Ration Card benefits: ಶೇಕಡಾ 99 ರಷ್ಟು ಜನರಿಗೆ ಗೊತ್ತಿರದ ಉಪಯೋಗ- ರೇಷನ್ ಕಾರ್ಡ್ ಅಂದ್ರೆ ರೇಷನ್ ಅಷ್ಟೇ ಅಲ್ಲ, ಲಕ್ಷಾಂತರ ಲಾಭ. ಹೇಗೆ ಗೊತ್ತೇ?

Ration Card benefits explained in kannada: 99% of people don’t know about the these benefits of the ration card, yes ration card is not just a ration card it will give benefits in other ways also, know the benefits here

Ration Card benefits explained in kannada: ರೇಷನ್ ಕಾರ್ಡ್ಗಳನ್ನು ಸರ್ಕಾರ ಜನರಿಗೆ ನಾವು ನೀಡುವಂತಹ ಯೋಜನೆಗಳು ನೇರವಾಗಿ ತಲುಪಲು ಸಾಧ್ಯವಾಗಲಿ ಹಾಗೂ ಉದಾಹರಣೆಗೆ ಬಿಪಿಎಲ್ ರೇಷನ್ ಕಾರ್ಡ್(BPL Ration Card) ಅನ್ನು ಹೊಂದಿರುವಂತಹ ಬಡತನದ ರೇಖೆಗಿಂತ ಕೆಳಗಿರುವಂತಹ ಜನರಿಗೆ ತಮ್ಮ ಯೋಜನೆಗಳು ಸಿಗಲಿ ಎನ್ನುವ ಕಾರಣಕ್ಕಾಗಿ ರೂಪುಗೊಳಿಸಿದ್ದಾರೆ. ಆದರೆ ಉಚಿತವಾದ ರೇಷನ್ ಗಾಗಿ ಮಾತ್ರವಲ್ಲದೇ ರೇಷನ್ ಕಾರ್ಡ್ ಅನ್ನು ಇನ್ನು ಹಲವಾರು ವಿಚಾರಗಳಿಗಾಗಿ ಬಳಸಲಾಗುತ್ತದೆ ಎನ್ನುವಂತಹ ಮಾಹಿತಿ ಜನಸಾಮಾನ್ಯರಿಗೆ ತಿಳಿದಿಲ್ಲ. ಹೀಗಾಗಿ ಬನ್ನಿ ಇವತ್ತಿನ ಲೇಖನಿಯಲ್ಲಿ ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಜನಸಾಮಾನ್ಯರಿಗೆ ನೀಡುವ ಮೂಲಕ ಅವರ ಕೈಯಲ್ಲಿ ಇರುವಂತಹ ರೇಷನ್ ಕಾರ್ಡ್ ಯಾವೆಲ್ಲ ಕೆಲಸಗಳಿಗೆ ಬಳಕೆಯಾಗುತ್ತದೆ ಎನ್ನುವುದನ್ನು ಅವರಿಗೆ ತಿಳಿಸುವಂತಹ ಪ್ರಯತ್ನವನ್ನು ಮಾಡೋಣ.

ಮೊದಲನೇದಾಗಿ ಸಬ್ಸಿಡಿ ರೇಷನ್(Ration card benefits- Subsidiary Ration) ವಿಶೇಷವಾಗಿ ಬಿಪಿಎಲ್ ಕಾರ್ಡ್ ದಾರರಿಗೆ ಸಾರ್ವಜನಿಕ ಆಹಾರ ಪೂರೈಕೆ ಸಂಸ್ಥೆಯ ಮೂಲಕ ನ್ಯಾಯಬೆಲೆ ಅಂಗಡಿಗಳಲ್ಲಿ ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ ಮೂಲಭೂತ ಪೋಷಣೆಯ ರೂಪದಲ್ಲಿ ಆಹಾರ ಸಾಮಗ್ರಿಗಳನ್ನು ಅಂದರೆ ಅಕ್ಕಿ ಹಾಗೂ ಇನ್ನಿತರ ದವಸ ಧಾನ್ಯಗಳನ್ನು ಪೂರೈಕೆ ಮಾಡುವುದು. ಇದು ಕಳೆದ ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು ಈಗಲೂ ಕೂಡ ಇದೇ ಕಾರಣಕ್ಕಾಗಿ ವಿಶೇಷವಾಗಿ ಬಿಪಿಎಲ್ ಕಾರ್ಡ್ಗಳನ್ನು ಬಳಸಿಕೊಳ್ಳಲಾಗುತ್ತದೆ. ಒಂದು ಉಚಿತವಾಗಿ ಇಲ್ಲವೇ ಸಾಮಾನ್ಯ ವರ್ಗದ ಜನರಿಗೆ ಹೋಲಿಸಿದರೆ ಹಿಂದುಳಿದ ಹಾಗೂ ಬಡವರ್ಗದ ಜನರಿಗೆ ಬಿಪಿಎಲ್ ರೇಷನ್ ಕಾರ್ಡ್ ಮೂಲಕ ಕಡಿಮೆ ಬೆಲೆಯಲ್ಲಿ ಕೂಡ ರೇಷನ್ ಸಿಗಲಿದೆ.

