Business Idea: ಜಸ್ಟ್ 30 ಸಾವಿರ ಹೂಡಿಕೆ ಮಾಡಿ, ವರ್ಷಕ್ಕೆ 16 ಲಕ್ಷ ಸಂಪಾದನೆ ಮಾಡುವ ಉದ್ಯಮ ಯಾವುದು ಗೊತ್ತೇ? ಅದು ನಿಮ್ಮ ಹಳ್ಳಿಯಲ್ಲಿಯೇ ಮಾಡಬಹುದು.
Business Idea: ಜಸ್ಟ್ 30 ಸಾವಿರ ಹೂಡಿಕೆ ಮಾಡಿ, ವರ್ಷಕ್ಕೆ 16 ಲಕ್ಷ ಸಂಪಾದನೆ ಮಾಡುವ ಉದ್ಯಮ ಯಾವುದು ಗೊತ್ತೇ? ಅದು ನಿಮ್ಮ ಹಳ್ಳಿಯಲ್ಲಿಯೇ ಮಾಡಬಹುದು.
Business Idea: ಈಗಿನ ಕಾಲದಲ್ಲಿ ಎಲ್ಲರೂ ಕೂಡ ತಮ್ಮದೇ ಆದ ಸ್ವಂತ ಉದ್ಯಮ ಮಾಡಬೇಕು, ಬ್ಯುಸಿನೆಸ್ ಮಾಡಿ ಚೆನ್ನಾಗಿ ಸಂಪಾದನೆ ಮಾಡಬೇಕು ಎಂದು ಬಯಸುತ್ತಿದ್ದಾರೆ. ಇದಕ್ಕಾಗಿ ಹಲವು ಬ್ಯುಸಿನೆಸ್ ಐಡಿಯಾಗಳು ಕೂಡ ಇದೆ. ಇಂದು ನಾವು ನಿಮಗೆ ಕಡಿಮೆ ಹಣ ಅಂದರೆ 30 ಸಾವಿರ ಹೂಡಿಕೆ ವರ್ಷಕ್ಕೆ 16 ಲಕ್ಷ ರೂಪಾಯಿ ವರೆಗು ಗಳಿಸಬಹುದಾದ ಬ್ಯುಸಿನೆಸ್ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ. ಈ ಬ್ಯುಸಿನೆಸ್ ಮಾಡಿ, ಅಲಹಾಬಾದ್ ನ ನಾಗೇಂದ್ರ ಪ್ರತಾಪ್ ಸಿಂಗ್ ಅವರು ಭಾರಿ ಲಾಭ ಪಡೆಯುತ್ತಿದ್ದಾರೆ.
ಇವರು ಅಗ್ರಿಕಲ್ಚರ್ ಟೆಕ್ನಾಲಜಿ ವಿಷಯದಲ್ಲಿ ಪದವಿ ಪಡೆದು ನಂತರ ಹಂದಿ ಸಾಕಾಣಿಕೆ ಕೆಲಸವನ್ನು ಶುರು ಮಾಡಿದರು. ಇದರಲ್ಲಿ ಇವರು ಒಳ್ಳೆಯ ಆದಾಯ ಗಳಿಸಿ ಬೇರೆಯವರಿಗೂ ತರಬೇತಿ ಕೊಡುತ್ತಿದ್ದಾರೆ. ಅಗ್ರಿಕಲ್ಚರ್ ನಲ್ಲಿ ಪದವಿ ಮುಗಿಸಿದ ಬಳಿಕ ಇವರು, ವಿಜ್ಞಾನ ಕೇಂದ್ರ, ಕೌಶಂಬಿ, ಉತ್ತರ ಪ್ರದೇಶದ ಕೃಷಿ ಕ್ಲಿನಿಕ್ ಮತ್ತು ಅಗ್ರಿ-ಬಿಸಿನೆಸ್ ಸೆಂಟರ್ ಯೋಜನೆ ನೀಡುತ್ತಿದ್ದ ತರಬೇತಿ ಕಾರ್ಯಕ್ರಮಕ್ಕೆ ಸೇರಿಕೊಂಡರು. 