ಡಾ.ಪ್ರಭಾಕರ ಭಟ್ರ ಶ್ರೀರಾಮ ವಿದ್ಯಾಸಂಸ್ಥೆಯ ಆ ಹುಡುಗಿ ಮನೆಗೆ ಬಂದ ಅತಿಥಿಗಳಿಗೆ ಸಿಕ್ಕಾಪಟ್ಟೆ ಬೈದದ್ದು ಯಾಕೆ???

ಡಾ.ಪ್ರಭಾಕರ ಭಟ್ರ ಶ್ರೀರಾಮ ವಿದ್ಯಾಸಂಸ್ಥೆಯ ಆ ಹುಡುಗಿ ಮನೆಗೆ ಬಂದ ಅತಿಥಿಗಳಿಗೆ ಸಿಕ್ಕಾಪಟ್ಟೆ ಬೈದದ್ದು ಯಾಕೆ???

0

ಹೌದು ಸ್ನೇಹಿತರೇ ಅವಳು 4ನೇ ತರಗತಿಯ ಸಣ್ಣ ಹುಡುಗಿ. ಮನೆಗೆ ಬಂದ ಅತಿಥಿಗಳಿಗೆ ಸಿಕ್ಕಾಪಟ್ಟೆ ಬೈದಿದ್ದಾಳೆ. ಮನೆಗೆ ಬಂದ ಅತಿಥಿಗಳಿಗೆ ಬಯ್ಯೊದ??? ಇದನ್ನೇನಾ?ಕಲಿಸಿಕೊಡೋದು ಶ್ರೀರಾಮ ದಲ್ಲಿ ಅನಿಸಬಹುದು ನಿಮಿಗೆ ಅಲ್ವಾ???

ಹಾಗಾದ್ರೆ ಆಕೆ ನಿಜವಾಗ್ಲೂ ಬೈದದ್ದು ಯಾಕೆ ಇರಬಹುದು… ಅಥಿತಿದೆವೋಭವ, ಅತಿಥಿಗಳನ್ನು ಉಪಚರಿಸುವುದು ಹಿಂದೂ ಸಂಸ್ಕೃತಿ, ಅಂತದ್ರಲ್ಲಿ ಅವ್ರಿಗೆ ಬಯ್ಯೊದ ಸರಿಯಾ? ಮಹಾ ಪಾಪ..ಯಾವ್ದು ಸರಿ ಯಾವ್ದು ತಪ್ಪು ನೀವೇ ತೀರ್ಮಾನಿಸಿ..??

ಅದು ಬೆಳಗ್ಗೆ ಗಂಟೆ 10ರ ಸಮಯ… ಪ್ರಾಥಮಿಕ ಶಾಲೆಯ ಸರಸ್ವತಿ ವಂದನೆಯ ಸಮಯ… ಸುಮಾರು 1000ಸಾವಿರ ಮಕ್ಕಳು ಒಟ್ಟಿಗೆ ಸಣ್ಣ ಧ್ವನಿಯಲ್ಲಿ ನೆಲದಮೇಲೆ ಕುಳಿತು ಕೈ ಮುಗಿದು ತಾಯಿ ಸರಸ್ವತಿಯನ್ನು ವಂದಿಸುವ ಸಮಯ…..!

ಎಂದಿನಂತೆ ಸರಸ್ವತಿ ವಂದನೆ ಮುಗಿದ ನಂತರ ಮುಖ್ಯ ಗುರುಗಳು ಸೂಚನೆಗಳಿದ್ದರೆ ಮಕ್ಕಳಿಗೆ ಹೇಳುವ ಸಮಯ..

ರವಿರಾಜ್ ಶ್ರೀಮಾನ್ ಅವತ್ತು ಸೂಚನೆಯೊಂದನ್ನು ಕೊಟ್ಟಿದ್ದಾರೆ “ನಾಳೆ ಶಾಲೆಯಲ್ಲಿ ಆಶ್ಲೇಷಪೂಜೆ ಇದೆ.. ಎಲ್ಲರೂ ಸ್ವಚ್ಛವಾಗಿ ಶುಭ್ರವಾಗಿ ಬೆಳಗ್ಗೆ ಸ್ನಾನ ಮಾಡಿ ಬರಬೇಕು ಜತೆಗೆ ಪೂಜೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಭಾಗವಹಿಸಲಿರುವ ಕಾರಣ 1 ದಿನ ಮಧು ಮಾಂಸ ಸೇವಿಸಬಾರದು” ಅಂತ ಸೂಚನೆಯೊಂದನ್ನು ನೀಡಿದ್ದಾರೆ…

