ಅದು ನದಿಯ ನೀರಿನಿಂದ ದೀಪ ಉರಿಯುವ ತಾಯಿ ಭಗವತಿಯ ಅವಿಸ್ಮರಣೀಯ ದೇವಾಲಯ !!

ಅದು ನದಿಯ ನೀರಿನಿಂದ ದೀಪ ಉರಿಯುವ ತಾಯಿ ಭಗವತಿಯ ಅವಿಸ್ಮರಣೀಯ ದೇವಾಲಯ !!

0

ನೀರಿನಿಂದ ದೀಪ ಉರಿಯುದಾ! ಅಸಾಧ್ಯವಾದ ಮಾತು ಅನಿಸುತ್ತಿರಬೇಕಲ್ಲಾ? ಪರಸ್ಪರ ವಿರೋಧಿಗಳಾದ ಜಲ ಮತ್ತು ಜ್ಯೋತಿ ಒಟ್ಟಿಗೆ ಸಂದಿಸಲು ಸಾಧ್ಯವೇ? ಎಣ್ಣೆಯಿಂದ ದೀಪ ಉರಿಯುದು ಸಹಜ, ಆದರೆ ಜ್ಯೋತಿಯನ್ನು ನಂದಿಸುವ ನೀರಿನಿಂದಲೇ ದೀಪ ಬೆಳಗುತ್ತದೆ? ಎಂದರೆ ಅದು ಮೂಢನಂಬಿಕೆಯಲ್ಲದೆ ಮತ್ತಿನ್ನೇನು! ಅಂತಾ ಅನಿಸುತ್ತದೆ ಅಲ್ಲವೇ? ಆದರೆ ನಂಬಲು ಅಸಾಧ್ಯವಾದ, ಮೂಢನಂಬಿಕೆಗೆ ವಿರುದ್ಧವಾದ ಮೂಲ ನಂಬಿಕೆಯೊಂದು ಇಲ್ಲಿ ಅಡಗಿದೆ. ಹೌದು ಬಂಧುಗಳೇ ಅವಿಸ್ಮರಣೀಯವಾದ ಅಚ್ಚರಿಯ ಪವಾಡವೊಂದು ಈ ದೇವಸ್ಥಾನದಲ್ಲಿದೆ. ಅಲ್ಲಿ ದಿನನಿತ್ಯ ನದಿಯ ನೀರಿನಿಂದ ತಾಯಿ ಭಗವತಿಗೆ ದೀಪ ಬೆಳಗಿಸಲಾಗುತ್ತದೆ.

ಅದು ಮಧ್ಯಪ್ರದೇಶ ರಾಜ್ಯದ ಶಾಜಪುರ್ ಜಿಲ್ಲೆಯ ನಳಕೊಡ ನಗರದಿಂದ ಸರಿಸುಮಾರು 15 ಕೀ.ಮೀ ದೂರದಲ್ಲಿರುವ ಗಡಿಯಘಾಟ್ ಹಳ್ಳಿ. ಹಳ್ಳಿಯಲ್ಲಿ ಪ್ರಶಾಂತವಾಗಿ ಹರಿಯುವ ಕಾಳಿಸಿಂಧ್ ನದಿ. ಆ ನದಿಯ ಪಕ್ಕದಲ್ಲೇ ಇರುವುದು ಈ ಪವಾಡದ ಗಡಿಯಾಘಾಟ್ ತಾಯಿ ಭಗವತಿಯ ದೇವಸ್ಥಾನ. ಸರಿಸುಮಾರು ಏಳು ವರ್ಷಗಳ ಹಿಂದೆ ಈ ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕರ ಕನಸಲ್ಲಿ ತಾಯಿ ಮಹಾಕಾಳಿ ಬಂದು “ನನಗೆ ಪವಿತ್ರವಾದ ಶುದ್ಧವಾದ ಕಾಳಿಸಿಂಧ್ ನದಿಯ ನೀರಿನಲ್ಲಿ ದೀಪ ಉರಿಸಬೇಕು” ಎಂದು ಆಜ್ಞೆಯನ್ನಿತ್ತರು.

ಮರುದಿನ ಅರ್ಚಕರು ಶ್ರದ್ಧೆಯಿಂದ ಪಕ್ಕದ ಕಾಳಿಸಿಂಧ್ ನದಿಯ ನೀರು ತಂದು ಎಣ್ಣೆಯ ಬದಲಿಗೆ ನೀರನ್ನು ಹಾಕಿ ದೀಪಹಚ್ಚಿದರು. ತಾಯಿ ಮಹಾಕಾಳಿ ಕನಸಲ್ಲಿ ನುಡಿಯಿತ್ತಂತೆ ದೀಪ ಪ್ರಜ್ವಲಿಸಿತು. ಮೊದಲಿಗೆ ಅರ್ಚಕರಿಗೂ ಆಶ್ಚರ್ಯವಾಗಿ ಊರಿನ ಜನರಿಗೆ ವಿಷಯ ಮುಟ್ಟಿಸಿದರು. ಆದರೆ ಊರಿನವರು ಅರ್ಚಕರಿಗೆ ಅರೆಹುಚ್ಚು ಹಿಡಿದಿರಬೇಕು ಎಂದು ತಮಾಷೆ ಮಾಡತೊಡಗಿದರು. ದಿನ ಕಳೆದಂತೆ ನೈಜ ವಿಷಯ ತಿಳಿದ ಹಳ್ಳಿಗರು ದೇವಿಯ ಮಾಹಾತ್ಮೆ ಕಂಡು ಮೂಕವಿಸ್ಮಿತರಾದರು.

