Loan EMI: ನೀವು ಲೋನ್ EMI ಕಟ್ಟಲು ಆಗದೆ ಇದ್ದರೇ, ಏನಾಗುತ್ತದೆ? ನಿಮ್ಮ ಹಕ್ಕಿನ ಬಗ್ಗೆ ತಿಳಿದರೆ, ಬ್ಯಾಂಕ್ ನವರು ಏನು ಮಾಡಲು ಆಗಲ್ಲ.
Here is indian law explaination when you can pay Loan EMI.
Loan EMI: ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ಕೂಡ ನಾವು ಒಂದಲ್ಲ ಒಂದು ಕಾರಣಗಳಿಗಾಗಿ ಸಾಲವನ್ನು ಪಡೆದುಕೊಂಡಿರುತ್ತೇವೆ. ಸಾಲ ಮಾಡುವುದು ಯಾವ ರೀತಿಯಲ್ಲಿ ನಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ನೆರವಾಗುತ್ತದೆಯೋ, ಅದೇ ರೀತಿಯಲ್ಲಿ ಅದನ್ನು ನಾವು ಸರಿಯಾದ ರೀತಿಯಲ್ಲಿ ಕಟ್ಟುವುದು ಕೂಡ ನಮ್ಮ ಜವಾಬ್ದಾರಿ ಆಗಿರುತ್ತದೆ ಎಂಬುದನ್ನು ಪ್ರತಿಯೊಬ್ಬ ಅರ್ಥ ಮಾಡಿಕೊಳ್ಳಬೇಕು.
Table of Contents- Loan EMI
ಅದರಲ್ಲಿ ವಿಶೇಷವಾಗಿ ನೀವು ಒಂದು ವೇಳೆ ಸಾಲವನ್ನು ಪಡೆದುಕೊಂಡ ನಂತರ Loan EMI ಅನ್ನು ಸರಿಯಾದ ರೀತಿಯಲ್ಲಿ ಕಟ್ಟದೆ ಹೋದಲ್ಲಿ ಅದು ನಿಯಮಗಳ ಉಲ್ಲಂಘನೆ ಆಗಿದ್ದು ಆ ಸಂದರ್ಭದಲ್ಲಿ ಬ್ಯಾಂಕಿನವರು ಅಥವಾ ನಿಮಗೆ ಸಾಲವನ್ನು ನೀಡಿರುವಂತಹ ಫೈನಾನ್ಸಿಯಲ್ ಸಂಸ್ಥೆಯವರು ಕಾನೂನು ಕಾರ್ಯಾಚರಣೆ ಮಾಡಬಹುದಾದಂತಹ ಸಾಧ್ಯತೆ ಕೂಡ ಇರುತ್ತದೆ. ಇಲ್ಲವಾದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಇದರಿಂದ ಭವಿಷ್ಯದಲ್ಲಿ ಸಾಲ ಸಿಗದೇ ಇರುವ ಸಾಧ್ಯತೆ ಕೂಡ ಇರುತ್ತದೆ.
EMI ಅಂದ್ರೆ ಸಾಲ ತೆಗೆದುಕೊಂಡ ನಂತರ ಅದನ್ನು ಪ್ರತಿ ತಿಂಗಳು ಮರುಪಾವತಿ ಮಾಡುವಂತಹ ಕಂತು ಎನ್ನುವುದಾಗಿ ಕನ್ನಡದಲ್ಲಿ ಭಾಷೆಯಲ್ಲಿ ಹೇಳಬಹುದಾಗಿದೆ. ಹಾಗಿದ್ರೆ ಬನ್ನಿ ಸಾಲವನ್ನು ಪಡೆದುಕೊಂಡ ನಂತರ EMI ಕಟ್ಟದೆ ಹೋದಲ್ಲಿ ಏನೆಲ್ಲಾ ಆಗುತ್ತದೆ ಎಂದು ತಿಳಿದುಕೊಳ್ಳೋಣ.
