ಮೋದಿ ಏಕೆ ವಿಶ್ವದ ಎಲ್ಲಾ ನಾಯಕರನ್ನ ಅಪ್ಪುಕೊಳ್ಳುತ್ತಾರೆ ಗೊತ್ತಾ..??ಅವರೇ ವಿವರಿಸುತ್ತಾರೆ ಕೇಳಿ…

ಭಾರತದ ರಾಜಕಾರಣದ ಇತಿಹಾಸದಲ್ಲಿ ಎಂದಿಗೂ ಮೊದಲು ಪ್ರಧಾನಮಂತ್ರಿ ಮಾಡಿದ ಕೆಲಸಗಳು ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರಿರಲ್ಲಿಲ್ಲ. ಮತ್ತು ನಿಸ್ಸಂಶಯವಾಗಿ, ಪ್ರಧಾನಿ ಮೋದಿಯವರಂತ ವಿಶ್ವ ನಾಯಕರನ್ನು ಪಡೆಯುವುದಕ್ಕೆ ನಾವು ಪುಣ್ಯ ಮಾಡಿದೆವೆ.

ಪ್ರಧಾನಿ ಮೋದಿ ರಾಜಕೀಯ ಕ್ಷೇತ್ರವನ್ನು ಎರಡು ರೀತಿಯಲ್ಲಿ ನೋಡುವ ಹಾಗೆ ಮಾಡಿದಾರೆ. ಸ್ಪಷ್ಟವಾಗಿ ಹೇಳುವುದಾದರೆ, ಭಾರತದ ಸಾಮಾನ್ಯ ವ್ಯಕ್ತಿ ಇಂದು ಮೋದಿ ಬೆಂಬಲಿಗನಾಗಿದ್ದಾನೆ ಅಥವಾ ಅವರ ವಿಮರ್ಶಕ ಆಗಿದಾನೆ. ಒಟ್ಟಾರೆ ಹೇಳುವುದಾದರೆ, ಇದು ಒಂದು ಸಾಧನೆಯಾಗಿದೆ. ರಾಜಕಾರಣದಲ್ಲಿ ಪ್ರಭಾವ ಬೀರುವ ತಟಸ್ಥ ವರ್ಗವು ಈಗಲೂ ರಾಜಕೀಯದಲ್ಲಿ ಆಸಕ್ತಿ ತೋರಿಸುತ್ತಿದೆ.

 

ಸಾಮಾನ್ಯವಾಗಿ, ಪ್ರಧಾನಿ ಮೋದಿ ರಾಜಕೀಯವನ್ನು ಆಳದಿಂದ ತಿಳಿದಿದ್ದಾರೆ, ಯುವಜನರ ಬಗ್ಗೆ ಹೆಚ್ಚು ಪ್ರಕಾರದ ಬದಲಾವಣೆಯ ಬಗ್ಗೆ ತಿಳಿದಿದ್ದಾರೆ. ಹಾಗಾಗಿ ತಮ್ಮ ವಿರೋಧಿಗಳನ್ನು ಸವಾಲಾಗಿ ತೆಗೆದುಕೊಂಡು ಹೋಗುವುದನ್ನು ಅವರು ಕಲಿತಿದ್ದಾರೆ ಮತ್ತು ಕೆಲವೊಮ್ಮೆ ತಮ್ಮದೇ ಆದ ತಂತ್ರಗಳನ್ನು ಬಳಸುತ್ತಾರೆ. ಸೂಟ್ ಬೂಟ್ ಕಿ ಸರ್ಕಾರ್ ಅನ್ನು ಆರೋಪ ನೆನಪಿದೆಯಾ? ಅವರ ಪರವಾಗಿ RIT ಹೇಗೆ ವರದಿ ಕೊಟ್ಟಿತ್ತು ಅನೋದು.

Modiji

ಮತ್ತೊಮ್ಮೆ ಪ್ರಧಾನಿ ಮೋದಿ ಅವರು ‘ಆಮ್ ಆದ್ಮಿ’ ಆರೋಪಕ್ಕೆ ಉತ್ತರ ಕೊಟ್ಟಿದ್ದಾರೆ. ಮೋದಿ ವಿವಿಧ ರಾಷ್ಟ್ರಗಳ ನಾಯಕರನ್ನು ಅಪ್ಪಗೆ ಬಗ್ಗೆ ಟೀಕೆ ಮಾಡಿದರು‌ ಮತ್ತು ಹಾಗೆ ಮಾಡುವುದರಿಂದ ಅವರು Protocol ಅನ್ನು ನಿರ್ಲಕ್ಷಿಸುತ್ತಾರೆ ಎಂದು ಆರೋಪಿಸಿದರು.

