ಡಿಕೆ, ಬಿಜೆಪಿ, ಜೆಡಿಎಸ್ ನಿಂದ ಬಚಾವಾಗಿ ಸಿದ್ದು ಗೆಲ್ಲಬೇಕು ಎಂದರೆ, ಅದೊಂದು ಕ್ಷೇತ್ರ ಮಾತ್ರ ಸೇಫ್, ಯಾವ ಕ್ಷೇತ್ರ ಗೊತ್ತೇ? ಮಾಜಿ ಮುಖ್ಯಮಂತ್ರಿಗೆ ಇದೆಂತಹ ಗತಿ??
ಡಿಕೆ, ಬಿಜೆಪಿ, ಜೆಡಿಎಸ್ ನಿಂದ ಬಚಾವಾಗಿ ಸಿದ್ದು ಗೆಲ್ಲಬೇಕು ಎಂದರೆ, ಅದೊಂದು ಕ್ಷೇತ್ರ ಮಾತ್ರ ಸೇಫ್, ಯಾವ ಕ್ಷೇತ್ರ ಗೊತ್ತೇ? ಮಾಜಿ ಮುಖ್ಯಮಂತ್ರಿಗೆ ಇದೆಂತಹ ಗತಿ??
Karnataka Election 2023: ನಮಸ್ಕಾರ ಸ್ನೇಹಿತರೇ ಇದೀಗ ಇಡೀ ದೇಶದ ಚಿತ್ತ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯತ್ತ ನೆಟ್ಟಿದೆ. ಒಂದು ಕಡೆ ಬಿಜೆಪಿ ಪಕ್ಷ ಇಡೀ ದೇಶದ ಎಲ್ಲೆಡೆ ತನ್ನ ವಿಜಯ ಯಾತ್ರೆಯನ್ನು ಮುಂದುವರೆಸಿದ್ದು ಬಹುತೇಕ ರಾಜ್ಯಗಳಲ್ಲಿ ಈಗಲೂ ಕೂಡ ಬಿಜೆಪಿ ಪಕ್ಷ ಅಥವಾ ಬಿಜೆಪಿ ಬೆಂಬಲಿತ ಸರ್ಕಾರ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷ ಕೂಡ ಇತ್ತೀಚಿಗೆ ಕೆಲವೊಂದು ರಾಜ್ಯಗಳನ್ನು ಗೆದ್ದು ಕರ್ನಾಟಕ ರಾಜ್ಯದಲ್ಲೂ ಕೂಡ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿ ತೊಡಗಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯರವರು ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.
ಯಾಕೆಂದರೆ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದ ಒಬ್ಬ ನಾಯಕ ತನ್ನ ಕ್ಷೇತ್ರಕ್ಕಾಗಿ ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ತಮ್ಮ ಸ್ವಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ಕಳೆದ ಬಾರಿ ಕೆಲವೇ ಕೆಲವು ಮತಗಳ ಅಂತರದಿಂದ ಬಾದಾಮಿಯಲ್ಲಿ ಗೆದ್ದಿದ್ದ ಸಿದ್ದರಾಮಯ್ಯರವರು ಈ ಬಾರಿ ಗೆಲ್ಲುವುದು ಬಹುತೇಕ ಅನುಮಾನವಾಗಿದ್ದ ಕಾರಣ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದುಕೊಂಡಿದ್ದರು.
ಆದರೆ ಕಾಂಗ್ರೆಸ್ ಪಕ್ಷದ ಸಮೀಕ್ಷೆಗಳ ಪ್ರಕಾರ ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಸಿದ್ದರಾಮಯ್ಯರವರು ಗೆಲ್ಲುವ ಸಾಧ್ಯತೆ ಇಲ್ಲದ ಕಾರಣ ಖುದ್ದು ರಾಹುಲ್ ಗಾಂಧಿ ರವರೇ ಕ್ಷೇತ್ರ ಬದಲಾವಣೆ ಮಾಡುವಂತೆ ಸಲಹೆ ನೀಡಿದ್ದಾರೆ, ಈ ಎಲ್ಲಾ ಲೆಕ್ಕಾಚಾರಗಳ ನಡುವೆ ಬಿಜೆಪಿ ಹಾಗೂ ಜೆಡಿಎಸ್ ಹೇಗಾದರೂ ಮಾಡಿ ಸಿದ್ದರಾಮಯ್ಯರವರಿಗೆ ಕ್ಷೇತ್ರ ಸಿಗದಂತೆ ಮಾಡಬೇಕು ಎಂಬ ಪೈಪೋಟಿ ಮಾಡುತ್ತಿದ್ದರೆ ಮತ್ತೊಂದು ಕಡೆ ಸಿದ್ದರಾಮಯ್ಯನವರು ಸ್ವತಂತ್ರವಾಗಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವಲ್ಲಿ ಎಡವುತ್ತಿದ್ದಾರೆ.