EMI ಕಟ್ಟದೆ ಹೋದ್ರೆ ಏನೆಲ್ಲಾ ಆಗುತ್ತೆ?
- ಪ್ರಮುಖವಾಗಿ ಬ್ಯಾಂಕ್ ಸಾಲ ಪಡೆದುಕೊಂಡಿರುವಂತಹ ವ್ಯಕ್ತಿ ಸಾಲವನ್ನು Loan EMI ರೂಪದಲ್ಲಿ ಮರುಪಾವತಿ ಮಾಡದೆ ಹೋದಲ್ಲಿ ನೋಟಿಸ್ ಕಳಿಸುತ್ತದೆ.
- ಕಳುಹಿಸಿರುವಂತಹ ನೋಟೀಸ್ ಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡದೆ ಹೋದಲ್ಲಿ ಅಥವಾ ಹಣವನ್ನು ಕಟ್ಟದೆ ಹೋದಲ್ಲಿ ಆತನನ್ನು ಡೀಫಾಲ್ಟರ್ ಎಂಬುದಾಗಿ ಘೋಷಿಸಲಾಗುತ್ತದೆ.
- ಲೋನ್ ಅನ್ನು ಬ್ಯಾಂಕ್ NPA ಎಂಬುದಾಗಿ ಘೋಷಿಸುತ್ತದೆ ಹಾಗೂ ಪ್ರಕರಣ ನ್ಯಾಯಾಲಯಕ್ಕೆ ತಲುಪುತ್ತದೆ.
- ಇದಾದ ನಂತರ ಸಾಲಕ್ಕೆ ಆಡಳಿತ ಇರುವಂತಹ ಪ್ರಾಪರ್ಟಿಯನ್ನು ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಗುತ್ತದೆ ಹಾಗೂ ಅದರಿಂದ ಬಂದಂತಹ ಹಣವನ್ನು ತನ್ನ ಸಾಲವನ್ನು ಸಮಗೊಳಿಸಲು ಬ್ಯಾಂಕ್ ಪಡೆದುಕೊಳ್ಳುತ್ತದೆ.
- ಒಂದು ವೇಳೆ ಮಾರಾಟ ಮಾಡಿದ ನಂತರ ಸಾಲವನ್ನು ತೀರಿಸಿದ ನಂತರ ಕೂಡ ಹಣ ಉಳಿದರೆ ಉಳಿದ ಹಣವನ್ನು ಸಾಲಗಾರನಿಗೆ ವಾಪಸ್ ನೀಡಲಾಗುತ್ತದೆ.
- ಒಂದು ವೇಳೆ ನ್ಯಾಯಾಲಯಕ್ಕೆ ಪ್ರಕರಣ ಹೋದ ಮೇಲೆ ಕೂಡ ಹಣ ಸರಿಯಾದ ರೀತಿಯಲ್ಲಿ ಚುಕ್ತಾ ಆಗದೆ ಹೋದಲ್ಲಿ ಆ ಸಂದರ್ಭದಲ್ಲಿ ಸಾಲಗಾರ ಜೈಲಿಗೆ ಹೋಗುವ ಸಾಧ್ಯತೆ ಕೂಡ ಇರುತ್ತೆ.
ಇದನ್ನು ಕೂಡ ಓದಿ: Personal Loan: ಟಾಟಾ ನಂತರ ಮಹಿಂದ್ರಾ ಸರದಿ- ಲೋನ್ ಕೊಡುತ್ತಿದೆ ಮಹಿಂದ್ರಾ ಫೈನಾನ್ಸ್. ಗ್ಯಾರಂಟಿ ಬೇಡ-6 ಲಕ್ಷ ಲೋನ್ ಅರ್ಜಿ ಹಾಕಿದರೆ ಸಿಗುತ್ತದೆ.
EMI ಕಟ್ಟದೆ ಹೋದಲ್ಲಿ ಕ್ರೆಡಿಟ್ ಸ್ಕೋರ್ ಏನಾಗುತ್ತೆ?
