ಧರ್ಮರಕ್ಷಣೆಗಾಗಿ ಜೀವದ ಹಂಗುತೊರೆದು ಮೊಘಲರೊಂದಿಗೆ ಹೋರಾಡಿ ಪ್ರಾಣ ಅರ್ಪಿಸಿದ ಗುರು ಗೋವಿಂದಸಿಂಹ..!!

ಧರ್ಮರಕ್ಷಣೆಗಾಗಿ ಜೀವದ ಹಂಗುತೊರೆದು ಮೊಘಲರೊಂದಿಗೆ ಹೋರಾಡಿ ಪ್ರಾಣ ಅರ್ಪಿಸಿದ ಗುರು ಗೋವಿಂದಸಿಂಹ..!!

0

ವೈದಿಕ ಕಾಲದಿಂದಲೂ ಮಹಾಭಾರತದ ಕಾಲದವರೆಗೆ ಪಂಜಾಬ ಪ್ರಾಂತ್ಯಕ್ಕೆ ಅಪೂರ್ವ ಇತಿಹಾಸವಿದೆ. ಸುಮಾರು ೪೦೦ ವರ್ಷಗಳ ವರೆಗೆ ಮೊಘಲ ಸುಲ್ತಾನರು ಪಂಜಾಬ ಪ್ರಾಂತ್ಯದ ಮೇಲೆ ಅನೇಕ ಆಕ್ರಮಣಗಳನ್ನು ಮಾಡಿ ಅದರ ಸತ್ವವನ್ನು ಹೀರಿದರು.

ಪಂಜಾಬಿನ ಉಳಿವಿಗಾಗಿ ಗುರುನಾನಕರ ದೂರದೃಷ್ಟಿಯಿಂದ ‘ಸಿಖ್’ ಸಂಪ್ರದಾಯವು ನಿರ್ಮಾಣಗೊಂಡಿತು. ಸಿಖ್ಖರ ಹತ್ತು ಗುರುಗಳು ಈ ಆಕ್ರಮಣದ ವಿರುದ್ಧ ತೀವೃವಾಗಿ ಹೋರಾಡಿದರು. ಗುರು ಗೋವಿಂದಸಿಂಗ್ ಸಿಖ್ ಸಂಪ್ರದಾಯದ ಹತ್ತನೆಯ ಹಾಗೂ ಕೊನೆಯ ಗುರುಗಳಾಗಿದ್ದರು.

* ಪೈಂದೆಖಾನನ ವಧೆ, ಆಲಮಪುರ ಆಹಾರಕ್ಕೆ ತಡೆ ಮತ್ತು ಸಿಖ್ಖರ ಪ್ರತೀಕಾರ…!!

ಔರಂಗಜೇಬನು ಗುರು ಗೋವಿಂದಸಿಂಗ್ ಆಲಮಪುರದಲ್ಲಿ ತಂಗಿದ್ದಾಗ ಅಲ್ಲಿ ಸೈನ್ಯ ಸಹಿತವಾಗಿ ಪೈಂದೆಖಾನ ಮತ್ತು ದೀನಾ ಬೇಗ ಎಂಬ ಇಬ್ಬರು ಸರದಾರರನ್ನು ಕಳುಹಿಸಿದನು. ‘ಆಲಮಪುರದಲ್ಲಿ ಯುದ್ಧ ಮಾಡುವುದು ಬೇಡ’ ಎಂಬುದು ಈ ಇಬ್ಬರ ಧೋರಣೆಯಾಗಿತ್ತು.