ಯಾಕೆಂದರೆ, ಸಿದ್ದು ಗೆ ಡಿ ಕೆ ಶಿವಕುಮಾರ್ ರವರಿಗಿಂತ ಮತ್ತೊಂದು ಟೆನ್ಶನ್ ಇಲ್ಲ, ಹೌದು ಸಿದ್ದರಾಮಯ್ಯರವರನ್ನು ಸೋಲಿಸಲು ಡಿಕೆ ಶಿವಕುಮಾರ್ ಅವರು ಪಣತೊಟ್ಟಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಅದೇ ಕಾರಣಕ್ಕಾಗಿ ಡಿಕೆ ಶಿವಕುಮಾರ್ ಅವರು ಬಹಿರಂಗವಾಗಿಯೇ ರಾಜಕೀಯ ಸಮಾವೇಶಗಳಲ್ಲಿ ನನಗೆ ಮುಖ್ಯಮಂತ್ರಿ ಆಗಲು ಒಂದು ಅವಕಾಶ ಕೊಡಿ ಎಂದು ಪ್ರಚಾರ ಮಾಡುತ್ತಿದ್ದಾರೆ.
ಮತ್ತೊಂದು ಕಡೆ ಸಿದ್ದರಾಮಯ್ಯರವರು ನಾನೇ ಮುಂದಿನ ಮುಖ್ಯಮಂತ್ರಿ ಎಂದು ಕೂಡ ಹೇಳಿಕೊಂಡು ಓಡಾಡುತ್ತಿದ್ದಾರೆ. ಹೀಗಿರುವಾಗ ಖಂಡಿತ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚು ಇರುವ ಕಡೆ ಸ್ಪರ್ಧೆ ಮಾಡಿದರೆ ಸಿದ್ದರಾಮಯ್ಯರವರ ಸೋಲು ಖಚಿತ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ, ಅಷ್ಟೇ ಅಲ್ಲದೆ ಡಿಕೆಶಿ ಪ್ರಭಾವ ಎಲ್ಲಿ ಕಡಿಮೆ ಇರುತ್ತದೆಯೋ ಅಲ್ಲಿ ಸ್ಪರ್ಧೆ ಮಾಡಿದರೇ ಮಾತ್ರ ಸಿದ್ದರಾಮಯ್ಯರವರು ಗೆಲುವು ಸಾಧ್ಯವಾಗುತ್ತದೆ ಎಂಬ ವಿಶ್ಲೇಷಣೆಯನ್ನು ರಾಜಕೀಯ ಪಂಡಿತರು ನೀಡುತ್ತಿದ್ದಾರೆ
ಈ ಎಲ್ಲಾ ಲೆಕ್ಕಾಚಾರಗಳನ್ನು ನೋಡಿದರೆ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದಲ್ಲಿ ಸ್ಪರ್ಧೆ ಮಾಡಬಹುದಾಗಿದೆ, ಆದರೆ ಉತ್ತರ ಕರ್ನಾಟಕದಲ್ಲಿ ಸಿದ್ದರಾಮಯ್ಯರವರ ಲೆಕ್ಕಾಚಾರಗಳನ್ನು ಹೋಲುವ ಯಾವುದೇ ಕ್ಷೇತ್ರ ಉಳಿದಿಲ್ಲ, ಆದಕಾರಣ ಸಿದ್ದರಾಮಯ್ಯರವರಿಗೆ ಎಲ್ಲದಕ್ಕಿಂತ ಹೆಚ್ಚು ಸೇಫ್ ಆದ ಕ್ಷೇತ್ರ ಎಂದರೆ ಅದು ಜಮೀರ್ ಅಹಮದ್ ರವರು ಸ್ಪರ್ಧೆ ಮಾಡುವ ಚಾಮರಾಜಪೇಟೆ ಕ್ಷೇತ್ರವಾಗಿದೆ. ಅಲ್ಲಿ ಸದಾ ಡಿಕೆಶಿ ರವರ ಆದೇಶವನ್ನು ಮೀರಿ ಪ್ರತಿ ಬಾರಿಯೂ ಸಿದ್ದರಾಮಯ್ಯ ರವರೇ ಸಿಎಂ ಎಂದು ಬಹಿರಂಗವಾಗಿ ಹೇಳುವ ಜಮೀರ್ ಅಹಮದ್ ರವರ ಪ್ರಭಾವ ಹೆಚ್ಚಾಗಿದೆ.
ಅಷ್ಟೇ ಅಲ್ಲದೆ ಮುಸ್ಲಿಂ ಮತಗಳು ಸಿದ್ದರಾಮಯ್ಯರವರಿಗೆ ಬಹಳ ಸುಲಭವಾಗಿ ಸಿಗುತ್ತವೆ, ಆದ ಕಾರಣ ವರುಣ ಕ್ಷೇತ್ರವನ್ನು ಹೊರತುಪಡಿಸಿದರೆ ಸಿದ್ದರಾಮಯ್ಯರವರು ಡಿಕೆಶಿ ರವರ ಪ್ರಭಾವ, ಜೆಡಿಎಸ್ ಹಾಗೂ ಬಿಜೆಪಿಗಳ ಪ್ರಭಾವ ಕಡಿಮೆ ಇರುವ ಕ್ಷೇತ್ರವನ್ನು ಆಯ್ಕೆ ಮಾಡಬೇಕಾದ ಪರಿಸ್ಥಿತಿ ಇರುವ ಕಾರಣ ರಾಜಕೀಯ ಪಂಡಿತರ ಪ್ರಕಾರ ಸಿದ್ದರಾಮಯ್ಯರವರು ಚಾಮರಾಜನಗರದಲ್ಲಿ ನಿಲ್ಲುವುದು ಬಹಳ ಸೂಕ್ತವೆನಿಸಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.