ವಿದೇಶದಲ್ಲೂ ‘ಟಗರು’ ಹವಾ..!! ಶಿವಣ್ಣ ಸ್ಟೆಪ್ ಗೆ ಎಲ್ಲರೂ ಫಿದಾ..!!

ಯಾವುದೇ ಸ್ಟಾರ್ ಸಿನಿಮಾ ತೆರೆಕಾಣುವಾಗ ಗಾಂಧಿನಗರದ ಮುಖ್ಯ ಚಿತ್ರಮಂದಿರ ಸೇರಿ ಕರ್ನಾಟಕದ ಹಲವು ಥಿಯೇಟರ್ ಎದುರು ಅಭಿಮಾನಿಗಳು ಹಬ್ಬದ ವಾತಾವರಣ ನಿರ್ವಿುಸುತ್ತಾರೆ. ಇಂಥದ್ದೇ ಸಂಭ್ರಮ ವಿದೇಶದಲ್ಲೂ ಮನೆ ಮಾಡಿದರೆ? ‘ಟಗರು’ ವಿಚಾರದಲ್ಲಿ ಇದು ಸಾಧ್ಯವಾಗಿದೆ.

ಕರ್ನಾಟಕದ ಜತೆಗೆ ದೇಶದ ಮುಖ್ಯ ನಗರಗಳಲ್ಲಿ ಧೂಳೆಬ್ಬಿಸಿದ ಬಳಿಕ ವಿದೇಶದಲ್ಲೂ ‘ಟಗರು’ ರಿಲೀಸ್ ಆಗಿತ್ತು. ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ಪ್ರೇಕ್ಷಕರಿಂದ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ಪ್ರದರ್ಶನಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಅಮೆರಿಕದಲ್ಲಿನ ಶಿವರಾಜ್ಕುಮಾರ್ ಅಭಿಮಾನಿಗಳು ಥಿಯೇಟರ್ ಎದುರು ಕೇಕ್ ಕತ್ತರಿಸಿ, ‘ಟಗರು’ ಶೀರ್ಷಿಕೆ ಇರುವ ಟೀಶರ್ಟ್ ಧರಿಸಿ, ಚಿತ್ರದ ಹಾಡುಗಳಿಗೆ ಸ್ಟೆಪ್ ಹಾಕುತ್ತ ಸಂಭ್ರಮಿಸಿದ್ದಾರೆ.

ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿತ್ರತಂಡದ ಖುಷಿ ಹೆಚ್ಚಿಸಿದೆ. ಹೆಚ್ಚಿದ ಕ್ರೇಜ್ನಿಂದಾಗಿ ಅಮೆರಿಕದ ಚಿತ್ರಮಂದಿರಗಳಲ್ಲಿ 2ನೇ ವಾರವೂ ‘ಟಗರು’ ಪ್ರದರ್ಶನ ಮುಂದುವರಿದಿದೆ. ಶಿವರಾಜ್ಕುಮಾರ್, ಮಾನ್ವಿತಾ ಹರೀಶ್, ಭಾವನಾ ಮೆನನ್, ಧನಂಜಯ, ವಸಿಷ್ಠ ಸಿಂಹ ಮುಂತಾದ ಕಲಾವಿದರ ನಟನೆಯ ಜತೆಗೆ ಚಿತ್ರದ ಸಂಗೀತಕ್ಕೆ ಪ್ರೇಕ್ಷಕರು ಮರುಳಾಗಿದ್ದು ಗೊತ್ತೇ ಇದೆ. ಶೀರ್ಷಿಕೆ ಗೀತೆಯಂತೂ ದೊಡ್ಡಮಟ್ಟದಲ್ಲಿ ಹವಾ ಮಾಡಿದೆ.

ಯುಟ್ಯೂಬ್ನಲ್ಲಿ ಬಿಡುಗಡೆಯಾದ ಲಿರಿಕಲ್ ಗೀತೆ ಈವರೆಗೂ ಬರೋಬ್ಬರಿ ಒಂದು ಕೋಟಿ ಬಾರಿ ವೀಕ್ಷಣೆಯಾಗಿದೆ. ಚರಣ್ರಾಜ್ ಸಂಗೀತ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿರುವ ಈ ಹಾಡು ಆಂಟೋನಿ ದಾಸನ್ ಕಂಠದಲ್ಲಿ ಮೂಡಿಬಂದಿದೆ. ಅದೇ ರೀತಿ ‘ಮೆಂಟಲ್ ಹೋ ಜಾವ’, ‘ಬಲ್ಮಾ ಬಲ್ಮಾ..’, ‘ಹೋಲ್ಡ್ ಆನ್ ಹೋಲ್ಡ್ ಆನ್..’ ಹಾಡುಗಳು ಕೂಡ ಜನಮೆಚ್ಚುಗೆ ಗಳಿಸಿವೆ.

Post Author: Ravi Yadav