ಭರತಭೂಮಿ ರಕ್ಷಣೆ ಮಾಡುತ್ತಾ ಪವಿತ್ರ ಮಣ್ಣಲ್ಲಿ ಮಣ್ಣಾದ ಈ ಮುದ್ದಿನ ಶ್ವಾನಗಳ ಬಗ್ಗೆ ನಿಮಿಗೆಷ್ಟು ಗೊತ್ತು?

ಭರತಭೂಮಿ ರಕ್ಷಣೆ ಮಾಡುತ್ತಾ ಪವಿತ್ರ ಮಣ್ಣಲ್ಲಿ ಮಣ್ಣಾದ ಈ ಮುದ್ದಿನ ಶ್ವಾನಗಳ ಬಗ್ಗೆ ನಿಮಿಗೆಷ್ಟು ಗೊತ್ತು?

0

ಅವ್ರು ನಮ್ಮ ಧೀರ ಯೋದರಿಗಿಂತ ಏನೂ ಕಮ್ಮಿ ಅಲ್ಲ. ಯೋದರಿಗೂ ಸಾಧ್ಯವಾಗದ ಹಲವಾರು ಕೆಲಸಗಳನ್ನು ಕೇವಲ ಕೆಲವೇ ಸಮಯದಲ್ಲಿ ಮಾಡಿ ಮುಗಿಸಿ ಸಾಬ್ಭಾಶ್ ಎನಿಸಿಕೊಂಡ ಮುಗ್ದರು ಅವರು. ತಾಯಿ ಭಾರತೀಯ ಮುದ್ದಿನ ಕಂದಮ್ಮಗಳು, ಸಾವಿನ ಭಯವಿಲ್ಲದೆ ಕೊಟ್ಟಕೆಲಸ ದಿಟ್ಟವಾಗಿ ಮಾಡುವ ನಮ್ಮ ಭಾರತೀಯ ಸೇನೆಯ ನಾಯಿಗಳು!! ಕೆಲವು ಧೀರ ಶ್ವಾನಗಳ ಪರಿಚಯ ಇಲ್ಲಿದೆ.

1.#ರೆಕ್ಸ್
1993ರಲ್ಲಿ ಮಿರತಲ್ಲಿ ಜನಸಿದ ಗೋಳ್ಡೆನ್ ಲಾಬ್ರಡರ್ ಶ್ವಾನಗೆ ರೆಕ್ಸ್ ಎಂದು ಹೆಸರಿಡಲಾಯ್ತು. ಭಾಡೆರ್ವಾಹ ಎಂಬಲ್ಲಿ ಸೇನೆಯ ಸೈನಿಕರಿಗೆ ತಪಾಸಣಾ ಕಾರ್ಯದಲ್ಲಿ ಸಹಾಯ ಮಾಡಲು 14 ಶ್ವಾನಗಳ ಜೊತೆಗೆ ರಾಕ್ಸ್ ನನ್ನು ಕೂಡ ನೇಮಿಸಲಾಯ್ತು. 1995ರಲ್ಲಿ ತಪ್ಪಿಸಿಕೊಂಡ ಒಬ್ಬ ಬಯೋತ್ಪಾದಕನನ್ನು ಹಿಡಿಯಲು ಹೊರಟ ಈ ನಾಯಿ ಸುಮಾರು 4ಗಂಟೆ ಮಾಯವಾಗಿದ್ದ. ನಂತ್ರ 3km ದೂರದಲ್ಲಿ ಬಯೋತ್ಪಾದಕನ ಹೆಣ ಹಾಗೂ Ak56 ಗನ್ ಪಕ್ಕ ಕುಳಿತಿದ್ದ ಈತನನ್ನು ಸೈನಿಕರು ನೋಡಿದರು. 1998ರಲ್ಲಿ ಗುಲ್ಗಾನಾಗರ್ ಎಂಬಲ್ಲಿ ಸೈನಿಕರ ಕಣ್ಣಿಂದ ಗಾಯಗೊಂಡು ತಪ್ಪಿಸಿಕೊಂಡ ಒಬ್ಬ ಬಯೋತ್ಪದಕನನ್ನು ಹಿಡಿದುಕೊಟ್ಟ ಧೀರ ರೆಕ್ಸ್. ಅಲ್ಲದೆ 5ಅಡಿ ಮಂಜಿನ ಒಳಗೆ ಅವಿತಿದ್ದ ಒಬ್ಬ ವೈರಿಯನ್ನೂ ಹಿಡಿದುಕೊಟ್ಟ. ರಾಜಪುರಿ ಸಮೀಪದ ದಾರಬ ಎಂಬಲ್ಲಿ ಕಾರ್ಯನಿರ್ವಹಿಸುತಿದ್ದಾಗಲೇ ತೀವ್ರ ಗಾಯಗೋಂಡು ಸೆಪ್ಟೆಂಬರ್ 22 1999ರಂದು ಹುತಾತ್ಮನಾದ.