ಅಂದಿನಿಂದ ಇಂದಿನವರೆಗೂ ಕಾಳಿಸಿಂಧ್ ನದಿಯ ನೀರಿನಲ್ಲಿ ಭಗವತಿಗೆ ದೀಪ ಹಚ್ಚಲಾಗುತ್ತಿದೆ. ಬರಿ ಅರ್ಚಕರೇ ಮಾತ್ರವಲ್ಲ, ಭಕ್ತರೂ ಕೂಡ ಹಣತೆಗೆ ನದಿಯ ನೀರುಹಾಕಿ ದೀಪಬೆಳಗಿಸುವ ಅವಕಾಶವಿದೆ. ಈ ದೇವಸ್ಥಾನವು ನದಿಯ ಸಮೀಪದಲ್ಲೇ ಇರುವುದರಿಂದ ಮಳೆಗಾಲದಲ್ಲಿ ಸಂಪೂರ್ಣ ಜಲಾವೃತವಾಗುತ್ತದೆ. ಆ ಕಾರಣದಿಂದ ಮಳೆಗಾಲದಲ್ಲಿ ಇಲ್ಲಿ ದೀಪ ಹಚ್ಚಲಾಗುದಿಲ್ಲ. ನವರಾತ್ರಿಯ ಸಮಯದಲ್ಲಿ ನದಿಯಲ್ಲಿ ನೀರು ತಗ್ಗಿದ ನಂತ್ರ ಇಲ್ಲಿ ಪೂಜೆ ಅರ್ಚನೆಯ ಜೋತೆಗೆ ನೀರಲ್ಲಿ ದೀಪ ಬೆಳಗಿಸಲಾಗುತ್ತದೆ.

ಇತ್ತೀಚಿಗೆ ಈ ದೇವಾಲಯದ ಕೇವಲ ಮದ್ಯಪ್ರದೇಶ ಮಾತ್ರವಲ್ಲದೆ ಪಕ್ಕದ ಆಂಧ್ರ,ಛತ್ತೀಸ್ಗಡ,ಒಡಿಶಾ,ಗುಜರಾತ್,ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲೂ ಪಸಿದ್ದಿಯನ್ನು ಪಡೆದಿದ್ದು ಇಲ್ಲಿಗೆ ಭಾರಿ ಭಕ್ತರ ದಂಡೆ ಅಗಮಿಸುತ್ತಿದ್ದಾರೆ. ದಿನವೊಂದಕ್ಕೆ ಕಡಿಮೆ ಅಂದರೂ ಭಕ್ತರ ಸಂಖ್ಯೆ 20ಸಾವಿರವನ್ನೂ ಮಿರುತ್ತಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿಗೆ ಎರಡುಭಾರಿ ಭೇಟಿ ನೀಡಿ ತಾಯಿ ಭಗವತಿಯ ಕೃಪೆಗೆ ಪಾತ್ರರಾಗಿದ್ದರು ಎನ್ನುವುದು ಉಲ್ಲೇಖನೀಯ.

ಈ ಮಂದಿರದಲ್ಲಿ ತಾಯಿಯ ಶಕ್ತಿಯಿಂದಲೇ ನೀರಲ್ಲಿ ದೀಪ ಬೆಳಗುತ್ತದೆ ಎಂಬ ಪ್ರತೀತಿ ಇದೆ. ಅದೇ ನೀರಿನಲ್ಲಿ ದೇವಸ್ಥಾನ ಹೊರಗಡೆ ದೀಪ ಹಚ್ಚಿದರೆ ದೀಪ ಬೆಳಗುವುದಿಲ್ಲ. ಇದೊಂದು ನೋಡಲೇಬೇಕಾದ ಅಚ್ಚರಿಯ ಹಾಗೂ ವಿಸ್ಮಯವಾದ ದೇವಾಲಯ. ಬಿಡುವು ಮಾಡಿಕೊಂಡು ಇಂತಹ ಪವಾಡದ ದೇವಾಲಯಕೊಮ್ಮೆ ಭೇಟಿನೀಡಿ ತಾಯಿಯ ಭಕ್ತಿ ಸಂಪಾದಿಸುವ ಎನ್ನುತ್ತಾ…..

✍ಸಚಿನ್ ಜೈನ್ ಹಳೆಯೂರ್