ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಗೊಂದು ತೆರೆದಪತ್ರ…!!

11

ಹೌದು ಯುವಭಾರತದ, ವಿಶ್ವಗುರುಭಾರತದ ಕನಸು ಕಾಣುತ್ತಿರುವ ಯುವ ಸಮೂಹದ ಪರವವಾಗಿ ನರೇಂದ್ರ ಮೋದಿಯವರಿಗೆ ನನ್ನದೊಂದು ಪತ್ರ…

ಮಾನ್ಯ ಮೋದಿಜಿ ನೀವು ಭ್ರಷ್ಟಾಚಾರವನ್ನು ದೇಶದಿಂದಲೇ ಕಿತ್ತು ಹಾಕಬೇಕು ಎಂದು ಪಣ ತೊಟ್ಟಿರುವ ಮಹಾನ್ ನಾಯಕ…ದೇಶಕೋಸ್ಕರ ಕುಟುಂಬ ಬಿಟ್ಟು, 18ಗಂಟೆ ದಿನವೊಂದಕ್ಕೆ ದುಡಿಯುವ,ಒಂದೇ ಒಂದು ರಜೆ ಮಾಡದ ಹೆಮ್ಮೆಯ ನಾಯಕ,ದೇಶದೊಡೆಯ!!

ಭ್ರಷ್ಟಾಚಾರದ ಪಿಡುಗು ತೊಲಗಿಸಲು ಪಣ ತೊಟ್ಟಿರುವ ನೀವು….ಭ್ರಷ್ಟಾಚಾರ ಸೇರಿದಂತೆ ದೇಶದ ಎಲ್ಲಾ ಪ್ರಮುಖ ಸಮಸ್ಯೆಗೆ ಶಾಶ್ವತವಾಗಿ ನನ್ನದೊಂದು ಪರಿಹಾರೋಪಯವಿದೆ ಕೇಳುವಿರಾ????

ದೇಶದ ಪ್ರಮುಖ ಸಮಸ್ಯೆಯಾಗಿರುವ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕಬೇಕಾದರೆ ದೇಶಪೂರ್ತಿ E ಹಣದ ಬಳಕೆಯನ್ನು ಹೆಚ್ಚಿಸಬೇಕು…

E-ಹಣದ(ಎಲೆಕ್ಟ್ರಾನಿಕ್ ಹಣ,ಡೇಬಿಟ್ ಕಾರ್ಡ್,ಕ್ರೆಡಿಟ್ ಕಾರ್ಡ್) ಬಳಕೆಯನ್ನು ಈ ರೀತಿಯಾಗಿ ಹೆಚ್ಚಿಸಬಹುದು..

ದೇಶಪೂರ್ತಿ ದಿನವೊಂದಕ್ಕೆ 3000ರೂಪಾಯಿಗಿಂತ ಹೆಚ್ಚು ಮೊತ್ತದ ಖರೀದಿ ಮಾಡುವವರು ಕಡ್ಡಾಯವಾಗಿ ಸ್ಮಾರ್ಟ್ ಕಾರ್ಡುಗಳ ಮೂಲಕವೇ ವ್ಯವಹರಿಸಬೇಕು…ಎಂಬ ನಿಯಮ ಮಾಡಬೇಕು.. ದಿನವೊಂದಕ್ಕೆ ಮೂರು ಸಾವಿರಕ್ಕಿಂತ ಹೆಚ್ಚು ಖರಿಧಿ ಮಾಡುವವರು ಮೊದಲನೆದಾಗಿ ಶ್ರೀಮಂತರು… ಅನಿವಾರ್ಯವಾಗಿ ಶ್ರೀಮಂತರು ಕ್ರೆಡಿಟ್ ಕಾರ್ಡ್ ಡೇಬಿಟ್ಕರ್ಡ್ ಬಳಸಲು ಶುರು ಮಾಡುತ್ತಾರೆ..

