Gruhalakshmi: ಅತಿ ಸುಲಭವಾಗಿ, ಮೊಬೈಲ್ ಅಥವಾ ಕಂಪ್ಯೂಟರ್ ಎಲ್ಲಿಂದ ಬೇಕಾದರೂ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

Gruhalakshmi: ಅತಿ ಸುಲಭವಾಗಿ, ಮೊಬೈಲ್ ಅಥವಾ ಕಂಪ್ಯೂಟರ್ ಎಲ್ಲಿಂದ ಬೇಕಾದರೂ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

Gruhalakshmi– how-to-apply-Gruhalakshmi-scheme-karnataka: ಸ್ನೇಹಿತರೆ, ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಚಾರದ ವೇಳೆ ತಾವೇನಾದರೂ ಅಧಿಕಾರಕ್ಕೆ ಬಂದಲ್ಲಿ 5 ಗ್ಯಾರಂಟಿಗಳನ್ನು ಜನರಿಗಾಗಿ ಜಾರಿಗೆ ತರುತ್ತೇವೆ ಎಂಬ ಹೇಳಿಕೆ ನೀಡಿದ್ದರು. ಅದರಂತೆ ಕಾಂಗ್ರೆಸ್ ಪಕ್ಷವು ಬಹುಮತಗಳಿಂದ ಗೆದ್ದು ಕರ್ನಾಟಕ ಸರ್ಕಾರದ ಆಡಳಿತವನ್ನು ತಮ್ಮ ತೆಕ್ಕಕ್ಕೆ ಪಡೆದುಕೊಂಡಿದ್ದು, ಇದರ ಬೆನ್ನೆಲೆ ಹೇಳಿದಂತೆ ಗ್ಯಾರೆಂಟಿಗಳನ್ನು ಜಾರಿಗೆ ತರಲು ಪ್ರಾರಂಭ ಮಾಡಿದ್ದಾರೆ, ಆದರೆ ಬಾರಿ ಷರತ್ತು ಗಳನ್ನೂ ವಿಧಿಸಿ, ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ಜೂನ್ 11ನೇ ತಾರೀಖಿನಿಂದ ಮಹಿಳೆಯರಿಗಾಗಿ ಉಚಿತ ಬಸ್ (Smart Shakti card) ಪ್ರಯಾಣವನ್ನು ಪ್ರಾರಂಭ ಮಾಡಿದರು. ಇದೀಗ ಗೃಹಲಕ್ಷ್ಮಿ ಯೋಜನೆಯ ಸರದಿ. ಪ್ರತಿ ಮನೆಯ ಯಜಮಾನಿಗು ಮಾಸಿಕವಾಗಿ ಬರೋಬ್ಬರಿ ಎರಡು ಸಾವಿರ ರೂಪಾಯಿ ಹಣವನ್ನು ನೀಡುತ್ತೇವೆ ಎಂದು ಸರ್ಕಾರ ಘೋಷಿಸಿತ್ತು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅದನ್ನು ಜಾರಿಗೆ ತರಿಸಲಿದ್ದಾರೆ ಹೀಗಿರುವಾಗ ಮನೆಯಲ್ಲಿ ಕುಳಿತು ಆನ್ಲೈನ್ ವೆಬ್ಸೈಟ್ಗಳ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಎಂಬುದನ್ನು ತಿಳಿಸ ಹೊರಟಿದ್ದೇವೆ. (Gruhalakshmi)

ಹೀಗಾಗಿ ತಪ್ಪದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಹಾಗೂ ಈ ಕುರಿತು ಎಲ್ಲ ಸಂಕ್ಷಿಪ್ತ ವಿಚಾರವನ್ನು ತಿಳಿದುಕೊಳ್ಳಿ. ಹೌದು ಗೆಳೆಯರೇ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಲಿರುವ ಐದು ಯೋಜನೆ ಪೈಕಿ ಗೃಹಲಕ್ಷ್ಮಿ ಯೋಜನೆಗಾಗಿ ಮಹಿಳೆಯರು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಜೂನ್ 15ರಿಂದ ಜುಲೈ 15ರವರೆಗೂ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಹೊರಹಾಕಿದ್ದು, ಕೆಲ ಷರತ್ತುಗಳನ್ನು ಅನುಸರಿಸಿ ಅಧಿಕೃತ ವೆಬ್ಸೈಟ್ ಮೂಲಕ ಈ ಒಂದು ಯೋಜನೆಗೆ ಮಹಿಳೆಯರು ನಮೂದಿಸಬಹುದಾಗಿದೆ. ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಪಡೆಯುವುದು ಹೇಗೆ ಗೊತ್ತೇ? ಸುಲಭದ ದಾರಿ ಯಾವುದು ಗೊತ್ತೇ?

