Personal Loan: ಲೋನ್ ಪೈಪೋಟಿಗೆ ಹೊಸ ಬ್ಯಾಂಕ್ ಎಂಟ್ರಿ- ಅಡಮಾನ, ಗ್ಯಾರಂಟಿ ಕೇಳದೆ ಲೋನ್ ಕೊಡ್ತಾರೆ.
With Bank of Baroda’s personal loans, you may reach your full financial potential. Learn about the conditions for obtaining a loan, including eligibility, interest rates, processing fees, and required documentation.
Personal Loan: ನಮಸ್ಕಾರ ಸ್ನೇಹಿತರೆ ನಾವು ಪ್ರತಿಯೊಬ್ಬರೂ ಕೂಡ ಬ್ಯಾಂಕಿಂಗ್ ವ್ಯವಸ್ಥೆಯ ಜೊತೆಗೆ ಲಿಂಕ್ ಆಗಿದ್ದೇವೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಿಕೊಳ್ಳಬಹುದಾಗಿದೆ. ಭಾರತದ ಅರ್ಥವ್ಯವಸ್ಥೆಯನ್ನು ಮೇಲೆತ್ತುವ ಕೆಲಸವನ್ನು ಯಾವುದೇ ಎರಡನೇ ಮಾತಿಲ್ಲದೆ ಬ್ಯಾಂಕಿಂಗ್ ವ್ಯವಸ್ಥೆಗಳು ಮಾಡುತ್ತಿವೆ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಇವತ್ತಿನ್ನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರೋದು ಪರ್ಸನಲ್ ಲೋನ್ ಬಗ್ಗೆ. ಭಾರತದ ದೊಡ್ಡ ಮಟ್ಟದ ಗ್ರಾಹಕ ಬಳಗವನ್ನು ಹೊಂದಿರುವಂತಹ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಬ್ಯಾಂಕ್ ಆಫ್ ಬರೋಡದಲ್ಲಿ(Bank Of Baroda) ಯಾವ ರೀತಿಯಲ್ಲಿ ಪರ್ಸನಲ್ ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು ಅನ್ನೋದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ.
Table of Contents
Bank Of Baroda ಇನ್ಸ್ಟಂಟ್ ಲೋನ್- BOB instant Loan
ಒಂದು ವೇಳೆ ನಿಮಗೆ ಯಾವುದೇ ರೀತಿಯ ಆರ್ಥಿಕ ಅವಶ್ಯಕತೆಗಳು ಇದ್ದಲ್ಲಿ ಯಾವುದೇ ಅನುಮಾನವಿಲ್ಲದೆ ನೀವು ಮನೆಯಲ್ಲಿ ಕುಳಿತುಕೊಂಡಲ್ಲೇ Bank of Baroda ಬ್ಯಾಂಕಿನ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು. ಹೀಗಾಗಿ ಇದನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳುವುದು ಎನ್ನುವ ಮಾಹಿತಿಯನ್ನು ನಿಮಗೆ ಇವತ್ತಿನ ಲೇಖನಿಯಲ್ಲಿ ನೀಡಲು ಹೊರಟಿದ್ದೇವೆ.
Bank of Baroda ದ ಲೋನ್ ಡಿಟೇಲ್ಸ್ ಗಳು- More details about BOB Personal Loan
- ಡಿಜಿಟಲ್ ಪರ್ಸನಲ್ ಲೋನ್ ಗಳು 50,000 ಗಳಿಂದ ಪ್ರಾರಂಭಿಸಿ 10 ಲಕ್ಷ ರೂಪಾಯಿಗಳವರೆಗೆ ಕೂಡ ಇರುತ್ತವೆ.
- ಬಡ್ಡಿದರ 11.75 ರಿಂದ ಪ್ರಾರಂಭಿಸಿ 17.10 ಪ್ರತಿಶತದ ವರೆಗೆ ವಿಧಿಸಲಾಗುತ್ತದೆ.
- ಲೋನ್ ಹಣವನ್ನು ಮರುಪಾವತಿ ಮಾಡುವುದಕ್ಕೆ 12 ರಿಂದ 60 ತಿಂಗಳುಗಳ ಸಮಯಾವಕಾಶವನ್ನು ನೀಡಲಾಗುತ್ತದೆ.
- ಸಾವಿರ ರೂಪಾಯಿಗಳ ಪ್ರೋಸೆಸಿಂಗ್ ಪೀಸ್ ಇರಬಹುದು ಹಾಗೂ ಹತ್ತು ಸಾವಿರ ರೂಪಾಯಿಗಳ ಸ್ಟ್ಯಾಂಪ್ ಡ್ಯೂಟಿ ಅನ್ನುಕೂಡ ನೀವು ಇದರಲ್ಲಿ ಕಾಣಬಹುದಾಗಿದೆ.
- ದಿನದ 24 ಗಂಟೆಗಳಲ್ಲಿ ಹಾಗೂ ವಾರದ ಏಳು ದಿನಗಳಲ್ಲಿ ಕೂಡ ನೀವು ಡಿಜಿಟಲ್ ಪರ್ಸನಲ್ ಲೋನ್ ಗೆ ಅಪ್ಲೈ ಮಾಡಬಹುದಾಗಿದೆ.
ಇದನ್ನು ಕೂಡ ಓದಿ: Personal Loan: ಟಾಟಾ ನಂತರ ಮಹಿಂದ್ರಾ ಸರದಿ- ಲೋನ್ ಕೊಡುತ್ತಿದೆ ಮಹಿಂದ್ರಾ ಫೈನಾನ್ಸ್. ಗ್ಯಾರಂಟಿ ಬೇಡ-6 ಲಕ್ಷ ಲೋನ್ ಅರ್ಜಿ ಹಾಕಿದರೆ ಸಿಗುತ್ತದೆ.
