ಮೊದಲು ಶಿಸ್ತಿನ ಸಿಪಾಯಿಯಾಗಿ ಸೈನ್ಯದಲ್ಲಿ ಕೆಲಸ ಮಾಡಿ, ಆಮೇಲೆ ನಿಮಗೆ ಸರ್ಕಾರಿ ಕೆಲಸ ಕೊಡುತ್ತೆವೆ!! ಮೋದಿ ಸರ್ಕಾರದಿಂದ ಮತ್ತೊಂದು ಐತಿಹಾಸಿಕ ನಿರ್ಧಾರ..!!

ಮೊದಲು ಶಿಸ್ತಿನ ಸಿಪಾಯಿಯಾಗಿ ಸೈನ್ಯದಲ್ಲಿ ಕೆಲಸ ಮಾಡಿ, ಆಮೇಲೆ ನಿಮಗೆ ಸರ್ಕಾರಿ ಕೆಲಸ ಕೊಡುತ್ತೆವೆ!! ಮೋದಿ ಸರ್ಕಾರದಿಂದ ಮತ್ತೊಂದು ಐತಿಹಾಸಿಕ ನಿರ್ಧಾರ..!!

0

ಹೌದು!! ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ ಅವರು ಮತ್ತೊಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ.

ಸಾಮಾನ್ಯವಾಗಿ ನಿವು ಯಾವುದೇ ಸರ್ಕಾರಿ ಕಚೇರಿಗೆ ಹೋಗಿ ಅಲ್ಲಿರುವ ನೌಕರರು ಹೆಚ್ಚಾಗಿ ಶಿಸ್ತಿನಿಂದ ವರ್ತಿಸುವುದಿಲ್ಲ , ಈ ಸಮಸ್ಯೆ ಎಲ್ಲಾ ಸರ್ಕಾರಿ ಕಚೇರಿಗಳಿ ನಾವು ಕಾಣಬಹುದು.

ಇದನ್ನ ಕೊನೆಗೊಳಿಸಲು ಮೋದಿ ಸರ್ಕಾರ ಹೊಸ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಅದೇನೆಂದರೆ ನಾವು ಸರ್ಕಾರಿ ಕೆಲಸ ಪಡೆಯಬೇಕೆಂದರೆ, ಮೊದಲು 5 ವರ್ಷ ಶಿಸ್ತಿನ ಸಿಪಾಯಿಯಾಗಿ ಸೈನ್ಯದ ಕೆಲಸ ಮಾಡಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ.

ರಾಜ್ಯ ಅಥವಾ ಕೇಂದ್ರ ಸರಕಾರಿ ಉದ್ಯೋಗ ಪಡೆಯಲು ಕನಿಷ್ಠ ಐದು ವರ್ಷಗಳ ಕಡ್ಡಾಯವಾಗಿ ಸೇನಾ ಸೇವೆಯನ್ನು ಮಾಡಬೇಕೆಂದು ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಈ ಕುರಿತು ಪ್ರಸ್ತಾವನೆಯನ್ನು ಸಿದ್ಧಗೊಳಿಸಬೇಕು ಎಂದು ಶಿಫಾರಸಿನಲ್ಲಿ ಹೇಳಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನೇರವಾಗಿ ದೇಶದ ಪ್ರಧಾನ ಮಂತ್ರಿಗಳಿಗೆ ಈ ಪ್ರಸ್ತಾವನೆಯನ್ನು ಸಲ್ಲಿಸಲಿದೆ.

5 ವರ್ಷದ ಮಿಲಿಟರಿ ತರಬೇತಿಯನ್ನು ಕಡ್ಡಾಯಗೊಳಿಸಿದರೆ ರಕ್ಷಣಾ ಪಡೆಗಳು ಎದುರಿಸುತ್ತಿರುವ ಸಿಬ್ಬಂದಿಗಳ ಕೊರತೆಯೂ ನಿವಾರಣೆಯಾಗಲಿದೆ ಎಂದು ಸಂಸದೀಯ ಸಮಿತಿ ಅಭಿಪ್ರಾಯಪಟ್ಟಿದೆ.

ಭಾರತೀಯ ಸೇನೆ 7000 ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದೆ ಎಂಬ ವರದಿ ಕೆಲವು ದಿನಗಳ ಹಿಂದೆ ಬಂದಿತ್ತು. ಈ ವರದಿ ಬಂದ ಕೆಲವೇ ದಿನಗಳಲ್ಲಿ ಸಂಸದೀಯ ಸಮಿತಿ 5 ವರ್ಷಗಳ ಮಿಲಿಟರಿ ತರಬೇತಿಯನ್ನು ಕಡ್ಡಾಯಗೊಳಿಸಬೇಕು ಎಂದು ಶಿಫಾರಸು ಮಾಡಿದೆ.

ವಾಯುಪಡೆ 150 ಸಿಬ್ಬಂದಿ, 15 ಸಾವಿರ ಪುರುಷ ಸಿಬ್ಬಂದಿ. ನೌಕಾಪಡೆ ಸಹ 15 ಸಾವಿರ ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ವರದಿ ಹೇಳಿದೆ. ತರಬೇತಿ ಕಡ್ಡಾಯಗೊಳಿಸಿದರೆ ಸಿಬ್ಬಂದಿಗಳ ಕೊರತೆ ನಿವಾರಣೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ರಕ್ಷಣಾ ಇಲಾಖೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಜೊತೆ ಮಾತುಕತೆ ನಡೆಸಿ ಈ ಶಿಫಾರಸು ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಸದೀಯ ಸಮಿತಿ ಅಭಿಪ್ರಾಯಪಟ್ಟಿದೆ.