Modi: ಮೋದಿಯಿಂದ ಬಂತು ಖಡಕ್ ಆದೇಶ- ಉದಯ್ ನಿಧಿಗೆ ಮತ್ತಷ್ಟು ಸಂಕಷ್ಟ. ಅಮಿತ್ ಷ ಫುಲ್ ಗರಂ.

Narendra Modi reacts about udhayanidhi stalin statement: ಮೋದಿಯಿಂದ ಬಂತು ಖಡಕ್ ಆದೇಶ- ಉದಯ್ ನಿಧಿಗೆ ಮತ್ತಷ್ಟು ಸಂಕಷ್ಟ. ಅಮಿತ್ ಷ ಫುಲ್ ಗರಂ.

Modi reacts about udhayanidhi stalin statement: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ರವರ ಮಗ ಉದಯ ನಿಧಿ ಸ್ಟಾಲಿನ್ ರವರು ಕೆಲವೊಂದು ಸಮುದಾಯಗಳನ್ನು ಹೋಲಿಸುವ ಸಲುವಾಗಿ ನೇರವಾಗಿ ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಇದೀಗ ಇಡೀ ದೇಶದಲ್ಲಿ ಸದ್ದು ಮಾಡುತ್ತಿದ್ದು ಹಲವಾರು ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಹಾಗೂ ಎಂದಿನಂತೆ ಕೆಲವು ನಟರು ಹಾಗೂ ಕರ್ನಾಟಕದ ರಾಜಕಾರಣಿಗಳು ಸೇರಿದಂತೆ ಹಲವಾರು ಜನ ಉದಯ ನಿಧಿ ಸ್ಟಾಲಿನ್ ರವರ ಹೇಳಿಕೆಯ ಬೆಂಬಲಕ್ಕೆ ನಿಂತಿದ್ದಾರೆ.

Narendra Modi reacts about udhayanidhi stalin statement

ಪ್ರಗತಿಪರರು ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಉದಯ ನಿಧಿರವರು ಕೆಲವು ವಿಷಯಗಳನ್ನು ವಿರೋಧ ಮಾಡಲು ಸಾಧ್ಯವಾಗುವುದಿಲ್ಲ ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯೂ, ಮಲೇರಿಯಾ, ಕರೋನ ವೈರಸ್ ಹಾಗೂ ಸೊಳ್ಳೆಯನ್ನು ವಿರೋಧ ಮಾಡಲು ಸಾಧ್ಯವಿಲ್ಲ ಬದಲಾಗಿ ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ನಾವು ಸನಾತನವನ್ನು ನಿರ್ಮೂಲನೆ ಮಾಡಬೇಕು, ಹೌದು ಸನಾತನ ಧರ್ಮವನ್ನು ವಿರೋಧಿಸುವ ಬದಲು ನಾವು ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆ ನೀಡಿದರು.

ಈ ಹೇಳಿಕೆ ನೀಡಿದ ಕೆಲವೇ ಕೆಲವು ಕ್ಷಣಗಳಲ್ಲಿ ದೇಶದ ಎಲ್ಲೆಡೆ ಈ ಹೇಳಿಕೆಯ ಕುರಿತು ವಿರೋಧ ವ್ಯಕ್ತವಾಗಿತ್ತು, ಅದರಂತೆ ಸದಾ ದೇಶ ಹಾಗೂ ಹಿಂದೂ ಧರ್ಮದ ವಿರುದ್ಧ ಮಾತನಾಡುವ ಹಲವಾರು ನಟರು ಉದಯ ನಿದಿರವರ ಹೇಳಿಕೆಯನ್ನು ಬೆಂಬಲಿಸಿದ್ದರು. ಇದಾದ ಬಳಿಕ ದೇಶದಲ್ಲಿ ಹಲವಾರು ಬೆಳವಣಿಗೆಗಳು ನಡೆದಿದ್ದು ಬಿಜೆಪಿ ಪಕ್ಷದ ಎಲ್ಲಾ ನಾಯಕರು ಈ ಹೇಳಿಕೆಯ ವಿರುದ್ಧ ತಿರುಗಿ ಬಿದ್ದಿದ್ದರು. ಅಷ್ಟೇ ಅಲ್ಲದೆ ಹಲವಾರು ಜನರು ಬಿಜೆಪಿ ಪಕ್ಷವನ್ನು ಹೊರತುಪಡಿಸಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಉದಯ ನಿಧಿರವರು ಮಾಡಿರುವುದು ಅಕ್ಷರ ಸಹ ತಪ್ಪು ಎಂದು ವಾದ ಮಾಡಿದ್ದರು.

