ಕೋಟಿ ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಅನ್ನೇ ಕಬ್ಜಾ ಮಾಡಿಕೊಂಡ ಕಬ್ಜಾ!

ಕೋಟಿ ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಅನ್ನೇ ಕಬ್ಜಾ ಮಾಡಿಕೊಂಡ ಕಬ್ಜಾ!

ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳ ನಂತರ ಕನ್ನಡ ಚಿತ್ರರಂಗದಿಂದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಕಬ್ಜಾ ಸಿನಿಮಾ ಪಂಚಭಾಷೆಗಳನ್ನು ಬಿಡುಗಡೆಯಾಗಿ ಅದ್ದೂರಿಯಾಗಿ ಪೂಲು ಪ್ರದರ್ಶನವನ್ನು ಕಾಣುವ ಮೂಲಕ ಬಾಕ್ಸ್ ಆಫೀಸ್ ಇತಿಹಾಸದಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ.

ಈಗಾಗಲೇ ಬಿಡುಗಡೆಯಾಗಿ ನಾಲ್ಕು ದಿನಗಳು ಕಳೆದಿದ್ದು ಅದಾಗಲೇ 200 ಕೋಟಿಗೂ ಅಧಿಕ ಕಲೆಕ್ಷನ್ ಅನ್ನು ಕಬ್ಜಾ ಸಿನಿಮಾ ಪೂರೈಸಿದೆ. ಮಲ್ಟಿ ಸ್ಟಾರರ್ ಸಿನಿಮಾ ಆಗಿದ್ರೂ ಕೂಡ ಕಬ್ಜಾ ಎಲ್ಲಾ ನಟರ ಅಭಿಮಾನಿಗಳನ್ನು ಒಂದೇ ಸೂರಿನ ಅಡಿಯಲ್ಲಿ ಒಂದು ಸೂಪರ್ ಹಿಟ್ ಸಿನಿಮಾವನ್ನು ವಿಸಲ್ ಚಪ್ಪಾಳೆ ಹೊಡೆದು ಸಂತೋಷದಿಂದ ನೋಡುವಂತೆ ಮಾಡಿರುವುದು ಅಷ್ಟೊಂದು ಸಾಮಾನ್ಯದ ಸಾಧನೆ ಅಲ್ಲ. ನಿಜಕ್ಕೂ ಕೂಡ ಇದಕ್ಕಾಗಿ ನಾವು ಚಂದ್ರು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು.

ಈ ಸಿನಿಮಾದ ಮೂಲಕ ಭಾರತೀಯ ಚಿತ್ರರಂಗದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ ಅವರಾಗಿ ಕಾಣಿಸಿಕೊಂಡಿರುವುದು ಕೂಡ ಸಾಧನೆಯ ವಿಚಾರವಾಗಿದೆ. ಕೇವಲ ಬಿಗ್ ಬಜೆಟ್ ಹಾಗೂ ಅದ್ದೂರಿ ಮೇಕಿಂಗ್ ಇದ್ದ ಮಾತ್ರಕ್ಕೆ ಸಿನಿಮಾ ಸೂಪರ್ ಹಿಟ್ ಆಗುವುದಿಲ್ಲ, ಬದಲಾಗಿ ಪ್ರೇಕ್ಷಕರನ್ನು ಸಳೆಯುವಂತಹ ಕಥೆ ಕೂಡ ಇರಬೇಕು ಎಂಬುದಾಗಿ ಕಬ್ಜಾ ಸಿನಿಮಾ ಸಾಬೀತುಪಡಿಸಿದೆ.

ನಿಜವಾಗಿಯೂ ಕೂಡ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕಬ್ಜಾ ಸಿನಿಮಾ ತನ್ನದೇ ಆದಂತಹ ಒಂದು ಚಾಪ್ಟರ್ ಅನ್ನು ದಾಖಲಿಸಿದೆ. ಕಬ್ಜಾ ಸಿನಿಮಾದ ಸಾಧನೆ ಮುಂದೆ ಬಿಡುಗಡೆ ಆಗಲಿರುವಂತಹ ಕನ್ನಡದ ಪ್ಯಾನ್ ಇಂಡಿಯನ್ ಸಿನಿಮಾಗಳಿಗೆ ಖಂಡಿತವಾಗಿ ಸ್ಪೂರ್ತಿಯಾಗಿ ಕಾಣಿಸಿಕೊಳ್ಳಲಿದೆ ಎಂದರ ತಪ್ಪಾಗಲಾರದು. ಎಲ್ಲರೂ ಕೂಡ ಚಿತ್ರಮಂದಿರಗಳಲ್ಲಿ ಕಬ್ಜಾ ಸಿನಿಮಾವನ್ನು ನೋಡುವ ಮೂಲಕ ಈ ಅದ್ಭುತ ಪರಿಶ್ರಮವನ್ನು ಆಚರಿಸೋಣ.