ಬಿಜೆಪಿ ಚಾಣಕ್ಯನ ಈ ಮೂರು ಸೂತ್ರಗಳಿಂದ ಇದುವರೆಗೂ ಬಿಜೆಪಿ 21 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ..!! ಆ 3 ಸೂತ್ರಗಳು ಯಾವ್ಯಾವು ಗೊತ್ತಾ..??

ಬಿಜೆಪಿ ಚಾಣಕ್ಯನ ಈ ಮೂರು ಸೂತ್ರಗಳಿಂದ ಇದುವರೆಗೂ ಬಿಜೆಪಿ 21 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ..!! ಆ 3 ಸೂತ್ರಗಳು ಯಾವ್ಯಾವು ಗೊತ್ತಾ..??

0

ಹೌದು!! ಬಿಜೆಪಿ ಚಾಣಕ್ಯ ಅಮಿತ್ ಷಾ ಅವರ 3 ಸೂತ್ರಗಳು 2014ರ ನಂತರ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿ ಇದೀಗ 21 ರಾಜ್ಯಗಳಲ್ಲಿ ಸ್ವತಂತ್ರವಾಗಿ ಅಥವಾ ಮಿತ್ರಕೂಟದೊಂದಿಗೆ ಮೈತ್ರಿ ಸರ್ಕಾರದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಸಹಾಯವಾಯಿತು

ಅಷ್ಟಕು ಈ ಮೂರು ಸೂತ್ರ ಯಾವು..!!

1.ಪ್ರಚಾರ ಕಾರ್ಯ(ಕ್ಯಾಂಪೇನ್)

2.ಕಾರ್ಯಕರ್ತರು(ಕೇಡರ್)

3.ಮೋದಿ

ಈ ಮೂರು ಸೂತ್ರಗಳನ್ನು ಆಧಾರವಾಗಿ ಇಟ್ಟುಕೊಂಡು ಅಲ್ಲಿನ ಸ್ಥಳೀಯ ಅವಶ್ಯಕತೆಗೆ ಅದನ್ನು ಜಾರಿ ಮಾಡುವಲ್ಲಿಯೇ ಎಲ್ಲ ಗೆಲುವು ಅಡಗಿದೆ.

ಮೂರೇ ಅಂಶಗಳನ್ನು ಅಮಿತ್ ಷಾ ಸಾಮಾನ್ಯವಾಗಿರಿಸಿದ್ದಾರೆ. ಮೇಲ್ನೋಟಕ್ಕೆ ಅಸಾಧ್ಯ ಎನ್ನುವಂತಾದರೂ ಇವು ಚುನಾವಣಾ ಚಾಣಕ್ಯ ಅಮಿತ್ ಷಾ ಗೆಲುವಿನ ಗುಟ್ಟು ಎಂಬುದನ್ನು ಅಮಿತ್ ಷಾ ತಂಡದ ಸದಸ್ಯರು ತಿಳಿಸುತ್ತಾರೆ.

* ಚುನಾವಣೆಯಲ್ಲಿ ಪ್ರಚಾರ ಕಾರ್ಯ ಬಹುಮುಖ್ಯ. ಪ್ರಚಾರಕ್ಕೆ ಯಾವ ವಿಚಾರ ತೆಗೆದುಕೊಳ್ಳಬೇಕು, ಯಾವ ಸಮಯದಲ್ಲಿ ವಿಚಾರ ಹರಿಬಿಡಬೇಕು, ಯಾರ ಮೂಲಕ ಹೇಳಿಸಬೇಕು, ಯಾವ ನಾಯಕರಿಗೆ ಒತ್ತು ನೀಡಬೇಕು ಎಂಬುದನ್ನು ಅಮಿತ್ ಷಾ ತಂಡ ವಸ್ತುನಿಷ್ಠವಾಗಿ ಅಧ್ಯಯನ ನಡೆಸಿ ನಿರ್ಧರಿಸುತ್ತದೆ.

* ಕಾರ್ಯಕರ್ತರನ್ನು ಬಳಸಿಕೊಂಡು ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸುವ ಕಾರ್ಯಕ್ಕೆ ನೇರವಾಗಿ ಅಮಿತ್ ಷಾ ಇಳಿಯುತ್ತಾರೆ. ಮತದಾರರ ಪಟ್ಟಿಯ ಪ್ರತಿ ಪುಟಕ್ಕೂ ಒಬ್ಬ ಪ್ರಮುಖರನ್ನು ನೇಮಿಸಲಾಗುತ್ತದೆ. ಆ ಪುಟದ ಮೇಲಷ್ಟೇ ಆ ಕಾರ್ಯಕರ್ತ ಗಮನ ಕೇಂದ್ರೀಕರಿಸುವ ಕಾರಣ ಹೆಚ್ಚಿನ ಮತ ಪಡೆಯಲು ಅನುಕೂಲವಾಗುತ್ತದೆ. ಮೇಲ್ನೋಟಕ್ಕೆ ಅತ್ಯಂತ ಸುಲಭ ಹಾಗೂ ಯಾವ ಪಕ್ಷವಾದರೂ ಮಾಡಬಹುದಾದ ಸೂತ್ರ ಇದು. ಆದರೆ ಬೃಹತ್ ಸಂಖ್ಯೆಯಲ್ಲಿ ಸ್ವಯಂಪ್ರೇರಿತ ಕಾರ್ಯಕರ್ತರ ತಂಡ ಹೊಂದಿರುವ ಬಿಜೆಪಿಗಷ್ಟೇ ಈ ತಂತ್ರ ಸಾಧ್ಯವಾಗುತ್ತಿದೆ.

* ಮೂರನೆಯದಾಗಿ ಎಲ್ಲ ರಾಜ್ಯಗಳ ಚುನಾವಣೆಯಲ್ಲೂ ಪ್ರಧಾನಿ ನರೇಂದ್ರ ಮೊದಿಯವರ ವರ್ಚಸ್ಸನ್ನು ಸ್ಥಳೀಯ ಅವಶ್ಯಕತೆಗೆ ಹಾಗೂ ಸ್ವೀಕಾರಾರ್ಹತೆಗೆ ತಕ್ಕಂತೆ ರ್ಯಾಲಿಗಳಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.