Cricket News: ವಿರಾಟ್ ಅನ್ನು ಕೆಳಗಿಳಿಸಿದ್ದ ದ್ರಾವಿಡ್ ಗೆ ಸದ್ಯದಲ್ಲಿಯೇ ಶಾಕ್?? ವಿಶ್ವಕಪ್ ಗೂ ಮುನ್ನವೇ ಏನಾಗಲಿದೆ ಅಂತೇ ಗೊತ್ತೇ?

Cricket News: ವಿರಾಟ್ ಅನ್ನು ಕೆಳಗಿಳಿಸಿದ್ದ ದ್ರಾವಿಡ್ ಗೆ ಸದ್ಯದಲ್ಲಿಯೇ ಶಾಕ್?? ವಿಶ್ವಕಪ್ ಗೂ ಮುನ್ನವೇ ಏನಾಗಲಿದೆ ಅಂತೇ ಗೊತ್ತೇ?

Cricket News: ಟೀಮ್ ಇಂಡಿಯಾ (Team India) ಕಳೆದ ವರ್ಷ ಬಹಳ ಮುಖ್ಯವಾಗಿದ್ದ ಏಷ್ಯಾಕಪ್ (Asiacup) ಮತ್ತು ಟಿ20 ವರ್ಲ್ಡ್ ಕಪ್ (T20 World Cup) ಈ ಎರಡು ಟೂರ್ನಿಯನ್ನು ಗೆಲ್ಲಲಿಲ್ಲ. ಮೊದಲ ಸಾರಿ ಟಿ20 ವರ್ಲ್ಡ್ ಕಪ್ ನಡೆದಾಗ, ಆಫ್ರಿಕಾದಲ್ಲಿ ಭಾರತ ಗೆದ್ದಿತ್ತು, ಆದರೆ ಅದಾದ ಬಳಿಕ ಅಂತಹ ಆಕ್ರಮಣಕಾರಿ ಪ್ರದರ್ಶನ ನೀಡಿಲ್ಲ. ಹಾಗಾಗಿ ಭಾರತ ತಂಡವು ಈ ವರ್ಷ ಎಲ್ಲಾ ಟೂರ್ನಿಗಳನ್ನು ಗೆಲ್ಲಬೇಕು ಎಂದು ಬಿಸಿಸಿಐ ನಿರ್ಧಾರ ಮಾಡಿದೆ. 2021ರ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಸೋತ ಬಳಿಕ ಟೀಮ್ ಇಂಡಿಯಾ ಕ್ಯಾಪ್ಟನ್ ಸ್ಥಾನದಿಂದ ವಿರಾಟ್ ಕೊಹ್ಲಿ (Virat Kohli) ಅವರು ಕೆಳಗಿಳಿದರು. ಬಳಿಕ ರವಿ ಶಾಸ್ತ್ರಿ (Ravi Shastry) ಅವರು ಹೆಡ್ ಕೋಚ್ ಸ್ಥಾನದಿಂದ ಹೊರಬಂದರು.

ಇದಾದ ನಂತರ ಬಿಸಿಸಿಐ (BCCI) ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ (Saurav Ganguly) ಅವರು ಎನ್.ಸಿ.ಎ (NCA) ಮುಖ್ಯಸ್ಥರಾಗಿದ್ದ ರಾಹುಲ್ ದ್ರಾವಿಡ್ (Rahul Dravid) ಅವರನ್ನು ತಂಡದ ಹೆಡ್ ಕೋಚ್ ಆಗಿ ನೇಮಿಸಿದರು. ರಾಹುಲ್ ಅವರು ಮೂರು ಸ್ವರೂಪದ ಕ್ರಿಕೆಟ್ ಗು ಹೆಡ್ ಕೋಚ್ ಆಗಿದ್ದಾರೆ, ಇವರ ಕ್ಯಾಪ್ಟನ್ಸಿಯಲ್ಲಿ ಕೂಡ ಟೀಮ್ ಇಂಡಿಯಾ ಮುಖ್ಯವಾದ ಟೂರ್ನಿಯನ್ನು ಗೆಲ್ಲಲು ಸಾಧ್ಯವಾಗದ ಕಾರಣ, ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ (Harbhajan Singh) ಅವರು ಬಿಸಿಸಿಐ (BCCI) ಗೆ ಒಂದು ಸಲಹೆ ನೀಡಿದ್ದಾರೆ. ಇದೀಗ ಇವರು ನೀಡಿರುವ ಸಲಹೆ ಬಗ್ಗೆ ಚರ್ಚೆ ಶುರುವಾಗಿದೆ. ಇದನ್ನು ಓದಿ..King Kohli: ದಿಡೀರ್ ಎಂದು ನಾಯಕನ ಸ್ಥಾನದಿಂದ ಕೆಳಗಿಳಿದು ಸಾಮಾನ್ಯ ಆಟಗಾರನಾಗುವುದು ಸುಲಭ ಅಲ್ಲ ಎಂದ ಕಿಂಗ್. ಯಾಕೆ ಗೊತ್ತೇ??

ಹರ್ಭಜನ್ ಅವರು ಹೇಳಿರುವುದೇನು ಎಂದರೆ, ರಾಹುಲ್ ದ್ರಾವಿಡ್ (Rahul Dravid) ಅವರು ಟೆಸ್ಟ್ ಮತ್ತು ಓಡಿಐ ತಂಡದ ಹೆಡ್ ಕೋಚ್ ಆಗಿ ಮುಂದುವರೆಯಲಿ, ಟಿ20 ಪಂದ್ಯಗಳ ಕೋಚಿಂಗ್ ಗೆ ಅವರು ಸೂಕ್ತರಲ್ಲ ಎಂದು ಅನ್ನಿಸುತ್ತಿದೆ. ಹಾಗಾಗಿ ದ್ರಾವಿಡ್ ಅವರ ಬದಲು ಟಿ20 ಪಂದ್ಯಗಳಿಗೆ ಬೇರೆ ಕೋಚ್ ನೇಮಿಸಬಹುದು, ತಂಡಕ್ಕೆ ಎರಡು ಕೋಚ್ ಇರಬಹುದು. ಆಶಿಷ್ ನೆಹ್ರಾ (Ashish Nehra) ಅವರು ಕೋಚ್ ಆಗಿ ಐಪಿಎಲ್ (IPL) ನಲ್ಲಿ ಗುಜರಾತ್ ಟೈಟನ್ಸ್ (Gujarat Titans) ತಂಡ ಕಪ್ ಗೆಲ್ಲುವ ಹಾಗೆ ಮಾಡಿದ್ದಾರೆ. ಕೋಚ್ ಸ್ಥಾನಕ್ಕೆ ಅವರು ಸೂಕ್ತರು, ವೀರೇಂದ್ರ ಸೆಹ್ವಾಗ್ (Virendra Sehwag) ಅವರು ಕೂಡ ಇದ್ದಾರೆ. ಇವರಿಬ್ಬರಲ್ಲಿ ಒಬ್ಬರನ್ನು ಟಿ20 ತಂಡಕ್ಕೆ ಕೋಚ್ ಆಗು ಆಯ್ಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ. ಇದನ್ನು ಓದಿ..IPL 2023: ಮುಂಬೈ ತಂಡಕ್ಕೆ ಬಿಗ್ ಶಾಕ್: ಈತನಿಲ್ಲದೆ ರೋಹಿತ್ ಕಪ್ ಗೆಲ್ಲಲು ಸಾಧ್ಯವೇ ಇಲ್ಲ. ಟಾಪ್ ಬೌಲರ್ ಔಟ್ ಯಾರು ಗೊತ್ತೇ??