Election 2023:ಬಿಜೆಪಿ ಅದೊಂದು ಕೆಲಸ ಮಾಡಿದರೆ, ವರುಣ ಕ್ಷೇತ್ರದಲ್ಲಿ ಸಿದ್ದು ಗೆ ಸೋಲು ಫಿಕ್ಸ್ ಆಗುತ್ತಾ?? ಮಾಡಬೇಕಾದ ಗಟ್ಟಿ ನಿರ್ಧಾರ ಏನು ಗೊತ್ತೆ??
ಬಿಜೆಪಿ ಅದೊಂದು ಕೆಲಸ ಮಾಡಿದರೆ, ವರುಣ ಕ್ಷೇತ್ರದಲ್ಲಿ ಸಿದ್ದು ಗೆ ಸೋಲು ಫಿಕ್ಸ್ ಆಗುತ್ತಾ?? ಮಾಡಬೇಕಾದ ಗಟ್ಟಿ ನಿರ್ಧಾರ ಏನು ಗೊತ್ತೆ??
Election 2023: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸಿದ್ದರಾಮಯ್ಯರವರು ಬಹಳ ಅಳೆದು ತೂಗಿ ಕೋಲಾರದಲ್ಲಿ ಸೋಲು ಖಚಿತವಾಗುತ್ತಿದ್ದಂತೆ ಮತ್ತೆ ಮರಳಿ ತವರಿಗೆ ಎಂಬಂತೆ ತನ್ನ ಮಗನ ಸ್ಥಾನವನ್ನು ವಾಪಸ್ ಪಡೆದುಕೊಂಡು ವರುಣ ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದಾರೆ. ವರುಣ ಕ್ಷೇತ್ರಕ್ಕೆ ಯಾವುದೇ ಕಾರಣಕ್ಕೂ ಹೋಗುವುದಿಲ್ಲ ಅಲ್ಲಿ ನಾನು ಹೋದರೆ ಮಗ ಬೇರೆ ಕಡೆ ಸ್ಪರ್ಧೆ ಮಾಡುವುದಿಲ್ಲ ಎಂದು ಮಗನ ರಾಜಕೀಯ ಭವಿಷ್ಯ ದೃಷ್ಟಿಯಿಂದ ವರುಣ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದು ಸಿದ್ದರಾಮಯ್ಯರವರು ಅನೇಕ ಬಾರಿ ಹೇಳಿದ್ದರು.
ಆದರೆ ಬೇರೆ ವಿಧಿ ಇಲ್ಲದೆ ಇನ್ಯಾವುದೇ ಕ್ಷೇತ್ರಗಳಲ್ಲಿ ಸೇಫ್ ಇರದ ಕಾರಣ ಸಿದ್ದರಾಮಯ್ಯರವರು ಇದೀಗ ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಒಪ್ಪಿಕೊಂಡಿದ್ದಾರೆ. ಅದರಂತೆ ಹೈಕಮಾಂಡ್ ಬಿಡುಗಡೆ ಮಾಡಿದ ಮೊದಲನೇ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರಿಗೆ ವರುಣ ಕ್ಷೇತ್ರದ ಟಿಕೆಟ್ ಅನ್ನು ಘೋಷಣೆ ಮಾಡಲಾಗಿದೆ. ಈ ಸಮಯದಲ್ಲಿ ವರುಣ ಕ್ಷೇತ್ರ ಈ ಬಾರಿ ಬಹಳ ಕಾವು ಮೂಡಿಸಿದ್ದು, ಬಿಜೆಪಿ ಪಕ್ಷ ಒಂದು ನಿರ್ಧಾರ ತೆಗೆದುಕೊಂಡರೆ ಖಂಡಿತ ಸಿದ್ದರಾಮಯ್ಯರವರಿಗೆ ಸೋಲು ಖಚಿತ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿವೆ. ನಿಖಿಲ್ ಗೆ ಬಿಗ್ ರಿಲೀಫ್: ಒಂದಾದ ಒಕ್ಕಲಿಗ ಸಮುದಾಯ: ಅಲ್ಪ ಸಂಖ್ಯಾತರಿಗೆ ಮತ್ತೊಮ್ಮೆ ಟೋಪಿ ಹಾಕಿದ ಕಾಂಗ್ರೆಸ್. ರಾಮನಗರದಲ್ಲಿ ಏನಾಗಿದೆ ಗೊತ್ತೇ?