ಕ್ರಮೇಣ ಮೂರುಸಾವಿರದ ಮಿತಿಯನ್ನು ಇಳಿಸಿ 2000ಸಾವಿರ ಮಾಡಬೇಕು ಆಗ ಮಧ್ಯಮವರ್ಗದ ಜನರು ಕೂಡಾ ಕ್ರೆಡಿಟ್ ಕಾರ್ಡು ಮತ್ತು ಡೆಬಿಟ್ ಕಾರ್ಡುಗಳಲ್ಲಿ ವ್ಯವಹರಿಸಲು ಶುರು ಮಾಡುತ್ತಾರೆ… ಕ್ರಮೇಣ ಮತ್ತೆ 1000ಸಾವಿರಕ್ಕೆ ಮತ್ತೆ ಸ್ವಲ್ಪ ಸಮಯದ ನಂತರ 500ರಕ್ಕೆ ಮತ್ತೆ 100ಕ್ಕೆ ಒಂದು ಹಂತದ ನಂತರ ದೇಶದಲ್ಲಿ ಎಲ್ಲಾ ವರ್ಗದ ಜನರು ಅನಿವಾರ್ಯವೆಂಬಂತೆ ಕಾರ್ಡುಗಳಲ್ಲಿ ವ್ಯವಹಾರ ಮಾಡುವಂತೆ ಮಾಡಬೇಕು… ನೋಟು ನಾಣ್ಯಗಳ ಚಲಾವಣೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು…

ಈ ವ್ಯವಸ್ಥೆಯನ್ನು ನಿಯಂತ್ರಿಸಲು ಕೇಂದ್ರ ಕ್ಯಾಬಿನೆಟ್ ಮಟ್ಟದಲ್ಲಿ ಕಾತೆಯೊಂದನ್ನು ಶುರುಮಾಡಬೇಕು… ದೇಶಿಯವಾಗಿ ತಯಾರು ಮಾಡಿದ ತಂತ್ರಜ್ಞಾನದಿಂದ ಇದನ್ನು ನಿಯಂತ್ರಿಸಬೇಕು.. ಜಿಲ್ಲಾಮಟ್ಟದಲ್ಲಿ ಇದರ ನಿರ್ವಹಣೆ ನಡೆಯಬೇಕು.

ದೇಶದ ಜನ ಪೂರ್ತಿ ಈ ರೀತಿಯಾದ E-ವ್ಯವಹಾರಕ್ಕೆ ಒಮ್ಮೆ ಸಂಪೂರ್ಣವಾಗಿ ಒಗ್ಗಿಕೊಂಡರೆ.. ಆಗುವ ಪ್ರಯೋಜನಗಳೇನು ಗೊತ್ತೇ??

1)ದೇಶದಲ್ಲಿ ನಾಣ್ಯ,ನೋಟು ಮುದ್ರಣಕ್ಕೆ ತಗುಲುವ ವೆಚ್ಚ ಉಳಿಯುತ್ತದೆ.ಜೊತೆಗೆ ಕಾಗದ ಕೂಡಾ.

2)ಸರ್ಕಾರ ನೀಡಬಹುದಾದ ವಿವಿಧ ರೀತಿಯ ವೇತನ,ಸಹಾಯದನಗಳನ್ನು ನೇರವಾಗಿ ತಲುಪಬೇಕಾದವರ ಖಾತೆಗೆ ನೇರವಾಗಿ ವರ್ಗಾಯಿಸಿ. ಫಲಾನುಭವಿಗಳು ಆ ಹಣವನ್ನು ಉಪಯೋಗಿಸುತ್ತಿದ್ದಾರೆಯೇ ಎಂದು ಪತ್ತೆಹಚ್ಚಬಹುದು.