6 ದಿನಗಳು ನಡೆದ ಈ ಕ್ಲಾಸ್ ಗಳಲ್ಲಿ ಹಂದಿ ಸಾಕಾಣಿಕೆ ಬಗ್ಗೆ ಕಲಿತ ಇವರು ನಂತರ ಹಂದಿ ಸಾಕಾಣಿಕೆಯನ್ನು ಶುರು ಮಾಡಿದರು.. ಇದನ್ನು ಓದಿ..Business Ideas: ಹೆಚ್ಚಿನ ಬಂಡವಾಳವಿಲ್ಲದೆ ಹಳ್ಳಿಯಲ್ಲಿಯೂ ಕೂಡ ನಗರ ಪ್ರದೇಶದಂತೆ ದುಡಿಯುವ ಉದ್ಯಮ ಯಾವುದು ಗೊತ್ತೇ? ಪ್ರಾರಂಭಿಸಿ, ಸ್ವಂತ ಬಾಸ್ ಆಗಿ.
ಇವರು ತಾವು ಉಳಿತಾಯ ಮಾಡಿದ್ದ 30,000 ರೂಪಾಯಿ ಹಣದಲ್ಲಿ ಹಂದಿ ಸಾಕಾಣಿಕೆ ಮಾಡುವುದಕ್ಕೆ ಶುರು ಮಾಡಿದರು. 10 ಸಣ್ಣ ಹಂದಿಗಳು, ಅವುಗಳಲ್ಲಿ 8ಹೆಣ್ಣು 2ಗಂಡು ಹಂದಿಗಳು. ತಮ್ಮ ಮನೆಯ ಹತ್ತಿರವೇ ಇರುವ 700ಚದರ ವಿಸ್ತ್ರೀರ್ಣದ ಪೂರ್ವಜರ ಜಾಗದಲ್ಲಿ 1 ವರ್ಷ ಹಂದಿ ಸಾಕಿದರು. ಹಂದಿ ಸಾಕಲು ಮುಖ್ಯ ತೊಂದರೆ ಆಹಾರ, ಇವರು ದೊಡ್ಡ ದೊಡ್ಡ ರೆಸ್ಟೋರೆಂಟ್ ಗಳ ಜೊತೆಗೆ ಮಾತನಾಡಿ, ಉಳಿದಿರುವ ಆಹಾರಗಳನ್ನು ತಮಗೆ ಕೊಡುವಂತೆ ಕೇಳಿಕೊಂಡು, ಹಂದಿ ಸಾಕಿದರು. ಇವುಗಳನ್ನು ಸಗಟು ಹಾಗೂ ಚಿಲ್ಲರೆ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇದರಲ್ಲಿ ಇವರು ಸುಮಾರು 16ಲಕ್ಷ ಸಂಪಾದನೆ ಮಾಡಿದರು, ಇದೀಗ ಇವರು ಈ ಬ್ಯುಸಿನೆಸ್ ನಲ್ಲೇ ಮುಂದುವರೆದು, 60 ಹಂದಿಮರಿಗಳನ್ನು ಸಾಕುತ್ತಿದ್ದಾರೆ. ಇದನ್ನು ಓದಿ..Business Idea: ಹೆಚ್ಚಿನ ಬಂಡವಾಳವಿಲ್ಲದೆ, ಈ ಬಿಸಿನೆಸ್ ಆರಂಭಿಸಿದರೆ, ತಿಂಗಳಿಗೆ ಕನಿಷ್ಠ 1 ಲಕ್ಷ ಆದಾಯ ಫಿಕ್ಸ್: ಹೇಗೆ ಆರಂಭಿಸಬೇಕು ಗೊತ್ತೇ?