ಕರ್ನಾಟಕದಲ್ಲಿ ವಿಜಯ ಪತಾಕೆ ಹಾರಿಸುವ ವರೆಗೂ ನಾನು ಕರ್ನಾಟಕದಲ್ಲಿ ನೆಲೆಸಿರುವೆ – ಮನೆ ಬಾಡಿಗೆ ಪಡೆದ ಅಮಿತ್ ಶಾ..!!

ಕರ್ನಾಟಕದಲ್ಲಿ ವಿಜಯ ಪತಾಕೆ ಹಾರಿಸುವ ವರೆಗೂ ನಾನು ಕರ್ನಾಟಕದಲ್ಲಿ ನೆಲೆಸಿರುವೆ – ಮನೆ ಬಾಡಿಗೆ ಪಡೆದ ಅಮಿತ್ ಶಾ..!!

0

ಈಶಾನ್ಯ ರಾಜ್ಯ ಭರ್ಜರಿ ಜಯ ಗಳಿಸಿದ ಮೇಲೆ , ಮುಂದೆ ಕರ್ನಾಟಕದಲ್ಲಿ ಕಮಲ ಅರಳಿಸಲು ಬಿಜೆಪಿ ಚಾಣಕ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಏಪ್ರಿಲ್‍ನಲ್ಲಿ ರಾಜ್ಯದಲ್ಲಿಯೇ ವಾಸ್ತವ್ಯ ನೆಲೆಸಲಿದ್ದಾರೆ. ಅದಕ್ಕಾಗಿ ಬಾಡಿಗೆ ಮನೆ ಪಡೆದಿದ್ದು ಬೆಂಗಳೂರಿನ ಅಲ್ಲಾಳಸಂದ್ರ ಮನೆಯಲ್ಲಿ ಸರ್ಪ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮನೆಯನ್ನೇ ಶಿಫ್ಟ್ ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಇದೀಗ ಜನಾರ್ದನ ರೆಡ್ಡಿ ನಿವಾಸ ಪಾರಿಜಾತದ ಪಕ್ಕದಲ್ಲೇ ಶಾ ಅವರಿಗೆ ಮತ್ತೊಂದು ಐಷಾರಾಮಿ ಮನೆ ರೆಡಿಯಾಗಿದೆ. ಫೈರ್ ಫೀಲ್ಡ್ ಲೇಔಟ್‍ನಲ್ಲಿರುವ ಮೂರು ಅಂತಸ್ತಿನ 1.5ಲಕ್ಷ ರೂಪಾಯಿಯ ಮನೆ ಬಾಡಿಗೆಗೆ ಪಡೆದಿದ್ದಾರೆ. ಈ ಮನೆ 8 ಬೆಡ್ ರೂಮ್, ಮೂರು ಬಾತ್ ರೂಮ್ ಹೊಂದಿದೆ. ಅಲ್ಲದೇ 40-50 ಜನರು ಸಭೆ ನಡೆಸಲು ಬೇಕಾದ ವಿಶಾಲವಾದ ಹಾಲ್ ಕೂಡ ಇದೆ. ಈ ಮನೆ ಗುಜರಾಜ್‍ನ ಪ್ರೀತಿ ನಲ್ಪಾಣಿ ಎಂಬವರಿಗೆ ಸೇರಿದ್ದಾಗಿದೆ.

ಕುಕ್ಕೆಯಲ್ಲಿ ಅಮಿತ್ ಷಾ ಪೂಜೆ ಸಲ್ಲಿಸಿದ ದಿನವೇ ಈ ಮನೆಯಲ್ಲೂ ಪೂಜೆ ನಡೆದಿದೆ. ಒಟ್ಟಿನಲ್ಲಿ ಸರ್ಪ ದೋಷ ಪರಿಹಾರ ಮಾಡಿಸಿಕೊಂಡ ಅಮಿತ್ ಶಾ ಅವರಿಗೆ ಈ ನಿವಾಸ ಅದೃಷ್ಟವಾಗುತ್ತಾ ಎಂಬುದನ್ನು ಕಾದುನೋಡಬೇಕು