Karnataka Election 2023: ಮೊದಲ ಹಂತದಲ್ಲಿಯೇ ಸೋಲೊಪ್ಪಿಕೊಂಡ ಬೊಮ್ಮಾಯಿ, ಆದರೆ ಸಿಎಂ ಮಾತಿಗೂ ಕ್ಯಾರೇ ಎನ್ನದೇ ಸಿಟಿ ರವಿ ಮಾಡಿದ್ದೇನು ಗೊತ್ತಾ??

Karnataka Election 2023: ಮೊದಲ ಹಂತದಲ್ಲಿಯೇ ಸೋಲೊಪ್ಪಿಕೊಂಡ ಬೊಮ್ಮಾಯಿ, ಆದರೆ ಸಿಎಂ ಮಾತಿಗೂ ಕ್ಯಾರೇ ಎನ್ನದೇ ಸಿಟಿ ರವಿ ಮಾಡಿದ್ದೇನು ಗೊತ್ತಾ??

Karnataka Election 2023: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿಗೆ ರಾಜಕೀಯ ವಿದ್ಯಮಾನದಲ್ಲಿ ಉರಿ ಗೌಡ ಹಾಗೂ ನಂಜೇಗೌಡ ಎಂಬ ವೀರರ ಹೆಸರುಗಳು ಭಾರಿ ಸದ್ದು ಮಾಡುತ್ತಿವೆ, ಬಿಜೆಪಿ ಪಕ್ಷವು ಇವರಿಬ್ಬರು ಟಿಪ್ಪುವಿನ ಭಾಷಾ ದಬ್ಬಾಳಿಕೆ ಹಾಗೂ ಹಿಂದೂ ಧರ್ಮದ ವಿರುದ್ಧ ನಡೆಸಿದ ದಬ್ಬಾಳಿಕೆಯನ್ನು ವಿರೋಧ ಮಾಡಿ ಟಿಪ್ಪುವನ್ನು ಮುಗಿಸಿದರು ಎಂದು ಬಿಜೆಪಿ ಪಕ್ಷ ವಾದ ಮಾಡುತ್ತಿದೆ ಹಾಗೂ ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷಗಳು ಉರಿ ಗೌಡ ಹಾಗೂ ನಂಜೇಗೌಡ ಹೆಸರುಗಳು ಕೇವಲ ಕಾಲ್ಪನಿಕವಾಗಿದ್ದು ಇವರಿಬ್ಬರು ಇತಿಹಾಸದಲ್ಲಿ ಇರಲೇ ಇಲ್ಲ ಹಾಗೂ ಟಿಪ್ಪುವಿನ ವಿರುದ್ಧ ಹೋರಾಟ ಮಾಡಲಿಲ್ಲ ಎಂದು ವಾದ ಮಾಡುತ್ತಿವೆ.

ಒಂದು ವೇಳೆ ಇವರಿಬ್ಬರು ಇತಿಹಾಸದಲ್ಲಿ ಇದ್ದಿದ್ದರೆ ಸಾಕ್ಷಿ ತೋರಿಸಿ ಎಂದು ಜೆಡಿಎಸ್ ಪಕ್ಷದ ನಾಯಕರು ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಅದರಲ್ಲಿ ಪ್ರಮುಖವಾಗಿ ಡಿಕೆ ಶಿವಕುಮಾರ್ ಅವರು ಬಹಿರಂಗ ಸವಾಲು ಎಸೆದಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಪಕ್ಷ ಖುದ್ದು ಮಾಜಿ ಪ್ರಧಾನಿ ದೇವೇಗೌಡರು ‌ಬಿಡುಗಡೆ ಮಾಡಿದ್ದ ಸುವರ್ಣ ಮಂಡ್ಯ ಎಂಬ ಪುಸ್ತಕದಲ್ಲಿ ಉರಿ ಗೌಡ ಹಾಗೂ ನಂಜೇಗೌಡ ಎಂಬ ವೀರರ ಕುರಿತು ಉಲ್ಲೇಖವಿದೆ ಎಂದು ಸಾಕ್ಷಿ ಬಿಡುಗಡೆ ಮಾಡಿತ್ತು. ಇದಾದ ಬಳಿಕ ಬಿಜೆಪಿ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿ ಸಚಿವ ಮುನಿರತ್ನ ರವರು ‌ಕರ್ನಾಟಕ ಚಲನಚಿತ್ರ ಮಂಡಳಿಯಲ್ಲಿ ಉರಿ ಗೌಡ ಹಾಗೂ ನಂಜೇಗೌಡ ಎಂಬ ಸಿನಿಮಾ ಟೈಟಲ್ ಅನ್ನು ರಿಜಿಸ್ಟರ್ ಮಾಡಿಸಿ ಸಿನಿಮಾ ತೆಗೆಯುವುದಕ್ಕೆ ಮುಂದಾಗಿದ್ದರು.

