ಭಾರತದ ಆ ಸತ್ಯದ ಜಾಗದಲ್ಲಿ ತೈಲವೇ ಇಲ್ಲದೆ ಉರಿಯುವ ನಂದಾದೀಪ ಕಂಡು ರಾಜ ಅಕ್ಬರ್ ಬೆಚ್ಚಿಬಿದ್ದು ಅದನ್ನು ನಂದಿಸಲು ಪ್ರಯತ್ನಪಟ್ಟು ಸೋತಿದ್ದೇಕೆ?

ಭಾರತದ ಆ ಸತ್ಯದ ಜಾಗದಲ್ಲಿ ತೈಲವೇ ಇಲ್ಲದೆ ಉರಿಯುವ ನಂದಾದೀಪ ಕಂಡು ರಾಜ ಅಕ್ಬರ್ ಬೆಚ್ಚಿಬಿದ್ದು ಅದನ್ನು ನಂದಿಸಲು ಪ್ರಯತ್ನಪಟ್ಟು ಸೋತಿದ್ದೇಕೆ?

0

ಏನಪ್ಪ ಇದು ಇಂಧನವಿಲ್ಲದೆ ದೀಪ ಉರಿಯುದಾ? ತಮಾಷೆ ಅಂದುಕೊಂಡ್ರಾ? ನಂಬಲು ಅಸಾಧ್ಯವಾದ ಒಂದು ಸತ್ಯವನ್ನು ಸಾರುವ ದೇವಸ್ಥಾನ ಕಥೆ ಇಲ್ಲಿದೆ. ಅಕ್ಷರಶಃ ಮೈ ಜುಮ್ ಎನ್ನಿಸುವ ಒಂದು ಅವಿಸ್ಮರಣೀಯ ಆಕಲ್ಪನಿಯ ಕಾರ್ಣಿಕ ಇಲ್ಲಿದೆ!

ಅದು ಹಿಮಾಚಲ ಪ್ರದೇಶದ ಕಾಂಗ್ಡಾದಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಜ್ವಾಲಾಮುಖಿ ದೇವಸ್ಥಾನ. ಈ ಪವಿತ್ರ ದೇವಸ್ಥಾನವನ್ನು ಉತ್ಖನನ ಮಾಡಿದ ಕೀರ್ತಿ ಪಾಂಡವರಿಗೆ ಸಲ್ಲುತ್ತದೆ. ದೇವಿ ಮಂದಿರಗಳಲ್ಲಿ ಇದು ಅತೀ ಪ್ರಮುಖವಾದದು ಹಾಗೂ ಶಕ್ತಿಪೀಠದಲ್ಲಿ ಉನ್ನತವಾದದು. ವಿಶೇಷವೆಂದರೆ ಇಲ್ಲಿ ಇತರ ದೇವಾಲಯದಂತೆ ಮೂರ್ತಿಪೂಜೆ ನಡೆಯುದಿಲ್ಲ. ಬದಲಾಗಿ ಬೇರೆಬೇರೆ ಒಂಬತ್ತು ಕಡೆ ಭೂಗರ್ಭದಿಂದ ಹೊರಬರುವ ಬೆಂಕಿಯ ಜ್ವಾಲೆಯನ್ನು ಪೂಜಿಸಲಾಗುತ್ತದೆ. ಆ ಒಂಬತ್ತು ಜ್ಯೋತಿಗಳನ್ನು ಮಹಾಕಾಳಿ,ಅನ್ನಪೂರ್ಣ, ಚಂಡಿ,ಹಿಂಗಲೇಜ್, ವಿಂದ್ಯಾವಾಸಿನಿ, ಮಹಾಲಕ್ಷ್ಮಿ, ಸರಸ್ವತಿ, ಅಂಬಿಕಾ, ಅಂಜಿದೇವಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ದೇವಸ್ಥಾನದ ನಿರ್ಮಾಣ ಮಾಡಿದ್ದು ಭೂಮಿಚಂದ್ ನಂತರದಲ್ಲಿ 1835ರಲ್ಲಿ ಜೀರ್ಣೋದ್ಧಾರ ಮಾಡಿದ ಕೀರ್ತಿ ರಣಜಿತ್ ಸಿಂಗ್ ಹಾಗೂ ಸಂಸಾರ್ಚಂದ್ ಗೆ ಸಲ್ಲುತ್ತದೆ.

