಮೈಸೂರು ಯುವತಿಯ ಮನದಾಳದ ಮಾತು..!

ರಾಜಕೀಯದಲ್ಲಿ ದೊಡ್ಡ ನಾಯಕನ ಮಗ ಅಥವಾ ಮಗಳಾಗಿ ಹುಟ್ಟುವುದು ನಿಜವಾಗಿಯೂ ಆರಂಭಿಕ ಅವಕಾಶವನ್ನು ನೀಡುವುದು ಹೌದು. ಆ ನಂತರ ಮಗ ಅಥವಾ ಮಗಳು ತನ್ನ ಯೋಗ್ಯತೆಯನ್ನು ರುಜುವಾತು ಮಾಡದೆ ಹೋದರೆ ಮತದಾರರು ಅವರನ್ನು ತೆರೆಮರೆಗೆ ಸರಿಸುವುದು ನಿಶ್ಚಿತ.

ಇನ್ನು ನಲವತ್ತೇಳರ ರಾಹುಲ್ ಗಾಂಧಿ ಅವರ ವಿಷಯಕ್ಕೆ ಬಂದರೆ,ಒಬ್ಬ ರಾಜಕಾರಣಿಯ ಮಗ ಎಂದರೆ ಅವರಿಗಿರಬೇಕಾದ ಗಾಂಭೀರ್ಯ, ವರ್ಚಸ್ಸು ಒಂದೂ ರಾಹುಲ್ ಗಾಂಧಿಯಲ್ಲಿಲ್ಲ ಎಂದು ಹೇಳಿದರೆ ತಪ್ಪಾಗಲಾರದು.

ವಂಶ ಪಾರಂಪರ್ಯದ ಬಲದಿಂದಲೇ ರಾಜಕೀಯಕ್ಕೆ ಬಂದಿದಾರೆ ವಿನಾ ನಾಯಕತ್ವದ ಗುಣಗಳಿಂದಲ್ಲ. ಇಲ್ಲವಾದರೆ 2004ರಲ್ಲಿ ರಾಜಕಾರಣ ಪ್ರವೇಶಿಸಿ ಸಂಸದರಾಗಿ ಆಯ್ಕೆಯಾದ ವ್ಯಕ್ತಿ ಹತ್ತು ವರ್ಷಗಳಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ಏರುವುದು ಕನಸಿನ ಮಾತು.

ಸಾರ್ವಜನಿಕ ವೇದಿಕೆಗಳಲ್ಲಿ ಹಲವು ಬಾರಿ ಮುಜುಗರಕ್ಕೆ ಒಳಗಾಗುವ ರಾಹುಲ್ ಗಾಂಧಿ ಈಗ ಮತ್ತೊಂದು ಅಂತಹದೇ ಪ್ರಸಂಗ ನಡೆದಿದೆ.

ನಿನ್ನೆ ಮೈಸೂರಿನ ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜ್ ವಿದ್ಯಾರ್ಥಿನಿಯರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಿದರು.

ಸಂವಾದದಲ್ಲಿ ವಿದ್ಯಾರ್ಥಿನಿ ನೀವು ಅಧಿಕಾರಕ್ಕೆ ಬಂದರೆ ಎನ್‍ಸಿಸಿ ಯ ‘ಸಿ’ ಸರ್ಟಿಫಿಕೇಟ್ ಪಡೆದವರಿಗೆ ಯಾವ ಸೌಲಭ್ಯ ಕಲ್ಪಿಸುತ್ತೀರಿ? ಅಂತಾ ಪ್ರಶ್ನೆ ಮಾಡಿದ್ದರು. ಎನ್‍ಸಿಸಿ ಯ ತರಬೇತಿಯ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ, ದೇಶದ ಯುವ ಪೀಳಿಗೆಯ ವಿದ್ಯಾಭ್ಯಾಸ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಕೆಲಸ ಮಾಡುತ್ತೇವೆ ಅಂತಾ ಅಂದರು.

ರಾಹುಲ್ ಗಾಂಧಿ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಹೀಗಿತ್ತು:

ಪ್ರಶ್ನೆ: ನಿಮಗೆ ದೇಶ ಕಟ್ಟುವ ವಿಚಾರದಲ್ಲಿ ಇರುವ ಸೂತ್ರ ಏನು? ರಾಹುಲ್ ಗಾಂಧಿ: ಬಿಜೆಪಿದು, ಆರ್ ಎಸ್ ಎಸ್ ದು ಒಂದು ದೇಶ, ಒಂದು ಐಡಿಯಾ.ಆದರೆ ಕಾಂಗ್ರೆಸ್ ದು ಒಂದು ದೇಶ, ಹಲವು ಅಭಿಪ್ರಾಯ. ಇಲ್ಲಿ ಎಲ್ಲರಿಗೂ ಅವರದೇ ಅಭಿಪ್ರಾಯಗಳು ಇರುತ್ತವೆ. ಅದನ್ನು ನಾವು ಗೌರವಿಸುತ್ತೇವೆ. ಬಿಜೆಪಿ ಆರ್ ಎಸ್ ಎಸ್ ಗೆ ತಾನು ಒಪ್ಪಿರುವ ಅಭಿಪ್ರಾಯ ಎಲ್ಲಾ ಒಪ್ಪಬೇಕು ಎಂಬ ಧೋರಣೆ ಇದೆ.

