ಕೇಂದ್ರ ಸರ್ಕಾರದ ಕಠಿಣ ನಿರ್ಧಾರ ಪರ ನಿಂತ ಅಣ್ಣಾಮಲೈ ! ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದು ಹೇಗೆ ಗೊತ್ತಾ??

ಕೇಂದ್ರ ಸರ್ಕಾರದ ಕಠಿಣ ನಿರ್ಧಾರ ಪರ ನಿಂತ ಅಣ್ಣಾಮಲೈ ! ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದು ಹೇಗೆ ಗೊತ್ತಾ??

ಇದೀಗ ದೇಶದ ಎಲ್ಲೆಡೆ ಕೇಂದ್ರ ಸರ್ಕಾರ ಹೊಸ ನಡೆಗೆ ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಮೊದ ಮೊದಲೂ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ವಿರೋಧಿಸಿದ ಸಾಮಾನ್ಯ ಜನರು, ಇದೀಗ ಈ ಕಾನೂನಿಗೆ ಸರಿ ಎನ್ನುತ್ತಿದ್ದಾರೆ. ಹೌದು, ನಿಮಗೆ ಈಗಾಗಲೇ ತಿಳಿದಿರುತ್ತದೆ, ನಾವು ಮಾತನಾಡುತ್ತಿರುದು ಕೇಂದ್ರ ಸರ್ಕಾರ ಇತ್ತೀಚಿನ ಕಠಿಣ ಕಾನೂನುಗಳಲ್ಲಿ ಒಂದಾದ ಹೊಸ ಮೋಟಾರು ಕಾಯ್ದೆ ತಿದ್ದುಪಡಿಯ ಬಗ್ಗೆ. ಈ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂಡ ಕ್ಷಣದಿಂದಲೂ ಕೆಲವೊಂದು ಕಡೆಯಲ್ಲಿ ಬಾರಿ ದಂಡ ಕಟ್ಟಲಾಗದೆ ಜನರು ಪರದಾಡುತ್ತಿದ್ದಾರೆ ಎಂದು ಆಕ್ರೋಶಗಳನ್ನು ಜನರು ಹೊರಹಾಕಿದ್ದರು. ಇನ್ನು ಕೆಲವು ರಾಜ್ಯ ಸರ್ಕಾರಗಳು ದಂಡದ ಪ್ರಮಾಣ ಕಡಿಮೆ ಮಾಡಿದ ಕಾರಣ ಕೆಲವರು ಸುಮ್ಮನಾಗಿದ್ದಾರೆ. ಈ ಕಾಯ್ದೆಗೆ ಕೆಲವೊಂದು ಕಡೆ ಆಕ್ರೋಶದ ಮಾತುಗಳು ಕೇಳಿ ಬಂದರೆ, ಬಹಳಷ್ಟು ಜನರು ಸರಿಯಾದ ಕ್ರಮ ಎಂದಿದ್ದಾರೆ. ಇನ್ನು ಕೆಲವರು ಪೊಲೀಸ್ ಇಲಾಖೆಯು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪ ಮಾಡಿದ್ದರು.

ಇದೀಗ ಈ ಕಾಯ್ದೆಯ ಬೆಂಬಲಿಗರ ಸಾಲಿಗೆ ದಕ್ಷ ಅಧಿಕಾರಿ ಅಣ್ಣಾಮಲೈ ರವರು ಸೇರಿಕೊಂಡಿದ್ದಾರೆ. ಈ ಕಾಯ್ದೆಯ ಕುರಿತು ಟ್ವೀಟ್ ಮಾಡಿರುವ ಅಣ್ಣಾಮಲೈ ರವರು, ದೇಶದಲ್ಲಿ ಯಾವುದಾದರೂ ಬದಲಾವಣೆಯಾದ ಸಂದರ್ಭದಲ್ಲಿ ನಾವು ಅದನ್ನು ಸ್ವೀಕರಿಸಬೇಕು. ಸ್ವೀಕರಿಸುವ ಮೊದಲು ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು, ನಮ್ಮ ಮನಸ್ಥಿತಿಯನ್ನು ನಾವು ಮೊದಲು ಎಂಬ ಆಲೋಚನೆ ಬಿಟ್ಟು ನೀನು ಮೊದಲು ಎಂದು ಅಂದುಕೊಳ್ಳುವುದರ ಕಡೆ ನಾವೆಲ್ಲರೂ ಗಮನ ಹರಿಸಬೇಕು. ಇದು ಕೇವಲ ಬದಲಾವಣೆಯಷ್ಟೇ, ನಮ್ಮ ಜೀವನದಲ್ಲಿಯೂ ಬದಲಾವಣೆ ಇರುತ್ತದೆ. ನಾವು ಕೇಂದ್ರ ಸರ್ಕಾರ ವಿಧಿಸಿರುವ ದಂಡದ ಬಗ್ಗೆ ನಿಂದನೆ ಮಾಡುವ ಬದಲು ನಮ್ಮ ಮನಸ್ಥಿತಿ ಬದಲಾಯಿಸಿಕೊಂಡು ಕಾನೂನು ಪಾಲಿಸೋಣ ಎಂದಿದ್ದಾರೆ.