ತೇಜಸ್ವಿ ಸೂರ್ಯ ರವರಿಗೆ ಸಂವಿಧಾನ ಓದಲು ಹೇಳಿ, ಬಿ ಸ್ ವೈ ವಿರುದ್ಧ ಬಾರಿ ಆಕ್ರೋಶ ಹೊರ ಹಾಕಿದ ಸಿದ್ದು ! ಯಾಕೆ ಗೊತ್ತಾ??

ತೇಜಸ್ವಿ ಸೂರ್ಯ ರವರಿಗೆ ಸಂವಿಧಾನ ಓದಲು ಹೇಳಿ, ಬಿ ಸ್ ವೈ ವಿರುದ್ಧ ಬಾರಿ ಆಕ್ರೋಶ ಹೊರ ಹಾಕಿದ ಸಿದ್ದು ! ಯಾಕೆ ಗೊತ್ತಾ??

ಇತ್ತೀಚಿಗೆ ಬಹುತೇಕ ರಾಜಕೀಯ ನಾಯಕರು ಬಿಜೆಪಿ ಪಕ್ಷದ ಯುವ ಸಂಸದ ತೇಜಸ್ವಿ ಸೂರ್ಯ ರವರ ಮೇಲೆ ಕಣ್ಣಿಟ್ಟಿದ್ದಾರೆ. ಸದಾ ಯಾರಾದರೂ ಒಬ್ಬರಾರು ನಾಯಕರು ತೇಜಸ್ವಿ ಸೂರ್ಯರವರ ಬಗ್ಗೆ ಮಾತನಾಡುತ್ತಾರೆ. ಕೆಲವರು ಕಿಡಿ ಕಾರಿದರೇ, ಇನ್ನು ಕೆಲವರು ಬೇರೊಂದು ಪಕ್ಷದ ಸಂಸದ ಎಂಬುದನ್ನು ನೋಡದೆ ಹೊಗಳುತ್ತಾರೆ. ಇತ್ತೀಚಿಗೆ ಮಾಜಿ ಪ್ರಧಾನಿಗಳಾದ ದೇವೇಗೌಡರು ಇವರನ್ನು ಹಾಡಿಹೊಗಳಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಕುಮಾರ ಸ್ವಾಮಿ ರವರು ತೇಜಸ್ವಿ ಸೂರ್ಯ ರವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು. ಇನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಉಗ್ರಪ್ಪ, H K ಪಾಟೀಲ್ ರವರು ಸೇರಿಂದಂತೆ ಹಲವಾರು ನಾಯಕರು ಇವರ ವಿರುದ್ಧ ಕಿಡಿ ಕಾರಿದ್ದರು.

ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ರವರು ತೇಜಸ್ವಿ ಸೂರ್ಯ ರವರ ವಿರುದ್ಧ ಕಿಡಿ ಕಾರಿದ್ದಾರೆ. ಇತ್ತೀಚಿಗೆ ರಾಜ್ಯ ಸರ್ಕಾರಕ್ಕೆ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರದ ಸಹಾಯ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದನ್ನು ಪ್ರಸ್ತಾವನೆ ಮಾಡಿದ ಸಿದ್ದರಾಮಯ್ಯ ರವರು, ಯಡಿಯೂರಪ್ಪ ನವರು ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯ ಮಂತ್ರಿ, ಮೋದಿ ಶಾ ಮುಂದೆ ನಿಂತು ಮಾತನಾಡುವ ಧೈರ್ಯವಿಲ್ಲ. ಅವರನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ. ಇನ್ನು ತೇಜಸ್ವಿ ಸೂರ್ಯ ರವರು ಒಬ್ಬ ಅಪ್ರಬುದ್ಧ ರಾಜಕಾರಣಿ ಮೊದಲು ಸಂವಿಧಾನ ಪಾಠ ಓದಲಿ ಎಂದು ಟೀಕೆ ಮಾಡಿದ್ದಾರೆ.