Savings Plan: ದುಡ್ಡನ್ನು ಕೂಡಿಡಬೇಕು ಎಂದರೆ ಹೆಂಡತಿ ಜೊತೆ ಇದೊಂದು ಚಿಕ್ಕ ಕೆಲಸ ಮಾಡಿ ಸಾಕು: ಖಾತೆ ತೆರೆದು 40 ಲಕ್ಷದ ಲಾಭ ಪಡೆಯುವುದು ಹೇಗೆ ಗೊತ್ತೇ?

Savings Plan: ದುಡ್ಡನ್ನು ಕೂಡಿಡಬೇಕು ಎಂದರೆ ಹೆಂಡತಿ ಜೊತೆ ಇದೊಂದು ಚಿಕ್ಕ ಕೆಲಸ ಮಾಡಿ ಸಾಕು: ಖಾತೆ ತೆರೆದು 40 ಲಕ್ಷದ ಲಾಭ ಪಡೆಯುವುದು ಹೇಗೆ ಗೊತ್ತೇ?

Savings Plan: ಹಣ ಉಳಿತಾಯ ಮಾಡುವುದಕ್ಕೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ತರುತ್ತಿದೆ., ಅವುಗಳಲ್ಲಿ ಅಂಚೆಕಛೇರಿ ಯೋಜನೆ ಪ್ರಮುಖವಾದದ್ದು ಎಂದು ಹೇಳಬಹುದು. ಅಂಚೆಕಛೇರಿಯಲ್ಲಿ ಹಣ ಇನ್ವೆಸ್ಟ್ ಮಾಡುವುದರಿಂದ ಸುರಕ್ಷಿತವಾಗಿ ಇರುತ್ತದೆ. ಜೊತೆಗೆ ಸಣ್ಣ ಉಳಿತಾಯ ಯೋಜನೆಗೆ ಇದು ಒಳ್ಳೆಯ ಆಯ್ಕೆ ಕೂಡ ಹೌದು. ಅಂಚೆಕಛೇರಿಯಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ಇದು ಭಾರತ ಸರ್ಕಾರವು ಜನರಿಗೆ ನೀಡುವ ಪ್ರಸಿದ್ಧ ಸೇವಿಂಗ್ಸ್ ಸ್ಕೀಮ್ ಗಳಲ್ಲಿ ಒಂದು. ಇದನ್ನು ನೀವು ನಿಮಗೆ ಹತ್ತಿರ ಇರುವ ಪೋಸ್ಟ್ ಆಫೀಸ್ ನಲ್ಲಿ ಅಥವಾ ಬ್ಯಾಂಕ್ ನಲ್ಲಿ ಓಪನ್ ಮಾಡಬಹುದು.

ಈ ಯೋಜನೆ ನಿಮಗೆ ಸಾಕಷ್ಟು ಒಳಿತು ಮಾಡುತ್ತದೆ, EEE ತೆರಿಗೆ ಪ್ರಯೋಜನ ನೀಡುತ್ತದೆ, ಇದರ ಅರ್ಥ ಠೇವಣಿಗೆ ಇಟ್ಟ ಹಣ, ಗಳಿಸುವ ಬಡ್ಡಿ, ಹಾಗೂ ನಿಮ್ಮ ಕೈಗೆ ಸಿಗುವ ಹಣ ಇದ್ಯಾವುದಕ್ಕೂ ಕೂಡ ಟ್ಯಾಕ್ಸ್ ಹಾಕುವುದಿಲ್ಲ. ನಿವೃತ್ತಿ ಯೋಜನೆಗಳಲ್ಲಿ ಇದು ಬಹಳ ಉತ್ತಮವಾದಾದ್ದು ಎಂದು ಹೇಳಬಹುದು. ಈ ಪಿಪಿಎಫ್ ಅಕೌಂಟ್ ತೆರೆಯಲು ಕನಿಷ್ಠ 500 ರೂಪಾಯಿ ಬೇಕಾಗುತ್ತದೆ, ಒಂದು ವರ್ಷದಲ್ಲಿ ನೀವು ₹1.5ಲಕ್ಷ ರೂಪಾಯಿವರೆಗೂ ಹೂಡಿಕೆ ಮಾಡಬಹುದು. ಆದಾಯ ತೆರಿಗೆಯ ಸೆಕ್ಷನ್ 80C ಯಲ್ಲಿ ನೀವು ಒಂದೂವರೆ ಲಕ್ಷ ರೂಪಾಯಿವರೆಗು ತೆರಿಗೆ ವಿನಾಯ್ತಿ ಸಹ ಪಡೆಯುತ್ತೀರಿ. ಈ ಯೋಜನೆ ಮುಗಿಯುವುದು 15 ವರ್ಷಕ್ಕೆ. 15 ವರ್ಷಗಳ ವರೆಗು ಹಣ ಪಾವತಿ ಮಾಡಬಹುದು. ಇದನ್ನು ಓದಿ..Post Office: ಜಸ್ಟ್ ನೀವು 5 ಸಾವಿರ ಹೂಡಿಕೆ ಮಾಡಿ, ಒಳ್ಳೆಯ ಆದಾಯ ಗಳಿಸುವುದು ಹೇಗೆ ಗೊತ್ತೇ? ಪೋಸ್ಟ್ ಆಫೀಸ್ ಕೊಡ್ತು ಭರ್ಜರಿ ಆಫರ್. ಏನು ಗೊತ್ತೇ?

