ಮೋದಿ ರವರನ್ನು ಟೀಕೆ ಮಾಡುತ್ತಿದ್ದ ಅಫ್ರಿದಿ, ಭಾರತದ ಮುಂದೆ ಮಂಡಿಯೂರಿ ಕೇಳಿಕೊಂಡದ್ದು ಏನು ಗೊತ್ತೇ?? ಇದು ಕೂಡ ನಾಟಕನ?

ಮೋದಿ ರವರನ್ನು ಟೀಕೆ ಮಾಡುತ್ತಿದ್ದ ಅಫ್ರಿದಿ, ಭಾರತದ ಮುಂದೆ ಮಂಡಿಯೂರಿ ಕೇಳಿಕೊಂಡದ್ದು ಏನು ಗೊತ್ತೇ?? ಇದು ಕೂಡ ನಾಟಕನ?

ನಮಸ್ಕಾರ ಸ್ನೇಹಿತರೇ ಶಾಹಿದ್ ಅಫ್ರಿದಿ ಎಂದು ಹೆಸರು ಕೇಳಿದ ತಕ್ಷಣ ಕೆಲವು ವರ್ಷಗಳ ಹಿಂದೆ ನಮಗೆ ಕ್ರಿಕೆಟ್ ಆಟ ನೆನಪಾಗುತ್ತಿತ್ತು, ಆದರೆ ಇತ್ತೀಚಿಗೆ ಶಾಹಿದ್ ಅಫ್ರಿದಿ ರವರು ಕ್ರಿಕೆಟ್ನಿಂದ ನಿವೃತ್ತಿ ಪಡೆದ ಬಳಿಕ ಭಾರತದ ವಿರುದ್ಧ ಕತ್ತಿಮಸೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ದ್ವಜದ ಮೇಲೆ ಅಭಿಮಾನಿಯವರಿಗೆ ಆಟೋಗ್ರಾಫ್ ನೀಡುವ ಮೂಲಕ ಒಂದು ರಾಷ್ಟ್ರದ ಧ್ವಜವನ್ನು ಹೇಗೆ ಗೌರವಿಸಬೇಕು ಎಂಬುದನ್ನು ಮರೆತಂತೆ ವರ್ತನೆ ತೋರಿದರು. ಅಷ್ಟೇ ಅಲ್ಲದೆ ಕಾಶ್ಮೀರದ ವಿಚಾರವಾಗಿ ಹಾಗೂ ನರೇಂದ್ರ ಮೋದಿ ಅವರ ವಿಚಾರವಾಗಿ ನಾಲಿಗೆಯನ್ನು ಹರಿಬಿಟ್ಟಿದ್ದರು

ಹೌದು ಕಳೆದ ಕೆಲವು ತಿಂಗಳುಗಳ ಹಿಂದೆ ಇಡೀ ವಿಶ್ವ ಕೊರೋನಾ ಇಂದ ಬಳಲುತ್ತಿದೆ, ಆದರೆ ಅದಕ್ಕಿಂತ ಹೆಚ್ಚು ಅಪಾಯಕಾರಿ ಅಂಶ ಮೋದಿ ಅವರ ಹೃದಯ ಮತ್ತು ಮನಸ್ಸಿನಲ್ಲಿ ಇದೆ ಎಂದು ಹೇಳಿಕೆ ನೀಡುವ ಮೂಲಕ ಕಟುವಾಗಿ ಟೀಕೆ ಮಾಡಿದರು. ಇಷ್ಟೇ ಅಲ್ಲದೆ ಸದಾ ಕಾಶ್ಮೀರದ ವಿಚಾರದಲ್ಲಿ ಭಾರತದ ವಿರುದ್ಧ ಕಟುವಾದ ಟೀಕೆಗಳನ್ನು ಮಾಡುವಲ್ಲಿ ಆಫ್ರಿದಿರವರು ನಿಸ್ಸಿಮರು. ಈಗ ಯಾಕೆ ಈ ವಿಚಾರ ಅಂದು ಕೊಂಡಿರ?? ಬನ್ನಿ ತಿಳಿಸುತ್ತೇನೆ.

