ವಿಶ್ವಕಪ್ ಗೆಲ್ಲುವ ಮೂಲಕ ಸೇಡು ತೀರಿಸಿಕೊಂಡ ರಾಹುಲ್ ದ್ರಾವಿಡ್..!!ಯಾವ ಸೇಡು ಗೊತ್ತಾ..??

ವಿಶ್ವಕಪ್ ಗೆಲ್ಲುವ ಮೂಲಕ ಸೇಡು ತೀರಿಸಿಕೊಂಡ ರಾಹುಲ್ ದ್ರಾವಿಡ್..!!ಯಾವ ಸೇಡು ಗೊತ್ತಾ..??

0

2003ರ ಫೈನಲ್‍ನಲ್ಲಿ ಭಾರತವನ್ನು ಸೋಲಿಸಿದ್ದ ಆಸ್ಟ್ರೇಲಿಯಾವನ್ನು ರಾಹುಲ್ ದ್ರಾವಿಡ್ ಕೊನೆಗೂ ಸೋಲಿಸುವ ಮೂಲಕ ವಿಶ್ವಕಪ್ ಗೆಲ್ಲುವ ಕನಸನ್ನು ನನಸು ಮಾಡಿದ್ದಾರೆ.

ಪ್ರತಿಯೊಬ್ಬ ಕ್ರಿಕೆಟ್ ಆಟಗಾರನಿಗೆ ವಿಶ್ವಕಪ್ ಗೆಲ್ಲುವ ಆಸೆ ಇರುತ್ತದೆ. ಈ ಆಸೆಯ ಸಮೀಪ ದ್ರಾವಿಡ್ ಬಂದಿದ್ದರು. 2003ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‍ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ರಿಕ್ಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ 125 ರನ್ ಗಳಿಂದ ಜಯಗಳಿಸಿತ್ತು. ರಿಕ್ಕಿ ಪಾಟಿಂಗ್ ಔಟಾಗದೇ 140 ರನ್(121 ಎಸೆತ, 4 ಬೌಂಡರಿ, 8 ಸಿಕ್ಸರ್) ಸಿಡಿಸಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದರು.

ಈ ಪಂದ್ಯದಲ್ಲಿ ದ್ರಾವಿಡ್ 47 ರನ್(57 ಎಸೆತ, 2 ಬೌಂಡರಿ) ಹೊಡೆದಿದ್ದರು. ಉಪನಾಯಕನಾಗಿದ್ದುಕೊಂಡು ವಿಶ್ವಕಪ್ ಗೆಲ್ಲುವ ಕನಸು ನನಸಾಗದೇ ಇದ್ದರೂ 2018ರಲ್ಲಿ ಅಂಡರ್ 19 ಕ್ರಿಕೆಟ್ ತಂಡಕ್ಕೆ ಮಾರ್ಗದರ್ಶನ ನೀಡಿ ಆಸ್ತ್ರೇಲಿಯಾ ತಂಡವನ್ನು ಸೋಲಿಸಿ ದ್ರಾವಿಡ್ ವಿಶ್ವಕಪ್ ಗೆದ್ದಷ್ಟೇ ಸಂಭ್ರಮಿಸಿದ್ದಾರೆ.

1999ರಲ್ಲಿ ರಾಹುಲ್ ದ್ರಾವಿಡ್ ಮೊದಲ ವಿಶ್ವಕಪ್ ಕ್ರಿಕೆಟ್ ಆಡಿದ್ದರು. ನಯನ್ ಮೊಂಗಿಯಾ ಕೀಪರ್ ಆಗಿದ್ದರೆ, ರಾಹುಲ್ ದ್ರಾವಿಡ್ ಅವರನ್ನು ಎರಡನೇ ಕೀಪರ್ ಆಗಿ ಆಯ್ಕೆ ಮಾಡಲಾಗಿತ್ತು. ಈ ಸರಣಿಯಲ್ಲಿ ದ್ರಾವಿಡ್ 8 ಪಂದ್ಯಗಳಲ್ಲಿ 8 ಇನ್ನಿಂಗ್ಸ್ ಆಡಿ 65.85 ಸರಾಸರಿಯಲ್ಲಿ 461 ರನ್ ಹೊಡೆದಿದ್ದರು. ಎರಡು ಶತಕ, 3 ಅರ್ಧ ಶತಕ ಹೊಡೆದಿದ್ದರು. ಈ ಮೂಲಕ ಟೂರ್ನಿಯನ್ನು ಅತಿ ಹೆಚ್ಚು ರನ್ ಹೊಡೆದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಮೂಲ:ಪಬ್ಲಿಕ್ ಟಿವಿ