Bank of Baroda ನಲ್ಲಿ ಇನ್ಸ್ಟಂಟ್ ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು- Documents required to get Personal Loan
- ವ್ಯಾಲಿಡ್ ಆಗಿರುವ ಫೋನ್ ನಂಬರ್ ಇರಬೇಕು ಹಾಗೂ ಅದು ಆಧಾರ್ ಕಾರ್ಡ್ ಗೆ ಕನೆಕ್ಟ್ ಆಗಿರಬೇಕು.
- ವ್ಯಾಲಿಡ್ ಆಗಿರುವಂತಹ ಪಾನ್ ಕಾರ್ಡ್ ಕೂಡ ಇರಬೇಕು.
- ನೆಟ್ ಬ್ಯಾಂಕಿಂಗ್ ಹಾಗೂ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟನ್ನು ಕೂಡ ನೀಡಬೇಕಾಗಿರುತ್ತದೆ.
- ಕಳೆದ ಎರಡು ವರ್ಷಗಳ ಡಿಜಿಟಲ್ ಐಟಿಆರ್ ಫೈಲಿಂಗ್ ಡಾಕ್ಯೂಮೆಂಟ್ಸ್ ಬೇಕಾಗಿರುತ್ತದೆ.
- ಕೊನೆಯ ಒಂದು ವರ್ಷಗಳ GST ರಿಟರ್ನ್ ಅನ್ನು ಕೂಡ ಇಲ್ಲಿ ನೀಡಬೇಕಾಗಿರುತ್ತದೆ.
ಯಾವ ರೀತಿಯಲ್ಲಿ ಲೋನ್ ಗೆ ಅಪ್ಲೈ ಮಾಡೋದು – ಹಂತಗಳು- How to Apply for a personal Loan
- ಮೊದಲಿಗೆ ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ಹೋಗಬೇಕು.
- ಇಲ್ಲಿ ನಿಮಗೆ ಲೋನ್ ಆಪ್ಷನ್ ಕ್ಲಿಕ್ ಮಾಡಬೇಕಾಗಿರುತ್ತದೆ. ಲೋನಿನ ಬಗ್ಗೆ ಇಲ್ಲಿ ಮಾಹಿತಿಯನ್ನು ಕೂಡ ನೀಡಲಾಗಿರುತ್ತದೆ ಅದನ್ನು ಸರಿಯಾಗಿ ಓದಬೇಕು.
- Proceed ಬಟನ್ ಅನ್ನು ಒತ್ತುತ್ತಿದ್ದಂತೆ ಹೊಸ ಪೇಜ್ ಓಪನ್ ಆಗುತ್ತದೆ ಹಾಗೂ ಅಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಮೊದಲಿಗೆ ಭರ್ತಿ ಮಾಡಬೇಕು.
- ಈಗ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಸಬ್ಮಿಟ್ ಮಾಡಿ ಹೊಸ ಪೇಜ್ ಗೆ ಹೋಗಬೇಕು.
- ನಿಮ್ಮ ಲೋನ್ ಹಣಕ್ಕೆ ಸಂಬಂಧಪಟ್ಟಂತಹ ವಿವರಗಳನ್ನು ಇದರಲ್ಲಿ ತುಂಬಬೇಕಾಗಿರುತ್ತದೆ.
- ನಂತರ ಲೋನ್ ಅರ್ಜಿ ಫಾರ್ಮ್ ನಿಮ್ಮ ಮುಂದೆ ಬರುತ್ತದೆ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ವಿವರಗಳನ್ನು ಹಾಗೂ ಡಾಕ್ಯುಮೆಂಟ್ ಗಳನ್ನು ಎಲ್ಲ ರೀತಿಯಲ್ಲಿ ಒದಗಿಸಬೇಕಾಗುತ್ತದೆ.
- ಯಾವುದಕ್ಕೂ ಒಮ್ಮೆ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ಪರೀಕ್ಷಿಸುವುದು ಒಳ್ಳೆಯದು. ಇದಾದ ನಂತರ ನೀವು ನಿಮ್ಮ ಅರ್ಜಿ ಫಾರ್ಮ್ ಅನ್ನು ಸಬ್ಮಿಟ್ ಮಾಡಬೇಕು.
- ಇದರ ನಂತರ ನೀವು ಲೋನ್ ಗೆ ಅರ್ಹರಾಗಿದ್ದರೆ ಎನ್ನುವ ಅರ್ಜಿ ಸ್ವೀಕೃತಿ ನಿಮಗೆ ಬರುತ್ತದೆ. ಇದನ್ನು ಪ್ರಿಂಟ್ ಔಟ್ ಮಾಡಿಟ್ಟುಕೊಳ್ಳುವುದು ಒಳ್ಳೆಯದು, ಭವಿಷ್ಯದಲ್ಲಿ ನಿಮಗೆ ಬೇಕಾಗಬಹುದು.
- ನಂತರ ಬ್ಯಾಂಕ್ ಸಿಬ್ಬಂದಿಗಳು ನಿಮ್ಮ ಖಾತೆಗೆ ನೇರವಾಗಿ ನೀವು ಅರ್ಜಿ ಸಲ್ಲಿಸಿರುವಂತಹ ಲೋನ್ ಹಣವನ್ನು ವರ್ಗಾವಣೆ ಮಾಡುತ್ತಾರೆ.