ಆದರೆ ಸಚಿವ ಮುನಿರತ್ನ ರವರನ್ನು ಕರೆಸಿ ಮಾತನಾಡಿದ ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಗಳು ಸಿನಿಮಾ ಮಾಡಂತೆ ಸಲಹೆ ನೀಡಿದ್ದರು. ಹಾಗೂ ಈ ವಿಚಾರಗಳನ್ನು ಇಲ್ಲಿಗೆ ಕೈ ಬಿಡುವಂತೆ ನಿರ್ಮಲಾನಂದ ಸ್ವಾಮೀಜಿಗಳು ಆದೇಶ ನೀಡಿದ್ದರು. ಇದರಂತೆ ಮುನಿರತ್ನ ರವರು ಕೂಡ ಈ ಕುರಿತು ಮಾತನಾಡಿ ಸಿನಿಮಾ ಮಾಡುವ ಆಲೋಚನೆಯನ್ನು ಕೈ ಬಿಟ್ಟಿದ್ದೇವೆ ಎಂಬುದನ್ನು ಖಚಿತಪಡಿಸಿದ್ದರು. ಇದಾದ ಬಳಿಕ ಖುದ್ದು ಮುಖ್ಯಮಂತ್ರಿ ಬೊಮ್ಮಾಯಿ ರವರು ಮಾತನಾಡಿ ಇನ್ನು ಮುಂದೆ ಈ ವಿಚಾರದಲ್ಲಿ ಡಿಕೆ ಶಿವಕುಮಾರ್ ರಾಜಕಾರಣ ಮಾಡುವಾಗ ಅಗತ್ಯವಿಲ್ಲ ಈಗಾಗಲೇ ಉರಿ ಗೌಡ ಹಾಗೂ ನಂಜೇಗೌಡ ವಿಚಾರ ಮುಗಿದ ಅಧ್ಯಾಯವಾಗಿದೆ ಎಂಬ ಹೇಳಿದ್ದರು. ಇದನ್ನು ಓದಿ: ನಿಖಿಲ್ ಗೆ ಬಿಗ್ ರಿಲೀಫ್: ಒಂದಾದ ಒಕ್ಕಲಿಗ ಸಮುದಾಯ: ಅಲ್ಪ ಸಂಖ್ಯಾತರಿಗೆ ಮತ್ತೊಮ್ಮೆ ಟೋಪಿ ಹಾಕಿದ ಕಾಂಗ್ರೆಸ್. ರಾಮನಗರದಲ್ಲಿ ಏನಾಗಿದೆ ಗೊತ್ತೇ?

ಇದಾದ ಬಳಿಕ ಪ್ರತಿಕ್ರಿಯೆ ನೀಡಿರುವ ಸಿ.ಟಿ ರವಿ ರವರು ಉರಿ ಗೌಡ ಹಾಗೂ ನಂಜೇಗೌಡ ಎಂಬುದು ಕೇವಲ ಕಾಲ್ಪನಿಕ ಪಾತ್ರವಲ್ಲ, ಇವರಿಬ್ಬರ ಬಗ್ಗೆ ಜವರೇಗೌಡರು ತಮ್ಮ ಪುಸ್ತಕವಾದ ಸುವರ್ಣ ಮಂಡ್ಯದಲ್ಲಿ ಬಹಳ ವಿವರವಾಗಿ ತಿಳಿಸಿದ್ದಾರೆ. ಈ ಪುಸ್ತಕವನ್ನು ದೇವೇಗೌಡರೇ ಬಿಡುಗಡೆ ಮಾಡಿದ್ದರು, ಈ ಕುರಿತು ನಾವು ನಿರ್ಮಲಾನಂದ ಶ್ರೀಗಳಿಗೆ ವಾಸ್ತವವನ್ನು ಮನವರಿಕೆ ಮಾಡಿಕೊಡುತ್ತೇವೆ. ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನಿರ್ಮಲಾನಂದ ಶ್ರೀಗಳಿಗೆ ಅರ್ಪಿಸುತ್ತೇವೆ. ಉರಿ ಗೌಡ ಹಾಗೂ ನಂಜೇಗೌಡ ಎಂಬ ಹೆಸರುಗಳು ಕೇವಲ ಕಾಲ್ಪನಿಕ ಇತ್ತೀಚೆಗೆ ಬಂದ ಹೆಸರುಗಳಲ್ಲ, ಇದಕ್ಕೆ ಅಗತ್ಯವಾದ ದಾಖಲೆಗಳನ್ನು ನಾವು ಸಂಶೋಧನೆ ಮಾಡಿ ಖಂಡಿತ ಟಿಪ್ಪುವಿನ ಅಂತ್ಯಗೊಳಿಸಿದವರು ಯಾರು ಎಂಬುದನ್ನು ಕಂಡುಹಿಡಿದು ಸ್ವಾಮೀಜಿಗಳಿಗೆ ತಿಳಿಸುತ್ತೇವೆ, ಸದ್ಯಕ್ಕೆ ಗುರುಗಳ ಮಾತಿಗೆ ನಾವು ಗೌರವ ಕೊಡುತ್ತೇವೆ. ಆದರೆ ಪ್ರತಿಪಕ್ಷಗಳು ಟಿಪ್ಪುವಿನನ್ನು ವೈಭವೀಕರಣ ಮಾಡಲು ಊರಿಗೌಡ ಹಾಗೂ ನಂಜೇಗೌಡ ಎಂಬ ಪಾತ್ರಗಳು ಕಾಲ್ಪನಿಕ ಎಂದರೆ ನಾನು ಒಪ್ಪುವುದಿಲ್ಲ ಎಂದು ಕಡ್ಡಿಮರಿದಂತೆ ಹೇಳಿಕೆ ನೀಡಿದ್ದಾರೆ. ಇದನ್ನು ಓದಿ: ಡಿಕೆ, ಬಿಜೆಪಿ, ಜೆಡಿಎಸ್ ನಿಂದ ಬಚಾವಾಗಿ ಸಿದ್ದು ಗೆಲ್ಲಬೇಕು ಎಂದರೆ, ಅದೊಂದು ಕ್ಷೇತ್ರ ಮಾತ್ರ ಸೇಫ್, ಯಾವ ಕ್ಷೇತ್ರ ಗೊತ್ತೇ? ಮಾಜಿ ಮುಖ್ಯಮಂತ್ರಿಗೆ ಇದೆಂತಹ ಗತಿ??