3).ಈ ರೀತಿಯ ಕಾರ್ಡುಗಳಿಗೆ ತನ್ನದೇ ಆದ ಗುಪ್ತ ಕೋಡ್ ವೇವಸ್ಥೆ ಇರುತ್ತದೆ.. ಇದರಿಂದ ಹಣದ ರಕ್ಷಣೆ ನೋಟಿಗಿಂತ ಸುಲಭ.ಯಾವುದೇ ರೀತಿಯ ಭದ್ರತೆ,ಲಾಕರ್,ಬೇಕುಅಂತಾನೆ ಇಲ್ಲ

4)ನೋಟು,ನಾಣ್ಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಾಟ ಕಷ್ಟ,ಈ ರೀತಿಯ ಕಾರ್ಡುಗಳಲ್ಲಿ ಸಾಗಾಟ ಸುಲಭ.ಯಾವುದೇ ಕಳ್ಳರ ದರೋಡೆ ಕೊರರ ಬಯವೂ ಇಲ್ಲ.. ಕದ್ದರೂ ಕೂಡ ಅದರ passward ಗೊತ್ತಿಲ್ಲದಿದ್ದರೆ ಏನು ಪ್ರಯೋಜನ ಅಲ್ಲವೇ??

5) ಒಂದು ಕುಟುಂಬ ನಡೆಸುವ ಒಟ್ಟು ಹಣದ ವರ್ಗಾವಣೆಯ ಮೂಲಕ ಅವರ ಒಟ್ಟು ಆದಾಯ,ಅನುಭೋಗ, ಉಳಿತಾಯ ಎಷ್ಟಿದೆ ಎಂದು ಸರ್ಕಾರಕ್ಕೆ ಅರಿವಾಗುತ್ತದೆ.. ಈ ಮೂಲಕ ಜಾತಿ ಅದಾರಲ್ಲಿರುವ BPL, APL ಮುಂತಾದ ವ್ಯವಸ್ಥೆನ್ನು ಜಾತಿಯ ಬದಲು ಅರ್ಥಿಕಆಧಾರಕ್ಕೆ ಬಡಳಿಸಬೇಕು. ಆರ್ಥಿಕ(ಆದಾಯ)ಆಧಾರದ ಮೇಲೆಯೇ ಸರ್ಕಾರ ಒದಗಿಸುವ ಉಚಿತ ಯೋಜನೆಗಳನ್ನು ಒದಗಿಸಬೇಕು. ಇದರಿಂದ ನಿಜವಾದ ಬಡವರಿಗೆ ಸಾಹಾಯ ಆಗಿ.. ನಕಲಿ ಪಡಿತರ ಪಡೆಯುವವರು ಕಡಿಮೆ ಆಗಿ ,ಜಾತಿಯ ಪಿಡುಗು ತೋಲಗಬಹುದು.. ಅಲ್ಲದೆ ಮಿಸಾಲಾತಿ ವೇವಸ್ಥೆ ಕೂಡಾ ದೂರ ಆಗಬಹುದು.

6)ವ್ಯವಾಹಾರ ಪೂರ್ತಿ ಸ್ಮಾರ್ಟ್ ಕಾರ್ಡ್ ಗಳ ಮೂಲಕ ನಡೆಯುದರಿಂದ ದಿನನಿತ್ಯ ಆಗುವ ಚಿಲ್ಲರೆ ಸಮಸ್ಯೆ ಕೂಡಾ ಇರುವುದಿಲ್ಲ..

7).ಹಣಕೊಟ್ಟು ವೋಟ್ ಪಡೆಯುವವರು ಸಿಕ್ಕಿಬಿಳಬಹುದು…ಇದರಿಂದ ಚುನಾವಣೆಯಲ್ಲಿ ಪಾರದರ್ಶಕತೆ ಇನ್ನು ಬೆಳೆಯುತ್ತದೆ.

