ಬ್ರೇಕಿಂಗ್ ನ್ಯೂಸ್: 48ಗಂಟೆಯೊಳಗೆ 18 ಎನ್ ಕೌಂಟರ್..!!ಕ್ರಿಮಿನಲ್ ಗಳ ಹುಟ್ಟಡಗಿಸುತ್ತಿರುವ ಯೋಗಿ ಸರ್ಕಾರ..

ಬ್ರೇಕಿಂಗ್ ನ್ಯೂಸ್: 48ಗಂಟೆಯೊಳಗೆ 18 ಎನ್ ಕೌಂಟರ್..!!ಕ್ರಿಮಿನಲ್ ಗಳ ಹುಟ್ಟಡಗಿಸುತ್ತಿರುವ ಯೋಗಿ ಸರ್ಕಾರ..

0

ಲಕ್ನೋ: ಉತ್ತರಪ್ರದೇಶದ ಪೊಲೀಸರು ಕಳೆದ 48ಗಂಟೆಯೊಳಗೆ ಕನಿಷ್ಠ 18 ಎನ್ ಕೌಂಟರ್ ನಡೆಸಿದ್ದು, ವಾಂಟೆಡ್ ಪಟ್ಟಿಯಲ್ಲಿರುವ 25 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೇ ಮುಝಾಪರ್ ನಗರದಲ್ಲಿ ಒಬ್ಬ ಕ್ರಿಮಿನಲ್ ಎನ್ ಕೌಂಟರ್ ಗೆ ಬಲಿಯಾಗಿರುವ ಘಟನೆ ನಡೆದಿದೆ.

ಮಹತ್ವದ ಬೆಳವಣಿಗೆ ಎಂಬಂತೆ ಎಸ್ ಟಿಎಫ್(ವಿಶೇಷ ಕಾರ್ಯಪಡೆ) ನಡೆಸಿದ ಎನ್ ಕೌಂಟರ್ ಗೆ ಗಾಜಿಯಾಬಾದ್ ಮೂಲದ ಇಂದ್ರಪಾಲ್ ಎಂಬ ಕ್ರಿಮಿನಲ್ ಬಲಿಯಾಗಿದ್ದಾನೆ. ಈತನ ವಿರುದ್ಧ 33 ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

2013ರಲ್ಲಿ ಇಂದ್ರಪಾಲ್ ಉತ್ತರಖಂಡ್ ನ ಹರಿದ್ವಾರದಲ್ಲಿ ನಡೆಸಿದ ಶೂಟ್ ಔಟ್ ನಲ್ಲಿ ಪೊಲೀಸ್ ಬಲಿಯಾಗಿದ್ದ. ಈ ಸಂದರ್ಭದಲ್ಲಿ ಎಸ್ ಟಿಎಫ್ ತಂಡದ ಸಬ್ ಇನ್ಸ್ ಪೆಕ್ಟರ್ ಕೂಡಾ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಇಂದು ಮಧ್ಯಾಹ್ನ ಕನ್ನೋಜ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ಪ್ರಕರಣದಲ್ಲಿ ಶಂಕಿತ ಆರೋಪಿಗಳು ತಪ್ಪಿಸಿಕೊಂಡಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

ಶುಕ್ರವಾರ ಗೋರಖ್ ಪುರದಲ್ಲಿ ಎನ್ ಕೌಂಟರ್ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಇಬ್ಬರು ವಾಂಟೆಡ್ ಕ್ರಿಮಿನಲ್ಸ್ ಗಳನ್ನು ಬಂಧಿಸಲಾಗಿದೆ. ಇಬ್ಬರ ತಲೆಗೂ ತಲಾ 50 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

ಪೊಲೀಸರು ತಮ್ಮ ಸ್ವ ರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿರುವುದಾಗಿ ನೂತನವಾಗಿ ರಾಜ್ಯದಲ್ಲಿ ಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಓಪಿ ಸಿಂಗ್ ಪ್ರತಿಕ್ರಿಯೆ ನೀಡುವ ಮೂಲಕ ರಾಜ್ಯದಲ್ಲಿ ಪೊಲೀಸರು ನಡೆಸಿದ ಎನ್ ಕೌಂಟರ್ ಅನ್ನು ಸಮರ್ಥಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.