ಕರುನಾಡ ವಾಣಿ
ಇದು ನಿಮ್ಮ ಧ್ವನಿ

IPL 2023: ಡೆಲ್ಲಿ ತಂಡಕ್ಕೆ ವಾರ್ನರ್ ಹೊಸ ನಾಯಕ: ಆದರೆ ಅಚ್ಚರಿಯಾಗಿ ಉಪನಾಯಕನ ಸ್ಥಾನ ಪಡೆದ ಭಾರತೀಯ ಯಾರು ಗೊತ್ತೇ??

422

Get real time updates directly on you device, subscribe now.

IPL 2023: 2023ರ ಐಪಿಎಲ್ (IPL) ಟೂರ್ನಿ ಶುರುವಾಗಲು ಉಳಿದಿರುವುದು ಇನ್ನೊಂದೆ ತಿಂಗಳು, ಮಾರ್ಚ್ ತಿಂಗಳ ಕೊನೆಯಿಂದ ಐಪಿಎಲ್ ಶುರುವಾಗಲಿದೆ. ಡಿಸೆಂಬರ್ ತಿಂಗಳಿನಲ್ಲೇ ಹರಾಜು ಪ್ರಕ್ರಿಯೆ ಮುಗಿದಿದ್ದು, ಈಗಾಗಲೇ ಎಲ್ಲಾ ತಂಡಗಳು ತಯಾರಿ ಶುರು ಮಾಡಿಕೊಂಡಿವೆ. ಕೆಲವು ತಂಡಗಳು ಟೀಮ್ ಕ್ಯಾಪ್ಟನ್ ಅನ್ನು ಬದಲಾಯಿಸಿ, ಹೊಸ ಕ್ಯಾಪ್ಟನ್ ಅನ್ನು ನೇಮಿಸಿದ್ದಾರೆ. ಆ ತಂಡಗಳಲ್ಲಿ ಒಂದು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ. ಈ ತಂಡವು, ವಿದೇಶಿ ಆಟಗಾರನನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿ, ಭಾರತ ತಂಡದ ಆಟಗಾರನಿಗೆ ಉಪನಾಯಕನ ಪಟ್ಟ ನೀಡಿದೆ..

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಖಾಯಂ ನಾಯಕ ರಿಷಬ್ ಪಂತ್ (Rishab Pant), ಇವರು ಅಪಘಾತಕ್ಕೆ ಒಳಗಾದ ನಂತರ ಆರೋಗ್ಯದ ದೃಷ್ಟಿಯಿಂದ ಇನ್ನು ಹಲವು ತಿಂಗಳು ಕ್ರಿಕೆಟ್ ಇಂದ ದೂರವೇ ಇರಲಿದ್ದಾರೆ. ಹಾಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈಗ ಹೊಸ ನಾಯಕನನ್ನು ಆಯ್ಕೆ ಮಾಡಿದೆ, ಇವರು ಆಯ್ಕೆ ಮಾಡಿರುವುದು ಮತ್ಯಾರನ್ನು ಅಲ್ಲ, ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ (David Warner) ಅವರನ್ನು. ಇನ್ನು ಉಪನಾಯಕನ ಸ್ಥಾನಕ್ಕೆ ಟೀಮ್ ಇಂಡಿಯಾದ ಖ್ಯಾತ ಬೌಲರ್ ಅಕ್ಷರ್ ಪಟೇಲ್ (Axar Patel) ಅವರನ್ನು ಆಯ್ಕೆ ಮಾಡಲಾಗಿದೆ. ಇದನ್ನು ಓದಿ..Cricket News: ಐಪಿಎಲ್ ಆರಂಭಕ್ಕೂ ಮುನ್ನವೇ ಅಬ್ಬರದ ಬ್ಯಾಟಿಂಗ್ ಆರಂಭಿಸಿದ ದಿನೇಶ್ ಕಾರ್ತಿಕ್. 6,6,6,6,6,6 – ಹೇಗಿತ್ತು ಗೊತ್ತೇ ಅಬ್ಬರ??

ಡೇವಿಡ್ ವಾರ್ನರ್ ಅವರಿಗೆ ಈಗಾಗಲೇ ಐಪಿಎಲ್ ತಂಡದ ಕ್ಯಾಪ್ಟನ್ ಆಗಿ ಅನುಭವವಿದೆ. 2016ರಲ್ಲಿ ಇವರು ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಕ್ಯಾಪ್ಟನ್ ಆಗಿದ್ದಾಗ ಎಸ್.ಆರ್.ಹೆಚ್ ತಂಡ ಐಪಿಎಲ್ ಕಪ್ ಗೆದ್ದಿತ್ತು. ವಾರ್ನರ್ ಅವರು ಈಗಾಗಲೇ ಯಾವ ಉತ್ತಮವಾದ ಕ್ಯಾಪ್ಟನ್ ಎನ್ನುವುದನ್ನು ಪ್ರೂವ್ ಮಾಡಿಕೊಂಡಿರುವ ಕಾರಣದಿಂದ ಅವರನ್ನೇ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಇನ್ನು ಟೀಮ್ ಇಂಡಿಯಾದ ಯುವ ಆಟಗಾರ ಅಕ್ಷರ್ ಪಟೇಲ್ ಅವರಿಗೆ ಒಳ್ಳೆಯ ಅವಕಾಶ ಕೊಡಲಾಗಿದೆ ಎಂದು ವರದಿಯ ಪ್ರಕಾರ ತಿಳಿದುಬಂದಿದೆ. ಏಪ್ರಿಲ್ 1ರಂದು ಲಕ್ನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ತಮ್ಮ ಮೊದಲ ಪಂದ್ಯ ಆಡಲಿದೆ ಡೆಲ್ಲಿ ಕ್ಯಾಪಿಟಲ್ಸ್ ತಂಡ. ಇದನ್ನು ಓದಿ..RCB IPL 2023: ಆರ್ಸಿಬಿ ತಂಡಕ್ಕೆ ಮತ್ತೊಂದು ಶಾಕ್: ಬಲಾಢ್ಯ ಬ್ಯಾಟ್ಸಮನ್ ಗೆ ಆಯ್ತು ಇಂಜುರಿ: ಏನಾಗಿದೆ ಗೊತ್ತೇ??

Get real time updates directly on you device, subscribe now.