8).ರಾಷ್ಟ್ರೀಯ ಆದಾಯ,ತಲಾದಯ,GDP, ಹಣದುಬ್ಬರ,ಹಣದಿಳಿತ ಮುಂತಾದವುಗಳ ಲೆಕ್ಕಾಚಾರ ಮಾಡುವುದು ಸರ್ಕಾರಕ್ಕೆ ಸುಲಭವಾಗಿ,ಅದಿಕ್ಕೆ ತಕ್ಕಂತೆ ಯೋಜನೆ ನಿರೂಪಣೆ ಮಾಡಬಹುದು…

9).ಪಾಕಿಸ್ತಾನ,ಹಾಗೂ ದೇಶದೊಳಗಡೆ ಮುದ್ರಣವಾಗುವ ಖೋಟಾ ನೋಟು ಹಾಗೂ ನಕಲಿ ನೋಟುಗಳ ಪ್ರಮಾಣ ಸಂಪೂರ್ಣ ನಿಂತು ಹೋಗಬಹುದು.

10).ಪಾಕಿಸ್ತಾನದಿಂದ ಬರುವ ನಕಲಿ ನೋಟು ನಿಂತು ಹೋದರೆ ಕಾಶ್ಮೀರ ಮುಂತಾದ ಕಡೆ ಇರುವಂತಹ ಸೈನಿಕರಿಗೆ ಕಲ್ಲುಬಿಸಾಡುವ, ಭಯೋತ್ಪಾದನೆ,ಮಾವೋವಾದ ಮುಂತಾದ ಸಂಸ್ಯೆಗಲು ನಿವಾರಣೆಯಾಗುತ್ತದೆ.

11).ನಗದು ವ್ಯವಹಾರದ ಮೂಲಕ ನಡೆಯುವ ವರದಕ್ಷಿಣೆ,ಕೊಲೆ,ದರೋಡೆ, ಸುಪಾರಿ ಮುಂತಾದವುಗಳು ಕ್ರಮೇಣ ಕಡಿಮೆಯಾಗವಹುದು.

12).ಚೀನಾದಿಂದ ಅಕ್ರಮವಾಗಿ ಭಾರತಕ್ಕೆ ಬಂದು ಮಾರಾಟವಾಗುವ ಚಿನಾವಸ್ತುಗಳ ಮೇಲೆ ಹಿಡಿತ ಸಾಧಿಸಬಹುದು.

13).ದೇಶದೊಳಗೆ ತಲೆದೂರಿರುವ ಅಡಲಿತದಲ್ಲಿನ ನಗದು ರೂಪದ ಲಂಚ,ಭ್ರಷ್ಟಾಚಾರ ಮುಂತಾದವುಗಳಿಗೆ ಕಡಿವಾಣ ಬೀಳುತ್ತದೆ.

14).ಎಲ್ಲಾ ವ್ಯವಹಾರಗಳು e ವ್ಯವಸ್ಥೆಯ ಮೂಲಕ ನಡೆಯುದರಿಂದ ಸರ್ಕಾರಕ್ಕೆ ತೆರಿಗೆ ವಸೂಲಿ ಸುಲಭ. .ತೆರಿಗೆ ತಪ್ಪಿಸುವುದು ಅಸಾಧ್ಯ…ಇದರಿಂದಾಗಿ ಸರ್ಕಾರ ವಸೂಲಿ ಮಾಡುವ ನೇರ ಹಾಗೂ ಪರೋಕ್ಷ ತೆರಿಗೆಯಲ್ಲಿ ಏರಿಕೆ ಕಾಣಬಹುದು ಸರ್ಕಾರದ ಆದಾಯ ಹೆಚ್ಚಾಗಿ ಭಾರತ ಮಾಡಿದ ಸಾಲ ಮರುಪಾವತಿ ಮಾಡಬಹುದು.

14).ದೇಶಪೂರ್ತಿ ನಡೆಯುವ ಗೋಹತ್ಯೆ,ಮನುಷ್ಯರ,ಮಕ್ಕಳಅಕ್ರಮ ಮಾರಾಟ ಇದರಿಂದಾಗಿ ಕಡಿಮೆ ಆಗಬಹುದು.