ಪ್ರಶ್ನೆ: ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿನಿ. ಇಂಗ್ಲೀಷ್ ನಲ್ಲಿ ಪ್ರಶ್ನೆ ಕೇಳೋಕೆ ಮಾತ್ರ ಅವಕಾಶ ಎಂದು ಅಧ್ಯಾಪಕರು. ರಾಹುಲ್‍ಗಾಂಧಿ: ನೀವು ಕನ್ನಡದಲ್ಲೆ ಮಾತನಾಡಿ. ನಾನು ಅದನ್ನು ಇಂಗ್ಲಿಷ್ ಗೆ ಅನುವಾದ ಮಾಡಿಸಿ ಕೊಳ್ತಿನಿ.

ಪ್ರಶ್ನೆ: ಎಲ್ಲಾ ವಿದ್ಯಾರ್ಥಿಗಳನ್ನು ಯಾಕೆ ನಿಮ್ಮ ಸರ್ಕಾರ ಸಮಾನವಾಗಿ ಕಾಣುವುದಿಲ್ಲ. ಉದಾಹರಣೆಗೆ ಲ್ಯಾಪ್ ಟ್ಯಾಪ್ ನೀಡುವ ವಿಚಾರ. ರಾಹುಲ್ ಗಾಂಧಿ: ನಿಮ್ಮ ಪ್ರಶ್ನೆ ಕರ್ನಾಟಕ ರಾಜ್ಯ ಸರ್ಕಾರಕ್ಕಾ..? ಹಾಗಾದರೆ ಸಿಎಂ ಉತ್ತರ ಕೊಡುತ್ತಾರೆ. ಸಿಎಂ: ಆರ್ಥಿಕ ಅಸಮಾನತೆ ನಿವಾರಣೆ ದೃಷ್ಟಿಯಿಂದ ಹೀಗೆ ಮಾಡಬೇಕಾಗುತ್ತೆ. ಇದು ಸಾಮಾಜಿಕ ನ್ಯಾಯ ಒದಗಿಸುವ ಪರಿ. ಆದರೆ ಮುಂದಿನ ಏಪ್ರಿಲ್ ನಿಂದ ಪಿಯು ಪಾಸಾದ ಎಲ್ಲಾ ವಿದ್ಯಾರ್ಥಿ ನಿಯರಿಗೂ ಲ್ಯಾಪ್ ಟಾಪ್ ಕೊಡುತ್ತೇವೆ.

ಪ್ರಶ್ನೆ : ಸಿಂಗಾಪುರ್ ನಲ್ಲಿ ಒಂದು ಬಗೆಯ ಟ್ಯಾಕ್ಸ್ ಕಟ್ಟಿಕೊಂಡು ದೇಶದ ಎಲ್ಲಾ ಜನರಿಗೂ ಆರೋಗ್ಯ ವಿಮೆ ನೀಡಲಾಗುತ್ತೆ. ನಮ್ಮಲ್ಲಿ ಇಷ್ಟು ಬಗೆಯ ಟ್ಯಾಕ್ಸ್ ಕಟ್ಟಿಕೊಂಡು ಯಾಕೆ ಸೌಲಭ್ಯ ಕೊಡಲು ಆಗುತ್ತಿಲ್ಲ. ಜಿಎಸ್ ಟಿ ಬಗ್ಗೆ ನಿಮ್ಮ ನಿಲುವೇನು? ರಾಹುಲ್ ಗಾಂಧಿ: ನೀವು ತಪ್ಪು ವ್ಯಕ್ತಿಯ ಬಳಿ ಪ್ರಶ್ನೆ ಕೇಳುತ್ತಿದ್ದೀರಿ. ಈ ಪ್ರಶ್ನೆಯನ್ನ ಮೋದಿಜಿ ಬಳಿ ಕೇಳಿ ಎಂದ ರಾಗಾ, ತಕ್ಷಣ ನೀವು ಪ್ರಧಾನಿಯಾದರೇ ಜಿಎಸ್‍ಟಿ ಹೇಗಿರುತ್ತೆ ಎಂದ ವಿದ್ಯಾರ್ಥಿನಿ.? ಕಾಂಗ್ರೆಸ್ 2019ರಲ್ಲಿ ಅಧಿಕಾರಕ್ಕೆ ಬಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಇರೋದಿಲ್ಲ. ಈಗ ಜಿಎಸ್‍ಟಿಯಲ್ಲಿರುವ 5 ವಿಭಾಗಗಳು ಇರೋಲ್ಲ. ಕಾಂಗ್ರೆಸ್ ನಿಲುವು ಒಂದೆ ಅದು ‘ಒಂದೇ ದೇಶ, ಒಂದೇ ತೆರಿಗೆ.’ ಅದು ಸಹ 28% ಇರೋದಿಲ್ಲ.

