RCB IPL 2023: ಹೊರಹೋಗಬೇಕಾಗಿದ್ದ ಸ್ಟಾರ್ ಪ್ಲೇಯರ್ ಅನ್ನು ಆರ್ಸಿಬಿ ತಂಡದಲ್ಲಿ ಉಳಿಯುವಂತೆ ಮಾಡಿದ ಕಾಣದ ಕೈ ಯಾರದ್ದು ಗೊತ್ತೇ?? DK ಹೇಳಿದ್ದೇನು ಗೊತ್ತೇ?
RCB IPL 2023: ಹೊರಹೋಗಬೇಕಾಗಿದ್ದ ಸ್ಟಾರ್ ಪ್ಲೇಯರ್ ಅನ್ನು ಆರ್ಸಿಬಿ ತಂಡದಲ್ಲಿ ಉಳಿಯುವಂತೆ ಮಾಡಿದ ಕಾಣದ ಕೈ ಯಾರದ್ದು ಗೊತ್ತೇ?? DK ಹೇಳಿದ್ದೇನು ಗೊತ್ತೇ?
RCB IPL 2023: ಈಗ ಟೀಮ್ ಇಂಡಿಯಾದ (Team India) ಸ್ಫೋಟಕ ಬೌಲರ್ ಎನ್ನಿಸಿಕೊಂಡಿರುವವರು ಮೊಹಮ್ಮದ್ ಸಿರಾಜ್ (Mohammad Siraj). ಒಂದೆರಡು ವರ್ಷಗಳಿಂದ ಸಿರಾಜ್ ಅವರು ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾಜ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಆದರೆ ಆರಂಭಿಕ ದಿನಗಳಲ್ಲಿ ಐಪಿಎಲ್ (IPL) ನಲ್ಲಿ ಆಡುವಾಗ, ವೈಫಲ್ಯ ಅನುಭವಿಸಿದ್ದರು ಸಿರಾಜ್, ಎದುರಾಳಿ ತಂಡಕ್ಕೆ ಹೆಚ್ಚು ರನ್ಸ್ ಬಿಟ್ಟುಕೊಟ್ಟಿದ್ದರು, ಆಗ ಸಿರಾಜ್ ಅವರನ್ನು ಕೈಬಿಡಬೇಕು ಎಂದು ಆರ್ಸಿಬಿ (RCB) ತಂಡ ನಿರ್ಧಾರ ಮಾಡಿತ್ತು. ಆ ಸಮಯದಲ್ಲಿ ಅವರಿಗೆ ಸಪೋರ್ಟ್ ಆಗಿ ನಿಂತು? ಸಿರಾಜ್ ಅವರು ಆರ್ಸಿಬಿಯಲ್ಲಿ ಉಳಿಯುವ ಹಾಗೆ ಮಾಡಿದ್ದು ಯಾರು ಗೊತ್ತಾ?
ಆರ್ಸಿಬಿ ತಂಡದ ಫಿನಿಷರ್ ಆಗಿ ಕಳೆದ ವರ್ಷ ಅದ್ಭುತ ಪ್ರದರ್ಶನ ನೀಡಿದ ದಿನೇಶ್ ಕಾರ್ತಿಕ್ (Dinesh Karthik) ಅವರು, ಈ ವಿಚಾರದ ಬಗ್ಗೆ ಇತ್ತೀಚೆಗೆ ಮಾತನಾಡಿ, ಸಾಕಷ್ಟು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. “ಸಿರಾಜ್ ಅವರ ಪಾಲಿಗೆ ವಿರಾಟ್ ಕೊಹ್ಲಿ (Virat Kohli) ಅವರು ದೊಡ್ಡ ಅಣ್ಣನ ಹಾಗೆ. ಕೊಹ್ಲಿ ಅವರನ್ನು ತಮ್ಮ ಅತಿದೊಡ್ಡ ಮಾರ್ಗದರ್ಶಕನ ರೂಪದಲ್ಲಿ ನೋಡುತ್ತಾರೆ ಸಿರಾಜ್. ಅದಕ್ಕೆ ಕಾರಣ, ಸಿರಾಜ್ ಕಷ್ಟದಲ್ಲಿದ್ದಾಗ ಅವರ ಪ್ರತಿಭೆ ನಂಬಿ ಜೊತೆಯಲ್ಲಿದ್ದು ಬೆನ್ನೆಲುಬಾಗಿ ನಿಂತು ಸಪೋರ್ಟ್ ಮಾಡಿ ಪ್ರೋತ್ಸಾಹ ನೀಡಿದ್ದು ಕೊಹ್ಲಿ., ಆ ಎಲ್ಲಾ ಶ್ರೇಯಸ್ಸು ಕೊಹ್ಲಿ ಅವರಿಗೆ ಸಲ್ಲಬೇಕು..” ಇದನ್ನು ಓದಿ..RCB IPL 2023: ಆರ್ಸಿಬಿ ತಂಡಕ್ಕೆ ಮತ್ತೊಂದು ಶಾಕ್: ಬಲಾಢ್ಯ ಬ್ಯಾಟ್ಸಮನ್ ಗೆ ಆಯ್ತು ಇಂಜುರಿ: ಏನಾಗಿದೆ ಗೊತ್ತೇ??