ಒಂದು ವೇಳೆ ನೀವು ಈ ರೀತಿ ಡೀಫಾಲ್ಟರ್ ಆದಲ್ಲಿ ನಿಮ್ಮ ಕ್ರೆಡಿಟ್ ರಿಪೋರ್ಟ್ ಅಥವಾ ಸಾಲವನ್ನು ಕಟ್ಟದೇ ಇರುವಂತಹ ರಿಪೋರ್ಟ್ ಅನ್ನು ಸಿಬಿಲ್ ಸ್ಕೋರ್ ಗೆ ರಿಪೋರ್ಟ್ ಮಾಡಲಾಗುತ್ತದೆ. ಹಾಗೂ ಇದು ನಕಾರಾತ್ಮಕ ಪರಿಣಾಮವನ್ನು ಬೀರಿರುತ್ತದೆ ಮಾತ್ರವಲ್ಲದೆ ಕೂಡಲೇ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಾಗುವುದಕ್ಕೆ ಕೂಡ ಕಾರಣವಾಗಿರುತ್ತದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಾಲ ಸೌಲಭ್ಯ ನಿಮಗೆ ದೊರಕುವುದು ಅಸಾಧ್ಯವಾಗಬಹುದಾಗಿದೆ. ಈ ರಿಪೋರ್ಟ್ ಕೇವಲ ಬ್ಯಾಂಕುಗಳಿಗೆ ಮಾತ್ರವಲ್ಲದೆ ಪ್ರತಿಯೊಂದು NBFC ಕಂಪನಿಗಳಲ್ಲಿ ಕೂಡ ನಿಮಗೆ ಸಾಲ ಸಿಗದಂತೆ ಮಾಡಬಹುದಾಗಿದೆ.
ಇದನ್ನು ಕೂಡ ಓದಿ: Instant Personal Loan: ದಿಡೀರ್ ಅಂತ ನಿಮಗೆ 3 ಲಕ್ಷ ಬೇಕು ಅಂದ್ರೆ ಅರ್ಜಿ ಹಾಕಿ ಲೋನ್ ಪಡೆಯಿರಿ, ಗಿರವಿ ಬೇಡ.
EMI ಕಟ್ಟದೆ ಹೋದಲ್ಲಿ ನಿಮ್ಮ ಗ್ಯಾರಂಟರ್ ಮೇಲೆ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತೆ?
ಇಲ್ಲಿ ಗ್ಯಾರೆಂಟರ್ ಅಂದ್ರೆ ನೀವು ಸಾಲ ಪಡೆದುಕೊಳ್ಳುವ ಸಂದರ್ಭದಲ್ಲಿ ನಾಮಿನಿಯಾಗಿ ಸಹಿ ಹಾಕಿದವರು ಎಂದರ್ಥ ಆಗಿದೆ. ಒಂದು ವೇಳೆ ನೀವು ಸರಿಯಾದ ಸಂದರ್ಭದಲ್ಲಿ Loan EMI ಹಣವನ್ನು ಪಾವತಿ ಮಾಡದೆ ಹೋದರೆ ಆ ಸಂದರ್ಭದಲ್ಲಿ ನಿಮ್ಮ cibil ಸ್ಕೋರ್ ಜೊತೆಗೆ ಅವರ ಸಿಬಿಲ್ ಸ್ಕೋರ್ ಕೂಡ ಕಡಿಮೆಯಾಗುತ್ತದೆ. ಸಾಲವನ್ನು ಕಟ್ಟಿದೆ ಹೋದಲ್ಲಿ ರಿಕವರಿ ಏಜೆಂಟ್ ಗಳು ಕೇವಲ ನಿಮಗೆ ಮಾತ್ರವಲ್ಲದೆ ಅವರಿಗೂ ಕೂಡ ಕರೆ ಮಾಡುತ್ತಾರೆ.