ಅಷ್ಟೇ ಅಲ್ಲದೆ ಉದಯ ನಿಧಿ ಸ್ಟಾಲಿನ್ ರವರ ಬಹುತೇಕ ಶೇರ್ ಗಳು ಸನ್ ನೆಟ್ವರ್ಕ್ ನಲ್ಲಿ ಇದೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ಇನ್ನು ಮುಂದೆ ಸನ್ ನೆಟ್ವರ್ಕ್ ಡಿಶ್ ಬಾಕ್ಸ್ ಅನ್ನು ಬಳಸುವುದಿಲ್ಲ ಎಂಬ ಅಭಿಯಾನ ಕೂಡ ಆರಂಭವಾಗಿತ್ತು. ಇದಾದ ಬಳಿಕ ಶೇರು ಮಾರುಕಟ್ಟೆಯಲ್ಲಿ ಕೂಡ ಕಂಪೆನಿಯ ಷೇರು ಮೇಲೆ ಕೆಳಗೆ ಹೋಗುತ್ತಿದ್ದು ಏನಾಗುತ್ತದೆ ಎಂಬ ಸ್ಪಷ್ಟ ಚಿತ್ರಣ ಇನ್ನು ತಿಳಿದು ಬಂದಿಲ್ಲ, ಇದೇ ಸಮಯದಲ್ಲಿ ಮೊಟ್ಟಮೊದಲ ಬಾರಿಗೆ ಈ ರೀತಿಯ ಹೇಳಿಕೆಗೆ ಇದೇ ಮೊದಲ ಬಾರಿಗೆ ಸ್ಪಂದಿಸಿರುವ ದೇಶದ ಪ್ರಧಾನಿಗಳಾಗಿರುವ ನರೇಂದ್ರ ಮೋದಿ (Narendra Modi) ರವರು ಉದಯನಿದಿರವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಬಿಜೆಪಿ ಸಚಿವರಿಗೆ ಹೊಸದೊಂದು ಆದೇಶ ಹೊರಡಿಸಿದ್ದಾರೆ.

ಒಂದು ಹೊತ್ತಿನ ಊಟದ ಖರ್ಚಿನಲ್ಲಿ 10 ಲಕ್ಷ ರೂಪಾಯಿ ವಿಮೆ. ನಿಮ್ಮ ಕುಟುಂಬಕ್ಕೆ ಶ್ರೀ ರಕ್ಷೆ. ಪಡೆಯುವ ಸಂಪೂರ್ಣ ವಿವರ. –> Insurance Policy
ನಿಮ್ಮ ಜಮೀನಿನಲ್ಲಿ ಉಚಿತ ಬೋರ್ವೆಲ್ ಪಡೆಯುವ ಯೋಜನೆ – ಅರ್ಜಿ ಸಲ್ಲಿಸಿ ಬೋರ್ವೆಲ್ ಗೆ ಹಣ ಪಡೆಯಿರಿ. –> Karnataka Ganga Kalyana Scheme 2023

ಹೌದು ಸ್ನೇಹಿತರೆ ಸಾಮಾನ್ಯವಾಗಿ ನರೇಂದ್ರ ಮೋದಿ (Narendra Modi) ಇರುವವರು ಈ ರೀತಿಯ ಹೇಳಿಕೆಗಳಿಗೆ ಅದರಲ್ಲೂ ಪ್ರಗತಿಪರ ಸಮಾವೇಶದಲ್ಲಿ ನಡೆಯುವ ಚರ್ಚೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಇದೇ ಮೊದಲ ಬಾರಿಗೆ ಈ ರೀತಿಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನರೇಂದ್ರ ಮೋದಿ ರವರು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಡಿಎಂಕೆ ನಾಯಕನಿಗೆ ತಕ್ಕ ಉತ್ತರ ನೀಡುವಂತೆ ಸೂಚಿಸಿದ್ದಾರೆ, ಉದಯ ನಿಧಿ ಸ್ಟಾಲಿನ್ ರವರ ಹೇಳಿಕೆಗೆ ಪ್ರತಿಯೊಬ್ಬರು ತಕ್ಕ ಪ್ರತಿಕ್ರಿಯೆ ನೀಡುವ ಅಗತ್ಯವಿದೆ ಆದಕಾರಣ ಎಲ್ಲರೂ ತಕ್ಕ ಉತ್ತರವನ್ನು ನೀಡಿ ಎಂಬ ಮಾತನ್ನು ಮೋದಿ ಖಡಕ್ಕಾಗಿಯೇ ಹೇಳಿದ್ದಾರೆ. ಇನ್ನು ಇದೇ ಸಮಯದಲ್ಲಿ ಮಾತನಾಡಿರುವ ಅಮಿತ್ ಶಾ ರವರು ಮತ ಬ್ಯಾಂಕ್ ಹಾಗೂ ತುಷ್ಟಿಕರಣ ರಾಜಕೀಯ ಮಾಡಲು ಸನಾತನ ಧರ್ಮವನ್ನು ಉದಯ ನಿಧಿರವರು ಅವಮಾನಿಸಿದ್ದಾರೆ ಎಂದು ನೇರ ಮಾತುಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.