2.#ರಾಕ್
1990ರ ದಶಕದ ಇನ್ನೊಂದು ಲಾಬಾರ್ಡರ್ ಶ್ವಾನ ರಾಕ್. ಏಳು ಅಡಿ ಮಂಜು ತುಂಬಿದ್ದ ನಿರ್ಜನ ಬೆಟ್ಟಪ್ರದೇಶದಲ್ಲಿ ಅವಿತಿದ್ದ ನಾಲ್ಕು ಜನ ವೈರಿಗಳನ್ನು ಹಿಡಿದುಕೊಟ್ಟು, ಅವರು ತಂದಿದ್ದ ನಾಲ್ಕು AK47 ಗನ್, ಎರಡು ರೇಡಿಯೋ ಸೆಟ್, ಒಂದು ಅತ್ಯಾಧುನಿಕ LED ಬಾಂಬನ್ನು ಕಾಶ್ಮೀರದ ಪತೆಪುರಲ್ಲಿ ಪತ್ತೆ ಹಚ್ಚಿದ ಕೀರ್ತಿ ರಾಕ್ ನದ್ದು.

3.#ರಾಕೆಟ್
ಜೂನ್ 9 1998ರಲ್ಲಿ ಭಾರತೀಯ ಸೈನಿಕರು ಕಾಶ್ಮೀರದ ಬನಿಹಾಲ್ ಪ್ರದೇಶದಲ್ಲಿ ತೀವ್ರ ತಪಾಸನೆಯಲ್ಲಿ ತೊಡಗಿದ್ದರು. ಅವರಿಗೆ ಏನೂ ಧನಾತ್ಮಕ ಫಲಿತಾಂಶ ಬಾರದಿದ್ದಾಗ ಸ್ಥಳಕ್ಕೆ ರಾಕೆಟ್ ಎಂಬ ನಾಯಿಯನ್ನು ಕರೆಸಿಕೊಳ್ಳಲಾಯ್ತು. ರಾಕೆಟ್ ಬಂದು ಕೆಲವೇ ಗಂಟೆಗಳಲ್ಲಿ ಒಂದು ಯುಣಿವರ್ಸಲ್ ಮಿಷನ್ ಗನ್, ಮೂರು AK47, ಎರಡು AK56,ಒಂದು ಸ್ನಿಫೇರ್ ರೈಫಲ್, ಎರಡು 9mm ಪಿಸ್ತೂಲ್, ಏಳು ರೇಡಿಯೋ ಸೆಟ್,ಹನ್ನೊಂದು lED ಬಾಂಬ್, ಇಪ್ಪತೇಳು ಕೈ ಗ್ರೆನೇಡ್, 1500ಕ್ಕೂ ಹೆಚ್ಚು ಗುಂಡುಗಳನ್ನು ಪತ್ತೆಹಚ್ಚಿ ಕೊಟ್ಟ.

4.#ರುಡಾಲಿ
1998ರಲ್ಲಿ ಸೇನೆಯಲ್ಲಿದ್ದ ಯುವ ಲಾಬಾರ್ಡರ್ ಶ್ವಾನ ರುಡಾಲಿ. ಸೈನಿಕರು ಸಾಗುವ ರಸ್ತೆ, ಹಾಲ್, ಸೇನಾ ನೆಲೆ, VIPಗಳು ಸಾಗುವ ರಸ್ತೆ ಮುಂತಾದವುಗಳನ್ನು ತಪಾಸಣೆ ಮಾಡುವುದು ರುಡಾಳಿಯ ಕೆಲಸ. ಹಲವಾರು LEDಗಳನ್ನು ಪತ್ತೆ ಹಚ್ಚಿದ ಕೀರ್ತಿ ರುಡಾಲಿಯದ್ದು.