ಅದು ಮೊಘಲ್ ಚಕ್ರವರ್ತಿ ಅಕ್ಬರನ ಸಮಯ. ಅದೊಂದು ದಿನ ಹಿಮಾಲಯದ ನಾವ್ದಾನ್ ಗ್ರಾಮದ ಧ್ಯಾನು ಭಗತ್ ಎನ್ನುವ ದೇವಿಭಕ್ತ ಸುಮಾರು ಒಂದುಸಾವಿರ ಭಕ್ತರೊಂದಿಗೆ ಈ ಜ್ವಾಲಾಮುಖಿ ದೇವಸ್ಥಾನಕ್ಕೆ ಹೊರಟ. ಅವನನ್ನು ಅಕ್ಬರನ ಸೈನಿಕರು ದೆಹಲಿಯ ಚಾಂದಿನಿ ಚೌಕ್ ಬಳಿ ತಡೆದುನಿಲ್ಲಿಸಿದರು.

ಧ್ಯಾನ್ ಭಗತ್ನನ್ನು ಬಂಧಿಸಿ ಅಕ್ಬರನ ದರ್ಬಾರ್ ಮಹಲಿಗೆ ಕರೆದುಕೊಂಡು ಹೋಗಲಾಯಿತು. ಈ ಸಾವಿರಾರು ಜನರೊಂದಿಗೆ ಎಲ್ಲಿಗೆ ತೆರಳುತ್ತಿದ್ದೀರಿ ಎಂದು ಅಕ್ಬರ್ ಕೇಳಿದಾಗ ಜ್ವಾಲಾಮುಖಿ ಮಂದಿರಕ್ಕೆ ತೆರಳುತ್ತಿದ್ದೇವೆ ಎಂದ ಧ್ಯಾನ್.

ಅಶ್ವರ್ಯಗೊಂಡ ಅಕ್ಬರ್ ಜ್ವಾಲಾಮುಖಿ ಯಾರು? ಅಲ್ಲಿಹೋದರೇನಾಗುವುದು? ಎಂದು ಕೇಳಿದ. ಪ್ರತಿಯಾಗಿ ಧ್ಯಾನು ಜ್ವಾಲಾಮುಖಿ ನಮ್ಮ ಕುಟುಂಬವನ್ನು ರಕ್ಷಣೆ ಮಾಡಿ ಬೇಡಿದನ್ನು ಅನುಗ್ರಹಿಸುವವಳು. ಅವಳ ಚಮತ್ಕಾರ ಎಷ್ಟಿದೆ ಅಂದರೆ ಆ ಸನ್ನಿಧಿಯಲ್ಲಿ ತೈಲವಿಲ್ಲದೆ ದೀಪ ಉರಿಯುತ್ತದೆ. ನಾವು ಪ್ರತಿವರ್ಷವೂ ಇಲ್ಲಿಗೆ ಭೇಟಿಕೊಡುತ್ತೇವೆ ಎಂದ.

ಹೌದ ಹಾಗಿದ್ದರೆ ನಿನ್ನ ಕುದುರೆಯ ತಲೆಕಡಿದರೆ ಅದನ್ನು ಜೋಡಿಸುತ್ತಾಳೆಯೇ ನಿನ್ನ ಜ್ವಾಲಾಮುಖಿ ಎಂದು ಮರುಪ್ರಶ್ನೆಹಾಕಿ, ಕುದುರೆಯ ತಲೆಕಡಿದು ಹಾಕಲು ಅಜ್ಞಾಪಿಸಿದ. ಆಗ ಒಂದು ವಾರದಮಟ್ಟಿಗೆ ಕುದುರೆಯ ದೇಹದ ಭಾಗಗಳನ್ನು ಇಟ್ಟುಕೊಳ್ಳಬೇಕು ಎಂದು ಧ್ಯಾನು ಬೇಡಿಕೊಂಡಾಗ ಅಕ್ಬರ್ ಒಪ್ಪಿ ಅವರನ್ನು ಯಾತ್ರೆ ಮುಂದುವರಿಸಲು ಅವಕಾಶ ಮಾಡಿಕೊಟ್ಟ.