“ವಿರಾಟ್ ಅವರು ಕ್ಯಾಪ್ಟನ್ ಆಗಿದ್ದಾಗ ಸಿರಾಜ್ ಟೀಮ್ ಗೆ ಕಂಬ್ಯಾಕ್ ಮಾಡಿದರು. ಕೊಹ್ಲಿ ತಮ್ಮ ಜೀವನದ ಬಹುಮುಖ್ಯ ವ್ಯಕ್ತಿ ಎಂದು ಸಿರಾಜ್ ಭಾವಿಸುತ್ತಾರೆ. ಸಿರಾಜ್ ಅವರ ಜೀವನದಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಅವರಿಗೆ ಭಾರಿ ಗೌರವ ಇದೆ.. ಒಬ್ಬರು ವಿರಾಟ್ ಕೊಹ್ಲಿ, ಮತ್ತೊಬ್ಬರು ಟೀಮ್ ಇಂಡಿಯಾದ ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್ (Bharath Arun), ಸಿರಾಜ್ ಅವರು ಹೈದರಾಬಾದ್ ನಲ್ಲಿ ಕ್ರಿಕೆಟ್ ಶುರು ಮಾಡಿದಾಗ ಅವರಿಗೆ ಸಪೋರ್ಟ್ ಮಾಡಿದ್ದು, ಭರತ್ ಅರುಣ್ ಅವರು. ಸಿರಾಜ್ ಅವರು ಒಳ್ಳೆಯ ಬೌಲರ್ ಆಗುವುದಕ್ಕೆ ಕಾರಣ ಭರತ್ ಅರುಣ್, ವಿರಾಟ್ ಕೊಹ್ಲಿ ಅವರು ತಮ್ಮ ಕ್ಯಾಪ್ಟನ್ಸಿಯಲ್ಲಿ ಸಿರಾಜ್ ಅವರಿಗೆ ಒಳ್ಳೆಯ ಅವಕಾಶಗಳನ್ನು ನೀಡಿ, ಅವರು ಬೆಳೆಯಲು ಸಹಾಯ ಮಾಡಿದ್ದು ವಿರಾಟ್ ಕೊಹ್ಲಿ..” ಹಾಗಾಗಿ ಸಿರಾಜ್ ಅವರ ವೃತ್ತಿ ಜೀವನಕ್ಕೆ ಇವರಿಬ್ಬರು ಬಹಳ ಮುಖ್ಯ ಎಂದು ದಿನೇಶ್ ಕಾರ್ತಿಕ್ ಅವರು ತಿಳಿಸಿದ್ದಾರೆ. ಇದನ್ನು ಓದಿ..IPL 2023: ಡೆಲ್ಲಿ ತಂಡಕ್ಕೆ ವಾರ್ನರ್ ಹೊಸ ನಾಯಕ: ಆದರೆ ಅಚ್ಚರಿಯಾಗಿ ಉಪನಾಯಕನ ಸ್ಥಾನ ಪಡೆದ ಭಾರತೀಯ ಯಾರು ಗೊತ್ತೇ??