ಸಮಸ್ತ ಸಿಖ್ಖರು ಪೈಂದೆಖಾನನ್ನು ದಾರಿಯಲ್ಲಿ ಅಡ್ಡಗಟ್ಟಿ ಅವನೊಂದಿಗೆ ವೀರಾವೇಶದಿಂದ ಹೋರಾಡಿದರು. ಗುರು ಗೋವಿಂದಸಿಂಗ್ ಪೈಂದೆಖಾನನ ಕಿವಿಗೆ ಬಾಣಬಿಟ್ಟು ಅವನನ್ನು ವಧಿಸಿದರು. ಗಾಯಗೊಂಡ ದೀನಾ ಬೇಗನು ಅಲ್ಲಿಂದ ಓಡಿಹೋದನು.

ಕೊನೆಯ ಉಪಾಯವೆಂದು ಔರಂಗಜೇಬನು ಆಲಮಪುರಕ್ಕೆ ಜಮ್ಮುರಪುರ ಮಾರುಕಟ್ಟೆ, ಭೂತಾ ಕುಲೂ, ಕೈಂಥಲ, ಮುರೇಲ, ಚಂಬಾ, ದಡವಾಲ ಹಾಗೂ ಶ್ರೀನಗರದ ರಾಜರಿಂದ ಆಗುವ ಅನ್ನಪೂರೈಕೆಯನ್ನು ನಿಲ್ಲಿಸಲು ಪ್ರಯತ್ನಿಸಿದನು; ಆದರೆ ಸಿಖ್ಖರು ಅದನ್ನೂ ವಿರೋಧಿಸಿದರು. ಕೊನೆಗೆ ಬಸಾಲಿ ರಾಜನ ಮಧ್ಯಸ್ತಿಕೆಯಿಂದ ಈ ಶೀತಸಮರವು ಕೊನೆಗೊಂಡಿತು.


* ವಜೀರಖಾನನ ನೇತೃತ್ವದಲ್ಲಿ ಪ್ರಚಂಡ ಸೈನ್ಯದ ಆಕ್ರಮಣ, ಯುದ್ಧದಲ್ಲಿ ಅನೇಕ ಸಿಖ್ಖರ ಪ್ರಾಣಹರಣ…!!

ಸಿಖ್ಖರ ಗುರುಗಳು ಶರಣಾಗುವುದಿಲ್ಲ ಎಂಬುದು ಔರಂಗಜೇಬನ ಗಮನಕ್ಕೆ ಬಂದನಂತರ ಅವನು ಆನಂದಪುರಕ್ಕೆ ವಜೀರಖಾನನ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ಕಳುಹಿಸಿದನು. ಅದನ್ನು ಎದುರಿಸುವಾಗ ಅನೇಕ ಸಿಖ್ಖರು ಪ್ರಾಣ ಕಳೆದುಕೊಂಡರು, ಸಿಖ್ಖರೂ ಅನೇಕ ಮೊಘಲರ ಸೈನಿಕರನ್ನು ಧರೆಗೆ ಉರುಳಿಸಿದರು. ಆದರೂ ಮೊಘಲರ ಸಾಮರ್ಥ್ಯವು ಹೆಚ್ಚು ಇರುವುದರಿಂದ ಸಿಖ್ಖರು ಹಿಂದೆ ಸರಿಯಬೇಕಾಯಿತು.


* ಗುರು ಗೋವಿಂದಸಿಂಗ್ ಹಾಗೂ ಅವರ ಪರಿವಾರದವರ ಉಪವಾಸ, ವಜೀರಖಾನನಿಂದ ಎಲ್ಲರಿಗೂ ಅಭಯ, ಹಾಗೂ ಗೋವಿಂದಸಿಂಗ್ ಮೊಘಲರ ಕಣ್ಣು ತಪ್ಪಿಸುವುದು..!!