15).ಬಡವರಿಗೆ ಚಿಕಿತ್ಸೆ ನೀಡಿ ಲೆಕ್ಕಕಿಂತ ಹೆಚ್ಚು ಹಣ ವಸೂಲಿ ಮಾಡುವುದು, ಶಾಲಾ ಕಾಲೇಜುಗಳಲ್ಲಿ ಲೆಕ್ಕಕ್ಕಿಂತ ಹೆಚ್ಚು ಡೋನೇಷನ್ ಪಡೆಯುದು ಮುಂತಾದವುಗಳಲ್ಲಿ ಗಣನೀಯವಾಗಿ ಇಳಿಕೆ ಆಗಬಹುದು.

16).ಹಣ ಪಡೆದುಕೊಂಡು ದೇಶದ ವಿರುದ್ಧ ವಿಷಕಾರುವ ಕೆಲವು ಸಾಹಿತಿಗಳು(ಗಂಜಿಗಿರಕಿಗಳು), tv ಮಾಧ್ಯಮಗಳ ಆಟವನ್ನು ಸಂಪೂರ್ಣವಾಗಿ ತಡೆಯಬಹುದು..

17).ದೇವಸ್ಥಾನಗಳಿಗೆ ಬರುವ ಕಾಣಿಕೆಯ ಪ್ರಮಾಣ ಕಡಿಮೆಯಾಗಬಹುದು.. ಈ ಹಣವನ್ನು ಸಿದ್ದರಾಮಯ್ಯ ನಂತವರು ಮತಾಂಧರಿಗೆ ಹಂಚುವುದು ಕಡಿಮೆ ಆಗುತ್ತದೆ. ವಿದೇಶದಿಂದ ಹಿಂದೂಗಳನ್ನು ಮತಾಂತರ ಮಾಡಿಸಲು ಇತರ ಧರ್ಮದವರಿಗೆ ಬರುತ್ತಿರುವ ದೇಣಿಗೆಯನ್ನು ಇದರ ಮೂಲಕ ತಡೆಯಬಹುದು.

18).ಒಂದು ಕುಟುಂಬದ ಎಲ್ಲಾ ಸದಸ್ಯರ ಡೆಬಿಟ್,ಕ್ರೆಡಿಟ್ ಕಾರ್ಡುಗಳನ್ನು ಇನ್ನೊಬ್ಬರ ಮೊಬೈಲ್ ಗೆ ಲಿಂಕ್ ಮಾಡಬೇಕು.. ಉದಾಹರಣೆಗೆ ಗಂಡ ಬಾರಿಗೆ ಹೋಗಿ ಮದ್ಯ ಖರೀದಿ ಮಾಡಿದರೆ ಹೆಂಡತಿಯ,ಮಕ್ಕಳ ಮೊಬೈಲ್ಗೆ SMS ಬರಬೇಕು… ಈ ರೀತಿ.. ಇದರಿಂದ ಕುಟುಂಬಸ್ಥರು ಡ್ರಗ್ಸ್,ಮದ್ಯಪಾನ,ಪಬ್ ಮುಂತಾದ ಕಡೆ ಹೋಗದಂತೆ,ಆ ಚಟಗಳಿಗೆ ಬೀಳದಂತೆ ತಡೆಯಬಹುದು.

19),ದೇಶದ ಎಲ್ಲಾ ಟೂಲ್ ಬುಥಿಗಳನ್ನು GPS ಹಾಗೂ ಬಾರ್ ಕೊಡರ್ ಸ್ಕ್ಯಾನರ್ ಮೂಲಕ ಕನೆಕ್ಟ್ ಮಾಡಬೇಕು… ವಾಹನ ಟೋಲ್ ಬೂತ್ ಒಳಗಿಂದ ಹಾದು ಹೋದರೆ ಸಾಕು ಆ ವಾಹನದ ಮಾಲೀಕನ ಖಾತೆಯಿಂದ ಅದಕ್ಕಾಗುವಷ್ಟು ಹಣ ಕಟ್ ಆಗಬೇಕು… ಟೋಲ್ ಬೂತ್ ಲ್ಲಿ ಉದ್ದಕ್ಕೆ ವಾಹನಗಳು ನಿಲ್ಲುವುದು ಉಳಿಯುತ್ತೆ ಜೊತೆಗೆ ಸಮಯವೂ ಉಳಿಯುತ್ತದೆ.