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ 2008ರ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಯಾವುದೇ ಸರಣಿಗಳು ನಡೆದಿಲ್ಲ, ಪಾಕಿಸ್ತಾನದ ಆಟಗಾರರಿಗೆ ಐಪಿಎಲ್ ನಲ್ಲಿ ಕೂಡ ಆಟವಾಡುವ ಅವಕಾಶವನ್ನು ಭಾರತ ನೀಡಿಲ್ಲ. ಇದರ ಕುರಿತು ಸದಾ ಮಾತನಾಡುವಶಾಹಿದ್ ಅಫ್ರಿದಿರವರು ಇಷ್ಟು ದಿವಸ ಭಾರತೀಯ ಕ್ರಿಕೆಟ್ ಆಟಗಾರರನ್ನು ಅದು ಹೇಗೆ ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂಬ ಪ್ರಶ್ನೆ ಮಾಡಿ ಸದಾ ಭಾರತದ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದರು

ಆದರೆ ಇದ್ಯಾವುದೇ ಟೀಕೆ ಗಳಿಕೆ ಭಾರತ ಜಗ್ಗದ ಕಾರಣ ಇದೀಗ ಬೇರೆ ವಿಧಿ ಇಲ್ಲದೆ ಇಷ್ಟು ದಿವಸ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಆಫ್ರಿದಿರವರು ಪಾಕಿಸ್ತಾನ ಕ್ರಿಕೆಟ್ಟನ್ನು ಉಳಿಸುವ ಸಲುವಾಗಿ ಈಗ ಭಾರತದ ಮುಂದೆ ಮನವಿ ಒಂದನ್ನು ಮಾಡಲು ಮುಂದಾಗಿದ್ದಾರೆ ಹಾಗೂ ಈ ಕುರಿತು ನಾನು ನೇರವಾಗಿ ನರೇಂದ್ರ ಮೋದಿ ರವರಿಗೆ ಮನವಿ ಮಾಡುತ್ತೇನೆ ಎಂದು ಮಾತನಾಡಿ ನಾನು ಭಾರತದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಬಳಿ ಉಭಯ ತಂಡಗಳ ನಡುವೆ ಕ್ರಿಕೆಟ್ ನಡೆಸುವಂತೆ ಮನವಿ ಮಾಡುತ್ತಿದ್ದೇನೆ.

ನಮ್ಮ ಜೊತೆ ಭಾರತೀಯ ಆಟಗಾರರು ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಸುರೇಶ್ ರೈನಾ ಅವರು ನನ್ನ ಆತ್ಮೀಯ ಸ್ನೇಹಿತ, ಎರಡು ದೇಶಗಳ ನಡುವೆ ಕ್ರಿಕೆಟ್ ಅನ್ನು ಆಯೋಜನೆ ಮಾಡಿ ಉತ್ತಮ ಸಂಬಂಧ ಬೆಳೆಸಿಕೊಳ್ಳಬೇಕು, ಹೆಚ್ಚು ಶತ್ರುಗಳನ್ನು ಮಾಡಿಕೊಂಡರೆ ಏನು ಪ್ರಯೋಜನವಿಲ್ಲ ನಾವು ಆದಷ್ಟು ಸ್ನೇಹಿತರನ್ನು ಸಂಪಾದನೆ ಮಾಡೋಣ, ಬಿಸಿಸಿಐ ನಮ್ಮ ಜೊತೆ ಸ್ನೇಹ ಬೆಳೆಸಿಕೊಂಡರೆ ಇನ್ನಷ್ಟು ಬಲಿಷ್ಠವಾಗುತ್ತದೆ, ಹಾಗೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ದುರ್ಬಲವಾಗಿದೆ ಎಂದು ನಾನು ಹೇಳುವುದಿಲ್ಲ ಆದರೆ ಎರಡು ದೇಶಗಳ ನಡುವೆ ಸರಣಿ ನಡೆದರೆ ಸ್ನೇಹ ಉತ್ತಮವಾಗಿರುತ್ತದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ.