King Kohli: ದಿಡೀರ್ ಎಂದು ನಾಯಕನ ಸ್ಥಾನದಿಂದ ಕೆಳಗಿಳಿದು ಸಾಮಾನ್ಯ ಆಟಗಾರನಾಗುವುದು ಸುಲಭ ಅಲ್ಲ ಎಂದ ಕಿಂಗ್. ಯಾಕೆ ಗೊತ್ತೇ??
King Kohli: ದಿಡೀರ್ ಎಂದು ನಾಯಕನ ಸ್ಥಾನದಿಂದ ಕೆಳಗಿಳಿದು ಸಾಮಾನ್ಯ ಆಟಗಾರನಾಗುವುದು ಸುಲಭ ಅಲ್ಲ ಎಂದ ಕಿಂಗ್. ಯಾಕೆ ಗೊತ್ತೇ??
King Kohli: ವಿರಾಟ್ ಕೊಹ್ಲಿ (Virat Kohli) ಅವರು ಎಂಥಹ ಶ್ರೇಷ್ಠ ಆಟಗಾರ ಮತ್ತು ಕ್ಯಾಪ್ಟನ್ ಆಗಿದ್ದವರು ಎಂದು ಎಲ್ಲರಿಗೂ ಗೊತ್ತಿದೆ. ಕಿಂಗ್ ಕೋಹ್ಲಿ ಅವರ ಕ್ಯಾಪ್ಟನ್ಸಿಯಲ್ಲಿ ಭಾರತ ತಂಡವು ಅನೇಕ ಪ್ರಮುಖ ಪಂದ್ಯಗಳನ್ನು ಟೂರ್ನಿಗಳನ್ನು ಗೆದ್ದಿದೆ. ಆದರೆ ಹಲವು ಕಾರಣಗಳಿಂದ ವಿರಾಟ್ ಕೊಹ್ಲಿ ಅವರು ಕ್ಯಾಪ್ಟನ್ಸಿಯಿಂದ ಕೆಳಗೆ ಇಳಿಯಲೇಬೇಕಾಯಿತು. ಮೊದಲಿಗೆ 2021ರ ಟಿ20 ವಿಶ್ವಕಪ್ ಟೂರ್ನಿ ಮುಗಿದ ನಂತರ ಕೊಹ್ಲಿ ಅವರು ಟಿ20 ಪಂದ್ಯಗಳ ಕ್ಯಾಪ್ಟನ್ಸಿ ಇಂದ ಹೊರಬಂದರು.
ನಂತರ 2022ರ ಜನವರಿಯಲ್ಲಿ ಟೆಸ್ಟ್ ತಂಡದ ಕ್ಯಾಪ್ಟನ್ಸಿಯಿಂದ ಹೊರಬಂದರು, ಅದರ ನಡುವೆಯೇ ಓಡಿಐ ತಂಡದ ಕ್ಯಾಪ್ಟನ್ಸಿ ಇಂದ ವಿರಾಟ್ ಕೊಹ್ಲಿ ಅವರನ್ನು ಹೊರ ಹಾಕಲಾಗಿತ್ತು. ಇದೆಲ್ಲ ನಡೆದ ಬಳಿಕ ವಿರಾಟ್ ಅವರು ಐಪಿಎಲ್ ನಲ್ಲಿ ಸಹ ಆರ್ಸಿಬಿ ಗಂಡ ಕ್ಯಾಪ್ಟನ್ ಸ್ಥಾನದಿಂದ ಹೊರಬಂದರು. ಈಗ ವಿರಾಟ್ ಅವರು ಸಾಮಾನ್ಯ ಆಟಗಾರನಾಗಿ ತಂಡದಲ್ಲಿ ಇದ್ದಾರೆ. ಕ್ಯಾಪ್ಟನ್ಸಿಯಿಂದ ಆಟಗಾರನಾಗಿ ಇರುವುದಕ್ಕೆ ಎಷ್ಟು ಕಷ್ಟವಾಯಿತು ಹೇಗಿತ್ತು ಎಂದು ಕೇಳಿದ ಪ್ರಶ್ನೆಗೆ ವಿರಾಟ್ ಕೊಹ್ಲಿ ಅವರು ಉತ್ತರ ಕೊಟ್ಟಿರುವುದು ಹೀಗೆ. ಇದನ್ನು ಓದಿ..IPL 2023: ಈ ಬಾರಿಯ ಐಪಿಎಲ್ ನಲ್ಲಿ ಅಬ್ಬರಿಸುವ ಟಾಪ್ 5 ಆಟಗಾರರನ್ನು ಹೆಸರಿಸಿದ ಗಂಗೂಲಿ; ಆಯ್ಕೆಯಾದ ಯುವಕರು ಯಾರ್ಯಾರು ಗೊತ್ತೇ??
“ಕ್ಯಾಪ್ಟನ್ಸಿ ಇಂದ ಹೊರಬಂದ ನಂತರ ಯಾವುದು ಕಷ್ಟ ಎನ್ನಿಸಲಿಲ್ಲ ಎಂದರೆ ಅದು ತಪ್ಪಾಗುತ್ತದೆ. ಸುತ್ತ ಮುತ್ತ ನಡೆಯುವುದನ್ನು ನೋಡುವಾಗ, ಅದರ ಜವಾಬ್ದಾರಿ ನಿಮ್ಮ ಮೇಲು ಇರುತ್ತದೆ. ಆ ಸ್ಥಾನ ಮತ್ತು ಅದೆಲ್ಲವನ್ನು ಪ್ರಕ್ರಿಯರಾಗುವ ಹಾಗೆ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಇದೆಲ್ಲವನ್ನು ತಿಳಿದುಕೊಂಡು, ಸಲಹೆ ಕೊಡದೆ ಇರುವುದಕ್ಕೆ ನಿರ್ಧಾರ ಮಾಡಬೇಕು..” ಎಂದಿದ್ದಾರೆ ವಿರಾಟ್. ಆರ್ಸಿಬಿ ಬಗ್ಗೆ ಮಾತನಾಡಿದ ವಿರಾಟ್ ಅವರು, “ಆರ್ಸಿಬಿ ಪಂದ್ಯಗಳು ನಡೆಯುವಾಗ, ತಂಡ ಕಷ್ಟದಲ್ಲಿ ಇದ್ದಾಗ, ನಾನು ಫಾಫ್ ಅವರ ಹತ್ತಿರ ಹೋಗಿ, ಈ ರೀತಿ ಮಾಡಬೇಕು ಎಂದು ಅನ್ನಿಸುತ್ತಿದೆ ಎಂದು ಹೇಳಿದ್ದೇನೆ. ಫಾಫ್ ಅವರು ಸಂತೋಷದಿಂದ ನಾನು ಕೊಡುತ್ತಿದ್ದ ಸಲಹೆಗಳನ್ನು ಸ್ವೀಕರಿಸಿದರು..” ಎಂದು ಕಿಂಗ್ ಕೊಹ್ಲಿ ಹೇಳಿದ್ದಾರೆ. ಇದನ್ನು ಓದಿ..IPL 2023: ಮುಂಬೈ ತಂಡಕ್ಕೆ ಬಿಗ್ ಶಾಕ್: ಈತನಿಲ್ಲದೆ ರೋಹಿತ್ ಕಪ್ ಗೆಲ್ಲಲು ಸಾಧ್ಯವೇ ಇಲ್ಲ. ಟಾಪ್ ಬೌಲರ್ ಔಟ್ ಯಾರು ಗೊತ್ತೇ??