ಹೌದು ಸ್ನೇಹಿತರೇ, ದಿನೇ ದಿನೇ ವರುಣ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಪ್ರಾಬಲ್ಯ ಕುಸಿಯುತ್ತಿದೆ, 2008 ರಲ್ಲಿ 53071 ಮತಗಳನ್ನು ಪಡೆದುಕೊಂಡಿದ್ದ ಬಿಜೆಪಿ ಪಕ್ಷವು 2013ರಲ್ಲಿ 54744 ಪಡೆದು ಉತ್ತಮ ಸಾಧನೆ ಮಾಡಿತ್ತು. ಆದರೆ 2018 ರಲ್ಲಿ 2013 ಕ್ಕೆ ಹೋಲಿಕೆ ಮಾಡಿದರೆ 37,819 ಮತಗಳನ್ನು ಮಾತ್ರ ಪಡೆದಿತ್ತು. ಅಂದರೆ, ಸುಮ್ನರು 16,000ಕ್ಕೂ ಹೆಚ್ಚು ಮತಗಳನ್ನು ಕಳೆದುಕೊಂಡಿತ್ತು ಈ ಲೆಕ್ಕಾಚಾರದಲ್ಲಿ ಅದೇಗೆ ಸಿದ್ದರಾಮಯ್ಯ ರವರನ್ನು ಸೋಲಿಸುವುದು ಸಾಧ್ಯ ಎಂದು ಕೊಂಡಿರ, ಬನ್ನಿ ನಾವು ತಿಳಿಸುತ್ತೇವೆ. Business: ಒಮ್ಮೆ ಹೂಡಿಕೆ ಮಾಡಿ, ಜೀವನ ಪೂರ್ತಿ ಕೂತುಕೊಂಡು ದುಡ್ಡು ಮಾಡುವ ಉದ್ಯಮ ಯಾವುದು ಗೊತ್ತೇ?? ಹೇಗೆ ಆರಂಭಿಸಬೇಕು ಗೊತ್ತೆ??
ಸ್ನೇಹಿತರೆ, ಸಿದ್ದರಾಮಯ್ಯರವರಿಗೆ ಸೇಫ್ ಎಂದರೆ ಅದು ವರುಣ ಕ್ಷೇತ್ರ, ಆದರೆ ವರುಣ ಕ್ಷೇತ್ರದಲ್ಲಿ ಬಿಎಸ್ ಯಡಿಯೂರಪ್ಪನವರ ಮಗ ವಿಜಯೇಂದ್ರರವರ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದು ಒಂದು ವೇಳೆ ಬಿಜೆಪಿ ಪಕ್ಷ ವಿಜಯೇಂದ್ರ ಅವರಿಗೆ ಮೊದಲ ಬಾರಿಗೆ ಟಿಕೆಟ್ ಅನೌನ್ಸ್ ಮಾಡಿದರೇ ರಾಜಕೀಯ ಚಿತ್ರಣವೆ ಬದಲಾಗಿ ಹೋಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಯುವ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರೆ ಹಾಗೂ ವಿಜಯೇಂದ್ರ ರವರಂತಹ ಯುವ ನಾಯಕನಿಗೆ ಟಿಕೆಟ್ ನೀಡಿದರೆ ಬಿಜೆಪಿ ಪಕ್ಷ ವರುಣ ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದಾದ ಸಾಧ್ಯತೆಗಳು ಹೆಚ್ಚಾಗಿವೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಯಾಕೆಂದರೆ ಕಳೆದ ಬಾರಿ ವರುಣ ಕ್ಷೇತ್ರಗಳಲ್ಲಿ ವಿಜಯೇಂದ್ರ ರವರು ಪ್ರಚಾರ ಮಾಡುವಾಗ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ಜನರು ಸೇರಿದ್ದನ್ನು ನೋಡಿದರೆ ಖಂಡಿತ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯರವರಿಗೆ ವಿಜಯೇಂದ್ರ ರವರು ಸಾಕಷ್ಟು ಪೈಪೋಟಿ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯರವರನ್ನು ಸೋಲಿಸುವುದು ಕೂಡ ಸುಲಭದ ಮಾತಲ್ಲ, ಇದಕ್ಕೆ ಡಿಕೆ ಶಿವಕುಮಾರ್ ಬೆಂಬಲ ಕೂಡ ನೀಡಬಹುದು. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