ಪ್ರಶ್ನೆ : ಓದು ಮುಗಿದ ಮೇಲೆ ಸ್ವಂತ ಉದ್ಯೋಗ ಮಾಡಲು ಬ್ಯಾಂಕ್ ಗಳಲ್ಲಿ ಸುಲಭವಾಗಿ ಲೋನ್ ಸಿಗುವಂತೆ ಮಾಡಿ. ರಾಹುಲ್ ಗಾಂಧಿ: ನೀರವ್ ಮೋದಿ ತರಹದ ವ್ಯಕ್ತಿಗಳಿಗೆ ಈ ದೇಶದ ಬ್ಯಾಂಕ್ ಗಳಲ್ಲಿ ಸುಲಭವಾಗಿ ಲೋನ್ ಸಿಗುತ್ತೆ. ಸಣ್ಣ, ಮಧ್ಯಮ ವರ್ಗದ ಉದ್ಯಮಿಗಳಿಗೆ ಬ್ಯಾಂಕ್ ಗಳಲ್ಲಿ ಸುಲಭವಾಗಿ ಲೋನ್ ಸಿಗಲ್ಲ. ಇದು ದುರಂತ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದನ್ನು ತಪ್ಪಿಸಲಿದೆ.

ಪ್ರಶ್ನೆ : ನೀವ್ ಯಾಕೆ ರಾಜಕೀಯಕ್ಕೆ ಬಂದ್ರೀ…? ಇದನ್ನು ಬಿಟ್ಟು ಬೇರೆ ವೃತ್ತಿ ಮಾಡಬೇಕು ಅಂತಾ ಯಾವತ್ತಾದರೂ ಅನ್ನಿಸಿದೆಯಾ? ರಾಹುಲ್ ಗಾಂಧಿ: ನಮ್ಮದು ರಾಜಕೀಯದ ಕುಟುಂಬ. ನನ್ನ ತಂದೆ ಕೊಲೆಯಾದ ಮೇಲೆ ನನಗೆ ರಾಜಕೀಯಕ್ಕೆ ಬರಬೇಕಾಯಿತು. ಇದು ನನಗೆ ವೃತ್ತಿಯಲ್ಲ. ನನ್ನ ಜೀವನ. ನಾನು ಇಲ್ಲಿ ಸಂತೋಷವಾಗಿದ್ದೀನಿ. ಬೇರೆ ಪರ್ಯಾಯ ವೃತ್ತಿ ಬಗ್ಗೆ ಚಿಂತಿಸಿಲ್ಲ.

ಪ್ರಶ್ನೆ: ಯುವ ಜನರು ರಾಜಕೀಯಕ್ಕೆ ಬರಬಹುದಾ..? ರಾಹುಲ್‍ಗಾಂಧಿ: ನೀವೆಲ್ಲಾ ಖಂಡಿತಾ ರಾಜಕೀಯಕ್ಕೆ ಬನ್ನಿ. ದೇಶ ಕಟ್ಟಲು ಯುವ ಪೀಳಿಗೆಯ ಚಿಂತನೆಗಳು ರಾಜಕೀಯಕ್ಕೆ ಅವಶ್ಯಕತೆ ಇದೆ.

ಇದರಿಂದ ಅರ್ಥವಾಗುತ್ತೆ ರಾಹುಲ್ ಜಿ ನಮ್ಮ ದೇಶದ ಬಗ್ಗೆ ಎಷ್ಟು ಅರಿತಿದ್ದಾರೆಂದು , ಒಬ್ಬ ನಾಯಕನಿಗೆ ದೇಶದ ಅಭಿವೃದ್ಧಿ ಮಾಡುಲು ತಮ್ಮದೇ ಆದ ಗುರಿ ಹೊಂದಬೇಕು ಆದರೆ ರಾಹುಲ್ ಜಿ ಯಾವ ವಿಧದಲ್ಲೂ ಹಾಗೆ ಅನಿಸುವುದಿಲ್ಲ,ರಾಹುಲ್ ಜಿ ಸದ್ಯದ ಮಟ್ಟಿಗೆ ಪ್ರಧಾನಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿಯಾ? ಅಥವಾ ಇಲ್ಲ ಎಂಬುವುವ ನಿರ್ಧಾರ ನಿಮಗೆ ಬಿಟ್ಟಿದ್ದು‌‌.!

-ಅನುರಾಧಾ, ಮೈಸೂರು

Post Author: Ravi Yadav