ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡೇ ಮಾಡ್ತೀವಿ: ಮೋದಿ

0

‘ಕರ್ನಾಟಕದ ರಾಜಧಾನಿಯ ಉತ್ಸವ ಇದು. ನಿಮ್ಮ ಈ ಉತ್ಸಾಹ ಹೇಳ್ತಾ ಇದೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹೊರ ಹೋಗುವ ಕೌಂಟ್ ಡೌನ್ ಆರಂಭವಾಗಿದೆ ಅಂತಾ. ಕರ್ನಾಟಕ ವನ್ನು ಕಾಂಗ್ರೆಸ್ ಮುಕ್ತ ಮಾಡೇ ಮಾಡ್ತೀವಿ,’ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದೊಂದಿಗೆ ನಡೆಯುತ್ಯಿದ್ದೇವೆ. ಬಡವರ ಹಿಂದುಳಿದ ವರ್ಗಗಳ ಉದ್ಧಾರವೇ ನಮ್ಮ ಗುರಿ. ಜನಧನ್ ಯೋಜನೆ ಅಡಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಬ್ಯಾಂಕ್ ಖಾತೆ ಆರಂಭಿಸಿದ್ದಾರೆ.

ಉಜ್ವಲ ಯೋಜನೆ ಅಡಿಯಲ್ಲಿ ಎಂಟೂವರೆ ಲಕ್ಷ ಜನ ಮಹಿಳೆಯರು ಗ್ಯಾಸ್ ಬಳಸುತ್ತಿದ್ದಾರೆ. ಪ್ರತಿ ಮನೆಗೆ ಬೆಳಕು ನೀಡುವ ಉದ್ದೇಶದಿಂದ ಸೌಭಾಗ್ಯ ಯೋಜನೆ ಜಾರಿ ತಂದಿದ್ದೇವೆ,’ ಎಂದು ಹೇಳಿದರು.

‘ಒಂದು ದಿನ ಬೆಂಗಳೂರಿಗೆ ಕರೆಂಟ್ ಇಲ್ಲದಿದ್ದರೆ ಬದುಕಲು ಸಾದ್ಯವಿಲ್ಲ. ಆದರೆ ಏಳು ಲಕ್ಷ ಮನೆಗಳು ಕರ್ನಾಟಕದಲ್ಲಿ ಇನ್ನೂ ವಿದ್ಯುತ್ ಇಲ್ಲದೇ ಬದುಕುತ್ತಿವೆ. ಎಲ್ಲರ ಮನೆಗೂ ವಿದ್ಯುತ್ ಸಂಪರ್ಕ ನೀಡುವ ಯೋಜನೆಯನ್ನು ನಾವು ಜಾರಿಗೊಳಿಸಿದ್ದೇವೆ,,’ ಎಂದರು.

‘ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಇದು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರಿಗೆ ಸ್ವರ್ಗವಾಗಿದೆ,’ ಎಂದ ರಾಜ್ಯ ಸರಕಾರವನ್ನು ಟೀಕಿಸಿದರು.

ಮೂಲ: ಸುವರ್ಣ ನ್ಯೂಸ್