ಈ ಗೃಹಲಕ್ಷ್ಮಿ ಯೋಜನೆಯನ್ನು ಕರ್ನಾಟಕ ಸರ್ಕಾರ ಪ್ರಾರಂಭಿಸಿದ್ದು, ಇದರ ಅನುಷ್ಠಾನ ದಿನಾಂಕ ಜೂನ್ 15, 2023 ನೀವು ಮನೆಯ ಯಜಮಾನಿಯಾಗಿದ್ದಲ್ಲಿ (Gruhalakshmi) ಜೂನ್ 15ರಿಂದ ಅರ್ಜಿ ಸಲ್ಲಿಸಲು ಪ್ರಾರಂಭ ಮಾಡಬಹುದಾಗಿದೆ. ಈ ಪ್ರಕ್ರಿಯೆಯು ಆನ್ಲೈನ್ನಲ್ಲಿ ನಡೆಯಲಿದ್ದು, ಅಧಿಕೃತ ವೆಬ್ಸೈಟ್ ಆಗಿರುವ https://sevasindhu.karnataka.gov.in/ ಮೂಲಕ ಮಹಿಳೆಯರು ಕೆಲ ID ಪ್ರೂಫ್ ನೀಡಿ ಯೋಜನೆಗೆ ಸೇರ್ಪಡೆಗೊಳ್ಳಬಹುದು. ಈ ಒಂದು ಯೋಜನೆಯ ಮುಖ್ಯ ಉದ್ದೇಶ ಕುಟುಂಬದ ಮಹಿಳೆಗೆ 2,000 ರೂ ಮಾಸಿಕ ಹಣವನ್ನು ನೀಡುವುದಾಗಿದೆ. (Gruhalakshmi)

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ :

Step 1: ಸೇವಾ ಸಿಂಧು ಅಧಿಕೃತ ವೆಬ್ಸೈಟ್ಗೆ ಈ ಕೆಳಗಿನ ಲಿಂಕ್ ಮೂಲಕ ಭೇಟಿ ನೀಡಿ (http://sevasindhu.karnataka.gov.in/)
Step 2: ಗೃಹಲಕ್ಷ್ಮಿ ಸ್ಕೀಮ್ ಟ್ಯಾಬ್ ಅಡಿಯಲ್ಲಿ ಸೇವೆಗಳಿಗಾಗಿ ಅರ್ಜಿ ಆಯ್ಕೆಯನ್ನು ಆಯ್ಕೆ ಮಾಡಿ.
Step 3 ನಿಮ್ಮ ಹೆಸರು, ವಿಳಾಸ, ಸಂಪರ್ಕ ವಿವರಗಳು, ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ವಿವರಗಳು ಮತ್ತು ಇತ್ಯಾದಿಗಳನ್ನು ಬಳಸಿಕೊಂಡು ವೆಬ್ಸೈಟಿಗೆ ನೊಂದಾಯಿಸಿ ಮತ್ತು ಲಾಗಿನ್ ಮಾಡಿ.
Step 4: ಲಾಗಿನ್ ಆದ ನಂತರ ನೋಂದಣಿ ಆಯ್ಕೆ ಮಾಡಿ, ಡಾಕ್ಯುಮೆಂಟ್ ಅನ್ನು ಈ ವಿಭಾಗದಲ್ಲಿ ಅಪ್ಲೋಡ್ ಮಾಡಬೇಕು.
Step5: ನೊಂದಣಿ ಫಾರ್ಮ್ನಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
Step 6: ಸ್ಕೀಮ್ ಗೆ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಡಾಕ್ಯುಮೆಂಟ್ಗಳನ್ನು ಆನ್ಲೈನ್ ಮೂಲಕವೇ ಅಪ್ಲೋಡ್ ಮಾಡಬೇಕು.
Step 7: ಆನಂತರ ‘ಸಲ್ಲಿಸು’ ಅಥವಾ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಗಮನಿಸಿ.
Step 8: ವೆಬ್ಸೈಟ್ ಮೂಲಕ ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ನೀವು ಮೇಲ್ವಿಚಾರಣೆ ಮಾಡಬಹುದು. ಇದನ್ನು ಓದಿ: ಬ್ರೇಕ್ ಇಲ್ಲದೆ ಲಾರಿಯಂತೆ ಮುನ್ನುಗ್ಗುತ್ತಿರುವ ಈಶ್ವರ್- ಚಿಕ್ಕ ಬಳ್ಳಾಪುರಕ್ಕೆ ಮಾತ್ರ ಮತ್ತೊಂದು 6 ನೇ ಗ್ಯಾರಂಟಿ. ಈ ಬಾರಿ ಏನಂತೆ ಗೊತ್ತೇ? ತಿಳಿದರೇ…