5.#ಮಾನಸಿ
2005ರ ಆಗಸ್ಟ್ ತಿಂಗಳ ಒಂದು ಸಂಜೆ ಮಾನಸಿ ಕಾಶ್ಮೀರದ LOC ಸಮೀಪದ ಕುಪ್ವಾರ ಸೆಕ್ಟರಲ್ಲಿ ಕೆಲವು ವೈರಿಗಳನ್ನು ಕಂಡಳು. ಬಶೀರ್ ಅಹಮದ್ ಎಂಬ ಸೈನಿಕನನ್ನು ನಾಯಿ ಎಳೆದುಕೊಂಡು ವೈರಿ ಇರುವಲ್ಲಿಗೆ ಬಂತು. ಕಾಣದ ಕತ್ತಲೆ ಆದಕಾರಣ ವೈರಿಗಳು ಮಾನಸಿ ಮತ್ತು ಬಶಿರ್ನನ್ನು ಕೊಂದರು. ಆದ್ರೆ ತದನಂತರಲ್ಲಿ ಭಾರತದ ವೀರ ಸೈನಿಕರು ವೈರಿಗಳನ್ನು ನರಕಕ್ಕೆ ಕಳುಹಿಸಿದರು.

ಇದಲ್ಲದೆ ತನ್ನ ನಿಯತ್ತಿಗೆ ರಾಜನ ಕೈಯಲ್ಲಿದ್ದ ಚಿನ್ನದ ಉಂಗುರವನ್ನು ಮತ್ತು 1000ರೂ ಹಣವನ್ನು ಬಹುಮಾನವಾಗಿ ಪಡೆದ ಅಲೆಕ್ಸ್ ಎಂಬ ಶ್ವಾನ, ಲ್ಯಾನ್ಗರ್ ಶ್ವಾನಗಳು ಕೂಡಾ ದೇಶದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಇಂತಹ ನಾಯಿಗಳಿಗೆ ನಿರ್ದಿಷ್ಟ ವಯಸ್ಸಾದ ನಂತ್ರ ಅಥವಾ ಅದು ಅಶಕ್ತವಾದ ನಂತ್ರ ಆ ಶ್ವಾನಗಳನ್ನು ಕೊಂದು ಹಾಕಲಾಗುತ್ತದೆ. ಸೈನ್ಯಕ್ಕೆ ಸಂಬಂದಿಸಿದ ಗುಪ್ತವಿಚಾರ ಈ ಶ್ವಾನಗಳಿಗೆ ಗೊತ್ತಿರುವ ಕಾರಣ, ಅದು ಇನ್ನೊಬ್ಬರಿಗೆ ನಾಯಿಯ ಮೂಲಕ ಗೊತ್ತಾಗಬಾರದು ಎಂಬ ಕಾರಣಕ್ಕೆ ಕೊಂದು ಹಾಕಲಾಗುತ್ತದೆ. ಶ್ವಾನಗಳೂ ಕೂಡಾ ಜನವರಿ 26ರಂದು ಗಣರಾಜ್ಯೋತ್ಸವದ ದಿನ ಪರೇಡ್ನಲ್ಲಿ ಬಾಗವಹಿಸುತ್ತದೆ. ಅವುಗಳಿಗೂ ಪರಮವೀರ ಚಕ್ರದಂತಹ ಪ್ರಶಸ್ತಿ ಪದಕವನ್ನೂ ನೀಡಲಾಗುತ್ತದೆ. ಅಲ್ಲದೆ ಸೈನ್ಯದ ಶ್ವಾನಗಳು ಹುತಾತ್ಮ ಆದಾಗ ಅಥವಾ ಸತ್ತಾಗ ಸಕಲ ಸರ್ಕಾರಿ ಗೌರವದೊಂದಿಗೆ ರಾಷ್ಟ್ರಧ್ವಜ ಹೊದಿಸಿ ಅಂತಿಮ ಸಂಸ್ಕಾರ ಕಾರ್ಯ ಮಾಡಲಾಗುತ್ತದೆ.

ಏನೇ ಹೇಳಿ ಸೇನೆಯಲ್ಲಿ ಯಾವುದೇ ಪ್ರತಿಫಲ ಬಯಸದೆ ದುಡಿದು ಪ್ರಾಣಾರ್ಪಣೆ ಮಾಡುವ ಮುಗ್ದ ಹುತಾತ್ಮ ಶ್ವಾನಗಳೇ ಶ್ರೇಷ್ಠ. ಅಂತಹ ಶ್ವಾನಗಳಿಗೊಂದು ನನ್ನ ಸಲಾಮ್.

✍ಸಚಿನ್ ಜೈನ್ ಹಳೆಯೂರ್