15 ವರ್ಷಗಳ ನಂತರ ಇದರ ಮುಕ್ತಾಯದ ಸಮಯವನ್ನು ಕೂಡ ವಿಸ್ತರಿಸಬಹುದು. ಈ ಯೋಜನೆಯನ್ನು 5 ವರ್ಷಗಳ ವರೆಗು ವಿಸ್ತರಿಸಲು ಅವಕಾಶ ಇದೆ. ಈ ಯೋಜನೆಯಲ್ಲಿ ನಿಮಗೆ 7.1% ಬಡ್ಡಿ ಫಿಕ್ಸ್ ಆಗಿದೆ, ಹಾಗೂ ಮೂರು ತಿಂಗಳಿಗೆ ಒಂದು ಸಾರಿ ಕೇಂದ್ರ ಸರ್ಕಾರವು ಇದರ ಬಡ್ಡಿ ದರವನ್ನು ಪರಿಶೀಲನೆ ಮಾಡುತ್ತದೆ. ಈ ಯೋಜನೆಯಲ್ಲಿ ನೀವು ನಿಮ್ಮ ಪಾರ್ಟ್ನರ್ ಜೊತೆಗೂ ಖಾತೆ ತೆರೆದು ಹೂಡಿಕೆ ಮಾಡಬಹುದು. 1.5ಲಕ್ಷ ರೂಪಾಯಿ ಹೂಡಿಕೆ ಮಾಡಲು ಶುರು ಮಾಡಿದರೆ, 40 ಲಕ್ಷ ರೂಪಾಯಿವರೆಗು ಪಡೆಯಬಹುದು.. ಈ ಯೋಜನೆಯನ್ನು ನಿಮ್ಮ ಹೆಂಡತಿಯ ಹೆಸರಿನಲ್ಲಿ ತೆರೆದಿದ್ದು, ಅವರು ಕೆಲಸ ಮಾಡುತ್ತಿದ್ದರೆ, ಅದರ ತೆರಿಗೆ ಪ್ರಯೋಜನವನ್ನು ಅವರು ಪಡೆಯುತ್ತಾರೆ, ನೀವು ಪಡೆಯಲು ಆಗುವುದಿಲ್ಲ.. ಇದನ್ನು ಓದಿ..Post Office Savings Scheme: ಕೋಟ್ಯಂತರ ಜನ ಹೂಡಿಕೆ ಮಾಡುತ್ತಿವೆ ಬೆಸ್ಟ್ ಸೇವಿಂಗ್ ಯೋಜನೆ ಯಾವುದು ಗೊತ್ತೇ? ಪೋಸ್ಟ್ ಆಫೀಸ್ ನಲ್ಲಿ ಖಚಿತ ಲಾಭ.