ಹಿಂದಿನ ಸರ್ಕಾರದಲ್ಲಿ ಭಾರತೀಯ ರಾಜತಾಂತ್ರಿಕತೆ ಯಾವತ್ತೂ ಉತ್ತಮವಾಗಲಿಲ್ಲ. ಜಗತ್ತಿನಾದ್ಯಂತ ಭಾರತವನ್ನು ನೋಡುವ ಹಾಗೆ ಮಾಡಿದ್ದಾರೆ ಮೋದಿ, ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಭಾರತವು ಒಂದು ಶಕ್ತಿಯಾಗಿ ಗುರುತಿಸಲ್ಪಟ್ಟಿದೆ. ಮತ್ತು ಮೋದಿ ಸರ್ಕಾರವನ್ನು ವಿರೋಧಿಸುವವರ ಉದ್ದೇಶ ಹಿನ್ನಡೆಯಾಗಿದೆ. ಹಲವು ದೇಶಗಳೊಂದಿಗೆ ಭಾರತ ಉತ್ತಮ ಸಂಬಂಧವು ಹೊಂದಿದೆ. ಭಾರತ ಕೂಡ ಓಂದು super power ರಾಷ್ಟ್ರ ಎಂದು ಜಗತ್ತಿಗೆ ಅವರು ಮನವರಿಕೆ ಮಾಡುತ್ತಿದ್ದಾರೆ.

ಹಾಗಾಗಿ ಮೋದಿ ಪ್ರೋಟೋಕಾಲ್ ಕಡೆಗಣಿಸಿ, ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಅವರನ್ನು ವಿಶ್ವದಾದ್ಯಂತದ ಕ್ಯಾಮರಾಗಳ ಮುಂದೆ ತಬ್ಬಿಕೊಳ್ಳುವ ಮೂಲಕ ಸ್ನೇಹ ಸಂಬಂಧವನ್ನು ಸಾರಿದರು.

ಅಷ್ಟಕು ಮೋದಿ ಏಕೆ ವಿಶ್ವ ನಾಯಕರನ್ನು ಅಪ್ಪಿಕೋಳುತ್ತಾರೆ..!!

ನಾನೊಬ್ಬ ಸಾಮಾನ್ಯ ಮನುಷ್ಯ; ನನಗೆ ಶಿಷ್ಟಾಚಾರ ಗೊತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಉತ್ತಮ ಬಾಂಧವ್ಯ ಹೊಂದಿರುವ ನಾಯಕರಿಗೆ ಅಪ್ಪುಗೆಯ ಸ್ವಾಗತ ನೀಡುವ ಮೂಲಕ “ಅಪ್ಪುಗೆ-ಮುತ್ಸದ್ದಿತನ’ವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷ ಮಾಡಿರುವ ಲೇವಡಿಗೆ ಉತ್ತರವಾಗಿ ಮೋದಿ ಈ ಮಾತುಗಳನ್ನು ಹೇಳಿದರು.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ಪ್ರಧಾನಿ ಮೋದಿ ಆತ್ಮೀಯ ಅಪ್ಪುಗೆಯ ಸ್ವಾಗತ ನೀಡಿದ್ದರು. ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಕಾಣುವಾಗಲೂ ಮೋದಿ ಅಪ್ಪುಗೆಯ ಆತ್ಮೀಯತೆಯನ್ನು ತೋರಿದ್ದರು. ಕಾಂಗ್ರೆಸ್‌ ಪಕ್ಷ ಮೋದಿ ಅವರ ಈ ಪ್ರಚಾರ ತಂತ್ರವನ್ನು “ಅಪ್ಪುಗೆ ಮುತ್ಸದ್ದಿತನ’ದ ಪ್ರದರ್ಶನವೆಂದು ಲೇವಡಿ ಮಾಡಿತ್ತು.

ಒಂದು ವೇಳೆ ನನಗೂ ಇತರರಂತೆ “ತರಬೇತಿ’ ಸಿಕ್ಕಿರುತ್ತಿದ್ದರೆ ನಾನೂ ಶಿಷ್ಟಾಚಾರವನ್ನು ಅನುಸರಿಸುತ್ತಿದ್ದೆ; ಹಸ್ತಲಾಘವ ಮಾಡುತ್ತಿದ್ದೆ; ವಿಶ್ವ ನಾಯಕರೊಂದಿಗೆ ನಿಂತು ಎಡ ಬಲ ನೋಡುತ್ತಿದ್ದೆ’ ಎಂದು ಪ್ರಧಾನಿ ಮೋದಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

“ನಾನೊಬ್ಬ ಸಾಮಾನ್ಯ ಮನುಷ್ಯ; ನನ್ನ ದೇಶಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ನಾನು ಯತ್ನಿಸುತ್ತೇನೆ’ ಎಂದು ಪ್ರಧಾನ ಮೋದಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.

.

ನನ್ನ ಮೂಲ ಗುಣ ಏನೆಂದರೆ ಪ್ರತಿಕೂಲತೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವುದೇ ಆಗಿದೆ’ ಎಂದು ಮೋದಿ ಹೇಳಿದರು. ಇಷ್ಟವಾಗಿದ್ದರೆ ತಪ್ಪದೆ ಶೇರ್ ಮಾಡಿ.

ಇಲ್ಲಿದೆ ಸಂಪೂರ್ಣ ಸಂದರ್ಶನ:

Post Author: Ravi Yadav