ಆನಂದಪುರಕ್ಕೆ ಬಿಗಿಯಾದ ಕಾವಲಿನಲ್ಲಿ ಮುತ್ತಿಗೆ ಹಾಕಿರುವುದರಿಂದ ಕೆಲವೇ ದಿನಗಳಲ್ಲಿ ಅಲ್ಲಿನ ಧಾನ್ಯವು ಮುಗಿಯುತ್ತ ಬಂದಿತು. ಉಪವಾಸದಿಂದ ಒಳ್ಳೆಯ ಕುದುರೆಗಳು ಮತ್ತು ’ಪ್ರಾಸಾದಿ’ ಎಂಬ ಪ್ರಖ್ಯಾತ ಆನೆಯು ಮೃತ ಪಟ್ಟಿತು. ಗುರು ಗೋವಿಂದಸಿಂಗ್ ಹಾಗೂ ಅವರ ಪರಿವಾರದವರಿಗೆ ಉಪವಾಸವನ್ನು ಸಹಿಸಬೇಕಾಯಿತು;

ಆದರೆ ಅವರಲ್ಲಿ ಆನಂದಪುರವನ್ನು ಬಿಟ್ಟು ಹೊರಹೋಗುವ ಸಿದ್ಧತೆಯಿರಲಿಲ್ಲ. ಕೊನೆಗೆ ವಜೀರಖಾನನು ಔರಂಗಜೇಬನ ಹೇಳಿಕೆಯಂತೆ ಆನಂದಪುರದಲ್ಲಿನ ಎಲ್ಲರಿಗೂ ಅಭಯ ನೀಡಿದನು. ಆದರೆ ಮೊಘಲರು ಸುಳ್ಳು ವಚನವನ್ನು ಕೊಡುತ್ತಾರೆ ಎಂಬುದು ಗುರು ಗೋವಿಂದಸಿಂಗ್.ಗೆ ತಿಳಿದಿದ್ದರಿಂದ, ಕೊನೆಗೆ 6-12-1905 ರಂದು ರಾತ್ರಿ ಅವರು ತಮ್ಮ ಪರಿವಾರಸಹಿತ ಮೊಘಲರ ಕಣ್ಣು ತಪ್ಪಿಸಿ ಹೊರಟುಹೋದರು. ಹೋಗುವ ಮೊದಲು ಅವರಿಗೆ ಎಷ್ಟು ಸಾಧ್ಯವಾಗುವುದೋ ಅಷ್ಟು ನಷ್ಟಗೊಳಿಸಿ ಹೋದರು.

4. ಮೊಘಲರ ಮುತ್ತಿಗೆ, ನಿಶಸ್ತ್ರರಾದ ಗುರು ಗೋವಿಂದಸಿಂಗ್, ಅವರ ಇಬ್ಬರು ಪುತ್ರರು ವೀರಗತಿ ಹೊಂದುವುದು…!!

ಮೊಘಲರ ಸೈನ್ಯವು ಅವರನ್ನು ಬೆನ್ನಟ್ಟಿತು, ’ಶಿರಸಾ’ ನದಿಯ ತೀರದಲ್ಲಿ ಮೊದಲ ಕಾಳಗವಾಯಿತು. ಈ ಕಾಳಗದಲ್ಲಿ ಪ್ರಖ್ಯಾತ ಸೇನಾಪತಿ ಭಾಯಿ ಉದಯಸಿಂಗ್.ರು ಮರಣಹೊಂದಿದರು. ಗುರು ಗೋವಿಂದಸಿಂಹರು ಶಿರಸಾ ನದಿಯನ್ನು ದಾಟಿ ಛಾಮಖೌರನ್ನು ತಲುಪಿ ತಮ್ಮ ಪರಿವಾರದೊಂದಿಗೆ ಅಲ್ಲಿನ ಕೋಟೆಯಲ್ಲಿ ಆಶ್ರಯ ಪಡೆದರು. ಮೊಘಲರ ಸೈನ್ಯವು ಬೆನ್ನಟ್ಟಿ ಬಂದು ಆ ಕೋಟೆಯನ್ನೂ ಮುತ್ತಿಗೆ ಹಾಕಿತು. ಪರಿಸ್ಥಿತಿಯು ಬಹಳ ಗಂಭೀರವಾಗಿತ್ತು, ಗುರು ಗೋವಿಂದಸಿಂಗ್ ಹಾಗೂ ಅವರ ಪರಿವಾರದವರು ನಿಶಸ್ತ್ರರಾಗಿದ್ದರು,