ಇಷ್ಟೆಲ್ಲ ನಡೆದ ನಂತರ ನೀವು Loan EMI ಕಟ್ಟದೆ ಹೋದಲ್ಲಿ ಬ್ಯಾಂಕ್ ಕೇವಲ ನಿಮ್ಮನ್ನು ಡೀಫಾಲ್ಟರ್ ಎಂಬುದಾಗಿ ಮಾತ್ರ ಘೋಷಿಸದೆ ನಿಮ್ಮ ಗ್ಯಾರೆಂಟರ್ ಅನ್ನು ಕೂಡ ಡೀ ಫಾಲ್ಟರ್ ಎಂಬುದಾಗಿ ಘೋಷಿಸುತ್ತದೆ. ಕೋರ್ಟ್ ಮೊದಲಿಗೆ ನಿಮ್ಮ ಆಸ್ತಿಯನ್ನು ಮಾರಾಟ ಮಾಡುವುದಕ್ಕೆ ಆದೇಶವನ್ನು ನೀಡುತ್ತದೆ ಹಾಗೂ ಆ ಸಂದರ್ಭದಲ್ಲಿ ಸಾಲದ ಮೊತ್ತ ಹಾಗೂ ಕೋರ್ಟಿನ ಖರ್ಚು ಭರ್ತಿಯಾದರೆ ನಿಮ್ಮ ಗ್ಯಾರೆಂಟರ್ ಬಚಾವಾಗುತ್ತಾರೆ. ಒಂದು ವೇಳೆ ಪೂರ್ತಿ ಖರ್ಚು, ವಸೂಲು ಆಗದೆ ಹೋದಲ್ಲಿ ನಿಮ್ಮ ಗ್ಯಾರೆಂಟರ್ ಆಸ್ತಿಯನ್ನು ಕೂಡ ಮಾರಾಟ ಮಾಡಬಹುದಾದ ಸಾಧ್ಯತೆ ಇರುತ್ತದೆ.
ಈ ಸಮಸ್ಯೆಗೆ ಪರಿಹಾರ
ನೀವು ಈ ಬ್ಯಾಂಕಿನವರಿಗೆ ಕರೆ ಮಾಡಿ ಯಾವ ಕಾರಣಕ್ಕಾಗಿ ನೀವು ಸಾಲವನ್ನು ಕಟ್ಟದೇ ಇರುವಂತಹ ಪರಿಸ್ಥಿತಿಗೆ ಬಂದಿದ್ದೀರಿ ಎನ್ನುವಂತಹ ಪರಿಸ್ಥಿತಿಯ ವಿವರಣೆಯನ್ನು ಮಾಡಬಹುದಾಗಿದೆ. ಇಬ್ಬರಿಗೂ ಸಮಾಧಾನ ತರುವಂತಹ ಒಂದು ನಿರ್ಧಾರಕ್ಕೆ ನೀವು ಬರಬಹುದಾಗಿದೆ.
ಬ್ಯಾಂಕಿನವರ ಜೊತೆಗೆ ಹೆಚ್ಚಿನ ಸಮಯವನ್ನು ನೀವು ಸಾಲ ಪಡೆದುಕೊಳ್ಳುವುದಕ್ಕೆ ಅವರನ್ನು ಒಪ್ಪಿಸಬಹುದಾಗಿದೆ. ಅಥವಾ ಕೆಲವೊಮ್ಮೆ ಈ ಸಾಲದ ಮೇಲಿನ ಕೆಲವೊಂದು ಶುಲ್ಕಗಳನ್ನು ಕಡಿಮೆ ಮಾಡುವ ಮೂಲಕ ಸಾಲದ ಮೊತ್ತ ಕೂಡ ಕಡಿಮೆಯಾಗುತ್ತದೆ ಅದನ್ನು ಕೂಡ ಮಾಡಿಸಬಹುದಾಗಿದೆ. ಇನ್ನು ಉಳಿದ ಹಣವನ್ನು ಇನ್ನಷ್ಟು ಹೆಚ್ಚಿನ ಅವಧಿಗೆ ವಿಸ್ತರಿಸಿ ಇನ್ನಷ್ಟು ಹೆಚ್ಚಿನ Loan EMI ಗಳ ಮೂಲಕ ಪಾವತಿ ಮಾಡುವಂತಹ ಪ್ರಯತ್ನವನ್ನು ನೀವು ಮಾಡಬಹುದಾಗಿದೆ.