ಮಮೂಲಿಯಂತೆ 4ಗಂಟೆಗೆ ಶಾಲೆ ಬಿಟ್ಟಿದೆ… ಆ ಹುಡುಗಿಯ ಮನೆ ಅಲ್ಲೇ ಮಧುಕರ ಎನ್ನುವ ಪ್ರಾರ್ಥನಾ ಹಾಲ್ ನ ಹಿಂದೆ…ಮನೆಗೆ ಹೋದ ಆಕೆ… ಮನೆಯಲ್ಲಿ ನೆಂಟರು ಬಂದಿರೋದನ್ನು ನೋಡಿದಳು… ಹತ್ತಿರದ ಸಂಭದಿಕರು ಅವ್ರು…ಚಿಕ್ಕಮ್ಮ,ಚಿಕ್ಕಪ್ಪ,ಅತ್ತೆ 3 ಜನರಿದ್ದಾರೆ…ಹುಡುಗಿಗೆ ಅವರನ್ನು ನೋಡಿ ಖುಷಿಯೊಖುಶಿ

ಮನೆಗೆ ನೆಂಟರು ಬಂದ ಕಾರಣ ಆ ಹುಡುಗಿಯ ಅಮ್ಮ ಕೋಳಿ ಪದಾರ್ಥ ಮಾಡಿದ್ದಾರೆ… ಮನೆ ಪೂರ್ತಿ ಅದರದ್ದೇ ಗರಂ ಪರಿಮಳ…!

ರಾತ್ರಿಯಾಗಿದೆ ಹುಡುಗಿಯ ಅಮ್ಮ ಎಲ್ಲರನ್ನು ಊಟಕ್ಕೆ ಕರೆದಿದ್ದಾರೆ…

ನೆಂಟರನ್ನೂ ಸೇರಿಸಿ ತಂದೆ ತಾಯಿ ಈ ಹುಡುಗಿ ಊಟಕ್ಕೆ ಬಂದಿದ್ದಾರೆ..ಟೇಬಲ್ ನ ಮೇಲೆ ಕೂತು ಊಟ ಮಾಡುವುದು ಅವ್ರ ಮನೆಯ ರೂಢಿ…

ಎಲ್ಲಾ ಬಂದ್ರು ಅಮ್ಮ ಎಲ್ಲಾರಿಗೂ ಬಡಿಸಿದ್ರು… ಆ ಸಮಯದಲ್ಲಿ ಆ ಹುಡುಗಿ ಶಾಲೆಯಲ್ಲಿ ಪೂಜೆಯ ಕಾರಣ ಮಧುಮಾಂಸ ತಿನ್ನಬಾರದು ಅಂತ ಹೇಳಿದ್ದಾರೆ ನಾನು ಕೋಳಿ ಪದಾರ್ಥ ತಿನ್ನುವುದಿಲ್ಲ ಅಂತ ಹೇಳಿದ್ದಾಳೆ…

ಬಂದ ನೆಂಟರು ತಾಯಿ ತಂದೆ ಅವಳನ್ನು ತಿನ್ನುವಂತೆ ಒತ್ತಾಯ ಮಾಡಿದ್ದಾರೆ..ನೀನು ತಿನ್ನು ಶಾಲೆಯಲ್ಲಿ ತಿಂದಿಲ್ಲ ಅಂತ ಹೇಳಿದ್ರಾಯ್ತು ಅಂತ ಅವಳ ಚಿಕ್ಕಮ್ಮ ಹೇಳಿದ್ದಾರೆ…

