ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಕೊನೆಗೂ ರಾಹುಲ್ ಉಪ ನಾಯಕತ್ವ ಕಿತ್ತುಕೊಂಡ ಬಗ್ಗೆ ಮಾತನಾಡಿದ ರೋಹಿತ್, ಹೇಳಿದ್ದೇನು ಗೊತ್ತೇ??

Cricket News: ಕೊನೆಗೂ ರಾಹುಲ್ ಉಪ ನಾಯಕತ್ವ ಕಿತ್ತುಕೊಂಡ ಬಗ್ಗೆ ಮಾತನಾಡಿದ ರೋಹಿತ್, ಹೇಳಿದ್ದೇನು ಗೊತ್ತೇ??

440

Cricket News: ಟೀಮ್ ಇಂಡಿಯಾ (Team India) ಈಗ ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) 3ನೇ ಟೆಸ್ಟ್ ಪಂದ್ಯ ಆಡಲು ತಯಾರಿ ನಡೆಸುತ್ತಿದೆ. ಇಂದಿನಿಂದ ಮೂರನೇ ಟೆಸ್ಟ್ ಪಂದ್ಯ ಶುರುವಾಗಲಿದ್ದು, ಅದಕ್ಕಿಂತ ಮೊದಲು ಈಗ ಕೆ.ಎಲ್.ರಾಹುಲ್ (K L Rahul) ಅವರು ತಂಡದ ಉಪನಾಯಕನ ಸ್ಥಾನದಿಂದ ಕೆಲಗಿಳಿದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಬಿಸಿಸಿಐ (BCCI) ಈ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಶುರುವಾಗಿದ್ದು, ಅದಕ್ಕೀಗ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಉತ್ತರ ಕೊಟ್ಟಿದ್ದಾರೆ.

Follow us on Google News

ಕೆ.ಎಲ್.ರಾಹುಲ್ ಅವರು ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದರು, ಎರಡು ಪಂದ್ಯಗಳ ಮೂರು ಇನ್ನಿಂಗ್ಸ್ ಗಳಲ್ಲಿ ಅವರು ಗಳಿಸಿದ್ದು ಕೇವಲ 37 ರನ್ ಗಳು, ಟೆಸ್ಟ್ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಸರಾಸರಿ ಕೂಡ ಕಡಿಮೆ ಇದೆ. ಇತ್ತ ಯುವ ಆಟಗಾರ ಶುಭಮನ್ ಗಿಲ್ (Shubman Gill) ಅವರು ಅತ್ಯುತ್ತಮವಾದ ಪ್ರದರ್ಶನ ನೀಡಿದ್ದಾರೆ, ಓಡಿಐ ಪಂದ್ಯದಲ್ಲಿ ದ್ವಿಶತಕ, ಟಿ20 ಪಂದ್ಯದಲ್ಲೂ ಶತಕ ಸಿಡಿಸಿ ಒಳ್ಳೆಯ ಪ್ರದರ್ಶನ ನೀಡುತ್ತಾ ಮುಂದುವರೆದಿದ್ದಾರೆ. ಹಾಗಾಗಿ ಇವರಿಬ್ಬರಲ್ಲಿ ತಂಡಕ್ಕೆ ಯಾರನ್ನು ಆಯ್ಕೆ ಮಾಡುವುದು ಒಳ್ಳೆಯದು ಎನ್ನುವ ವಿಚಾರದಲ್ಲಿ, ಗಿಲ್ ಅವರನ್ನು ಆಯ್ಕೆ ಮಾಡುವುದೇ ಒಳ್ಳೆಯದು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಅದಕ್ಕೀಗ ರೋಹಿತ್ ಶರ್ಮಾ ಅವರು ಉತ್ತರ ಕೊಟ್ಟಿದ್ದಾರೆ. ಇದನ್ನು ಓದಿ..Cricket News: KL ರಾಹುಲ್ ಬೇಡವೇ ಬೇಡ, ಈತನಿಗೆ ಆರಂಭಿಕ ಸ್ಥಾನ ನೀಡಲಿ ಎಂದ ದಿನೇಶ್. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

“ಎರಡನೇ ಟೆಸ್ಟ್ ಮ್ಯಾಚ್ ಆದ ನಂತರ ಇದರ ಬಗ್ಗೆ ನಾನು ಹೇಳಿದ್ದೆ, ಪ್ಲೇಯರ್ ನ ಟ್ಯಾಲೆಂಟ್ ಮತ್ತು ಸಾಮರ್ಥ್ಯ ನೋಡಿ ಅವರ ಕಠಿಣ ಪರಿಸ್ಥಿತಿಯಲ್ಲಿ ಸಪೋರ್ಟ್ ಮಾಡುತ್ತೇವೆ..ಹೀಗೆ ಮಾಡುವುದರಿಂದ ಅವರ ಸಾಮರ್ಥ್ಯ ನಿರೂಪಿಸಲು ಅವರಿಗೆ ಸಮಯ ಕೊಡುತ್ತೇವೆ. ವೈಸ್ ಕ್ಯಾಪ್ಟನ್ ಸ್ಥಾನ ಆದರೂ ಆಗದೆ ಇದ್ದರು ಇದು ಯಾವುದನ್ನು ಸೂಚಿಸುವುದಿಲ್ಲ. ಕಳೆದ ಎರಡು ಪಂದ್ಯಕ್ಕೆ ಅವರು ವೈಸ್ ಕ್ಯಾಪ್ಟನ್ ಆಗಿದ್ದರು, ಈಗ ಆ ಸ್ಥಾನದಿಂದ ಹೊರತೆಗಿದಿರುವುದು ಏನನ್ನು ಸೂಚಿಸುವುದಿಲ್ಲ. ರಾಹುಲ್ ಮತ್ತು ಗಿಲ್ ಇಬ್ಬರನ್ನು ನಾವು ಗಮನದಲ್ಲಿ ಇಟ್ಟುಕೊಳ್ಳುತ್ತೇವೆ, ಹಾಗಾಗಿ ಅವರು ಪ್ರತಿ ಪಂದ್ಯಕ್ಕಿಂತ ಮೊದಲು ಪ್ರಾಕ್ಟೀಸ್ ಮಾಡುತ್ತಾರೆ. ಮೂರನೇ ಟೆಸ್ಟ್ ಪಂದ್ಯಕ್ಕೆ ಯಾರೆಲ್ಲಾ ಆಡುತ್ತಾರೆ ಎನ್ನುವುದನ್ನು ಟಾಸ್ ಸಮಯದಲ್ಲಿ ತಿಳಿಸುತ್ತೇನೆ, ಪ್ಲೇಯರ್ ಗಳಿಗೆ ಆಗಿರುವ ಗಾಯ ಇಂಜುರಿ ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಆಯ್ಕೆ ಮಾಡಲಾಗುತ್ತದೆ..” ಎಂದು ಹೇಳಿದ್ದಾರೆ ಕ್ಯಾಪ್ಟನ್ ರೋಹಿತ್ ಶರ್ಮ (Rohit Sharma). ಇದನ್ನು ಓದಿ..Cricket News: ವಿರಾಟ್ ಅನ್ನು ಕೆಳಗಿಳಿಸಿದ್ದ ದ್ರಾವಿಡ್ ಗೆ ಸದ್ಯದಲ್ಲಿಯೇ ಶಾಕ್?? ವಿಶ್ವಕಪ್ ಗೂ ಮುನ್ನವೇ ಏನಾಗಲಿದೆ ಅಂತೇ ಗೊತ್ತೇ?