ಜ್ವಾಲಾಮುಖಿ ಮಂದಿರ ತಲುಪಿದ ಧ್ಯಾನು ಆರತಿಯ ಸಮಯದಲ್ಲಿ, ರಾಜ ಅಕ್ಬರ್ ನನ್ನ ಪರೀಕ್ಷೆ ಮಾಡುತ್ತಿದ್ದು ನನ್ನ ಕುದುರೆಗೆ ಮರುಜೀವಕೋಡುವಂತೆ ಶ್ರದ್ಧೆಯಿಂದ ಬೇಡಿಕೊಂಡನು. ಭಕ್ತಿಗೆ ಮೆಚ್ಚಿದ ದೇವಿ ಕುದುರೆಗೆ ಮರುಜೀವಕೊಟ್ಟಳು.

ಇದೆಲ್ಲವನ್ನು ಕಂಡು ಬೆಚ್ಚಿಬಿದ್ದ ಅಕ್ಬರ್ ಆ ನಂದಾಜ್ಯೋತಿಯನ್ನು ನೀರುಹಾಕಿ ನಂದಿಸಲು ತನ್ನ ಸೈನಿಕರಿಗೆ ಹೇಳಿದಾಗ ಅವರು ವ್ಯರ್ಥ ಪ್ರಯತ್ನಮಾಡಿ ಸೋತುಹೋದರು. ದೇವಿಯ ಶಕ್ತಿಯನ್ನು ಅರಿತ ಅಕ್ಬರ್ ಭಕ್ತಿಯಿಂದ ನಮಿಸಿದ. ಅಲ್ಲದೆ ಧ್ಯಾನ್ ಭಗತಿಗೆ ಐವತ್ತು ಕೆಜಿ ಚಿನ್ನವನ್ನು ಬಹುಮಾನವಾಗಿ ನೀಡಿದ.

ಅಕ್ಬರ್ ಅದನ್ನು ನಂದಿಸಲು ಪ್ರಯತ್ನ ಪಟ್ಟರೆ ಬ್ರಿಟಿಷರು ಭೂಮಿಯ ಒಳಗಿಂದ ಬರುವ ಶಕ್ತಿಯಿಂದ ವಿದ್ಯುತ್ ಉತ್ಪಾದನೆ ಮಾಡುವಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದರು.

ಇತಿಹಾಸದಲ್ಲಿ ಅದನ್ನು ನಂದಿಸುವ , ನಾಶ ಮಾಡುವ ಸಾವಿರ ಪ್ರಯತ್ನ ನಡೆದರೂ ಇಂದಿಗೂ ಆ ದೇವಿಯ ಶಕ್ತಿ ಅಜರಾಮರವಾಗಿದೆ. ಇಂದಿಗೂ ನಾವು ಆ ತೈಲವಿಲ್ಲ ಉರಿಯುವ ನವಜ್ಯೋತಿಗಳನ್ನು ನೋಡಬಹುದು.ಬಿಡುವು ಮಾಡಿಕೊಂಡು ಒಮ್ಮೆ ಭೇಟಿನೀಡಿ ಎನ್ನುತ್ತಾ..

ಇಂತಹ ಚಮತ್ಕಾರಗಳನ್ನು ಹೊತ್ತ ತಾಯಿ ಭಾರತೀಯ ಮಡಿಲಲ್ಲಿ ನಾವೂ ಕೂಡಾ ಇದ್ದೇವೆ ಎನ್ನುವುದು ಹೆಮ್ಮೆಯ ವಿಷಯ.

✍ ಸಚಿನ್ ಜೈನ್ ಹಳೆಯೂರ್