20).ಮನೆಯಲ್ಲಿ ಕೂತು ಮೊಬೈಲ್ ಮೂಲಕ ವಿದ್ಯುತ್,ಹಾಲಿನ,ಪೇಪರ್ ಇನ್ನಿತರ ಯಾವುದೇ ಬಿಲ್ಲು ಪಾವತಿ ಮಾಡಲು ಇದರಿಂದ ಸುಲಭ ಆಗುತ್ತದೆ..

ಇದಲ್ಲದೆ ಇನ್ನೂ ಹಲವಾರು ಸಮಸ್ಯೆಗಳಿಗೆ E ಹಣಕಾಸು ವ್ಯವಸ್ಥೆ ಪರಿಹಾರ ಒದಗಿಡುತ್ತದೆ..

ಮೊದಲಿಗೆ ದೇಶದಲ್ಲಿರುವ ಹಳ್ಳಿಗರಿಗೆ,ಅನಕ್ಷರಸ್ಥರಿಗೆ ಈ ಕಾರ್ಡು ಬಳಕೆ ಮಾಡುವುದರ ಬಗ್ಗೆ ಶಿಕ್ಷಣ ನೀಡಬೇಕು… ವಿದ್ಯುತ್ ಸಂಪರ್ಕ ಆದಷ್ಟು ಬೇಗ ಕಲ್ಪಿಸಬೇಕು..

ನಂತರ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಯಾವುದಾದರೊ ಒಂದು ರಾಜ್ಯದಲ್ಲಿ ಜಾರಿಗೆ ತರಬೇಕು…

ನಂತರ ಈ ವ್ಯವಸ್ಥೆಯನ್ನು ಇಡೀ ದೇಶದಲ್ಲಿ ಜಾರಿಗೆ ತಂದಿದ್ದೆ ಆದರೆ ದೇಶ ಇನ್ನು ಹತ್ತುವರ್ಷದೊಳಗೆ ವಿಶ್ವಗುರುವಾಗುದರಲ್ಲಿ ಸಂಶಯವೇ ಇಲ್ಲ…

2020ರ ಒಳಗೆ ದೇಶಪೂರ್ತಿ ಈ ಮಾದರಿಯನ್ನು ನೀವು ಜಾರಿಗೆ ತರಬೇಕು… ಆ ಮೂಲಕ ದೇಶವನ್ನು ಇನ್ನಷ್ಟು ಸದೃಢ ಮಾಡಬೇಕು ಎಂಬುದಾಗಿ ದೇಶದ ಎಲ್ಲಾ ನನ್ನಂತಹ ಯುವ ಸಮುದಾಯದವರ ಒಕ್ಕೊರಲರ ಆಗ್ರಹ ಮೋದಿಜಿ…..

ಈಗಾಗಲೇ ಭಾರತ ಮಾತೆಯ ಮೊಗದಲ್ಲಿ ಮುಗುಳುನಗೆ ಮೂಡಿಸಿದ ನೀವು ಈ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ನಗು ಬರಿಸುತ್ತೀರಿ ಎಂಬ ನಂಬಿಕೆ ನಮಗಿದೆ… ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದೆ ಆದ್ರೆ ಮತ್ತೆ ಭಾರತ ವಿಶ್ವನಾಯಕತ್ವ ವಹಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ.

ಧನ್ಯವಾದಗಳು..

RSS

ABVP

ಯುವಬ್ರಿಗೇಡ್

ರಾಷ್ಟ್ರಭಕ್ತ.

ಕನ್ನಡಿಗರು

ಸರಿ ಅನಿಸಿದ್ರೆ ಶೇರ್ ಮಾಡಿ…

ಸಚಿನ್ ಜೈನ್ ಹಳೆಯೂರ್