ಉಪಚುನಾವಣೆ ಉಸ್ತುವಾರಿ ನೇಮಿಸಿದ ಅಮಿತ್ ಶಾ: ಯಾರ ಹೆಗಲಿಗೆ ಗೊತ್ತಾ???

ಇದೀಗ ಎಲ್ಲಿ ನೋಡಿದರೂ ಉಪ ಚುನಾವಣೆಯದ್ದೇ ಮಾತು, ಎಲ್ಲಾ ಮೂರು ಪಕ್ಷಗಳು ಉಪ ಚುನಾವಣೆಗೆ ಈಗಾಗಲೇ ತಮ್ಮದೇ ಆದ ಸಿದ್ದತೆಯಲ್ಲಿ ತೊಡಗಿಕೊಂಡಿವೆ. ಅನರ್ಹ ಶಾಸಕರನ್ನು ಕೈಬಿಡಲು ಒಪ್ಪದಿರುವ ಬಿಜೆಪಿ ಪಕ್ಷವು, ಹೇಗಾದರೂ ಮಾಡಿ ಎಲ್ಲರನ್ನು ಕಣಕ್ಕೆ ಇಳಿಸಬೇಕು ಎಂದು ಇನ್ನಲ್ಲದ ಪ್ರಯತ್ನ ನಡೆಸುತ್ತಿದೆ.ಒಂದು ವೇಳೆ ಅದು ಸಾಧ್ಯವಾಗದೇ ಇದ್ದಲ್ಲಿ ಪರ್ಯಾಯ ಮಾರ್ಗದ ಬಗ್ಗೆ ಸಹ ಆಲೋಚನೆ ಮಾಡುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿಕೊಂಡಿವೆ. ಈ ಎಲ್ಲಾ ವಿದ್ಯಮಾನಗಳ ನಡುವೆ ಇದೀಗ ಅಮಿತ್ ಶಾ ರವರು, ಎಲ್ಲಾ ೧೫ ಸೀಟುಗಳನ್ನು ಗೆಲ್ಲುಸುವ ಆದೇಶ ಹೊರಡಿಸಿದ್ದು, ಚುನಾವಣಾ ಉಸ್ತುವಾರಿಯನ್ನು ನೇಮಕ ಮಾಡಿದ್ದಾರೆ. ಈ ನಿರ್ಧಾರದಿಂದ ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಜಗಳಕ್ಕೂ ಸಹ ಬ್ರೇಕ್ ಹಾಕಿದ್ದಾರೆ.

ಹೌದು, ಕಳೆದ ಕೆಲವು ದಿನಗಳಿಂದ ಬಿಜೆಪಿ ಹೈ ಕಮಾಂಡ್ ಬಿ ಸ್ ವೈ ರವರನ್ನು ಕಡೆಗಣಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಕಾಕತಾಳಿಯವೋ ಏನೋ ತಿಳಿದಿಲ್ಲ ಕೆಲವೊಂದು ಸನ್ನಿವೇಶಗಳು ಅದೇ ರೀತಿ ಕಂಡುಬಂದಿದ್ದವು. ಆದರೆ ಇದೀಗ ಈ ಎಲ್ಲಾ ಅನುಮಾನಗಳಿಗೆ ಬ್ರೇಕ್ ಹಾಕಿರುವ ಬಿಜೆಪಿ ಪಕ್ಷದ ಹೈ ಕಮಾಂಡ್, ಎಲ್ಲಾ ಕ್ಷೇತ್ರಗಳಲ್ಲಿಯೂ ಗೆಲ್ಲುವ ಮೂಲಕ ಸರ್ಕಾರ ಭದ್ರಗೊಳಿಸಿಕೊಳ್ಳಬೇಕು, ಇದರ ಸಂಪೂರ್ಣ ಜವಾಬ್ದಾರಿಯನ್ನು ನೀವೇ ಹೆಗಲಿಗೆ ಏರಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ ಸ್ ಯೆಡಿಯೂರಪ್ಪನವರಿಗೆ ಆದೇಶ ಹೊರಡಿಸಿದೆ. ಎಲ್ಲಾ ಚುನಾವಣಾ ರಣ ತಂತ್ರಗಳನ್ನು ರೂಪಿಸಿ ಕಣಕ್ಕೆ ಇಳಿಯಲು ಆದೇಶ ಹೊರಡಿಸಿದೆ. ಅಭ್ಯರ್ಥಿ ಆಯ್ಕೆಯಿಂದ ಹಿಡಿದು, ಎಲ್ಲಾ ಜವಾಬ್ದಾರಿಗಳು ನಿಮ್ಮದೇ ನಾವು ಕೇವಲ ಬೇಕಾದ ಸಹಕಾರ ನೀಡುತ್ತುವೆ ಎಂದು ಹೈ ಕಮಾಂಡ್ ತಿಳಿಸಿದೆ.

Post Author: Ravi Yadav