ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada News: ಅಂದು ಡ್ರೈವರ್ ಮೇಲೆ ಅನುಮಾನಪಟ್ಟಿದ್ದ ಪೊಲೀಸರು ಕಂಡಕ್ಟರ್ ದಹನ ಕೇಸ್ನಲ್ಲಿ ಮತ್ತೊಂದು ಟ್ರಸ್ಟ್ ಕೊಟ್ಟಿದ್ದು ಹೇಗೆ ಗೊತ್ತಾ??

ಅಂದು ಡ್ರೈವರ್ ಮೇಲೆ ಅನುಮಾನಪಟ್ಟಿದ್ದ ಪೊಲೀಸರು ಕಂಡಕ್ಟರ್ ದಹನ ಕೇಸ್ನಲ್ಲಿ ಮತ್ತೊಂದು ಟ್ರಸ್ಟ್ ಕೊಟ್ಟಿದ್ದು ಹೇಗೆ ಗೊತ್ತಾ??

6,524

ನಮಸ್ಕಾರ ಸ್ನೇಹಿತರೇ ಕಳೆದ ಕೆಲವು ದಿನಗಳ ಹಿಂದೆ ಎಷ್ಟು ವರ್ಷಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ನಿರತವಾಗಿದ್ದ ಬಿಎಂಟಿಸಿ ಬಸ್ನ ನಿರ್ವಾಹಕಮುತ್ತಯ್ಯರವರು ಬಿಎಂಟಿಸಿ ಬಸ್ ನಲ್ಲಿ ಸಜೀವ ದಹನವಾಗಿ ಇಹಲೋಕ ತ್ಯಜಿಸಿದ್ದರು. ಈ ಪ್ರಕರಣವನ್ನು ನೋಡಿದ ರಾಜ್ಯದ ಜನರು ನಿಜಕ್ಕೂ ಶಾಕ್ ಆಗಿದ್ದು ಸುಳ್ಳಲ್ಲ, ಯಾಕೆಂದರೆ ಬಸ್ನಲ್ಲಿ ನಿದ್ದೆ ಮಾಡುತ್ತಿದ್ದ ಕಂಡಕ್ಟರ್ ಗೆ ಬೆಂಕಿ ತಗುಲಿ ಸಜೀವ ದಹನ ವಾಗಿದ್ದಾರೆ ಎಂದರೆ ಯಾರಿಗೆ ತಾನೇ ಸತ್ಯ ಎಂದು ನಂಬಲು ಸಾಧ್ಯವಾಗುತ್ತದೆ.

Follow us on Google News

ಇನ್ನು ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಳೆದ ಕೆಲವು ದಿನಗಳ ಹಿಂದೆ ಡ್ರೈವರ್ ಹಾಗೂ ಕಂಡಕ್ಟರ್ ಇಬ್ಬರೂ ಕೂಡ ನಿದ್ದೆ ಮಾಡುತ್ತಿದ್ದರು, ಆದರೆ ಡ್ರೈವರ್ ಹೇಗೆ ಬಚವಾಗಿದ್ದಾರೆ ಎಂಬುದರ ಕುರಿತು ತನಿಖೆ ಆರಂಭ ಮಾಡಿ, ಮೊದಲ ಪ್ರಾರ್ಥಮಿಕ ಹಂತದ ತನಿಕೆಯಲ್ಲಿ ಡ್ರೈವರ್ ಮೇಲೆ ಸಾಕಷ್ಟು ಅನುಮಾನಗಳು ಮೂಡಿಬಂದ ಕಾರಣ ಇದರಲ್ಲಿ ಡ್ರೈವರ್ ಕೈವಾಡ ಇರಬಹುದು ಎಂಬ ಮಾತುಗಳನ್ನು ಕೂಡ ಆಡಿದ್ದರು. ಆದರೆ ಕಂಡಕ್ಟರ್ ಮುತ್ತಯ್ಯ ರವರ ಮೊಬೈಲ್ ನಲ್ಲಿ ಹಣ ವರ್ಗಾವಣೆಯಾದ ಕುರಿತು ಮಾಹಿತಿ ಕಲೆ ಹಾಕಿದಾಗ ಶಾಕಿಂಗ್ ಸಂಗತಿ ಒಂದು ಹೊರಬಿದ್ದಿದೆ. ಇದನ್ನು ಓದಿ: ಡಿಕೆ, ಬಿಜೆಪಿ, ಜೆಡಿಎಸ್ ನಿಂದ ಬಚಾವಾಗಿ ಸಿದ್ದು ಗೆಲ್ಲಬೇಕು ಎಂದರೆ, ಅದೊಂದು ಕ್ಷೇತ್ರ ಮಾತ್ರ ಸೇಫ್, ಯಾವ ಕ್ಷೇತ್ರ ಗೊತ್ತೇ? ಮಾಜಿ ಮುಖ್ಯಮಂತ್ರಿಗೆ ಇದೆಂತಹ ಗತಿ??

ಹೌದು ಸ್ನೇಹಿತರೇ, ಈ ಘಟನೆ ನಡೆಯುವ ಕೆಲವೇ ಕೆಲವು ನಿಮಿಷಗಳ ಮುನ್ನ ಮುತ್ತಯ್ಯ ರವರು ಪೆಟ್ರೋಲ್ ಬಂಕ್ ಗೆ ತೆರಳಿ ಅಲ್ಲಿ 700 ರೂಪಾಯಿ ಹಣ ವರ್ಗಾವಣೆ ಮಾಡಿ 5 ಲೀಟರ್ ಡೀಸೆಲ್ ಹಾಗೂ ಎರಡು ಲೀಟರ್ ಪೆಟ್ರೋಲ್ ಖರೀದಿ ಮಾಡಿ ಬಂದಿದ್ದಾರೆ, ಅಸಲಿಗೆ ಯಾವ ಕಾರಣಕ್ಕಾಗಿ ತನ್ನ ವೈಯಕ್ತಿಕ ಕರ್ಚಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿ ಮಾಡಿದರು ಎಂದು ಯಾರಿಗೂ ತಿಳಿಯುತ್ತಿಲ್ಲ. ಆದಕಾರಣ ಬಹುಶಃ ಇದು ಮುತ್ತಯ್ಯರವರೇ ತೆಗೆದುಕೊಂಡ ನಿರ್ಧಾರವಾಗಿರಬಹುದು, ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಬೇಕು ಎಂದು ಖರೀದಿ ಮಾಡಿ ಕೊನೆಗೆ ತನ್ನ ಜೀವವನ್ನು ತಾನೇ ಕೊನೆಗೊಳಿಸಿಕೊಳ್ಳುವ ನಿರ್ಧಾರ ಮಾಡಿರಬಹುದು ಎಂದು ಪೊಲೀಸರು ಪ್ರಥಮ ಹಂತದ ತನಿಖೆಯನ್ನು ಮುಕ್ತಾಯಗೊಳಿಸುವಾಗ ತಿಳಿಸಿದ್ದಾರೆ. ಇದನ್ನು ಓದಿ: ನಿಖಿಲ್ ಗೆ ಬಿಗ್ ರಿಲೀಫ್: ಒಂದಾದ ಒಕ್ಕಲಿಗ ಸಮುದಾಯ: ಅಲ್ಪ ಸಂಖ್ಯಾತರಿಗೆ ಮತ್ತೊಮ್ಮೆ ಟೋಪಿ ಹಾಕಿದ ಕಾಂಗ್ರೆಸ್. ರಾಮನಗರದಲ್ಲಿ ಏನಾಗಿದೆ ಗೊತ್ತೇ?