ಈ ಹುಡುಗಿಗೆ ಎಲ್ಲಿಲ್ಲದ ಕೋಪ…ನನ್ನನ್ನು ಸುಳ್ಳುಹೇಳಲು ಹೇಳಿಕೊಡುತ್ತಿದ್ದೀರಾ? ಮಕ್ಕಳಿಗೆ ದೊಡ್ಡವರು ಇದನ್ನೇ ಹೇಳಿಕೊಡುದಾ?? ನನ್ನ ಶಾಲೆಯಲ್ಲಿ ಮಾತಾಜಿ ಶ್ರಿಮಾನ್ ಅವ್ರು ಸತ್ಯ ಹೇಳ್ಬೇಕು ..ಸುಳ್ಳು ಯಾವ ಕಷ್ಟ ಕಾಲದಲ್ಲೂ ಹೇಳಬಾರ್ದು ಅಂತ ಹೇಳಿಕೊಟ್ಟಿದ್ದಾರೆ… ನೀವು ನೋಡಿದ್ರೆ ಸುಳ್ಳುಹೇಳ್ಬೇಕು ಅಂತ ಹೇಳ್ತಿದ್ದೀರಿ…..ನಾಚಿಕೆ ಅಗಲ್ವಾ ಅಂತ ಚಿಕ್ಕಮ್ಮನಿಗೆ ಸರಿ ಬೈದಿದ್ದಾಳೆ… ಬೈದು ಊಟ ಮಾಡದೆ ಹೊರಟು ಹೋಗಿದ್ದಾಳೆ…ಊಟ ಮಾಡುತಿದ್ದ ಎಲ್ಲರೂ ಒಂದು ಸಮಯಕ್ಕೆ ಸಣ್ಣ ಮಗುವಿನ ದೊಡ್ಡ ದೊಡ್ಡ ಮಾತಿಗೆ ಮಾತು ಬಾರದಂತೆ ಆದರು..!

ಯಾಕೆ ಮನೆಗೆ ಬಂದ ಅತಿಥಿಗಳಿಗೆ ಆ ಸಣ್ಣ ಹುಡುಗಿ ಸರಿಯಾಗಿ ಬೈದದ್ದು ಅಂತ ನಿಮಿಗೆ ಗೊತ್ತಾಯ್ತು ಅಂದುಕೊಳ್ತೇನೆ…

ಸಣ್ಣ ವಿಷಯ ಆದ್ರೆ 4ನೇ ತರಗತಿ ಹುಡುಗಿ ಕೋಳಿಯ ಆಸೆಗೆ ಬೀಳದೆ ಅತಿಥಿಗಳ ಮಾತಿಗೆ ಮರುಳಾಗದೆ ದೈರ್ಯದಿಂದ ಸತ್ಯದ ಮಾತು ಆಡಿದ.. ಹಿಂದಿರುವ ಶಿಕ್ಷಣ ಹೇಗಿರಬೇಕು ಯೋಚನೆ ಮಾಡಿ??? ಇದೆ ಅಲ್ವಾ ನಿಜವಾದ ಶಿಕ್ಷಣ? ಇದಕ್ಕಿಂತ ಮಿಗಿಲಾದ ಶಿಕ್ಷಣ ಇಲ್ಲ…ಅಲ್ವಾ? ಶ್ರೀರಾಮ ವಿದ್ಯಾಸಂಸ್ಥೆ ಯ 4ನೇ ತರಗತಿಯ ಹುಡುಗಿ ದೊಡ್ಡವರಿಗೆ ಬುದ್ದಿ ಹೇಳುವಷ್ಟು, ಸತ್ಯದ ಪಾಠ ಮಾಡುವಷ್ಟು ಬೆಳೆದು ಬಿಟ್ಟಿದ್ದಾಳೆ ನೋಡಿ…ಈಗಲೂ ಆ ವಿದ್ಯಾರ್ಥಿ ಶಾಲೆಯಲ್ಲಿದ್ದಾಳೆ!

ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ನಿಜವಾದ ಭಕ್ತರು ಅಂದ್ರೆ ಹೀಗೇನೆ….ಶ್ರೀರಾಮ ವಿದ್ಯಾಸಂಸ್ಥೆಯ ಪ್ರತಿಯೊಂದು ಮಗು ಕೂಡ ಹೀಗೇನೆ,ಶ್ರೀರಾಮ ನ ಪ್ರತಿಬಿಂಬದಂತೆ…!! ಇದೆ ಹಿಂದೂಧರ್ಮದ ಶಕ್ತಿಕೇಂದ್ರ..!

ಸತ್ಯದ ಗಾಳಿ ಓಂಕಾರ ಶಬ್ಧ ಮಾಡುತ್ತಾ ಬೀಸುವ ಕಲ್ಲಡ್ಕ ಹನುಮಾನ್ ನಗರ !!!

ಸರಿ ಅನಿಸಿದರೆ ಶೇರ್ ಮಾಡಿಬಿಡಿ.. ಧನ್ಯವಾದಗಳು..

-ಸಚಿನ್ ಜೈನ್ ಹಳೆಯೂರು.