ಲೋನ್ ಡೀಫಾಲ್ಟಾರ್ ಗೆ ಕಾನೂನಿನಲ್ಲಿ ಇರುವ ನಿಯಮ ಏನು?
ಇಲ್ಲಿ ಸಾಲಗಾರನ್ನು ಸಾಲವನ್ನು ಸರಿಯಾದ ಸಮಯದಲ್ಲಿ ನೀಡದೇ ಹೋದಲ್ಲಿ ಬ್ಯಾಂಕುಗಳಿಗೆ ಅವರ ಆಸ್ತಿಯನ್ನು ಜಪ್ತು ಮಾಡುವಂತಹ ಸಂಪೂರ್ಣ ಅವಕಾಶವನ್ನು ಕಾನೂನು ನೀಡುತ್ತದೆ ಯಾಕೆಂದರೆ ಅವರ ಹಣವನ್ನು ಅವರು ಈ ಮೂಲಕ ಪಡೆದುಕೊಳ್ಳಬಹುದಾಗಿದೆ.
ಇನ್ನು ಕೆಲವೊಮ್ಮೆ ಬ್ಯಾಂಕುಗಳು ಮುಳುಗಿ ಹೋದಾಗ ಲೋನ್ ಪಡೆದುಕೊಂಡಿರುವ ವ್ಯಕ್ತಿ ಏನು ಮಾಡಬಹುದು ಎಂಬುದಾಗಿ ಯೋಚನೆ ಮಾಡುತ್ತಿರುತ್ತಾರೆ. ಸರ್ಕಾರಿ ನಿಯಮಗಳ ಪ್ರಕಾರ ಒಂದು ವೇಳೆ ಆ ರೀತಿಯಲ್ಲಿ ಬ್ಯಾಂಕ್ ಮುಳುಗಿ ಹೋದರೆ ಅದರ ಲೋನ್ ಅನ್ನು ಬೇರೆ ಬ್ಯಾಂಕಿನ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಹೀಗಾಗಿ ಅಲ್ಲಿ ಲೋನ್ ಕಟ್ಟೋದನ್ನು ಮುಂದುವರಿಸಬೇಕಾಗಿರುತ್ತದೆ. ಇನ್ನು ಹೊಸ ಬ್ಯಾಂಕಿನ ಬಡ್ಡಿದರ ಹಾಗೂ ಪ್ರತಿ ತಿಂಗಳು ಕಂತನ್ನು ಕಟ್ಟುವಂತಹ ರೀತಿ ಹಳೆಯ ಬ್ಯಾಂಕಿಗಿಂತ ಬದಲಾಗಬಹುದಾಗಿದೆ.
ಯಾರು ಬ್ಯಾಂಕಿನಿಂದ ಬಚಾವ್ ಆಗಬಹುದು?
ಒಂದು ವೇಳೆ ನೀವು ಬ್ಯಾಂಕಿನಿಂದ ಹಸುರಕ್ಷಿತ ಅಂದರೆ ಪರ್ಸನಲ್ ಲೋನ್ ಅನ್ನು ಪಡೆದುಕೊಂಡಿದ್ದರೆ ಆ ಸಂದರ್ಭದಲ್ಲಿ ಬ್ಯಾಂಕಿನವರು ಏನು ಕೂಡ ಮಾಡುವ ಹಾಗಿರುವುದಿಲ್ಲ ಕೇವಲ ನಿಮ್ಮ ಕ್ರೆಡಿಟ್ ಸ್ಕೋರ್ ಮಾತ್ರ ಕಡಿಮೆಯಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಆ ರೀತಿಯ ಲೋನ್ ಪಡೆದುಕೊಳ್ಳಲು ಸಾಧ್ಯವಾಗದೇ ಇರುವಂತಹ ಪರಿಸ್ಥಿತಿ ಒದಗಿ ಬರಬಹುದು.