ವೈದ್ಯಕೀಯ ಯೋಜನೆಗಳು(Ration card benefits- Medical Facilities) ಸರ್ಕಾರಗಳು ಪ್ರತಿ ವರ್ಷವೂ ಕೂಡ ಸಾಕಷ್ಟು ಯೋಜನೆಗಳನ್ನು ವಿಶೇಷವಾಗಿ ಬಡವರ್ಗದ ಜನರಿಗೆ ಆರ್ಥಿಕ ಸಂಕಷ್ಟದ ನಡುವೆ ಕೂಡ ಕೆಲವೊಂದು ಮೂಲಭೂತ ಸೌಲಭ್ಯಗಳನ್ನು ಅತ್ಯಂತ ಕಡಿಮೆ ಅಥವಾ ಉಚಿತ ಬೆಲೆಗೆ ನೀಡುವಂತಹ ಕೆಲಸವನ್ನು ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವವರಿಗೆ ಉಚಿತ ವೈದ್ಯಕೀಯ ಹಾಗೂ ಕಡಿಮೆ ಬೆಲೆಯ ವೈದ್ಯಕೀಯ ಸೌಕರ್ಯಗಳನ್ನು ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಔಷಧಿ, ಚೆಕಪ್, ಚಿಕಿತ್ಸೆಯ ವೆಚ್ಚದ ಹೊರೆಯನ್ನು ಬಡವರಿಂದ ಕಡಿಮೆ ಮಾಡುವ ಕಾರಣಕ್ಕಾಗಿ ಬಿಪಿಎಲ್ ಅಂದರೆ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರಿಗೆ ಈ ರೀತಿಯ ಸೌಲಭ್ಯವನ್ನು ನೀಡಲು ಸರ್ಕಾರ ಹೊರಟಿದೆ.

ಶಿಕ್ಷಣದ ನೆರವು(Ration card benefits- Educational Help For BPL Card Holders) ಬಿಪಿಎಲ್ ಕಾರ್ಡ್ದಾರರು ಇದನ್ನು ಪ್ರಮುಖವಾಗಿ ತಿಳಿದುಕೊಳ್ಳಬೇಕು ಯಾಕೆಂದರೆ ಪ್ರತಿಯೊಂದು ವರ್ಗದ ಕುಟುಂಬದ ಮಕ್ಕಳಿಗೆ ಶಿಕ್ಷಣ ಎನ್ನುವುದು ಅತ್ಯಂತ ಮೂಲಭೂತವಾಗಿ ಬೇಕಾಗಿರುವಂತಹ ಒಂದು ಸೌಕರ್ಯವಾಗಿದೆ. ಹೀಗಾಗಿ Scholarship ಉಚಿತ ಪುಸ್ತಕ ಸೇರಿದಂತೆ ಶೈಕ್ಷಣಿಕವಾಗಿ ಬೇಕಾಗಿರುವಂತಹ ಬೇರೆ ಬೇರೆ ಸಂಪನ್ಮೂಲಗಳನ್ನು ಉಚಿತವಾಗಿ ಪಡೆಯುವಂತಹ ಅರ್ಹತೆಗಳನ್ನು ಕೂಡ ಬಿಪಿಎಲ್ ಕಾರ್ಡನ್ನು ಹೊಂದಿರುವವರು ಪಡೆದುಕೊಂಡಿರುತ್ತಾರೆ. ಈ ಮೂಲಕ ಯಾವ ಬಡತನವೂ ಕೂಡ ಶಿಕ್ಷಣವನ್ನು ಪಡೆಯುವುದರಿಂದ ತಡೆಯಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಬಹುದಾಗಿದೆ.

ಮನೆ ಹಾಗೂ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳುವುದಕ್ಕಾಗಿ(Ration card benefits- Use In House Building & Electricity Connection) ಮನೆ ನಿರ್ಮಾಣದ ಅರ್ಜಿಗಾಗಿ ಅಥವಾ ಹೊಸ ವಿದ್ಯುತ್ ಕನೆಕ್ಷನ್ ಅನ್ನು ನೀವು ಸಬ್ಸಿಡಿ ದರಕ್ಕೆ ಪಡೆದುಕೊಳ್ಳಬೇಕು ಎನ್ನುವಂತಹ ಆಸೆಯನ್ನು ಹೊಂದಿದ್ದರು ಕೂಡ ಆ ಸಂದರ್ಭದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಪ್ರಮುಖವಾಗಿ ಬೇಕಾಗಿರುತ್ತದೆ. ಯಾಕೆಂದರೆ ಸರ್ಕಾರ ಕೂಡ ಪಕ್ಕಾ ಮನೆ ಗಳನ್ನು ಬಡತನದ ವರ್ಗಕ್ಕಿಂತ ಕೆಳಗಿರುವ ಜನರಿಗೆ ಹಾಗೂ ವಿದ್ಯುತ್ ಅನ್ನು ಸಬ್ಸಿಡಿ ದರಕ್ಕೆ ನೀಡುವಂತಹ ಯೋಜನೆಯನ್ನು ಕೂಡ ಪರಿಚಯಿಸಿದೆ.

ಆ ಮಾನದಂಡವನ್ನು ಅಳೆಯಲು ಕೂಡ ಬಿಪಿಎಲ್ ರೇಷನ್ ಕಾರ್ಡ್ ಅತ್ಯಂತ ಅಗತ್ಯವಾಗಿದೆ. ಇದರ ಜೊತೆಗೆ ಕೆಲವೊಂದು ಸಾಮಾಜಿಕ ಭದ್ರತೆಗಳನ್ನು ಬಡವರ್ಗದ ಕುಟುಂಬಗಳಿಗೆ ನೇರವಾಗಿ ತಲುಪಿಸುವ ಹೊಣೆ ಕೂಡ ಸರ್ಕಾರದ ಮೇಲೆ ಇರುತ್ತದೆ ಹೀಗಾಗಿ ಅವರು ಕೂಡ ಪ್ರಮುಖವಾಗಿ ಗಮನಿಸುವುದು ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಅನ್ನು. ಹೀಗಾಗಿ ಈ ಎಲ್ಲ ಕೆಲಸಗಳಲ್ಲಿ ಕೂಡ ಪ್ರಮುಖವಾಗಿ ರೇಷನ್ ಕಾರ್ಡ್ ಅನ್ನು ಅದರಲ್ಲೂ ವಿಶೇಷವಾಗಿ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಪರಿಗಣಿಸಲಾಗುತ್ತದೆ. ಕೇವಲ ಉಚಿತ ಪಡಿತರ ಮಾತ್ರವಲ್ಲದೆ ಅದಕ್ಕಿಂತಲೂ ಹೆಚ್ಚಾದ ಲಾಭವನ್ನು ನೀವು ನಿಮ್ಮ ರೇಷನ್ ಕಾರ್ಡ್ ಮೂಲಕ ಪಡೆದುಕೊಳ್ಳಬಹುದು.
ಇವುಗಳನ್ನು ಓದಿ: Mobile Charge Tricks: ನೀವು ನಿಜಕ್ಕೂ ಪ್ರತಿ ಬಾರಿಯೂ ೧೦೦% ಚಾರ್ಜ್ ಮಾಡುತ್ತೀರಾ?? ಹಾಗೆ ಮಾಡಬಾರದು. ಎಷ್ಟು ಮಾಡಬೇಕು ಗೊತ್ತಾ??

Plastic Rice:ಮಾರುಕಟ್ಟೆಯಲ್ಲಿ ಸಿಗುತ್ತಿರುವ ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವುದು ಹೇಗೆ ಗೊತ್ತೇ? ಸಂಪೂರ್ಣ ಡೀಟೇಲ್ಸ್.

Network Tricks: ನಿಮ್ಮ ಫೋನ್ ನಲ್ಲಿ ನೆಟ್ವರ್ಕ್ ಸಮಸ್ಯೆ ಬಂದ್ರೆ- ಈ ಟ್ರಿಕ್ಸ್ ಬಳಸಿ- ಹುಡುಕಿಕೊಂಡು ಬರುತ್ತೆ.