ಆಸ್ಪತ್ರೆಗಳಿಗೆ ಚೆಕ್ : ಮಧ್ಯಮ ವರ್ಗದವರಿಗೆ ಐತಿಹಾಸಿಕ ಘೋಷಣೆ ಮಾಡಲು ಸಿದ್ಧವಾದ ನರೇಂದ್ರ ಮೋದಿ: ಮತ್ತೊಂದು ಕಠಿಣ ಹೆಜ್ಜೆಯತ್ತ ಭಾರತ ಏನು ಗೊತ್ತೇ?

ಆಸ್ಪತ್ರೆಗಳಿಗೆ ಚೆಕ್ : ಮಧ್ಯಮ ವರ್ಗದವರಿಗೆ ಐತಿಹಾಸಿಕ ಘೋಷಣೆ ಮಾಡಲು ಸಿದ್ಧವಾದ ನರೇಂದ್ರ ಮೋದಿ: ಮತ್ತೊಂದು ಕಠಿಣ ಹೆಜ್ಜೆಯತ್ತ ಭಾರತ ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಆಸ್ಪತ್ರೆಗಳು ಹೇಗೆ ಕಾರ್ಯನಿರ್ವಹಣೆ ಮಾಡುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ, ಇದನ್ನು ನಾನು ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಎನಿಸುತ್ತದೆ. ಯಾಕೆಂದರೆ ಬಡತನ ರೇಖೆಗಿಂತ ಕೆಳಗಿರುವವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಕನಸಿನ ಮಾತು ಎಂಬ ಕಾಲ ಇತ್ತು. ಆದರೆ ಇಂದಿನ ಯುಗದಲ್ಲಿ ಮಧ್ಯಮ ವರ್ಗದವರಿಗೂ ಕೂಡ ಖಾಸಗಿ ಆಸ್ಪತ್ರೆಗಳು ಕೈಗೆ ಸಿಗುವುದಿಲ್ಲ, ಅಷ್ಟೇ ಯಾಕೆ ಮಧ್ಯಮ ವರ್ಗದವರಿಗಿಂತ ಕೊಂಚ ಆರ್ಥಿಕ ಪರಿಸ್ಥಿತಿ ಸದೃಢವಾಗಿರುವವರಿಗೂ ಕೂಡ ಖಾಸಗಿ ಆಸ್ಪತ್ರೆಗಳು ಎಂದರೆ ಭಯ ಶುರುವಾಗುತ್ತದೆ. ಲಕ್ಷ ಲಕ್ಷ ನೀಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಅಷ್ಟು ಸುಲಭದ ಮಾತಲ್ಲ.

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ್ದ ನರೇಂದ್ರ ಮೋದಿಯವರು ಕಳೆದ ಕೆಲವು ವರ್ಷಗಳ ಹಿಂದೆ ಆಯುಷ್ಮಾನ್ ಯೋಜನೆ ಎಂಬ ಮಹತ್ವಕಾಂಕ್ಷಿ ಯೋಜನೆಗೆ ಮೂಲಕ ದೇಶದಲ್ಲಿರುವ ಬಡವರಿಗೆ ಪ್ರತಿ ವರ್ಷ 5 ಲಕ್ಷ ವೆಚ್ಚದಂತೆ ಉಚಿತ ಚಿಕಿತ್ಸೆ ನೀಡಲು ಈ ಯೋಜನೆಯನ್ನು ಜಾರಿಗೆ ತಂದಿದ್ದರು. ಇದರಿಂದ ಸರಿ ಸುಮಾರು 10 ಕೋಟಿ ಜನರಿಗೆ ಸಹಾಯವಾಗಿತ್ತು, ಆದರೆ ಇದೀಗ ನರೇಂದ್ರ ಮೋದಿ ಅವರು ಮತ್ತೊಂದು ಹೆಜ್ಜೆ ಇಡಲು ಮುಂದಾಗಿದ್ದಾರೆ, ಈ ಯೋಜನೆ ಜಾರಿಗೊಳಿಸಿದ ದಿನ ನಿಜಕ್ಕೂ ಭಾರತದಲ್ಲಿ ಮಧ್ಯಮ ವರ್ಗದವರಿಗೆ ಐತಿಹಾಸಿಕ ದಿನ ವಾಗಲಿದೆ.

ಹೌದು ಸ್ನೇಹಿತರೇ ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಆಯುಷ್ಮಾನ್ ಯೋಜನೆಯಲ್ಲಿ ಮತ್ತೊಂದು ಹಂತವನ್ನು ಬಿಡುಗಡೆ ಮಾಡಲು ನರೇಂದ್ರ ಮೋದಿ ಅವರ ಸರ್ಕಾರ ಸಿದ್ಧವಾಗಿದ್ದು, ಆಯುಷ್ಮಾನ್ ಯೋಜನೆ 2.0 ಎಂಬ ಹೆಸರಿನ ಅಡಿಯಲ್ಲಿ ಭಾರತದಲ್ಲಿ ಮಾಧ್ಯಮ ವರ್ಗ ದಲ್ಲಿ ಕಂಡು ಬರುವ 40 ಕೋಟಿಗೂ ಹೆಚ್ಚು ಜನರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ವರ್ಷಕ್ಕೆ 5 ಲಕ್ಷಗಳ ವಿಮೆಯನ್ನು ನೀಡಲು ನರೇಂದ್ರ ಮೋದಿ ಅವರ ಸರ್ಕಾರ ಮುಂದಾಗಿದೆ, ಒಂದು ವೇಳೆ ಇದೇ ನೆಡದಲ್ಲಿ ಮಧ್ಯಮ ವರ್ಗದವರು ಕೂಡ ಸರ್ಕಾರಿ ಆಸ್ಪತ್ರೆಗಳ ಜೊತೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.