ನಿಖಿಲ್ ಗೆ ಬಿಗ್ ರಿಲೀಫ್: ಒಂದಾದ ಒಕ್ಕಲಿಗ ಸಮುದಾಯ: ಅಲ್ಪ ಸಂಖ್ಯಾತರಿಗೆ ಮತ್ತೊಮ್ಮೆ ಟೋಪಿ ಹಾಕಿದ ಕಾಂಗ್ರೆಸ್. ರಾಮನಗರದಲ್ಲಿ ಏನಾಗಿದೆ ಗೊತ್ತೇ?

ನಿಖಿಲ್ ಗೆ ಬಿಗ್ ರಿಲೀಫ್: ಒಂದಾದ ಒಕ್ಕಲಿಗ ಸಮುದಾಯ: ಅಲ್ಪ ಸಂಖ್ಯಾತರಿಗೆ ಮತ್ತೊಮ್ಮೆ ಟೋಪಿ ಹಾಕಿದ ಕಾಂಗ್ರೆಸ್. ರಾಮನಗರದಲ್ಲಿ ಏನಾಗಿದೆ ಗೊತ್ತೇ?

Karnataka Election 2023: ನಮಸ್ಕಾರ ಸ್ನೇಹಿತರೇ ಈ ಬಾರಿಯ ವಿಧಾನಸಭಾ ಚುನಾವಣೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ, ಅದರಲ್ಲೂ ಈ ಬಾರಿ ಸಾಕಷ್ಟು ಬಲಾಢ್ಯ ನಾಯಕರ ಸೋಲು ಖಚಿತವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದು ಕಡೆ ಬಲಾಢ್ಯ ನಾಯಕರು ಹೇಗಾದರೂ ಮಾಡಿ ಈ ಬಾರಿ ಶಾಸಕರಾಗಿ ಆಯ್ಕೆಯಾಗಬೇಕು ಎಂದು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ

ಅದೇ ರೀತಿ ರಾಜಕೀಯ ಶಿಶು ಆಗಿರುವ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನು ಅನುಭವಿಸಿದ ನಿಖಿಲ್ ಕುಮಾರಸ್ವಾಮಿ ರವರು ಹೇಗಾದರೂ ಮಾಡಿ ಕನಿಷ್ಠ ಶಾಸಕನಾಗಿ ಆಯ್ಕೆಯಾದರೆ ರಾಜ್ಯ ರಾಜಕಾರಣದಲ್ಲಿ ಉಳಿದುಕೊಳ್ಳಬಹುದು ಎಂಬ ಆಲೋಚನೆಯ ಮೇರೆಗೆ ಜೆಡಿಎಸ್ ಪಕ್ಷ ಕಳೆದ ಹಲವಾರು ದಶಕಗಳಿಂದ ಭದ್ರವಾಗಿ ನೆಲೆಯೂರಿರುವ ರಾಮನಗರ ದಲ್ಲಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರದೊಂದಿಗೆ ಕಣಕ್ಕೆ ಇಳಿಯುತ್ತಿದ್ದಾರೆ.

ಆದರೆ ನಿಖಿಲ್ ಕುಮಾರಸ್ವಾಮಿ ರವರು ಸುಲಭವಾಗಿ ಗೆಲ್ಲಬಹುದು ಎಂಬ ಕ್ಷೇತ್ರದಲ್ಲಿ ಈ ಬಾರಿ ಸಾಕಷ್ಟು ಪೈಪೋಟಿ ಇದೆ, ಇಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಸದ ಡಿಕೆ ಸುರೇಶ್ ಕಣಕ್ಕೆ ಇಳಿಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು, ಒಂದು ವೇಳೆ ಅದೇ ನಡೆದಿದ್ದರೆ ನಿಖಿಲ್ ಕುಮಾರಸ್ವಾಮಿ ರವರ ಗೆಲುವು ಬಹುತೇಕ ಅಸಾದ್ಯವಾಗುತಿತ್ತು. ಈ ಮಾತು ಕೇಳಿ ಬಂದ ತಕ್ಷಣ ಒಕ್ಕಲಿಗ ಸಮಾಜದ ಧಾರ್ಮಿಕ ಮುಖಂಡರು ನಿಖಿಲ್ ಕುಮಾರಸ್ವಾಮಿ ರವರ ಬೆಂಬಲಕ್ಕೆ ನಿಂತಿದ್ದು ಡಿಕೆ ಸುರೇಶ್ ಅವರಿಗೆ ಕಣದಿಂದ ಹಿಂದೆ ಸರಿಯುವಂತೆ ಆದೇಶ ನೀಡಿ ಇಕ್ಬಾಲ್ ಹುಸೇನ್ ರವರನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿಸುವಂತೆ ಧಾರ್ಮಿಕ ಮುಖಂಡರು ಡಿಕೆ ಶಿವಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ.

ಯಾಕೆಂದರೆ ಮುಖ್ಯಮಂತ್ರಿ ಸ್ಥಾನದ ಮೇಲೆ ಹಕ್ಕನ್ನು ಪ್ರತಿಪಾದಿಸಲು ಒಕ್ಕಲಿಗ ಸಮುದಾಯ ಕನಿಷ್ಠ 40 ಶಾಸಕರನ್ನು ಹೊಂದಿರಬೇಕು ಎಂದು ಧಾರ್ಮಿಕ ಮುಖಂಡರು ಸೂಚನೆ ನೀಡಿದ್ದು, ನಮ್ಮ ನಮ್ಮ ನಡುವೆ ಪೈಪೋಟಿ ಬೇಡ ಎಂದು ಸ್ಪಷ್ಟವಾಗಿ ತಿಳಿಸಿ ಡಿಕೆ ಶಿವಕುಮಾರ್ ಅವರಿಗೆ ಆದೇಶ ನೀಡಲಾಗಿದೆ. ಆದಕಾರಣ ಡಿಕೆ ಶಿವಕುಮಾರ್ ರವರು ಡಿಕೆ ಸುರೇಶ್ ರವರನ್ನು ಹಿಂದೆ ಸರಿಯುವಂತೆ ಹೇಳಿದ್ದಾರೆ ಎಂಬುದು ತಿಳಿದು ಬಂದಿದೆ, ಇದೆ ಸಮಯದಲ್ಲಿ ಇಕ್ಬಾಲ್ ಹುಸೇನ್ ರವರಿಗೆ ಮಹತ್ವ ಇಲ್ಲದೆ ಟಿಕೆಟ್ ನೀಡಲಾಗಿದೆ ಎಂದು ಕಾಂಗ್ರೆಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.