ಹಾಗೆಯೇ ಅವರ ಬಳಿ ಬಹಳ ಕಡಿಮೆ ಧಾನ್ಯ ಉಳಿದಿತ್ತು. ಮುತ್ತಿಗೆಯನ್ನು ಒಡೆಯುವ ಪ್ರಯತ್ನದಲ್ಲಿ ಅವರ ಹಿರಿಯ ಪುತ್ರರಾದ ಅಜೀತಸಿಂಗ್ ಮತ್ತು ಝುಜರಸಿಂಗ್ ವೀರಮರಣವನ್ನಪ್ಪಿದರು. ಗುರು ಗೋವಿಂದಸಿಂಗ್ ತಮ್ಮ ಮೂರು ವಿಶ್ವಾಸಿ ಸಿಖ್ಖರಾದ ಭಾಯಿ ದಯಾಸಿಂಗ್, ಧರಮಸಿಂಗ್ ಹಾಗೂ ಮಾನಸಿಂಗ್.ರೊಂದಿಗೆ ಅಲ್ಲಿಂದ ಹೊರಟುಹೋದರು. ಕೊನೆಯಲ್ಲಿ ಈ ಮೂವರು ಸಿಖ್ಖರು ಹಾಗೂ ಗುರು ಗೋವಿಂದಸಿಂಗ್ ಪರಸ್ಪರ ಅಗಲಿದರು ಇದರಿಂದ ಗುರು ಗೋವಿಂದಸಿಂಗ್ ಒಬ್ಬಂಟಿಯಾದರು. ಅವರ ಬಳಿ ಸೈನ್ಯ, ಅಂಗರಕ್ಷಕರು, ಸಂಪತ್ತು, ಮಿತ್ರರು ಏನೂ ಇರಲಿಲ್ಲ;

ಅದರೂ ಅವರು ತಮ್ಮ ಸ್ವಾಭಿಮಾನವನ್ನು ಬಿಡಲಿಲ್ಲ. ’ಮಚ್ಛೀವಾರಾ’ ಅರಣ್ಯದಲ್ಲಿ ಅವರಿಗೆ ಬಹಳ ಕಷ್ಟಗಳನ್ನು ಸಹಿಸಬೇಕಾಯಿತು, ಅವರ ಬಟ್ಟೆಗಳು ಹರಿದುಹೋದವು, ಕಾಲಿಗೆ ಪಾದರಕ್ಷೆಗಳು ಇರಲಿಲ್ಲ. ಅವರು ಮಲಗುವಾಗ ದಿಂಬಾಗಿ ಬಂಡೆಗಲ್ಲನ್ನು ಇಟ್ಟು ಭೂಮಿಯ ಮೇಲೆ ಮಲಗುತ್ತಿದ್ದರು.

5. ಸಿರಹಂದಿನ ನವಾಬನಿಂದ ಗುರು ಗೋವಿಂದಸಿಂಗ್.ರ ಪತ್ನಿ ಹಾಗೂ ಮಕ್ಕಳ ಧರ್ಮಾಂತರದ ಪ್ರಯತ್ನ, ಒಪ್ಪದ ಮಕ್ಕಳನ್ನು ನವಾಬನು ಗೋಡೆಗೆ ಅಪ್ಪಳಿಸಿ ಕೊಲ್ಲುವುದು..!!

ಸಿರಹಂದಿನ ನವಾಬನು ಗುರು ಗೋವಿಂದಸಿಂಗ್.ರ ಪತ್ನಿ ಗುಜರಿ ಹಾಗೂ ಇಬ್ಬರು ಕಿರಿಯ ಮಕ್ಕಳನ್ನು ಬಂಧಿಸಿ, ಮೃತ್ಯು ಅಥವಾ ಧರ್ಮಾಂತರದ ಪರ್ಯಾಯವನ್ನು ಮುಂದಿಟ್ಟನು. ಆಗ ಅವರ ಮಕ್ಕಳು ಹತ್ತು ವರ್ಷಕ್ಕಿಂತ ಚಿಕ್ಕವರಾಗಿದ್ದರು; ಅವರು ಧರ್ಮಾಂತರವನ್ನು ನಿರಾಕರಿಸಿದರು. ನವಾಬ ವಜೀರಖಾನನು ಇಬ್ಬರೂ ಮಕ್ಕಳನ್ನು ಗೋಡೆಗೆ ಅಪ್ಪಳಿಸಿ ಕೊಂದು ಹಾಕಿದನು. ಈ ನೋವಿನಿಂದ ಆ ಮಕ್ಕಳ ಅಜ್ಜಿಯು ತೀರಿಹೋದಳು.


6. ಮಕ್ಕಳ ಮೃತ್ಯುವಿನಿಂದ ದುಃಖಿತಗೊಂಡ ಮಾತೆ ಗುಜರಿಗೆ ಗುರು ಗೋವಿಂದಸಿಂಗ್ ನೀಡಿದ ತೇಜಸ್ವಿ ಉತ್ತರ..!!

ನಾಲ್ಕೂ ಮಕ್ಕಳ ಮರಣದಿಂದ ಮಾತೆ ಗುಜರಿಗೆ ಬಹಳ ದುಃಖವಾಯಿತು. ದುಃಖಿತ ಮಾತೆ ಗುಜರಿಯು ಗುರು ಗೋವಿಂದಸಿಂಗ್.ರಿಗೆ ’ನನ್ನ ಮಕ್ಕಳೆಲ್ಲಿದ್ದಾರೆ?’ ಎಂದು ಪ್ರಶ್ನಿಸಿದಳು. ಆಗ ಗುರು ಗೋವಿಂದಸಿಂಗ್ ಮುಂದೆ ಕುಳಿತ ಶಿಷ್ಯರ ಕಡೆಗೆ ಬೆರಳು ತೋರಿಸಿ ’ಇವರೆಲ್ಲರೂ ನಿನ್ನ ಮಕ್ಕಳೆ’ ಎಂಬ ತೇಜಸ್ವಿ ಉತ್ತರ ನೀಡಿದರು !

7. ಸಿರಹಂದಿನ ಮೇಲೆ ಆಕ್ರಮಣ, ಮೊಘಲರ ಸೋಲು, ವಜೀರಖಾನನ ವಧೆ..!!

12-12-1905 ರಂದು ಮೊಘಲರು ಜೋರಾವರಸಿಂಗ ಹಾಗೂ ಫತ್ತೇಹಸಿಂಗರನ್ನು ಗೋಡೆಗೆ ಅಪ್ಪಳಿಸಿ ಕೊಲ್ಲುವ ಅಘೋರಿ ಕೃತ್ಯವನ್ನು ಎಸಗಿದ್ದರು. ಅನಂತರ ಕೇವಲ ಐದು ವರ್ಷಗಳಲ್ಲಿಯೇ ಬಂದಾಸಿಂಗನು ಸಿರಹಂದಿನ ಮೇಲೆ ಆಕ್ರಮಣ ಮಾಡಿ ಮೊಘಲರನ್ನು ಸಂಪೂರ್ಣವಾಗಿ ಪರಾಭವಗೊಳಿಸಿ ವಜೀರಖಾನನನ್ನು ಕೊಂದು ಹಾಕಿದನು. ಈ ಯುದ್ಧದ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಗುರುಗೋವಿಂದಸಿಂಹರಿಗೆ ತಮ್ಮ ಸಂಪೂರ್ಣ ಪರಿವಾರದ ಆಹುತಿ ನೀಡಬೇಕಾಯಿತು..